Isaiah · chapter 49 · verse 12
Isaiah 49:12 in Kannada
ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
Igo, ivaru dooradinda baruttaare. Igo, ivaru badaganadinda mattu paduvanadinda, ivaru seeneem deshadinda baruttiddaare.
Isaiah 49:12 in English
- King James Version (KJV)
- Behold, these shall come from far: and, lo, these from the north and from the west; and these from the land of Sinim.
- World English Bible (WEB)
- Behold, these shall come from afar, and behold, these from the north and from the west, and these from the land of Sinim.”
- American Standard Version (ASV)
- Lo, these shall come from far; and, lo, these from the north and from the west; and these from the land of Sinim.
- Bible in Basic English (BBE)
- See, these are coming from far; and these from the north and the west; and these from the land of Sinim.
- Darby Translation (DBY)
- Behold, these shall come from afar; and behold, these from the north and from the west; and these from the land of Sinim.
- Webster's Bible (WBS)
- Behold, these shall come from far: and lo, these from the north and from the west; and these from the land of Sinim.
- Young's Literal Translation (YLT)
- Lo, these from afar come in, And lo, these from the north, and from the sea, And these from the land of Sinim.
Read in context
- 10ಅವರಿಗೆ ಹಸಿವೆ ಯಾಗಲಿ ಬಾಯಾರಿಕೆಯಾಗಲಿ ಇರವು. ಇಲ್ಲವೆ ಝಳವೂ ಬಿಸಿಲೂ ಬಡಿಯವು; ಯಾಕಂದರೆ ಅವ ರನ್ನು ಕರುಣಿಸುವಾತನು ಅವರನ್ನು ನಡೆಸುತ್ತಾ ನೀರು ಕ್ಕುವ ಒರತೆಗಳ ಬಳಿಗೆ ತರುವನು.
- 11ನನ್ನ ಬೆಟ್ಟ ಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜ ಮಾರ್ಗಗಳನ್ನು ಉನ್ನತಪಡಿಸುವೆನು.
- 12ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
- 13ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
- 14ಆದರೆ ಚೀಯೋನು--ಕರ್ತನು ನನ್ನನ್ನು ತಳ್ಳಿ ಬಿಟ್ಟಿದ್ದಾನೆ ಮತ್ತು ನನ್ನ ಕರ್ತನು ನನ್ನನ್ನು ಮರೆತು ಬಿಟ್ಟಿದ್ದಾನಲ್ಲಾ ಎಂದು ಅಂದುಕೊಂಡಳು.
Cross references
- Isaiah 43:5–6 ಯೆಶಾಯ 43:5–6ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು. ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು
- Isaiah 2:2–3 ಯೆಶಾಯ 2:2–3ಆ ಅಂತ್ಯ ದಿನಗಳಲ್ಲಿ ಆಗುವದೇನಂದರೆ--ಕರ್ತನ ಆಲಯದ ಪರ್ವತವು ಗುಡ್ಡಗಳಿಗಿಂತ ಎತ್ತರ ವಾಗಿ ಪರ್ವತಗಳ ತುದಿಯಲ್ಲಿ ನೆಲೆಯಾಗಿರುವದು. ಎಲ್ಲಾ ಜನಾಂಗಗಳು ಅದರ ಕಡೆಗೆ ತಂಡ ತಂಡವಾಗಿ ಬರುವವು. ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು.
- Matthew 8:11 ಮತ್ತಾಯನು 8:11ನಾನು ನಿಮಗೆ ಹೇಳುವದೇನಂದರೆ--ಬಹಳ ಜನರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು ಪರ ಲೋಕರಾಜ್ಯದಲ್ಲಿ ಅಬ್ರಹಾಮ್ ಇಸಾಕ್ ಯಾಕೋಬ್ ಅವರೊಂದಿಗೆ ಕೂತುಕೊಳ್ಳುವರು.
- Luke 13:29 ಲೂಕನು 13:29ಇದಲ್ಲದೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣಗಳಿಂದ ಅವರು ಬಂದು ದೇವರ ರಾಜ್ಯದಲ್ಲಿ ಕೂತುಕೊಳ್ಳುವರು.
- Zechariah 8:20–23 ಜೆಕರ್ಯ 8:20–23ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು; ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು. ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
- Micah 4:2 ಮೀಕ 4:2ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು.
- Revelation 11:15 ಪ್ರಕಟನೆ 11:15ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ-- ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು.
- Psalm 72:10–11 ಕೀರ್ತನೆಗಳು 72:10–11ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ತರುವರು; ಶೆಬಾ ಮತ್ತು ಸೆಬಾದ ಅರಸರು ದಾನಗಳನ್ನು ಅರ್ಪಿಸುವರು. ಹೌದು, ಎಲ್ಲಾ ಅರಸರು ಆತನ ಮುಂದೆ ಅಡ್ಡ ಬೀಳುವರು; ಎಲ್ಲಾ ಜನಾಂಗಗಳು ಆತನನ್ನು ಸೇವಿಸುವವು.
- Isaiah 60:9–14 ಯೆಶಾಯ 60:9–14ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ. ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು. ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ. ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು. ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು. ಆಗ ನಿನ್ನನ್ನು ಕುಗ್ಗಿಸಿದವರ ಮಕ್ಕಳು ಬೊಗ್ಗಿಕೊಂಡು ನಿನ್ನ ಬಳಿಗೆ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರು ನಿನ್ನ ಅಂಗಾಲುಗಳಿಗೆ ಸರಿಯಾಗಿ ಅಡ್ಡಬಿದ್ದು ನಿನ್ನನ್ನು ಕರ್ತನ ಪಟ್ಟಣವೆಂದು ಇಸ್ರಾಯೇಲಿನ ಪರಿಶುದ್ಧನ ಚೀಯೋ ನೆಂದೂ ಕರೆಯುವರು.
- Zechariah 2:11 ಜೆಕರ್ಯ 2:11ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.
- Psalm 72:17 ಕೀರ್ತನೆಗಳು 72:17ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು.
- Isaiah 11:10–11 ಯೆಶಾಯ 11:10–11ಆ ದಿನದಲ್ಲಿ ಹುಡುಕುವ ಅನ್ಯಜನರಿಗೆ ಇಷ ಯನ ಬೇರು ಒಂದು ಗುರುತಾಗಿ ನಿಲ್ಲುವದು; ಅವನ ವಿಶ್ರಾಂತಿ ವೈಭವವುಳ್ಳದ್ದಾಗಿರುವದು. ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವದಕ್ಕೆ ಎರಡನೇ ಸಾರಿ ಕೈಹಾಕಿ ಅಶ್ಶೂರ; ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಮತ್ತು ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.