Zechariah · chapter 10 · verse 5
Zechariah 10:5 in Kannada
ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು.
Avaru yuddha dalli shatruvannu beedigala kesarinalli tuliyuva shoorara haagiruvaru; kartanu avara sangada iruvadarinda yuddhamaaduvaru; kuduregala mele savaari maaduvavarannu naachikepadisuvaru.
Zechariah 10:5 in English
- King James Version (KJV)
- And they shall be as mighty [men], which tread down [their enemies] in the mire of the streets in the battle: and they shall fight, because the LORD [is] with them, and the riders on horses shall be confounded.
- World English Bible (WEB)
- They will be as mighty men, treading down muddy streets in the battle. They will fight, because the LORD is with them. The riders on horses will be confounded.
- American Standard Version (ASV)
- And they shall be as mighty men, treading down [their enemies] in the mire of the streets in the battle; and they shall fight, because Jehovah is with them; and the riders on horses shall be confounded.
- Bible in Basic English (BBE)
- Together they will be like men of war, crushing down their haters into the earth of the streets in the fight; they will make war because the Lord is with them: and the horsemen will be shamed.
- Darby Translation (DBY)
- And they shall be as mighty men, treading down the mire of the streets in the battle; and they shall fight, for Jehovah is with them, and the riders on horses shall be put to shame.
- Webster's Bible (WBS)
- And they shall be as mighty [men] , who tread down [their enemies] in the mire of the streets in the battle: and they shall fight, because the LORD [is] with them, and the riders on horses shall be confounded.
- Young's Literal Translation (YLT)
- And they have been as heroes, Treading in mire of out-places in battle, And they have fought, for Jehovah [is] with them, And have put to shame riders of horses.
Read in context
- 3ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯಿತು; ಮೇಕೆಗಳನ್ನು ದಂಡಿಸಿದೆನು; ಸೈನ್ಯಗಳ ಕರ್ತನು ತನ್ನ ಮಂದೆಯಾಗಿರುವ ಯೆಹೂದನ ಮನೆ ತನದವರನ್ನು ದರ್ಶಿಸಿ ಅವರನ್ನು ಯುದ್ಧದಲ್ಲಿ ತನ್ನ ಘನವಾದ ಕುದುರೆಯ ಹಾಗೆ ಮಾಡಿದ್ದಾನೆ.
- 4ಆತ ನಿಂದ ಮೂಲೆಗಲ್ಲೂ ಆತನಿಂದ ಮೊಳೆಯೂ ಆತನಿಂದ ಯುದ್ಧದ ಬಿಲ್ಲೂ ಆತನಿಂದ ಹಿಂಸಿಸುವವರೆಲ್ಲರೂ ಕೂಡಿಕೊಂಡು ಹೊರಡುತ್ತಾರೆ.
- 5ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು.
- 6ಇದಲ್ಲದೆ ನಾನು ಯೆಹೂದನ ಮನೆತನದವರನ್ನು ಬಲಪಡಿಸುವೆನು, ಯೋಸೇಫನ ಮನೆತನದವರನ್ನು ರಕ್ಷಿಸುವೆನು; ಅವರನ್ನು ಕನಿಕರಿಸುವದರಿಂದ ತಿರಿಗಿ ತಂದು ನಿವಾಸಿಸ ಮಾಡುವೆನು; ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಅವರು ಇರುವರು; ನಾನೇ ಅವರ ದೇವರಾದ ಕರ್ತನಾಗಿದ್ದು ಅವರಿಗೆ ಉತ್ತರಕೊಡುವೆನು.
- 7ಎಫ್ರಾಯಾಮಿನವರು ಶೂರನಂತೆ ಇರುವರು; ಅವರ ಹೃದಯವು ದ್ರಾಕ್ಷಾರಸದಿಂದಾದ ಹಾಗೆ ಸಂತೋಷಪಡುವದು; ಹೌದು, ಅವರ ಮಕ್ಕಳು ನೋಡಿ ಸಂತೋಷಿಸುವರು; ಅವರ ಹೃದಯವು ಕರ್ತ ನಲ್ಲಿ ಉಲ್ಲಾಸಪಡುವದು.
Cross references
- Haggai 2:22 ಹಗ್ಗಾಯ 2:22ರಾಜ್ಯಗಳ ಸಿಂಹಾಸನವನ್ನು ಕೆಡವಿಹಾಕುವೆನು; ಅನ್ಯ ಜನಾಂಗಗಳ ರಾಜ್ಯಗಳ ಬಲವನ್ನು ನಾಶಮಾಡುವೆನು, ರಥಗಳನ್ನೂ ಅವುಗಳಲ್ಲಿ ಸವಾರಿ ಮಾಡುವವರನ್ನೂ ಕೆಡವಿಹಾಕುವೆನು; ಕುದುರೆಗಳೂ ಅದರ ಸವಾರರೂ ಪ್ರತಿಯೊಬ್ಬನೂ ತನ್ನ ಸಹೋದರನ ಕತ್ತಿಯಿಂದ ಬೀಳು ವನು.ಸೈನ್ಯಗಳ ಕರ್ತನು ಅನ್ನುತ್ತಾನೆ--ಆ ದಿನದಲ್ಲಿ ಶೆಯಲ್ತೀಯೇಲನ ಮಗನಾದ ನನ್ನ ಸೇವಕನಾದ ಜೆರು ಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದು ಕೊಂಡು ಮುದ್ರೆಯ ಹಾಗೆ ಇಡುವೆನು; ನಿನ್ನನ್ನು ನಾನೇ ಆದುಕೊಂಡಿದ್ದೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
- Zechariah 12:8 ಜೆಕರ್ಯ 12:8ಆ ದಿನದಲ್ಲಿ ಕರ್ತನು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವನು; ಆ ದಿನದಲ್ಲಿ ಅವರೊಳಗೆ ಬಲಹೀನನು ದಾವೀದನ ಹಾಗೆಯೂ ದಾವೀದನ ಮನೆತನದವರು ದೇವರ ಹಾಗೆಯೂ ಅಂದರೆ ಅವರ ಮುಂದೆ ಕರ್ತನ ದೂತನ ಹಾಗೆಯೂ ಇರುವರು.
- Romans 8:31–37 ರೋಮಾಪುರದವರಿಗೆ 8:31–37ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು? ದೇವರು ತನ್ನ ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೊಸ್ಕರ ಒಪ್ಪಿಸಿಕೊಟ್ಟ ಮೇಲೆ ಆತನೊಂದಿಗೆ ಎಲ್ಲವುಗಳನ್ನು ಉಚಿತವಾಗಿ ನಮಗೆ ಕೊಡದೆ ಇರುವನೇ? ದೇವರಾದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ. ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತನು ಮರಣವನ್ನು ಹೊಂದಿದ್ದಲ್ಲದೆ (ಜೀವಿತನಾಗಿ) ಎದ್ದು ದೇವರ ಬಲಗಡೆಯಲ್ಲಿ ನಮಗೋಸ್ಕರ ವಿಜ್ಞಾಪನೆ ಮಾಡು ವಾತನಾಗಿದ್ದಾನೆ; ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಬರಗಾಲವೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ? ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ. ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ.
- Psalm 20:7 ಕೀರ್ತನೆಗಳು 20:7ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳ ಲ್ಲಿಯೂ ಭರವಸವಿಡುತ್ತಾರೆ; ಆದರೆ ನಾವು ನಮ್ಮ ದೇವರಾದ ಕರ್ತನ ಹೆಸರನ್ನು ಜ್ಞಾಪಕಮಾಡುತ್ತೇವೆ.
- Zechariah 9:13 ಜೆಕರ್ಯ 9:13ಯೆಹೂದವನ್ನು ನನಗಾಗಿ ಬೊಗ್ಗಿಸಿದಾಗ ಎಫ್ರಾಯಾಮನ್ನು ಬಿಲ್ಲುಗಳಿಂದ ತುಂಬಿಸಿದ್ದೇನೆ; ಚೀಯೋನೇ, ನಿನ್ನ ಕುಮಾರರನ್ನು ಗ್ರೀಕ್ ಕುಮಾರರಿಗೆ ವಿರೋಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯಂತೆ ಮಾಡಿದ್ದೇನೆ.
- Isaiah 10:6 ಯೆಶಾಯ 10:6ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು.
- Luke 24:19 ಲೂಕನು 24:19ಅದಕ್ಕೆ ಆತನು ಅವರಿಗೆ--ಯಾವ ವಿಷಯಗಳು ಎಂದು ಕೇಳಲು ಅವರು ಆತನಿಗೆ--ದೇವರ ಸನ್ನಿಧಿಯಲ್ಲಿಯೂ ಎಲ್ಲಾ ಜನರ ಮುಂದೆಯೂ ಪ್ರವಾದಿಯಾಗಿದ್ದು ಕೃತ್ಯಗಳ ಲ್ಲಿಯೂ ಮಾತುಗಳಲ್ಲಿಯೂ ಸಮರ್ಥನಾಗಿದ್ದ ನಜ ರೇತಿನ ಯೇಸುವಿನ ವಿಷಯಗಳೇ;
- Isaiah 8:9 ಯೆಶಾಯ 8:9ಓ ಪ್ರಜೆಗಳೇ, ನೀವು ಕೂಡಿಕೊಳ್ಳಿರಿ; ನೀವು ಒಡೆದು ಚೂರುಚೂರಾಗುವಿರಿ; ಎಲ್ಲಾ ದೂರ ದೇಶದ ವರೇ, ಕಿವಿಗೊಡಿರಿ, ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ; ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ.
- Deuteronomy 20:1 ಧರ್ಮೋಪದೇಶಕಾಂಡ 20:1ನೀನು ನಿನ್ನ ಶತ್ರುಗಳಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಕುದುರೆಗಳನ್ನೂ ರಥ ಗಳನ್ನೂ ನಿನಗಿಂತ ಹೆಚ್ಚಾದ ಜನರನ್ನೂ ನೋಡಿದರೆ ಅವರಿಗೆ ಭಯಪಡಬೇಡ; ಐಗುಪ್ತದೇಶದೊಳಗಿಂದ ನಿನ್ನನ್ನು ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ.
- 2 Samuel 22:43 2 ಸಮುವೇಲನು 22:43ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು.
- Joel 3:12–17 ಯೋವೇಲ 3:12–17ಜನಾಂಗಗಳು ಎಬ್ಬಿಸಲ್ಪಟ್ಟು ಯೆಹೋಷಾಫಾಟನ ತಗ್ಗಿಗೆ ಬರಲಿ; ಸುತ್ತಲಿನ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವದಕ್ಕೆ ನಾನು ಅಲ್ಲಿ ಕೂತುಕೊಳ್ಳುವೆನು. ಕುಡುಗೋಲನ್ನು ಹಾಕಿರಿ, ಬೆಳೆ ಪಕ್ವವಾಯಿತು; ಬಂದು ಇಳಿಯಿರಿ; ದ್ರಾಕ್ಷೆಯ ಅಲೆ ತುಂಬಿ ಅದೆ; ತೊಟ್ಟಿಗಳು ತುಳುಕುತ್ತವೆ; ಅವರ ಕೆಟ್ಟತನವು ಬಹಳವಾಗಿದೆ. ನಿರ್ಣಯದ ತಗ್ಗಿನಲ್ಲಿ ಗುಂಪುಗಳು, ಗುಂಪುಗಳು; ಕರ್ತನ ದಿನವು ನಿರ್ಣ ಯದ ತಗ್ಗಿನಲ್ಲಿ ಸವಿಾಪವಾಗಿದೆ. ಸೂರ್ಯ, ಚಂದ್ರ ಕಪ್ಪಾಗುವವು; ನಕ್ಷತ್ರಗಳು ತಮ್ಮ ಪ್ರಕಾಶವನ್ನು ಮರೆಮಾಡುವವು. ಕರ್ತನು ಚೀಯೋನಿನೊಳಗಿಂದ ಘರ್ಜಿಸಿ ಯೆರೂಸಲೇಮಿನೊಳಗಿಂದ ತನ್ನ ಶಬ್ದವನ್ನು ಕೊಡುವನು. ಆಕಾಶಗಳೂ ಭೂಮಿಯೂ ಕದಲು ವವು; ಆದರೆ ಕರ್ತನು ತನ್ನ ಜನರಿಗೆ ನಿರೀಕ್ಷೆಯೂ ಇಸ್ರಾಯೇಲನ ಮಕ್ಕಳಿಗೆ ಬಲವೂ ಆಗಿರುವನು. ಹೀಗೆ ನನ್ನ ಪರಿಶುದ್ಧ ಪರ್ವತವಾದ ಚೀಯೋನಿ ನಲ್ಲಿ ವಾಸಿಸುವ ನಿಮ್ಮ ದೇವರಾದ ಕರ್ತನು ನಾನೇ ಎಂದು ನೀವು ತಿಳುಕೊಳ್ಳುವಿರಿ; ಆಗ ಯೆರೂಸಲೇಮು ಪರಿಶುದ್ಧವಾಗಿರುವದು; ಅನ್ಯರು ಇನ್ನು ಅದರಲ್ಲಿ ಹಾದುಹೋಗರು.
- Matthew 28:20 ಮತ್ತಾಯನು 28:20ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್.