Song of Solomon · chapter 4 · verse 9
Song of Solomon 4:9 in Kannada
ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ. ನನ್ನ ಸಹೋದರಿಯೇ, ವಧುವೇ, ನಿನ್ನ ಕಣ್ಣುಗಳ ಏಕದೃಷ್ಟಿಯಿಂದಲೂ ನಿನ್ನ ಕೊರಳಲ್ಲಿರುವ ಒಂದು ಕಂಠಮಾಲೆಯಿಂದಲೂ ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ.
Nanna hrudayavannu neenu selakondiddee. Nanna sahodariye, vadhuve, ninna kannugala ekadrushtiyindaloo ninna koralalliruva ondu kanthamaaleyindaloo nanna hrudayavannu neenu selakondiddee.
Song of Solomon 4:9 in English
- King James Version (KJV)
- Thou hast ravished my heart, my sister, [my] spouse; thou hast ravished my heart with one of thine eyes, with one chain of thy neck.
- World English Bible (WEB)
- You have ravished my heart, my sister, my bride. You have ravished my heart with one of your eyes, with one chain of your neck.
- American Standard Version (ASV)
- Thou hast ravished my heart, my sister, [my] bride; Thou hast ravished my heart with one of thine eyes, With one chain of thy neck.
- Bible in Basic English (BBE)
- You have taken away my heart, my sister, my bride; you have taken away my heart, with one look you have taken it, with one chain of your neck!
- Darby Translation (DBY)
- Thou hast ravished my heart, my sister, [my] spouse; Thou hast ravished my heart with one of thine eyes, With one chain of thy neck.
- Webster's Bible (WBS)
- Thou hast ravished my heart, my sister, [my] spouse; thou hast ravished my heart with one of thy eyes, with one chain of thy neck.
- Young's Literal Translation (YLT)
- Thou hast emboldened me, my sister-spouse, Emboldened me with one of thine eyes, With one chain of thy neck.
Read in context
- 7ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿಯು, ನಿನ್ನಲ್ಲಿ ಕಳಂಕವೇನೂ ಇಲ್ಲ.
- 8ನನ್ನ ಸಂಗಡ ಲೆಬನೋನಿನಿಂದ ಬಾ, ಪತ್ನಿಯೇ; ಲೆಬನೋನಿನಿಂದ ನನ್ನ ಸಂಗಡ ಬಾ. ಅಮಾನದ ಶಿಖರದಿಂದ, ಶೆನೀರ್, ಹೆರ್ಮೋನ್ ಶಿಖರದಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ದೃಷ್ಟಿಸು.
- 9ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ. ನನ್ನ ಸಹೋದರಿಯೇ, ವಧುವೇ, ನಿನ್ನ ಕಣ್ಣುಗಳ ಏಕದೃಷ್ಟಿಯಿಂದಲೂ ನಿನ್ನ ಕೊರಳಲ್ಲಿರುವ ಒಂದು ಕಂಠಮಾಲೆಯಿಂದಲೂ ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ.
- 10ನಿನ್ನ ಪ್ರೀತಿಯು ಎಷ್ಟೋ ಚಂದ! ನನ್ನ ಸಹೋದರಿಯೇ, ವಧುವೇ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ಎಲ್ಲಾ ಸುಗಂಧ ಗಳಿಗಿಂತ ನಿನ್ನ ತೈಲಗಳ ವಾಸನೆಯು ಎಷ್ಟೋ ಉತ್ತಮ!
- 11ನಿನ್ನ ತುಟಿಗಳು, ಓ ನನ್ನ ವಧುವೇ, ಜೇನುಗೂಡಿನ ಹಾಗೆ ಸುರಿಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯ ಕೆಳಗೆ ಅವೆ; ನಿನ್ನ ವಸ್ತ್ರಗಳ ವಾಸನೆಯು ಲೆಬನೋನಿನ ವಾಸನೆಯ ಹಾಗೆ ಅವೆ.
Cross references
- Song of Solomon 4:12 ಪರಮಗೀತೆ 4:12ನನ್ನ ಸಹೋದರಿಯು, ಪತ್ನಿಯು, ಮುಚ್ಚಲ್ಪಟ್ಟ ತೋಟವೂ ಮುಚ್ಚಲ್ಪಟ್ಟ ಒರತೆಯೂ ಮುದ್ರೆ ಹಾಕಲ್ಪಟ್ಟ ಬುಗ್ಗೆಯೂ ಆಗಿದ್ದಾಳೆ.
- Song of Solomon 5:1–2 ಪರಮಗೀತೆ 5:1–2ನನ್ನ ತೋಟಕ್ಕೆ ಬಂದೆನು, ನನ್ನ ಸಹೋದರಿಯೇ, ವಧುವೇ; ನನ್ನ ರಕ್ತಬೋಳ ವನ್ನೂ ನನ್ನ ಸುಗಂಧಗಳನ್ನೂ ಕೂಡಿಸಿದ್ದೇನೆ; ನನ್ನ ಜೇನು ಗೂಡನ್ನೂ ಜೇನು ತುಪ್ಪವನ್ನೂ ತಿಂದಿದ್ದೇನೆ; ನನ್ನ ದ್ರಾಕ್ಷಾರಸವನ್ನೂ ನನ್ನ ಹಾಲನ್ನೂ ಕುಡಿದಿದ್ದೇನೆ. ತಿನ್ನಿರಿ, ಓ ಸ್ನೇಹಿತರೇ; ಕುಡಿಯಿರಿ. ಹೌದು, ನನ್ನ ಪ್ರಿಯರೇ, ಸಮೃದ್ಧಿಯಾಗಿ ಕುಡಿಯಿರಿ. ನಾನು ನಿದ್ರೆಗೈದರೂ ನನ್ನ ಹೃದಯವು ಎಚ್ಚರ ವಾಗುವದು. ಇದು ತಟ್ಟುವ ನನ್ನ ಪ್ರಿಯನ ಶಬ್ದ; ಅದು--ನನಗೆ ತೆರೆ, ನನ್ನ ಸಹೋದರಿಯೇ, ನನ್ನ ಪ್ರಿಯಳೇ, ನನ್ನ ಪಾರಿವಾಳವೇ, ನಿರ್ಮಲೆಯೇ, ನನ್ನ ತಲೆಯು ಮಂಜಿನಿಂದಲೂ ನನ್ನ ಕೂದಲು ರಾತ್ರಿಯ ಬಿಂದುಗಳಿಂದಲೂ ತೋಯಲ್ಪಟ್ಟಿವೆ ಎಂಬದು.
- Proverbs 5:19–20 ಜ್ಞಾನೋಕ್ತಿಗಳು 5:19–20ಆಕೆಯು ಮನೋಹರವಾದ ಜಿಂಕೆಯಂತೆಯೂ ಅಂದವಾದ ಹೆಣ್ಣು ಜಿಂಕೆಯ ಹಾಗೆಯೂ ಇರಲಿ; ಆಕೆಯ ಸ್ತನಗಳು ನಿನ್ನನ್ನು ಯಾವಾಗಲೂ ತೃಪ್ತಿಪಡಿ ಸಲಿ; ಆಕೆಯ ಪ್ರೀತಿಯಿಂದ ನೀನು ಯಾವಾಗಲೂ ಆನಂದಪರವಶನಾಗು. ನನ್ನ ಮಗನೇ, ಪರಸ್ತ್ರೀ ಯಲ್ಲಿ ನೀನು ಯಾಕೆ ಆನಂದ ಪರವಶನಾಗಿ ಅವಳ ಎದೆಯನ್ನು ಅಪ್ಪಿಕೊಳ್ಳುವಿ?
- Hosea 2:19–20 ಹೋಶೇಯ 2:19–20ನಿನ್ನನ್ನು ನನಗೆ ಸದಾ ಕಾಲಕ್ಕೆ ನಿಶ್ಚಿತ್ತಾರ್ಥ ಮಾಡಿಕೊಳ್ಳುವೆನು; ಹೌದು, ನೀತಿ ಯಿಂದಲೂ ನ್ಯಾಯದಿಂದಲೂ ದಯೆಯಿಂದಲೂ ಕರುಣೆಯಿಂದಲೂ ನನ್ನನ್ನು ನಿನಗೆ ನಿಶ್ಚಿತ್ತಾರ್ಥಮಾಡಿ ಕೊಳ್ಳುವೆನು. ನಾನು ನಿನ್ನನ್ನು ನಂಬಿಕೆಯಿಂದಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆನು; ಆಗ ನೀನು ಕರ್ತನನ್ನು ತಿಳಿದುಕೊಳ್ಳುವಿ.
- Song of Solomon 7:10 ಪರಮಗೀತೆ 7:10ನಾನು ನನ್ನ ಪ್ರಿಯನವಳು; ಅವನ ಇಚ್ಛೆಯು ನನ್ನ ಕಡೆಗಿರುವದು.
- 2 Corinthians 11:2 2 ಕೊರಿಂಥದವರಿಗೆ 11:2ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ.
- Song of Solomon 7:5–6 ಪರಮಗೀತೆ 7:5–6ನಿನ್ನ ತಲೆಯು ಕರ್ಮೆಲಿನ ಹಾಗೆಯೂ ನಿನ್ನ ತಲೆಯ ಕೂದಲು ಧೂಮ್ರದ ಹಾಗೆಯೂ ಇವೆ. ಅರಸನು ವೇದಿಕೆಗಳಲ್ಲಿ ಹಿಡಿಯಲ್ಪಟ್ಟಿದ್ದಾನೆ. ಓ ಪ್ರಿಯಳೇ, ನೀನು ಆನಂದಗಳಿಗಾಗಿ ಎಷ್ಟೋ ಸುಂದರಿಯು, ಎಷ್ಟೋ ಮನೋಹರಳು ಆಗಿದ್ದೀ.
- Isaiah 62:5 ಯೆಶಾಯ 62:5ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
- Song of Solomon 3:11 ಪರಮಗೀತೆ 3:11ಚೀಯೋನಿನ ಕುಮಾರ್ತೆಯರೇ, ನೀವು ಹೊರಟು ಹೋಗಿ ಅವನ ಮದುವೆಯ ದಿವಸದಲ್ಲಿಯೂ ಹೃದ ಯದ ಸಂತೋಷದ ದಿವಸದಲ್ಲಿಯೂ ತನ್ನ ತಾಯಿ ತನಗೆ ಧರಿಸಿದ ಕಿರೀಟ ಇರುವ ಅರಸನಾದ ಸೊಲೊ ಮೋನನನ್ನು ನೋಡಿರಿ.
- Zephaniah 3:17 ಚೆಫನ್ಯ 3:17ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Song of Solomon 6:12 ಪರಮಗೀತೆ 6:12ನಾನು ತಿಳಿದಿದ್ದಾಗ ನನ್ನ ಪ್ರಾಣವು ನನ್ನನ್ನು ಅಮ್ಮಿನಾದಿಬ್ನ ರಥಗಳ ಹಾಗೆ ಮಾಡಿತು.ತಿರಿಗಿ ಬಾ, ತಿರಿಗಿ ಬಾ, ಓ ಶೂಲಮ್ನವಳೇ; ನಾವು ನಿನ್ನನ್ನು ದೃಷ್ಟಿಸುವ ಹಾಗೆ ತಿರಿಗಿ ಬಾ, ತಿರಿಗಿ ಬಾ. ಎರಡು ಸೈನ್ಯದ ಗುಂಪಿನವರ ಹಾಗೆಯೇಶೂಲಮ್ಯಳಲ್ಲಿ ನೀವು ದೃಷ್ಟಿಸಬೇಕಾದದ್ದೇನು?
- Isaiah 54:5 ಯೆಶಾಯ 54:5ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು; ನಿನ್ನ ವಿಮೋಚಕನು ಇಸ್ರಾ ಯೇಲಿನ ಪರಿಶುದ್ಧನೇ; ಸಮಸ್ತ ಭೂಮಿಯ ದೇವರು ಎಂದು ಆತನು ಕರೆಯಲ್ಪಡುವನು.