Zechariah · chapter 3 · verse 2
Zechariah 3:2 in Kannada
ಆಗ ಕರ್ತನ ದೂತನು ಸೈತಾನನಿಗೆ--ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು.
Aaga kartana dootanu saitaananige--saitaanane, kartanu ninnannu gadarisali; haudu, yeroosalemannu aadukonda kartanu ninnannu gadarisali; adu benkiyolaginda eleda kolleyaagideyallavo andanu.
Zechariah 3:2 in English
- King James Version (KJV)
- And the LORD said unto Satan, The LORD rebuke thee, O Satan; even the LORD that hath chosen Jerusalem rebuke thee: [is] not this a brand plucked out of the fire?
- World English Bible (WEB)
- The LORD said to Satan, “The LORD rebuke you, Satan! Yes, the LORD who has chosen Jerusalem rebuke you! Isn’t this a burning stick plucked out of the fire?”
- American Standard Version (ASV)
- And Jehovah said unto Satan, Jehovah rebuke thee, O Satan; yea, Jehovah that hath chosen Jerusalem rebuke thee: is not this a brand plucked out of the fire?
- Bible in Basic English (BBE)
- And the Lord said to the Satan, May the Lord's word be sharp against you, O Satan, the word of the Lord who has taken Jerusalem for himself: is this not a burning branch pulled out of the fire?
- Darby Translation (DBY)
- And Jehovah said unto Satan, Jehovah rebuke thee, O Satan! Yea, Jehovah that hath chosen Jerusalem rebuke thee! Is not this a brand plucked out of the fire?
- Webster's Bible (WBS)
- And the LORD said to Satan, The LORD rebuke thee, O Satan; even the LORD that hath chosen Jerusalem rebuke thee: [is] not this a brand plucked out of the fire?
- Young's Literal Translation (YLT)
- And Jehovah saith unto the Adversary: 'Jehovah doth push against thee, O Adversary, Yea, push against thee doth Jehovah, Who is fixing on Jerusalem, Is not this a brand delivered from fire?'
Read in context
- 1ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
- 2ಆಗ ಕರ್ತನ ದೂತನು ಸೈತಾನನಿಗೆ--ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು.
- 3ಯೆಹೋಶು ವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವ ನಾಗಿ ದೂತನ ಮುಂದೆ ನಿಂತನು.
- 4ಆಗ ಅವನು ಉತ್ತರಕೊಟ್ಟು ತನ್ನ ಮುಂದೆ ನಿಂತವರಿಗೆ--ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದು ಹಾಕಿರಿ ಅಂದನು. ಅವನಿಗೆ--ಇಗೋ, ನಿನ್ನ ಅಕ್ರಮವು ನಿನ್ನನ್ನು ಬಿಟ್ಟುಹೋಗುವಂತೆ ಮಾಡಿದ್ದೇನೆ; ಬದಲು ವಸ್ತ್ರಗಳನ್ನು ನಿನಗೆ ತೊಡಿಸುವೆನು ಅಂದನು.
Cross references
- Amos 4:11 ಆಮೋಸ 4:11ದೇವರು ಸೊದೋಮನ್ನೂ ಗೊಮೋರವನ್ನೂ ಕೆಡವಿದ ಹಾಗೆ ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ; ಹೌದು, ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- Jude 1:23 ಯೂದನು 1:23ಬೇರೆಯವರನ್ನು ಬೆಂಕಿಯಿಂದ ಎಳಕೊಂಡು ಭಯದಿಂದ ರಕ್ಷಿಸಿರಿ. ಶರೀರದಿಂದ ಮೈಲಿಗೆಯಾದ ಅಂಗಿಯನ್ನು ಹಗೆಮಾಡಿರಿ.
- Jude 1:9 ಯೂದನು 1:9ಆದರೂ ಪ್ರಧಾನ ದೇವದೂತನಾದ ಮಿಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ ಅವನು ಸೈತಾನನನ್ನು ದೂಷಿಸುವದಕ್ಕೆ ಧೈರ್ಯ ಗೊಳ್ಳದೆ--ಕರ್ತನು ನಿನ್ನನ್ನು ಗದರಿಸಲಿ ಅಂದನು.
- Romans 8:33 ರೋಮಾಪುರದವರಿಗೆ 8:33ದೇವರಾದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ.
- 1 John 3:8 1 ಯೋಹಾನನು 3:8ಪಾಪಮಾಡುವವನು ಸೈತಾನ ನಿಗೆ ಸಂಬಂಧಪಟ್ಟವನಾಗಿದ್ದಾನೆ; ಯಾಕಂದರೆ ಆದಿ ಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದದರಿಂದ ದೇವಕುಮಾರನು ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ಪ್ರತ್ಯಕ್ಷನಾದನು.
- Zechariah 1:17 ಜೆಕರ್ಯ 1:17ಇನ್ನೂ ಕೂಗಿ ಹೇಳು, ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವವು; ಕರ್ತನು ಚೀಯೋನನ್ನು ಇನ್ನು ಆದರಿಸುವನು; ಯೆರೂಸಲೇಮನ್ನು ಇನ್ನು ಆದುಕೊಳ್ಳುವನು.
- Romans 16:20 ರೋಮಾಪುರದವರಿಗೆ 16:20ಶಾಂತಿದಾಯಕನಾದ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಪಾದಗಳ ಕೆಳಗೆ ತುಳಿದುಬಿಡುವನು. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ. ಆಮೆನ್.
- Revelation 12:9–10 ಪ್ರಕಟನೆ 12:9–10ಭೂಲೋಕದವರನ್ನೆಲ್ಲಾ ಮೋಸಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾ ತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು. ಆಗ ಪರಲೋಕದಲ್ಲಿ ಮಹಾಶಬ್ದವನ್ನು ನಾನು ಕೇಳಿದೆನು. ಅದು--ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಬಂದವು; ಯಾಕಂದರೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರು ಗಾರನು ದೊಬ್ಬಲ್ಪಟ್ಟಿದ್ದಾನೆ.
- Zechariah 2:12 ಜೆಕರ್ಯ 2:12ಇದಲ್ಲದೆ ಕರ್ತನು ತನ್ನ ಭಾಗವಾದ ಯೆಹೂದವನ್ನು ಪರಿಶುದ್ಧ ದೇಶದಲ್ಲಿ ಸ್ವಾಸ್ತ್ಯವಾಗಿ ಹೊಂದುವನು. ಯೆರೂಸಲೇಮನ್ನು ತಿರುಗಿ ಆದು ಕೊಳ್ಳುವನು.ಓ ಮನುಷ್ಯರೇ, ನೀವೆಲ್ಲಾ ಕರ್ತನ ಮುಂದೆ ಮೌನ ವಾಗಿರ್ರಿ; ಆತನು ತನ್ನ ಪರಿಶುದ್ಧ ನಿವಾಸದೊಳಗಿಂದ ಎದ್ದಿದ್ದಾನೆ.
- Daniel 12:1 ದಾನಿಯೇಲನು 12:1ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು; ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನ ವರೆಗೂ ಸಂಭವಿಸದಂತ ಸಂಕಟವು ಸಂಭವಿಸುವದು. ಆಗ ನಿನ್ನ ಜನರೊಳಗೆ ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಹೆಸರು ಬರೆಯಲ್ಪಟ್ಟಿದೆಯೋ ಅವರೆಲ್ಲರೂ ಬಿಡುಗಡೆಯಾಗು ವರು.
- John 13:18 ಯೋಹಾನನು 13:18ನಾನು ನಿಮ್ಮೆಲ್ಲರ ವಿಷಯದಲ್ಲಿ ಮಾತ ನಾಡುವದಿಲ್ಲ; ನಾನು ಆರಿಸಿಕೊಂಡವರನ್ನು ಬಲ್ಲೆನು; ಆದರೆ--ನನ್ನೊಂದಿಗೆ ರೊಟ್ಟಿಯನ್ನು ತಿನ್ನುವವನು ನನಗೆ ವಿರೋಧವಾಗಿ ತನ್ನ ಹಿಮ್ಮಡಿಯನ್ನು ಎತ್ತಿದ್ದಾನೆ ಎಂಬ ಬರಹವು ನೆರವೇರಬೇಕಾಗಿದೆ.
- Psalm 109:31 ಕೀರ್ತನೆಗಳು 109:31ಬಡವನ ಬಲಪಾರ್ಶ್ವದಲ್ಲಿ ಅವನ ಪ್ರಾಣಕ್ಕೆ ನ್ಯಾಯತೀರಿಸುವ ವರೊಳಗಿಂದ ಅವನನ್ನು ರಕ್ಷಿಸುವದಕ್ಕೆ ಆತನು ನಿಂತುಕೊಳ್ಳುವನು.