Zechariah · chapter 2 · verse 6
Zechariah 2:6 in Kannada
ಓಹೋ, ನೀವು ಹೊರಗೆ ಬಂದು ಉತ್ತರ ದೇಶ ದಿಂದ ಓಡಿಹೋಗಿರಿ; ಆಕಾಶದ ನಾಲ್ಕು ದಿಕ್ಕುಗಳಂತೆ ನಿಮ್ಮನ್ನು ಚದರಿಸಿದ್ದೇನೆಂದು ಕರ್ತನು ಅನ್ನುತ್ತಾನೆ.
Oho, neevu horage bandu uttara desha dinda odihogiri; aakaashada naalku dikkugalante nimmannu chadarisiddenendu kartanu annuttaane.
Zechariah 2:6 in English
- King James Version (KJV)
- Ho, ho, [come forth], and flee from the land of the north, saith the LORD: for I have spread you abroad as the four winds of the heaven, saith the LORD.
- World English Bible (WEB)
- Come! Come! Flee from the land of the north,’ says the LORD; ‘for I have spread you abroad as the four winds of the sky,’ says the LORD.
- American Standard Version (ASV)
- Ho, ho, flee from the land of the north, saith Jehovah; for I have spread you abroad as the four winds of the heavens, saith Jehovah.
- Bible in Basic English (BBE)
- Ho, ho! go in flight from the land of the north, says the Lord: for I have sent you far and wide to the four winds of heaven, says the Lord.
- Darby Translation (DBY)
- Ho, ho! flee from the land of the north, saith Jehovah; for I have scattered you abroad as the four winds of the heavens, saith Jehovah.
- Webster's Bible (WBS)
- Ho, ho, [come forth] , and flee from the land of the north, saith the LORD: for I have spread you abroad as the four winds of the heaven, saith the LORD.
- Young's Literal Translation (YLT)
- Ho, ho, and flee from the land of the north, An affirmation of Jehovah, For, as the four winds of the heavens, I have spread you abroad, An affirmation of Jehovah.
Read in context
- 4ಇವನು ಅವನಿಗೆ ಹೀಗಂದನು--ಓಡಿಹೋಗಿ ಈ ಯೌವನಸ್ಥನಿಗೆ ಹೀಗೆ ಹೇಳು, ಏನಂದರೆ--ಯೆರೂಸಲೇಮು ಅದರಲ್ಲಿರುವ ಮನು ಷ್ಯರ ಮತ್ತು ದನಗಳ ಸಂಖ್ಯೆ ಹೆಚ್ಚಾದದ್ದರಿಂದ ಗೋಡೆ ಇಲ್ಲದ ಊರುಗಳಂತೆ ನಿವಾಸವಾಗುವದು.
- 5ಯಾಕಂ ದರೆ ನಾನು ಅದರ ಸುತ್ತಲೂ ಬೆಂಕಿಯ ಗೋಡೆಯಾ ಗಿಯೂ ಅದರ ಮಧ್ಯದಲ್ಲಿ ಮಹಿಮೆಯಾಗಿಯೂ ಇರುವೆನೆಂದು ಕರ್ತನು ಅನ್ನುತ್ತಾನೆ.
- 6ಓಹೋ, ನೀವು ಹೊರಗೆ ಬಂದು ಉತ್ತರ ದೇಶ ದಿಂದ ಓಡಿಹೋಗಿರಿ; ಆಕಾಶದ ನಾಲ್ಕು ದಿಕ್ಕುಗಳಂತೆ ನಿಮ್ಮನ್ನು ಚದರಿಸಿದ್ದೇನೆಂದು ಕರ್ತನು ಅನ್ನುತ್ತಾನೆ.
- 7ಓ ಚೀಯೋನೇ, ಬಾಬೆಲಿನ ಮಗಳ ಬಳಿಯಲ್ಲಿ ವಾಸವಾಗಿರುವವಳೇ, ತಪ್ಪಿಸಿಕೋ.
- 8ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
Cross references
- Isaiah 48:20 ಯೆಶಾಯ 48:20ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ.
- Ezekiel 17:21 ಯೆಹೆಜ್ಕೇಲನು 17:21ಅವನ ಸೈನ್ಯಗಳೆಲ್ಲಾ ಚದರಿಸಲ್ಪಟ್ಟು ಓಡಿಹೋಗಿ ಅವನ ಸಂಗಡ ಕತ್ತಿಯಿಂದ ಬೀಳುವರು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಸ ಲ್ಪಡುವರು; ಆಗ ಕರ್ತನಾದ ನಾನೇ ಅದನ್ನು ಹೇಳಿ ದೆನೆಂದು ನಿಮಗೆ ತಿಳಿಯುವದು.
- Revelation 18:4 ಪ್ರಕಟನೆ 18:4ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು.
- Isaiah 52:11–12 ಯೆಶಾಯ 52:11–12ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, ಅಶುದ್ಧವಾದದ್ದನ್ನು ಮುಟ್ಟಬೇಡಿರಿ; ಅವಳ ಮಧ್ಯದಿಂದ ಹೊರಗೆ ಹೋಗಿರಿ; ಕರ್ತನ ಪಾತ್ರೆಗ ಳನ್ನು ಹೊರುವವರೇ, ನೀವು ಶುದ್ಧರಾಗಿರ್ರಿ. ನೀವು ತ್ವರೆಯಾಗಿ ಹೋಗುವದಿಲ್ಲ; ಇಲ್ಲವೆ ಹಾರುವದ ರಿಂದಲೂ ಹೋಗುವದಿಲ್ಲ; ಯಾಕಂದರೆ ಕರ್ತನೇ ನಿಮ್ಮ ಮುಂದೆ ಹೋಗುವನು; ಇಸ್ರಾಯೇಲಿನ ದೇವರು ನಿಮ್ಮ ಬಹುಮಾನವಾಗಿರುವನು.
- Ezekiel 11:16 ಯೆಹೆಜ್ಕೇಲನು 11:16ಆದದರಿಂದ ನೀವು ಹೇಳತಕ್ಕದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಅವರನ್ನು ಅನ್ಯ ಜನಾಂಗ ಗಳಿಂದ ದೂರ ಹಾಕಿದ್ದಾಗ್ಯೂ ದೇಶಗಳನ್ನು ಚದರಿಸಿ ದ್ದಾಗ್ಯೂ ಅವರು ಹೋಗುವ ದೇಶಗಳಲ್ಲಿ ನಾನು ಸ್ವಲ್ಪ ಕಾಲದ ವರೆಗೆ ಪವಿತ್ರಾಲಯವಾಗಿರುವೆನು.
- Genesis 19:17 ಆದಿಕಾಂಡ 19:17ಅವರನ್ನು ಹೊರಗೆ ತಂದ ಮೇಲೆ ಆತನು--ನಿನ್ನ ಪ್ರಾಣಕ್ಕೋಸ್ಕರ ತಪ್ಪಿಸಿಕೋ; ನಿನ್ನ ಹಿಂದೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ, ನೀನು ನಾಶ ವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗು ಅಂದನು.
- Deuteronomy 28:64 ಧರ್ಮೋಪದೇಶಕಾಂಡ 28:64ಇದ ಲ್ಲದೆ ಕರ್ತನು ನಿನ್ನನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯ ವರೆಗೂ ಎಲ್ಲಾ ಜನಗಳಲ್ಲಿ ಚದರಿಸು ವನು; ಅಲ್ಲಿ ನೀನೂ ನಿನ್ನ ಪಿತೃಗಳೂ ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಸೇವಿಸುವಿ.
- Jeremiah 15:4 ಯೆರೆಮೀಯ 15:4ಅವರನ್ನು ಹಿಜ್ಕೀಯನ ಮಗನಾದ ಯೆಹೂದದ ಅರಸನಾದ ಮನಸ್ಸೆಯ ನಿಮಿತ್ತವೂ ಇವನು ಯೆರೂಸಲೇಮಿನಲ್ಲಿ ಮಾಡಿದ್ದರ ನಿಮಿತ್ತವೂ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿಹೋಗುವಂತೆ ಮಾಡುವೆನು.
- Jeremiah 31:8 ಯೆರೆಮೀಯ 31:8ಇಗೋ, ನಾನು ಅವರನ್ನು ಉತ್ತರ ದೇಶ ದಿಂದ ಬರಮಾಡಿ ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ; ಅವರಲ್ಲಿ ಕುರುಡರೂ ಕುಂಟರೂ ಗರ್ಭಿಣಿಯಾದವರೂ ದಿನತುಂಬಿದ ಗರ್ಭಿಣಿಯರ ಸಹಿತವಾಗಿ ಇರುವರು; ದೊಡ್ಡ ಗುಂಪಾಗಿ ಇಲ್ಲಿಗೆ ಹಿಂತಿರುಗಿ ಬರುವರು.
- Jeremiah 51:50 ಯೆರೆಮೀಯ 51:50ಕತ್ತಿಗೆ ತಪ್ಪಿಸಿಕೊಂಡವರೇ, ನಡೆಯಿರಿ, ನಿಲ್ಲಬೇಡಿರಿ; ದೂರದಲ್ಲಿ ಕರ್ತನನ್ನು ಜ್ಞಾಪಕಮಾಡಿ ಕೊಳ್ಳಿರಿ, ಯೆರೂಸಲೇಮು ನಿಮ್ಮ ಮನಸ್ಸಿಗೆ ಬರಲಿ.
- Amos 9:9 ಆಮೋಸ 9:9ಇಗೋ, ಮೊರದಲ್ಲಿ ಧಾನ್ಯವನ್ನು ಕೇರುವಂತೆ ನಾನು ಆಜ್ಞಾಪಿಸಿ ಇಸ್ರಾಯೇಲಿನ ಮನೆತನದವ ರನ್ನು ಎಲ್ಲಾ ಜನಾಂಗಗಳಲ್ಲಿ ಕೇರುವೆನು; ಆದಾಗ್ಯೂ ಒಂದು ಕಾಳಾದರೂ ನೆಲಕ್ಕೆ ಬೀಳುವದಿಲ್ಲ.
- 2 Corinthians 6:16–17 2 ಕೊರಿಂಥದವರಿಗೆ 6:16–17ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.