Zechariah · chapter 7 · verse 6
Zechariah 7:6 in Kannada
ನೀವು ಉಂಡು ಕುಡಿದಾಗ ನಿಮಗೆ ನೀವೇ ಉಂಡು ಕುಡಿದಿರಲ್ಲಾ?
Neevu undu kudidaaga nimage neeve undu kudidirallaa?
Zechariah 7:6 in English
- King James Version (KJV)
- And when ye did eat, and when ye did drink, did not ye eat [for yourselves], and drink [for yourselves]?
- World English Bible (WEB)
- When you eat and when you drink, don’t you eat for yourselves and drink for yourselves?
- American Standard Version (ASV)
- And when ye eat, and when ye drink, do not ye eat for yourselves, and drink for yourselves?
- Bible in Basic English (BBE)
- And when you are feasting and drinking, are you not doing it only for yourselves?
- Darby Translation (DBY)
- And when ye ate, and when ye drank, was it not you that were eating and drinking?
- Webster's Bible (WBS)
- And when ye ate, and when ye drank, did ye not eat [for yourselves] , and drink [for yourselves] ?
- Young's Literal Translation (YLT)
- When ye fasted with mourning in the fifth and in the seventh [months] — even these seventy years — did ye keep the fast [to] Me — Me? And when ye eat, and when ye drink, is it not ye who are eating, and ye who are drinking?
Read in context
- 4ಆಗ ಸೈನ್ಯಗಳ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
- 5ದೇಶದ ಜನರೆಲ್ಲರಿಗೂ ಯಾಜಕ ರಿಗೂ ಹೀಗೆ ಹೇಳು--ನೀವು ಈ ಎಪ್ಪತ್ತು ವರುಷಗಳು ಐದನೇ ಮತ್ತು ಏಳನೇ ತಿಂಗಳುಗಳಲ್ಲಿ ಉಪವಾಸ ಮಾಡಿ ದುಃಖಿಸಿದಾಗ ನನಗೆ ಏನಾದರೂ ಉಪವಾಸ ಮಾಡಿದ್ದೀರೋ?
- 6ನೀವು ಉಂಡು ಕುಡಿದಾಗ ನಿಮಗೆ ನೀವೇ ಉಂಡು ಕುಡಿದಿರಲ್ಲಾ?
- 7ಯೆರೂಸಲೇಮೂ ಅದರ ಸುತ್ತಲಿನ ಪಟ್ಟಣಗಳೂ ನಿವಾಸಿಗಳುಳ್ಳ ವುಗಳಾಗಿಯೂ ಸುಖವಾಗಿಯೂ ದಕ್ಷಿಣವೂ ಬೈಲೂ ನಿವಾಸಿಗಳುಳ್ಳವುಗಳಾಗಿಯೂ ಇದ್ದಾಗ ಕರ್ತನು ಪೂರ್ವದ ಪ್ರವಾದಿಗಳ ಕೈಯಿಂದ ಕೂಗಿದ ಮಾತುಗಳು ಅವು ಅಲ್ಲವೊ? ಎಂಬದು.
- 8ಇದಲ್ಲದೆ ಕರ್ತನ ವಾಕ್ಯವು ಜೆಕರ್ಯನಿಗೆ ಉಂಟಾಗಿ ಹೇಳಿದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಮಾತನಾಡಿ ಹೇಳುತ್ತಾನೆ--
Cross references
- 1 Corinthians 11:20–21 1 ಕೊರಿಂಥದವರಿಗೆ 11:20–21ಆದರೆ ನೀವು ಒಂದು ಸ್ಥಳದಲ್ಲಿ ಕೂಡಿಬರುವಾಗ ಮಾಡುವ ಭೋಜನವು ಕರ್ತನ ಭೋಜನವಲ್ಲ. ಭೋಜನವಾಗುವಲ್ಲಿ ಪ್ರತಿ ಯೊಬ್ಬನು ತನ್ನದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ; ಹೀಗೆ ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.
- 1 Corinthians 11:26–29 1 ಕೊರಿಂಥದವರಿಗೆ 11:26–29ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣ ವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ. ಹೀಗಿರುವದರಿಂದ ಯಾವನಾದರೂ ಅಯೋಗ್ಯ ವಾಗಿ ಈ ರೊಟ್ಟಿಯನ್ನು ತಿಂದು ಕರ್ತನ ಪಾತ್ರೆಯಲ್ಲಿ ಪಾನಮಾಡಿದರೆ ಅವನು ಕರ್ತನ ದೇಹಕ್ಕೂ ರಕ್ತಕ್ಕೂ ಅಪರಾಧ ಮಾಡಿದವನಾಗಿರುವನು. ಆದರೆ ಒಬ್ಬನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯಲ್ಲಿ ತಕ್ಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ. ಯಾಕಂದರೆ ಕರ್ತನ ದೇಹವೆಂದು ವಿವೇಚಿಸದೆ ಅಯೋಗ್ಯವಾಗಿ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವದರಿಂದ ನ್ಯಾಯತೀರ್ಪಿಗೊಳ ಗಾಗುವನು.
- Hosea 8:13 ಹೋಶೇಯ 8:13ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ; ಆದರೆ ಕರ್ತನು ಅವುಗಳಿಗೆ ಮೆಚ್ಚುವದಿಲ್ಲ. ಈಗ ಅವರ ಅಕ್ರಮಗಳನ್ನು ಜ್ಞಾಪಕ ಮಾಡಿಕೊಂಡು ಅವರ ಪಾಪಗಳನ್ನು ವಿಚಾ ರಿಸುವನು; ಅವರು ಐಗುಪ್ತಕ್ಕೆ ಹಿಂದಿರುಗುವರು.ಇಸ್ರಾಯೇಲು ತನ್ನ ನಿರ್ಮಾಣಿಕ ನನ್ನು ಮರೆತುಬಿಟ್ಟು ಆಲಯಗಳನ್ನು ಕಟ್ಟಿಕೊಂಡಿದೆ; ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚು ಮಾಡಿಕೊಂಡಿದೆ; ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅವುಗಳ ಅರಮನೆಗಳನ್ನು ನುಂಗಿಬಿಡುವದು.
- Colossians 3:17 ಕೊಲೊಸ್ಸೆಯವರಿಗೆ 3:17ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
- Jeremiah 17:9–10 ಯೆರೆಮೀಯ 17:9–10ಹೃದಯವು ಎಲ್ಲಾದಕ್ಕಿಂತ ವಂಚನೆಯುಳ್ಳದ್ದಾ ಗಿಯೂ ಮಹಾದುಷ್ಟತನದ್ದೂ ಆಗಿದೆ, ಅದನ್ನು ತಿಳಿಯುವವನಾರು? ಕರ್ತನಾದ ನಾನೇ ಹೃದಯ ವನ್ನು ಪರೀಕ್ಷಿಸುತ್ತೇನೆ; ಅಂತರಿಂದ್ರಿಯಗಳನ್ನು ಶೋಧಿ ಸುತ್ತೇನೆ. ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ ಅವನ ಕ್ರಿಯೆಗಳ ಫಲದ ಪ್ರಕಾರವೂ (ಪ್ರತಿಫಲ) ಕೊಡುತ್ತೇನೆ.
- 1 Chronicles 29:22 1 ಪೂರ್ವಕಾಲವೃತ್ತಾಂತ 29:22ಎರಡನೇ ಸಾರಿ ದಾವೀದನ ಮಗನಾದ ಸೊಲೊಮೋನನನ್ನು ಅರಸನನ್ನಾಗಿ ಮಾಡಿ ಕರ್ತನ ಮುಂದೆ ಅವನನ್ನು ನಾಯಕನಾಗಿಯೂ ಚಾದೋಕ ನನ್ನು ಯಾಜಕನಾಗಿಯೂ ಅಭಿಷೇಕಿಸಿದರು.
- 1 Corinthians 10:31 1 ಕೊರಿಂಥದವರಿಗೆ 10:31ಆದದರಿಂದ ನೀವು ತಿಂದರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.
- Hosea 9:4 ಹೋಶೇಯ 9:4ಅವರು ದ್ರಾಕ್ಷಾರಸ ವನ್ನು ಕಾಣಿಕೆಯಾಗಿ ಕರ್ತನಿಗೆ ಅರ್ಪಿಸುವದಿಲ್ಲ, ಇಲ್ಲವೆ ಅವರು ಆತನಿಗೆ ಮೆಚ್ಚಿಕೆಯಾಗಿರುವದಿಲ್ಲ; ಅವರ ಬಲಿಗಳು ಅವರಿಗೆ ದುಃಖಿಸುವವರ ರೊಟ್ಟಿಯ ಹಾಗಿ ರುವವು; ಅದನ್ನು ತಿನ್ನುವವರೆಲ್ಲರೂ ಅಪವಿತ್ರ ರಾಗುವರು. ಅವರ ಪ್ರಾಣಕ್ಕಾಗಿರುವ ಅವರ ರೊಟ್ಟಿಯು ಕರ್ತನ ಆಲಯಕ್ಕೆ ಬರುವದಿಲ್ಲ.
- Deuteronomy 12:7 ಧರ್ಮೋಪದೇಶಕಾಂಡ 12:7ಅಲ್ಲಿ ನೀವು ನಿಮ್ಮ ದೇವರಾದ ಕರ್ತನ ಮುಂದೆ ತಿಂದು ನಿಮ್ಮ ಕುಟುಂಬಗಳ ಸಂಗಡ ನೀವು ನಿಮ್ಮ ದೇವರಾದ ಕರ್ತನು ನಿಮ್ಮನ್ನು ಆಶೀರ್ವದಿಸಿದ ಎಲ್ಲಾ ಕೈಕೆಲಸದಲ್ಲಿ ಸಂತೋಷಪಡಬೇಕು.
- 1 Samuel 16:7 1 ಸಮುವೇಲನು 16:7ಆದರೆ ಕರ್ತನು ಸಮುವೇಲನಿಗೆ--ನೀನು ಅವನ ರೂಪವನ್ನೂ ಅವನ ದೇಹದ ಉದ್ದವನ್ನೂ ದೃಷ್ಟಿಸಬೇಡ; ಅವನನ್ನು ನಾನು ತಿರಸ್ಕರಿಸಿದೆನು; ಕರ್ತನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ ಹೃದಯವನ್ನೇ ನೋಡುವನು ಅಂದನು.
- Deuteronomy 14:26 ಧರ್ಮೋಪದೇಶಕಾಂಡ 14:26ಆಗ ಆ ಹಣವನ್ನು ನಿನಗೆ ಮನಸ್ಸು ಬಂದದ್ದಕ್ಕೆಲ್ಲಾ ಅಂದರೆ ಹಸು, ಕುರಿ, ದ್ರಾಕ್ಷಾರಸ, ಮಧ್ಯಪಾನಗಳಿ ಗೋಸ್ಕರವೂ ನಿನ್ನ ಪ್ರಾಣವು ಆಶಿಸುವ ಎಲ್ಲವುಗಳಿ ಗೋಸ್ಕರವೂ ವೆಚ್ಚಮಾಡಬೇಕು; ಆ ಮೇಲೆ ನೀನೂ ನಿನ್ನ ಮನೆಯವರೂ ಅಲ್ಲಿ ನಿನ್ನ ದೇವರಾದ ಕರ್ತನ ಮುಂದೆ ತಿಂದು ಸಂತೋಷಪಡಬೇಕು.