Hosea · chapter 2 · verse 19
Hosea 2:19 in Kannada
ನಿನ್ನನ್ನು ನನಗೆ ಸದಾ ಕಾಲಕ್ಕೆ ನಿಶ್ಚಿತ್ತಾರ್ಥ ಮಾಡಿಕೊಳ್ಳುವೆನು; ಹೌದು, ನೀತಿ ಯಿಂದಲೂ ನ್ಯಾಯದಿಂದಲೂ ದಯೆಯಿಂದಲೂ ಕರುಣೆಯಿಂದಲೂ ನನ್ನನ್ನು ನಿನಗೆ ನಿಶ್ಚಿತ್ತಾರ್ಥಮಾಡಿ ಕೊಳ್ಳುವೆನು.
Ninnannu nanage sadaa kaalakke nishchittaartha maadikolluvenu; haudu, neeti yindaloo nyaayadindaloo dayeyindaloo karuneyindaloo nannannu ninage nishchittaarthamaadi kolluvenu.
Hosea 2:19 in English
- King James Version (KJV)
- And I will betroth thee unto me for ever; yea, I will betroth thee unto me in righteousness, and in judgment, and in lovingkindness, and in mercies.
- World English Bible (WEB)
- I will betroth you to me forever. Yes, I will betroth you to me in righteousness, in justice, in loving kindness, and in compassion.
- American Standard Version (ASV)
- And I will betroth thee unto me for ever; yea, I will betroth thee unto me in righteousness, and in justice, and in lovingkindness, and in mercies.
- Bible in Basic English (BBE)
- And I will take you as my bride for ever; truly, I will take you as my bride in righteousness and in right judging, in love and in mercies.
- Darby Translation (DBY)
- And I will betroth thee unto me for ever; and I will betroth thee unto me in righteousness, and in judgment, and in loving-kindness, and in mercies;
- Webster's Bible (WBS)
- And I will betroth thee to me for ever; yes, I will betroth thee to me in righteousness, and in judgment, and in loving-kindness, and in mercies.
- Young's Literal Translation (YLT)
- And I have betrothed thee to Me to the age, And betrothed thee to Me in righteousness, And in judgment, and kindness, and mercies,
Read in context
- 17ಬಾಳ್ ದೇವತೆಗಳ ಹೆಸರುಗಳನ್ನು ಅವಳ ಬಾಯಿಯೊಳಗಿಂದ ತೆಗೆದು ಹಾಕುವೆನು; ಅವು ಇನ್ನು ತಮ್ಮ ಹೆಸರಿನಿಂದ ಜ್ಞಾಪಕ ಮಾಡಲ್ಪಡುವದೇ ಇಲ್ಲ.
- 18ಆ ದಿನದಲ್ಲಿ ಅವರಿ ಗೋಸ್ಕರ ಅಡವಿಯ ಮೃಗಗಳ ಸಂಗಡಲೂ ಆಕಾಶದ ಪಕ್ಷಿಗಳ ಸಂಗಡಲೂ ಭೂಮಿಯ ಕ್ರಿಮಿಗಳ ಸಂಗಡಲೂ ಒಡಂಬಡಿಕೆ ಮಾಡುವೆನು. ನಾನು ಬಿಲ್ಲನ್ನೂ ಕತ್ತಿ ಯನ್ನೂ ಯುದ್ಧವನ್ನೂ ದೇಶದೊಳಗಿಂದ ಮುರಿದು ಹಾಕಿ ಅವರನ್ನು ನಿರ್ಭಯವಾಗಿ ಮಲಗುವಂತೆ ಮಾಡುವೆನು.
- 19ನಿನ್ನನ್ನು ನನಗೆ ಸದಾ ಕಾಲಕ್ಕೆ ನಿಶ್ಚಿತ್ತಾರ್ಥ ಮಾಡಿಕೊಳ್ಳುವೆನು; ಹೌದು, ನೀತಿ ಯಿಂದಲೂ ನ್ಯಾಯದಿಂದಲೂ ದಯೆಯಿಂದಲೂ ಕರುಣೆಯಿಂದಲೂ ನನ್ನನ್ನು ನಿನಗೆ ನಿಶ್ಚಿತ್ತಾರ್ಥಮಾಡಿ ಕೊಳ್ಳುವೆನು.
- 20ನಾನು ನಿನ್ನನ್ನು ನಂಬಿಕೆಯಿಂದಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆನು; ಆಗ ನೀನು ಕರ್ತನನ್ನು ತಿಳಿದುಕೊಳ್ಳುವಿ.
- 21ಆ ದಿನಗಳಲ್ಲಿ ಆಗುವದೇನಂದರೆ--ನಾನು ಕೇಳು ವೆನೆಂದು ಕರ್ತನು ಹೇಳುತ್ತಾನೆ; ನಾನು ಆಕಾಶಗ ಳನ್ನು ಕೇಳುವೆನು; ಅವು ಭೂಮಿಯನ್ನು ಕೇಳು ವವು.
Cross references
- 2 Corinthians 11:2 2 ಕೊರಿಂಥದವರಿಗೆ 11:2ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ.
- Revelation 21:2 ಪ್ರಕಟನೆ 21:2ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವದನ್ನು ಯೋಹಾನನೆಂಬ ನಾನು ಕಂಡೆನು; ಅದು ತನ್ನ ಮದಲಿಂಗನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಸಿದ್ಧವಾಗಿತ್ತು.
- Isaiah 54:8–10 ಯೆಶಾಯ 54:8–10ರೌದ್ರವೇರಿದಾಗ ನನ್ನ ಮುಖವನ್ನು ನಿನಗೆ ಕ್ಷಣ ಮಾತ್ರವೇ ಮರೆಮಾಡಿಕೊಂಡೆನು; ಆದರೆ ನಿರಂತರ ವಾದ ದಯದಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿ ದ್ದೇನೆ ಎಂದು ನಿನ್ನ ವಿಮೋಚಕನಾದ ಕರ್ತನು ಹೇಳು ತ್ತಾನೆ. ಇದು ನನಗೆ ನೋಹನ ಕಾಲದ ಪ್ರಳಯ ದಂತಿದೆ; ನೋಹನ ಕಾಲದ ಪ್ರಳಯವು ಇನ್ನು ಭೂಮಿಯ ಮೇಲೆ ಹರಿಯಗೊಡಿಸುವದಿಲ್ಲವೆಂದು ನಾನು ಪ್ರಮಾಣಮಾಡಿದ ಹಾಗೆಯೇ ಇನ್ನು ನಿನ್ನ ಮೇಲೆ ಕೋಪಗೊಳ್ಳುವದಿಲ್ಲ ಇಲ್ಲವೇ ನಿನ್ನನ್ನು ಗದರಿಸುವದಿಲ್ಲ ಎಂದು ಪ್ರಮಾಣಮಾಡಿದ್ದೇನೆ. ಪರ್ವತಗಳು ಹೊರಟುಹೋಗುವವು, ಮತ್ತು ಗುಡ್ಡಗಳು ತೆಗೆದುಹಾಕಲ್ಪಡುವವು; ಆದರೆ ನನ್ನ ದಯೆಯು ನಿನ್ನನ್ನು ಬಿಟ್ಟುಹೋಗದು ಇಲ್ಲವೆ ನನ್ನ ಸಮಾಧಾನದ ಒಡಂಬಡಿಕೆಯು ತೆಗೆಯಲ್ಪಡುವದಿಲ್ಲ ಎಂದು ನಿನ್ನ ಮೇಲೆ ಕರುಣೆಯನ್ನು ಇಟ್ಟಿರುವ ಕರ್ತನು ಹೇಳುತ್ತಾನೆ.
- Isaiah 54:14 ಯೆಶಾಯ 54:14ನೀನು ನೀತಿಯಲ್ಲಿ ನೆಲೆಗೊಂಡಿರುವಿ; ಹಿಂಸೆ ಯಿಂದ ದೂರವಾಗಿರುವಿ; ನೀನು ಭೀತಿಯಿಂದ ಭಯ ಪಡುವದಿಲ್ಲ; ಅದು ನಿನ್ನ ಸವಿಾಪಕ್ಕೆ ಬಾರದು.
- Ezekiel 37:25–28 ಯೆಹೆಜ್ಕೇಲನು 37:25–28ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ತಂದೆಗಳು(ಪಿತೃಗಳು) ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮಕ್ಕಳ ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ಪ್ರಧಾನನಾಗಿರುವನು. ಇದಾದ ಮೇಲೆ ನಾನು ಅವರೊಂದಿಗೆ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿ ರುವದು; ನಾನು ಅವರನ್ನು ಆ ಸ್ಥಳದಲ್ಲಿರಿಸುವೆನು ಅವರನ್ನು ವೃದ್ಧಿಗೊಳಿಸುವೆನು; ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು. ನನ್ನ ಗುಡಾರವು ಸಹ ಅವರೊಂದಿಗಿರುವದು; ಹೌದು, ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು. ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು.
- Romans 7:4 ರೋಮಾಪುರದವರಿಗೆ 7:4ಹಾಗೆಯೇ ನನ್ನ ಸಹೋದರರೇ, ನೀವು ಸಹ ಕ್ರಿಸ್ತನ ದೇಹದ ಮೂಲಕವಾಗಿ ನ್ಯಾಯಪ್ರಮಾಣದ ಪಾಲಿಗೆ ಸತ್ತಿರಿ. ದೇವರಿಗೆ ಫಲಫಲಿಸುವದಕ್ಕಾಗಿ ಮತ್ತೊಬ್ಬನನ್ನು ಅಂದರೆ ಸತ್ತುಜೀವಿತನಾಗಿ ಎದ್ದಾತನನ್ನು ಸೇರಿಕೊಂಡಿರಿ.
- John 3:29 ಯೋಹಾನನು 3:29ಮದಲಗಿತ್ತಿಯುಳ್ಳವನೇ ಮದಲಿಂಗನು; ಆದರೆ ಮದಲಿಂಗನ ಸ್ನೇಹಿತನು ನಿಂತುಕೊಂಡು ಆತನ ಮಾತನ್ನು ಕೇಳಿ ಮದಲಿಂಗನ ಧ್ವನಿಗೆ ಬಹಳವಾಗಿ ಸಂತೋಷ ಪಡುತ್ತಾನೆ; ಆದಕಾರಣ ಈ ನನ್ನ ಸಂತೋಷವು ನೆರವೇರಿತು.
- Revelation 19:7–9 ಪ್ರಕಟನೆ 19:7–9ಸಂತೋಷಪಡೋಣ, ಹರ್ಷಗೊಳ್ಳೋಣ, ಆತ ನನ್ನು ಘನಪಡಿಸೋಣ; ಯಾಕಂದರೆ ಕುರಿಮರಿಯಾದಾ ತನ ವಿವಾಹವು ಬಂತು; ಆತನಿಗೆ ವಿವಾಹವಾಗುವ ಕನ್ಯೆಯು ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ ಎಂದು ಹೇಳಿತು. ನಿರ್ಮಲವಾದ ಬಿಳೀ ನಯವಾದ ನಾರು ಮಡಿಯನ್ನು ಧರಿಸಿಕೊಳ್ಳುವದಕ್ಕೆ ಆಕೆಗೆ ಅನುಗ್ರಹಿ ಸೋಣವಾಗಿತ್ತು; ಯಾಕಂದರೆ ಆ ನಾರುಮಡಿಯು ಪರಿಶುದ್ಧರ ನೀತಿಯೇ. ಇದಲ್ಲದೆ ಅವನು--ಕುರಿಮರಿ ಯಾದಾತನ ವಿವಾಹದ ಔತಣಕ್ಕೆ ಕರೆಯಲ್ಪಟ್ಟವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿದನು. ಇದಲ್ಲದೆ ಅವನು--ಇವುಗಳು ದೇವರ ನಿಜವಾದ ಮಾತುಗಳಾಗಿವೆ ಎಂದು ನನಗೆ ಹೇಳಿದನು.
- Psalm 85:10 ಕೀರ್ತನೆಗಳು 85:10ಕೃಪೆಯೂ ಸತ್ಯವೂ ಸಂಧಿಸಿ ಕೊಳ್ಳುತ್ತವೆ; ನೀತಿಯೂ ಸಮಾಧಾನವೂ ಮುದ್ದಿಟ್ಟು ಕೊಳ್ಳುತ್ತವೆ.
- Jeremiah 3:14–15 ಯೆರೆಮೀಯ 3:14–15ಹಿಂಜರಿದ ಮಕ್ಕಳೇ, ತಿರುಗಿಕೊಳ್ಳಿರೆಂದು ಕರ್ತನು ಅನ್ನುತ್ತಾನೆ; ನಾನು ನಿಮ್ಮನ್ನು ಮದುವೆಯಾಗಿದ್ದೇನೆ; ನಿಮ್ಮನ್ನು ಪಟ್ಟಣದೊಳಗಿಂದ ಒಬ್ಬನಂತೆಯೂ ಗೋತ್ರ ದೊಳಗಿಂದ ಇಬ್ಬರಂತೆಯೂ ತೆಗೆದುಕೊಂಡು ಚೀಯೋನಿಗೆ ಕರಕೊಂಡು ಬರುವೆನು. ನನ್ನ ಹೃದ ಯಕ್ಕೆ ಸರಿಯಾದ ಪಾಲಕರನ್ನು ನಿಮಗೆ ಕೊಡುವೆನು; ಅವರು ತಿಳುವಳಿಕೆಯಿಂದಲೂ ಬುದ್ಧಿಯಿಂದಲೂ ನಿಮ್ಮನ್ನು ಪೋಷಿಸುವರು.
- Ephesians 5:23–27 ಎಫೆಸದವರಿಗೆ 5:23–27ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಆತನು (ಕ್ರಿಸ್ತನು) ದೇಹಕ್ಕೆ ರಕ್ಷಕ ನಾಗಿದ್ದಾನೆ, ಆದದರಿಂದ ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನ ರಾಗಿರಬೇಕು. ಪುರಷರೇ, ನೀವು ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಯಾಕಂದರೆ ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು. ಆತನು ಅದನ್ನು ವಾಕ್ಯವೆಂಬ ನೀರಿನಿಂದ ತೊಳೆದು ಪ್ರತಿಷ್ಠಿಸಿ ಶುದ್ಧ ಮಾಡಿದ್ದಲ್ಲದೆ ಅದನ್ನು ಕಳಂಕ ಸುಕ್ಕು ಇಂಥಾದ್ದು ಯಾವದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯ ನ್ನಾಗಿ ತನಗೆ ತಾನೇ ಸಮರ್ಪಿಸಿಕೊಳ್ಳಬೇಕೆಂದಿದ್ದಾನೆ.
- Ezekiel 39:29 ಯೆಹೆಜ್ಕೇಲನು 39:29ಇಲ್ಲವೇ ನಾನು ನನ್ನ ಮುಖವನ್ನು ಎಂದಿಗೂ ಮರೆಮಾಡುವದಿಲ್ಲ; ನಾನು ನನ್ನ ಆತ್ಮವನ್ನು ಇಸ್ರಾ ಯೇಲಿನ ಮನೆತನದವರ ಮೇಲೆ ಸುರಿದಿರುವೆನೆಂದು ದೇವರಾದ ಕರ್ತನು ಹೇಳುತ್ತಾನೆ.