Zechariah · chapter 2 · verse 5
Zechariah 2:5 in Kannada
ಯಾಕಂ ದರೆ ನಾನು ಅದರ ಸುತ್ತಲೂ ಬೆಂಕಿಯ ಗೋಡೆಯಾ ಗಿಯೂ ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನೆಂದು ಕರ್ತನು ಅನ್ನುತ್ತಾನೆ.
Yaakam dare naanu adara suttaloo benkiya godeyaa giyoo adara madhyadalli mahimeyaagiyoo iruvenendu kartanu annuttaane.
Zechariah 2:5 in English
- King James Version (KJV)
- For I, saith the LORD, will be unto her a wall of fire round about, and will be the glory in the midst of her.
- World English Bible (WEB)
- For I,’ says the LORD, ‘will be to her a wall of fire around it, and I will be the glory in the middle of her.
- American Standard Version (ASV)
- For I, saith Jehovah, will be unto her a wall of fire round about, and I will be the glory in the midst of her.
- Bible in Basic English (BBE)
- For I, says the Lord, will be a wall of fire round about her, and I will be the glory inside her.
- Darby Translation (DBY)
- and I, saith Jehovah, I will be unto her a wall of fire round about, and will be the glory in the midst of her.
- Webster's Bible (WBS)
- For I, saith the LORD, will be to her a wall of fire on every side, and will be the glory in the midst of her.
- Young's Literal Translation (YLT)
- And I — I am to her — an affirmation of Jehovah, A wall of fire round about, And for honour I am in her midst.
Read in context
- 3ಇಗೋ, ನನ್ನ ಸಂಗಡ ಮಾತನಾಡಿದ ದೂತನು ಹೊರಟನು; ಇನ್ನೊಬ್ಬ ದೂತನು ಅವನನ್ನು ಎದುರುಗೊಳ್ಳುವದಕ್ಕೆ ಹೊರಟನು.
- 4ಇವನು ಅವನಿಗೆ ಹೀಗಂದನು--ಓಡಿಹೋಗಿ ಈ ಯೌವನಸ್ಥನಿಗೆ ಹೀಗೆ ಹೇಳು, ಏನಂದರೆ--ಯೆರೂಸಲೇಮು ಅದರಲ್ಲಿರುವ ಮನು ಷ್ಯರ ಮತ್ತು ದನಗಳ ಸಂಖ್ಯೆ ಹೆಚ್ಚಾದದ್ದರಿಂದ ಗೋಡೆ ಇಲ್ಲದ ಊರುಗಳಂತೆ ನಿವಾಸವಾಗುವದು.
- 5ಯಾಕಂ ದರೆ ನಾನು ಅದರ ಸುತ್ತಲೂ ಬೆಂಕಿಯ ಗೋಡೆಯಾ ಗಿಯೂ ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನೆಂದು ಕರ್ತನು ಅನ್ನುತ್ತಾನೆ.
- 6ಓಹೋ, ನೀವು ಹೊರಗೆ ಬಂದು ಉತ್ತರ ದೇಶ ದಿಂದ ಓಡಿಹೋಗಿರಿ; ಆಕಾಶದ ನಾಲ್ಕು ದಿಕ್ಕುಗಳಂತೆ ನಿಮ್ಮನ್ನು ಚದರಿಸಿದ್ದೇನೆಂದು ಕರ್ತನು ಅನ್ನುತ್ತಾನೆ.
- 7ಓ ಚೀಯೋನೇ, ಬಾಬೆಲಿನ ಮಗಳ ಬಳಿಯಲ್ಲಿ ವಾಸವಾಗಿರುವವಳೇ, ತಪ್ಪಿಸಿಕೋ.
Cross references
- Isaiah 4:5 ಯೆಶಾಯ 4:5ಕರ್ತನು ಚೀಯೋನ್ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೂ ಅವಳ ಸಭೆಗಳ ಮೇಲೂ ಹಗಲಿನಲ್ಲಿ ಹೊಗೆಯನ್ನೂ ಮೇಘವನ್ನೂ ಇರುಳಿನಲ್ಲಿ ಪ್ರಜ್ವಲಿ ಸುವ ಅಗ್ನಿಪ್ರಕಾಶವನ್ನೂ ಉಂಟುಮಾಡುವನು; ಎಲ್ಲಾ ಮಹಿಮೆಯ ಮೇಲೆ ಕಾವಲಿರುವದು.ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ ಬಿರುಗಾಳಿಗೂ ಮಳೆಗೂ ಮರೆಯಾಗಲು ಆಶ್ರಯ ಸ್ಥಾನವಾಗಿ ಒಂದು ಗುಡಾರವಿರುವದು.
- Psalm 3:3 ಕೀರ್ತನೆಗಳು 3:3ಆದರೆ ಓ ನನ್ನ ಕರ್ತನೇ, ನನಗೆ ಗುರಾಣಿಯೂ ನನ್ನ ಘನವೂ ನನ್ನ ತಲೆ ಎತ್ತುವವನೂ ನೀನೇ.
- Zechariah 9:8 ಜೆಕರ್ಯ 9:8ಇದಲ್ಲದೆ ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ ಸೈನ್ಯದ ನಿಮಿತ್ತವೂ ನನ್ನ ಮನೆಯ ಹತ್ತಿರ ಪಾಳೆಯಮಾಡುತ್ತೇನೆ; ಇನ್ನು ಮೇಲೆ ಉಪದ್ರ ಕೊಡುವವನು ಅವರ ಮೇಲೆ ಹಾದು ಹೋಗುವದಿಲ್ಲ; ಯಾಕಂದರೆ ಈಗ ನನ್ನ ಕಣ್ಣುಗಳಿಂದ ನೋಡಿದ್ದೇನೆ.
- Isaiah 60:18–19 ಯೆಶಾಯ 60:18–19ಬಲಾತ್ಕಾರವೂ ನಿನ್ನ ದೇಶದೊಳಗೆ ಹಾಳಾದದ್ದೂ ನಾಶವೂ ನಿನ್ನ ಮೇರೆ ಗಳಲ್ಲಿ ಕೇಳಲ್ಪಡುವದಿಲ್ಲ; ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿ ಡುವಿ. ಇನ್ನು ಮೇಲೆ ಸೂರ್ಯನು ನಿನಗೆ ಹಗಲಿ ನಲ್ಲಿ ಬೆಳಕಾಗಿರುವದಿಲ್ಲ, ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವದಿಲ್ಲ; ಆದರೆ ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು. ನಿನ್ನ ದೇವರು ನಿನ್ನ ಪ್ರಭೆಯಾಗಿರುವನು.
- Revelation 21:23 ಪ್ರಕಟನೆ 21:23ಪಟ್ಟಣದಲ್ಲಿ ಬೆಳಕನ್ನು ಕೊಡು ವದಕ್ಕಾಗಿ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿಲ್ಲ. ಯಾಕಂದರೆ ಅದಕ್ಕೆ ದೇವರ ಪ್ರಭಾವವೇ ಬೆಳಕನ್ನು ಕೊಟ್ಟಿತು; ಕುರಿಮರಿಯಾದಾತನೇ ಅದರ ದೀಪ.
- Isaiah 12:6 ಯೆಶಾಯ 12:6ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
- Psalm 46:7–11 ಕೀರ್ತನೆಗಳು 46:7–11ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ. ಬನ್ನಿರಿ, ಕರ್ತನ ಕಾರ್ಯಗಳನ್ನು ದೃಷ್ಟಿಸಿರಿ. ಆತನು ಭೂಮಿಯಲ್ಲಿ ಎಂಥಾ ನಾಶನಗಳನ್ನು ನಡಿಸಿದ್ದಾನೆ; ಯುದ್ಧಗಳನ್ನು ಭೂಮಿಯ ಅಂತ್ಯದ ವರೆಗೆ ನಿಲ್ಲಿಸಿ ಬಿಲ್ಲನ್ನು ಮುರಿದು ಭಲ್ಲೆಯನ್ನು ಕಡಿದು ತುಂಡುಮಾಡಿ ರಥಗಳನ್ನು ಬೆಂಕಿಯಿಂದ ಸುಡುತ್ತಾನೆ. ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ. ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Isaiah 33:21 ಯೆಶಾಯ 33:21ಆದರೆ ಅಲ್ಲಿ ವಿಸ್ತಾರವಾದ ನದಿಗಳಂತೆ ಮತ್ತು ಪ್ರವಾಹಗ ಳಂತೆ ಮಹಿಮೆಯುಳ್ಳ ಕರ್ತನು ನಮಗೆ ಇರುವನು. ಅಲ್ಲಿ ಹುಟ್ಟುಗೋಲಿನ ದೋಣಿ ಹೋಗದು, ಘನ ನಾವೆಯು ಸಂಚರಿಸದು.
- Isaiah 26:1–2 ಯೆಶಾಯ 26:1–2ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಹಾಡನ್ನು ಹಾಡುವರು; ನಮಗೆ ಬಲ ವಾದ ಪಟ್ಟಣವಿದೆ. ರಕ್ಷಣೆಯನ್ನು ಕೋಟೆಯನ್ನಾ ಗಿಯೂ ಹೊರಪೌಳಿಯನ್ನಾಗಿಯೂ ದೇವರು ಮಾಡು ವನು. ಬಾಗಿಲುಗಳನ್ನು ತೆರೆಯಿರಿ. ಸತ್ಯವನ್ನು ಕೈಕೊ ಳ್ಳುವ ನೀತಿಯುಳ್ಳ ಜನಾಂಗವು ಒಳಗೆ ಪ್ರವೇಶಿಸಲಿ.
- Revelation 21:10–11 ಪ್ರಕಟನೆ 21:10–11ಅವನು ಆತ್ಮದಲ್ಲಿ ನನ್ನನ್ನು ಎತ್ತರವಾದ ದೊಡ್ಡ ಬೆಟ್ಟಕ್ಕೆ ಎತ್ತಿಕೊಂಡು ಹೋಗಿ ಪರಲೋಕ ದೊಳಗಿಂದ ಪರಿಶುದ್ಧವಾದ ಯೆರೂಸಲೇಮೆಂಬ ಆ ದೊಡ್ಡ ಪಟ್ಟಣವು ದೇವರ ಕಡೆಯಿಂದ ಇಳಿದು ಬರುವ ದನ್ನು ನನಗೆ ತೋರಿಸಿದನು. ಅದರಲ್ಲಿ ದೇವರ ಮಹಿಮೆ ಇತ್ತು; ಪಟ್ಟಣದ ಪ್ರಕಾಶವು ಅಮೂಲ್ಯವಾದ ಕಲ್ಲಿನ ಪ್ರಕಾಶಕ್ಕೆ ಸಮಾನವಾಗಿತ್ತು; ಅದು ಸೂರ್ಯ ಕಾಂತದಂತೆ ಥಳಥಳಿಸುತ್ತಿತ್ತು.
- Haggai 2:7–9 ಹಗ್ಗಾಯ 2:7–9ಎಲ್ಲಾ ಜನಾಂಗಗಳನ್ನು ಅದುರಿಸುತ್ತೇನೆ; ಎಲ್ಲಾ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ಮಹಿಮೆಯಿಂದ ತುಂಬಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಬೆಳ್ಳಿಯು ನನ್ನದು, ಚಿನ್ನವು ನನ್ನದು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ಈ ಆಲಯದ ಮುಂದಿನ ಮಹಿಮೆಯು ಹಿಂದಿನ ಮಹಿಮೆಗಿಂತ ವಿಶೇಷವಾಗಿರುವದು ಎಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಈ ಸ್ಥಳದಲ್ಲಿ ಸಮಾಧಾನ ಕೊಡುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Psalm 48:12 ಕೀರ್ತನೆಗಳು 48:12ಚೀಯೋನನ್ನು ಸುತ್ತಿ ಅವಳ ಸುತ್ತಲು ತಿರುಗಿ ಅದರ ಬುರುಜುಗಳನ್ನು ಲೆಕ್ಕಿಸಿರಿ.