Zechariah · chapter 8 · verse 7
Zechariah 8:7 in Kannada
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಜನರನ್ನು ಪೂರ್ವ ದಿಕ್ಕಿನ ದೇಶದಿಂದಲೂ ಪಶ್ಚಿಮ ದಿಕ್ಕಿನ ದೇಶದಿಂದಲೂ ರಕ್ಷಿಸುವೆನು.
Sainyagala kartanu heege heluttaane--igo, naanu nanna janarannu poorva dikkina deshadindaloo pashchima dikkina deshadindaloo rakshisuvenu.
Zechariah 8:7 in English
- King James Version (KJV)
- Thus saith the LORD of hosts; Behold, I will save my people from the east country, and from the west country;
- World English Bible (WEB)
- The LORD of Armies says: “Behold, I will save my people from the east country and from the west country.
- American Standard Version (ASV)
- Thus saith Jehovah of hosts: Behold, I will save my people from the east country, and from the west country;
- Bible in Basic English (BBE)
- This is what the Lord of armies has said: See, I will be the saviour of my people from the east country, and from the west country;
- Darby Translation (DBY)
- Thus saith Jehovah of hosts: Behold, I will save my people from the east country and from the west country;
- Webster's Bible (WBS)
- Thus saith the LORD of hosts; Behold, I will save my people from the east country, and from the west country;
- Young's Literal Translation (YLT)
- Thus said Jehovah of Hosts: Lo, I am saving My people from the land of the rising, And from the land of the going in, of the sun,
Read in context
- 5ಪಟ್ಟಣದ ಬೀದಿಗಳು ಆಡುವ ಬಾಲಕ ಬಾಲಕಿಯರಿಂದ ತುಂಬಿರುವವು.
- 6ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇದು ಈ ದಿವಸಗಳಲ್ಲಿ ಉಳಿದ ಈ ಜನರ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರಿ ದರೂ ಅದು ನನ್ನ ಕಣ್ಣುಗಳಿಗೂ ಸಹ ಆಶ್ಚರ್ಯವಾಗಿ ತೋರುವದೋ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
- 7ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಜನರನ್ನು ಪೂರ್ವ ದಿಕ್ಕಿನ ದೇಶದಿಂದಲೂ ಪಶ್ಚಿಮ ದಿಕ್ಕಿನ ದೇಶದಿಂದಲೂ ರಕ್ಷಿಸುವೆನು.
- 8ನಾನು ಅವರನ್ನು ತರುವೆನು; ಅವರು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವರು; ಅವರು ನನ್ನ ಜನರಾಗಿ ರುವರು; ನಾನು ಸತ್ಯದಲ್ಲಿಯೂ ನೀತಿಯಲ್ಲಿಯೂ ಅವರ ದೇವರಾಗಿರುವೆನು.
- 9ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ದೇವಾಲಯವನ್ನು ಕಟ್ಟುವ ಹಾಗೆ ಸೈನ್ಯಗಳ ಕರ್ತನ ಆಲಯದ ಅಸ್ತಿವಾರವು ಹಾಕಲ್ಪಟ್ಟ ದಿವಸದಲ್ಲಿದ್ದ ಪ್ರವಾದಿಗಳ ಬಾಯಿಂದಾದ ಈ ವಾಕ್ಯಗಳನ್ನು ಈ ದಿವಸಗಳಲ್ಲಿ ಕೇಳುವವರೇ, ನಿಮ್ಮ ಕೈಗಳು ಬಲವಾಗಿರಲಿ.
Cross references
- Jeremiah 31:8 ಯೆರೆಮೀಯ 31:8ಇಗೋ, ನಾನು ಅವರನ್ನು ಉತ್ತರ ದೇಶ ದಿಂದ ಬರಮಾಡಿ ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ; ಅವರಲ್ಲಿ ಕುರುಡರೂ ಕುಂಟರೂ ಗರ್ಭಿಣಿಯಾದವರೂ ದಿನತುಂಬಿದ ಗರ್ಭಿಣಿಯರ ಸಹಿತವಾಗಿ ಇರುವರು; ದೊಡ್ಡ ಗುಂಪಾಗಿ ಇಲ್ಲಿಗೆ ಹಿಂತಿರುಗಿ ಬರುವರು.
- Malachi 1:11 ಮಲಾಕಿಯ 1:11ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Isaiah 49:12 ಯೆಶಾಯ 49:12ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
- Isaiah 43:5–6 ಯೆಶಾಯ 43:5–6ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು. ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು
- Amos 9:14–15 ಆಮೋಸ 9:14–15ನನ್ನ ಜನರಾದ ಇಸ್ರಾಯೇಲ್ಯರನ್ನು ಸೆರೆಯಿಂದ ತಿರಿಗಿ ಬರಮಾಡುವೆನು; ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು; ದ್ರಾಕ್ಷೇತೋಟ ಗಳನ್ನು ನೆಟ್ಟು ಅವುಗಳ ದ್ರಾಕ್ಷಾರಸವನ್ನು ಕುಡಿಯು ವರು; ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Isaiah 27:12–13 ಯೆಶಾಯ 27:12–13ಓ ಇಸ್ರಾಯೇಲ್ಯರ ಮಕ್ಕಳೇ, ಕರ್ತನು ನದಿಯ ಕಾಲುವೆ ಮೊದಲುಗೊಂಡು ಐಗುಪ್ತದೇಶದ ನದಿಯ ವರೆಗೆ ಹೊಡೆಯುವನು; ಆಗ ನಿಮ್ಮನ್ನು ಒಬ್ಬೊಬ್ಬರ ನ್ನಾಗಿ ಕೂಡಿಸುವನು.ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು. ಆ ದಿನದಲ್ಲಿ ಆಗುವದೇನಂದರೆ--ದೊಡ್ಡ ತುತೂರಿಯು ಊದಲ್ಪಡುವದು, ಆಗ ಅಶ್ಶೂರ ದೇಶ ದಲ್ಲಿ ಹಾಳಾದವರೂ ಐಗುಪ್ತದೇಶದಲ್ಲಿರುವ ತಳ್ಳಲ್ಪ ಟ್ಟವರೂ ಯೆರೂಸಲೇಮಿನಲ್ಲಿರುವ ಒಂದು ಪರಿಶುದ್ಧ ಪರ್ವತದ ಬಳಿಗೆ ಬಂದು ಕರ್ತನನ್ನು ಆರಾಧಿಸುವರು.
- Psalm 107:2–3 ಕೀರ್ತನೆಗಳು 107:2–3ಕರ್ತನು ವಿಮೋಚಿಸಿ ದವರು ಹಾಗೆಯೇ ಹೇಳಲಿ; ಆತನು ವೈರಿಯ ಕೈಯಿಂದ ಬಿಡುಗಡೆ ಮಾಡಿ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದೇಶಗಳಿಂದ ಕೂಡಿಸಿದವರು ಹಾಗೆ ಹೇಳಲಿ.
- Isaiah 66:19–20 ಯೆಶಾಯ 66:19–20ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು. ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥ ಗಳಲ್ಲಿಯೂ ಪಾಲ್ಕಿಗಳಲ್ಲಿಯೂ ಹೇಸರ ಕತ್ತೆಗಳ ಮೇಲೆಯೂ ವೇಗವಾಗಿ ಹೋಗುವ ಪ್ರಾಣಿಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಕರ್ತ ನಿಗೆ ಕಾಣಿಕೆಯಾಗಿ ಇಸ್ರಾಯೇಲಿನ ಮಕ್ಕಳು ಕಾಣಿಕೆ ಯನ್ನು ಶುದ್ಧ ಪಾತ್ರೆಯಲ್ಲಿ ಕರ್ತನ ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸ ಲೇಮಿಗೆ ತರುವರೆಂದು ಕರ್ತನು ಹೇಳುತ್ತಾನೆ.
- Ezekiel 37:19–25 ಯೆಹೆಜ್ಕೇಲನು 37:19–25ಇಗೋ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು--ನಾನು ಎಫ್ರಾಯಾಮಿನ ಕೈಯಲ್ಲಿರುವ ಯೋಸೇಫನ ಕೋಲನ್ನೂ ಅವನ ಜೊತೆಗಾರರಾದ ಇಸ್ರಾಯೇಲ್ಯರ ಗೋತ್ರಗಳನ್ನೂ ತೆಗೆದುಕೊಂಡು ಅವನ ಸಂಗಡ ಅಂದರೆ ಯೆಹೂದನ ಕೋಲಿನ ಸಂಗಡ ಸೇರಿಸಿ ಅವುಗಳನ್ನು ಒಂದೇ ಕೋಲನ್ನಾಗಿ ಮಾಡುವೆನು. ಅವರು ನನ್ನ ಕೈಯಲ್ಲಿ ಒಂದಾಗುವರು ಎಂಬದು; ನೀನು ಬರೆದ ಆ ಕೋಲುಗಳನ್ನು ಅವರ ಕಣ್ಣುಗಳ ಮುಂದೆ ನಿನ್ನ ಕೈಯಲ್ಲಿರುವವು. ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು--ನಾನು ಇಸ್ರಾಯೇಲನ ಮಕ್ಕಳನ್ನು ಅವರು ಹೋಗಿರುವ ಕಡೆಯಿಂದಲೂ ಅವರನ್ನು ಒಂದುಗೂಡಿಸಿ ಅವರನ್ನು ಅವರ ಸ್ವಂತ ದೇಶಕ್ಕೆ ತರುವೆನು. ನಾನು ಅವರನ್ನು ಇಸ್ರಾಯೇಲ್ ಪರ್ವತಗಳಿರುವ ದೇಶದಲ್ಲಿ ಒಂದೇ ಜನಾಂಗವನ್ನಾಗಿ ಮಾಡುತ್ತೇನೆ ಒಬ್ಬ ಅರಸನೇ ಅವರೆಲ್ಲ ರಿಗೂ ಅರಸನಾಗಿರುವನು; ಇನ್ನು ಮೇಲೆ ಅವರು ಎರಡು ಜನಾಂಗಗಳಾಗಲಿ ಅಥವಾ ರಾಜ್ಯಗಳಂತಾ ಗಲಿ ವಿಭಾಗಿಸಲ್ಪಡುವದಿಲ್ಲ. ಇಲ್ಲವೆ ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ಅಸಹ್ಯಗಳಿಂದಲೂ ಎಲ್ಲಾ ಅಕ್ರಮಗಳಿಂದಲೂ ಅಶುದ್ಧವಾಗುವದಿಲ್ಲ; ಆದರೆ ನಾನು ಅವರನ್ನು ಪಾಪಮಾಡಿದವರ ಎಲ್ಲಾ ನಿವಾಸಿ ಗಳಿಂದ ರಕ್ಷಿಸಿ, ಅವರನ್ನು ಶುದ್ಧಮಾಡುವೆನು; ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು. ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು; ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು ನನ್ನ ನ್ಯಾಯನಿಯಮ ಗಳನ್ನೇ ಅನುಸರಿಸುವಂತೆ ಮಾಡುವೆನು. ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ತಂದೆಗಳು(ಪಿತೃಗಳು) ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮಕ್ಕಳ ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ಪ್ರಧಾನನಾಗಿರುವನು.
- Psalm 50:1 ಕೀರ್ತನೆಗಳು 50:1ಬಲಿಷ್ಠ ದೇವರಾಗಿರುವ ಕರ್ತನು ತಾನೇ ಮಾತನಾಡಿ ಸೂರ್ಯೋದಯದಿಂದ ಅಸ್ತಮಾನದ ವರೆಗೂ ಭೂನಿವಾಸಿಗಳನ್ನು ಕರೆದಿದ್ದಾನೆ.
- Romans 11:25–27 ರೋಮಾಪುರದವರಿಗೆ 11:25–27ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು. ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು.
- Isaiah 59:19 ಯೆಶಾಯ 59:19ಆಗ ಪಶ್ಚಿ ಮದ ಕಡೆಯವರು ಕರ್ತನ ಹೆಸರಿಗೂ ಸೂರ್ಯೋ ದಯದ ಕಡೆಯವರು ಆತನ ಘನಕ್ಕೂ ಭಯಪಡು ವರು. ವೈರಿಯು ಪ್ರಳಯದಂತೆ ಬರುವಾಗ ಕರ್ತನ ಆತ್ಮನು ಅವನಿಗೆ ವಿರೋಧವಾಗಿ ಧ್ವಜವನ್ನೆತ್ತುವನು.