Amos · chapter 4 · verse 11
Amos 4:11 in Kannada
ದೇವರು ಸೊದೋಮನ್ನೂ ಗೊಮೋರವನ್ನೂ ಕೆಡವಿದ ಹಾಗೆ ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ; ಹೌದು, ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
Devaru sodomannoo gomoravannoo kedavida haage naanu nimmalli kelavarannu kedavi haakiddene; haudu, benki uriyolaginda tegeda kolliya haage iddeeri. Aadaroo neevu nanna kadege hintirugi kollalillavendu kartanu heluttaane.
Amos 4:11 in English
- King James Version (KJV)
- I have overthrown [some] of you, as God overthrew Sodom and Gomorrah, and ye were as a firebrand plucked out of the burning: yet have ye not returned unto me, saith the LORD.
- World English Bible (WEB)
- “I have overthrown some of you, as when God overthrew Sodom and Gomorrah, and you were like a burning stick plucked out of the fire; yet you haven’t returned to me,” says the LORD.
- American Standard Version (ASV)
- I have overthrown [cities] among you, as when God overthrew Sodom and Gomorrah, and ye were as a brand plucked out of the burning: yet have ye not returned unto me, saith Jehovah.
- Bible in Basic English (BBE)
- And I have sent destruction among you, as when God sent destruction on Sodom and Gomorrah, and you were like a burning stick pulled out of the fire: and still you have not come back to me, says the Lord.
- Darby Translation (DBY)
- I have overthrown among you, like God's overthrow of Sodom and Gomorrah, and ye were as a brand plucked out of the burning; yet have ye not returned unto me, saith Jehovah.
- Webster's Bible (WBS)
- I have overthrown [some] of you, as God overthrew Sodom and Gomorrah, and ye were as a fire-brand plucked out of the burning: yet have ye not returned to me, saith the LORD.
- Young's Literal Translation (YLT)
- I have overturned among you, Like the overturn by God of Sodom and Gomorrah, And ye are as a brand delivered from a burning, And ye have not turned back unto Me, An affirmation of Jehovah.
Read in context
- 9ನಿಮ್ಮ ಪೈರನ್ನು ಹಾಳುಮಾಡುವ ಬಿರುಗಾಳಿಯಿಂದ ಹೊಡೆದಿದ್ದೇನೆ; ನಿಮ್ಮ ತೋಟಗಳು, ದ್ರಾಕ್ಷೇತೋಟ ಗಳು, ಅಂಜೂರದ ಗಿಡಗಳು ಮತ್ತು ಎಣ್ಣೇ ಮರಗಳು ಹೆಚ್ಚಾದಾಗ ಕಂಬಳಿ ಹುಳಗಳು ಅವುಗಳನ್ನು ತಿಂದು ಬಿಟ್ಟವು; ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- 10ಐಗುಪ್ತದ ವ್ಯಾಧಿಗಳಂಥ ವ್ಯಾಧಿಯನ್ನು ನಿಮ್ಮೊಳಗೆ ಕಳುಹಿಸಿದ್ದೇನೆ.ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದುಹಾಕಿದ್ದೇನೆ. ನಿಮ್ಮ ದಂಡುಗಳ ದುರ್ವಾಸ ನೆಯು ನಿಮ್ಮ ಮೂಗುಗಳಲ್ಲಿ ಸೇರುವ ಹಾಗೆ ಮಾಡಿ ದ್ದೇನೆ. ಆದಾಗ್ಯೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- 11ದೇವರು ಸೊದೋಮನ್ನೂ ಗೊಮೋರವನ್ನೂ ಕೆಡವಿದ ಹಾಗೆ ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ; ಹೌದು, ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- 12ಆದದ ರಿಂದ ಓ ಇಸ್ರಾಯೇಲೇ, ನಿನಗೆ ನಾನು ಹೀಗೆ ಮಾಡುತ್ತೇನೆ; ನಾನು ನಿನಗೆ ಇದನ್ನು ಮಾಡುವದರಿಂದ ನೀನು ನಿನ್ನ ದೇವರನ್ನು ಎದುರುಗೊಳ್ಳಲು ಸಿದ್ಧ ಮಾಡಿಕೊ.ಇಗೋ, ಬೆಟ್ಟಗಳನ್ನು ರೂಪಿಸಿ ಗಾಳಿ ಯನ್ನು ನಿರ್ಮಿಸಿ ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ ಉದಯವನ್ನು ಅಂಧಕಾರವನ್ನಾಗಿ ಮಾಡಿ ಭೂಮಿಯ ಉನ್ನತ ಸ್ಥಳಗಳನ್ನು ತುಳಿದು ಬಿಡುವಾತನು ಆತನೇ. ಕರ್ತನೂ ಸೈನ್ಯಗಳ ದೇವರೂ ಎಂಬದು ಆತನ ಹೆಸರು.
- 13ಇಗೋ, ಬೆಟ್ಟಗಳನ್ನು ರೂಪಿಸಿ ಗಾಳಿ ಯನ್ನು ನಿರ್ಮಿಸಿ ಮನುಷ್ಯನಿಗೆ ಅವನ ಯೋಚನೆ ಏನೆಂದು ತಿಳಿಸಿ ಉದಯವನ್ನು ಅಂಧಕಾರವನ್ನಾಗಿ ಮಾಡಿ ಭೂಮಿಯ ಉನ್ನತ ಸ್ಥಳಗಳನ್ನು ತುಳಿದು ಬಿಡುವಾತನು ಆತನೇ. ಕರ್ತನೂ ಸೈನ್ಯಗಳ ದೇವರೂ ಎಂಬದು ಆತನ ಹೆಸರು.
Cross references
- Isaiah 13:19 ಯೆಶಾಯ 13:19ರಾಜ್ಯಗಳ ಘನತೆಯೂ ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬೆಲಿಗೆ ದೇವರು ಸೊದೋ ಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಇದನ್ನು ಸಹ ಕೆಡವಿಬಿಡುವನು.
- Zechariah 3:2 ಜೆಕರ್ಯ 3:2ಆಗ ಕರ್ತನ ದೂತನು ಸೈತಾನನಿಗೆ--ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು.
- Genesis 19:24–25 ಆದಿಕಾಂಡ 19:24–25ಆಗ ಕರ್ತನು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ ಬೆಂಕಿಯನ್ನೂ ಆಕಾಶದಿಂದ ಸುರಿಸಿದನು. ಹೀಗೆ ಆತನು ಆ ಪಟ್ಟಣಗಳನ್ನೂ ಎಲ್ಲಾ ಮೈದಾನವನ್ನೂ ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಹಾಳುಮಾಡಿದನು.
- Jeremiah 23:14 ಯೆರೆಮೀಯ 23:14ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಸುಳ್ಳಿನಲ್ಲಿ ನಡಕೊಂಡದ್ದ ಲ್ಲದೆ ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ; ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ.
- Jude 1:7 ಯೂದನು 1:7ಸೊದೋಮ ಗೊಮೋರ ದವರೂ ಹಾಗೆಯೇ ಅವುಗಳ ಸುತ್ತುಮುತ್ತಣ ಪಟ್ಟಣಗಳವರೂ ಅದೇ ರೀತಿಯಲ್ಲಿ ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಅನ್ಯ ಶರೀರವನ್ನು ಅನುಸರಿಸಿದ್ದರಿಂದ ಅವರು ನಿತ್ಯವಾದ ಅಗ್ನಿಯಲ್ಲಿ ಪ್ರತಿದಂಡನೆಯನ್ನು ಅನುಭವಿಸುತ್ತಾ ಉದಾಹರಣೆಗಾಗಿ ಇಡಲ್ಪಟ್ಟಿದ್ದಾರೆ.
- Amos 4:6 ಆಮೋಸ 4:6ನಾನು ಸಹ ನಿಮಗೆ ಎಲ್ಲಾ ಪಟ್ಟಣಗಳಲ್ಲಿ ಹಲ್ಲಿಗೆ ಏನೂ ಸಿಕ್ಕದಂತೆ ನಿಮ್ಮ ಎಲ್ಲಾ ಸ್ಥಳಗಳಲ್ಲಿ ರೊಟ್ಟಿಯ ಕೊರತೆಯನ್ನು ಕೊಟ್ಟಿದ್ದೇನೆ; ಆದರೂ ನೀವು ನನ್ನ ಕಡೆಗೆ ಹಿಂತಿರುಗಿಕೊಳ್ಳಲಿಲ್ಲ ಎಂದು ಕರ್ತನು ಹೇಳು ತ್ತಾನೆ.
- Ezekiel 22:17–22 ಯೆಹೆಜ್ಕೇಲನು 22:17–22ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇ ನಂದರೆ -- ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ (ಮಂಡೂರ) ಕಿಟ್ಟದ ಹಾಗಾದರು ಅವರೆಲ್ಲರೂ ಬಲೆಯ ಮಧ್ಯದಲ್ಲಿರುವ ಹಿತ್ತಾಳೆ, ತವರ, ಕಬ್ಬಿಣದ, ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಿಟ್ಟಗಳ ಹಾಗೆಯೂ ಇದ್ದಾರೆ. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವೆಲ್ಲರೂ ಕಿಟ್ಟವಾಗಿರುವದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ. ಅವರು ಬೆಳ್ಳಿ, ಹಿತ್ತಾಳೆ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒಲೆಯೊಳಗೆ ಕೂಡಿಸಿ ಅದಕ್ಕೆ ಬೆಂಕಿಯನ್ನೂದಿ ಕರಗಿಸುವರೋ ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿಯೂ ನನ್ನ ರೋಷದಲ್ಲಿಯೂ ಕರಗಿಸಿಬಿಡುವೆನು. ಹೌದು, ನನ್ನ ರೋಷದ ಬೆಂಕಿಯಿಂದ ನಾನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿ ಹೋಗುವಿರಿ. ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗು ವಿರಿ; ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಕರ್ತನಾದ ನಾನೇ ಎಂದು ನಿಮಗೆ ತಿಳಿಯುತ್ತದೆ.
- Jude 1:23 ಯೂದನು 1:23ಬೇರೆಯವರನ್ನು ಬೆಂಕಿಯಿಂದ ಎಳಕೊಂಡು ಭಯದಿಂದ ರಕ್ಷಿಸಿರಿ. ಶರೀರದಿಂದ ಮೈಲಿಗೆಯಾದ ಅಂಗಿಯನ್ನು ಹಗೆಮಾಡಿರಿ.
- 2 Peter 2:6 2 ಪೇತ್ರನು 2:6ಆತನು ಸೊದೋಮ ಗೊಮೋರ ಪಟ್ಟಣಗಳನ್ನು ಬೂದಿ ಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರ ಗತಿಗೆ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು.
- Jeremiah 6:28–30 ಯೆರೆಮೀಯ 6:28–30ಅವರೆಲ್ಲರು ಘೋರವಾಗಿ ತಿರುಗಿ ಬೀಳುವವರೇ; ಚಾಡಿಕೋರರಾಗಿ ನಡೆಯುತ್ತಾರೆ; ಹಿತ್ತಾಳೆಯೂ ಕಬ್ಬಿಣವೂ ಆಗಿದ್ದಾರೆ; ಅವರೆಲ್ಲರೂ ಕೆಡಿಸುವವರೇ. ತಿದಿಯು ಸುಡುತ್ತದೆ, ಬೆಂಕಿಯೊಳಗಿಂದ ಸೀಸವು ಕರಗುತ್ತದೆ; ಪುಟಕ್ಕೆ ಹಾಕುವವನು ವ್ಯರ್ಥವಾಗಿ ಹಾಕುತ್ತಾನೆ; ಕೆಟ್ಟವರು ಕಿತ್ತು ತೆಗೆಯಲ್ಪಡಲಿಲ್ಲ;ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವದು; ಕರ್ತನು ಅವರನ್ನು ತಳ್ಳಿದ್ದಾನೆ. ಹೊಲಸಾದ ಬೆಳ್ಳಿ ಎಂದು ಅವರಿಗೆ ಹೆಸರಾಗುವದು; ಕರ್ತನು ಅವರನ್ನು ತಳ್ಳಿದ್ದಾನೆ.
- 1 Corinthians 3:15 1 ಕೊರಿಂಥದವರಿಗೆ 3:15ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವದು; ತಾನಾದರೋ ರಕ್ಷಣೆ ಹೊಂದುವನು. ಆದರೂ ಬೆಂಕಿಯೊಳಗಿಂದ ತಪ್ಪಿಸಿ ಕೊಂಡವನ ಹಾಗಿರುವನು.
- Ezekiel 24:13 ಯೆಹೆಜ್ಕೇಲನು 24:13ನಿನ್ನ ಅಶುದ್ಧ ತ್ವವು ದುಷ್ಕರ್ಮವುಳ್ಳದ್ದು; ನಾನು ನಿನ್ನನ್ನು ಪರಿಶುದ್ಧ ಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದ ವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರತ್ವದಿಂದ ಇನ್ನು ಶುದ್ಧವಾಗುವದಿಲ್ಲ.