Zechariah · chapter 9 · verse 1
Zechariah 9:1 in Kannada
ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು.
Hadraakina deshada vishayavaada kartana vaakyada bhaaravu; adu damaskadalli tanguvadu; manushyana kannugalu israayelina ellaa gotragalante kartana kadege iruvavu.
Zechariah 9:1 in English
- King James Version (KJV)
- The burden of the word of the LORD in the land of Hadrach, and Damascus [shall be] the rest thereof: when the eyes of man, as of all the tribes of Israel, [shall be] toward the LORD.
- World English Bible (WEB)
- A revelation. The LORD’s word is against the land of Hadrach, and will rest upon Damascus— for the eye of man and of all the tribes of Israel is toward the LORD—
- American Standard Version (ASV)
- The burden of the word of Jehovah upon the land of Hadrach, and Damascus [shall be] its resting-place (for the eye of man and of all the tribes of Israel is toward Jehovah);
- Bible in Basic English (BBE)
- A word of the Lord: The Lord has come to the land of Hadrach, and Damascus is his resting-place: for the towns of Aram are the Lord's,
- Darby Translation (DBY)
- The burden of the word of Jehovah, in the land of Hadrach, and [on] Damascus shall it rest; (for Jehovah hath an eye upon men, and upon all the tribes of Israel;)
- Webster's Bible (WBS)
- The burden of the word of the LORD in the land of Hadrach, and Damascus [shall be] the rest of it: when the eyes of man, as of all the tribes of Israel, [shall be] towards the LORD.
- Young's Literal Translation (YLT)
- The burden of a word of Jehovah against the land of Hadrach, and Demmeseh — his place of rest: (When to Jehovah [is] the eye of man, And of all the tribes of Israel.)
Read in context
- 1ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು.
- 2ಹಮಾತು ಬಹಳ ಜ್ಞಾನವಿರುವ ತೂರ್ ಚೀದೋನ್ ಸಹ ಅದರ ಮೇರೆಯಾಗಿದೆ.
- 3ತೂರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.
Cross references
- Isaiah 9:8–21 ಯೆಶಾಯ 9:8–21ಕರ್ತನು ಯಾಕೋಬನಿಗೆ ಒಂದು ಮಾತನ್ನು ಹೇಳಿ ಕಳುಹಿಸಿದನು; ಅದು ಇಸ್ರಾಯೇಲ್ಯರ ಮೇಲೆ ಹೊಳೆಯಿತು. ಇಟ್ಟಿಗೆಗಳು ಬಿದ್ದುಹೋದರೂ ಕೆತ್ತಿದ ಕಲ್ಲುಗಳಿಂದ ಕಟ್ಟುವೆವು; ಅತ್ತಿಮರಗಳು ಕಡಿಯಲ್ಪಟ್ಟರೂ ದೇವದಾರುಗಳನ್ನು ಹಾಕುವೆವು ಎಂದು ಹೃದಯದ ಗರ್ವದಿಂದಲೂ ಕೆಚ್ಚೆದೆಯಿಂದಲೂ ಹೇಳಿಕೊಳ್ಳುವ ಎಲ್ಲಾ ಜನರಿಗೂ ಎಫ್ರಾಯಾಮ್ಯ ರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ ಆ ಮಾತು ಗೊತ್ತಾಗುವದು. ಹೀಗಿರುವದರಿಂದ ಕರ್ತನು ರೆಚೀ ನನ ವೈರಿಗಳನ್ನು ಅವನಿಗೆ ವಿರೋಧವಾಗಿ ಎಬ್ಬಿಸಿ ಅವನ ಶತ್ರುಗಳಾದ ಸಿರಿಯಾದವರನ್ನು ಮುಂದೆಯೂ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವನು. ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿ ಬಿಡುವರು; ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ. ಹೀಗಿದ್ದಾಗ್ಯೂ ಆ ಜನರು ತಮ್ಮನ್ನು ಹೊಡೆ ದಾತನ ಕಡೆಗೆ ತಿರುಗದೆಯೂ ಇಲ್ಲವೆ ಸೈನ್ಯಗಳ ಕರ್ತನನ್ನು ಹುಡುಕದೆಯೂ ಇದ್ದಾರೆ. ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು. ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು; ಸುಳ್ಳುಬೋಧಿಸುವ ಪ್ರವಾ ದಿಯು ಬಾಲವಾಗಿರುವನು. ಈ ಜನರನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ; ಅವರಿಂದ ನಡಿ ಸಲ್ಪಟ್ಟವರು ನಾಶವಾಗಿದ್ದಾರೆ. ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ. ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ ಮುಳ್ಳುಗಳನ್ನು ನುಂಗಿಬಿಟ್ಟು ಅಡವಿಯ ಪೊದೆಗ ಳನ್ನು ಹತ್ತಿಕೊಳ್ಳಲು ಅದು ಹೊಗೆಹೊಗೆಯಾಗಿ ಸುತ್ತಿ ಕೊಂಡು ಮೇಲಕ್ಕೆ ಏರುತ್ತದೆ. ಸೈನ್ಯಗಳ ಕರ್ತನ ಕೋಪೋದ್ರೇಕದಿಂದ ದೇಶವು ಕತ್ತಲೆಯಾಗಿದೆ; ಜನರು ಉರಿಯುವ ಸೌದೆಯಂತಿದ್ದಾರೆ; ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವದಿಲ್ಲ. ಅವನು ಬಲಗಡೆಯಲ್ಲಿರುವದನ್ನು ಕಿತ್ತುಕೊಂಡು (ತಿಂದರೂ) ಹಸಿದೇ ಇರುವನು; ಅವನು ಎಡಗಡೆ ಯಲ್ಲಿರುವದನ್ನು ತಿಂದರೂ ಅವು ಅವನನ್ನು ತೃಪ್ತಿ ಪಡಿಸಲಾರವು. ಒಬ್ಬೊಬ್ಬನೂ ತನ್ನ ತನ್ನ ತೋಳಿನ ಮಾಂಸವನ್ನು ತಿನ್ನುವನು.ಹೀಗೆ ಮನಸ್ಸೆಯು ಎಫ್ರಾಯಾಮನ್ನು ಮತ್ತು ಎಫ್ರಾಯಾಮು ಮನಸ್ಸೆ ಯನ್ನು ತಿಂದುಬಿಡುವವು; ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು. ಹೀಗೆ ಮನಸ್ಸೆಯು ಎಫ್ರಾಯಾಮನ್ನು ಮತ್ತು ಎಫ್ರಾಯಾಮು ಮನಸ್ಸೆ ಯನ್ನು ತಿಂದುಬಿಡುವವು; ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
- Amos 1:3–5 ಆಮೋಸ 1:3–5ಕರ್ತನು ಹೀಗೆ ಹೇಳುತ್ತಾನೆ--ದಮಸ್ಕದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅವರನ್ನು ದಂಡಿಸದೆ ಹಿಂತಿರುಗುವದಿಲ್ಲ; ಅವರು ಕಬ್ಬಿಣದ ಆಯುಧಗಳಿಂದ ಗಿಲ್ಯಾದನ್ನು ಬಡಿದಿರುವರು. ಆದರೆ ನಾನು ಹಜಾಯೇಲನ ಮನೆಯೊಳಗೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ನುಂಗಿಬಿಡುವದು. ನಾನು ದಮಸ್ಕದ ಅಡ್ಡ ದಂಡೆ ಯನ್ನು ಸಹ ಮುರಿಯುವೆನು; ಆವೆನ್ ತಗ್ಗಿನಿಂದ ನಿವಾಸಿಯನ್ನೂ ಎದೆನಿನ ಮನೆಯಿಂದ ರಾಜದಂಡ ಹಿಡಿಯುವನನ್ನೂ ಕಡಿದುಬಿಡುವೆನು; ಸಿರಿಯಾದ ಜನರು ಸೆರೆಯಾಗಿ ಕೀರಿಗೆ ಹೋಗುವರೆಂದು ಕರ್ತನು ಹೇಳುತ್ತಾನೆ.
- Psalm 25:15 ಕೀರ್ತನೆಗಳು 25:15ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.
- Jeremiah 49:23–27 ಯೆರೆಮೀಯ 49:23–27ದಮಸ್ಕದ ವಿಷಯವಾಗಿ ಹಮಾತೂ ಅರ್ಪಾದೂ ನಾಚಿಕೆಪಡುತ್ತವೆ; ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯ ಪಟ್ಟಿವೆ. ಸಮುದ್ರದಂತೆ ಕಳವಳಪಡುತ್ತದೆ, ಅದು ಸಮ್ಮನಿರಲಾರದು. ದಮಸ್ಕವು ನಿತ್ರಾಣವಾಯಿತು; ಓಡಿ ಹೋಗುವದಕ್ಕೆ ತಿರುಗಿಕೊಳ್ಳುತ್ತದೆ; ಭಯವು ಅದನ್ನು ಹಿಡುಕೊಂಡಿದೆ. ಹೆರುವ ಸ್ತ್ರೀಯ ಹಾಗೆ ಸಂಕಟವೂ ವೇದನೆಗಳೂ ಅದನ್ನು ಹಿಡಿದವೆ. ಹೊಗಳಿಕೆಯ ಪಟ್ಟಣವೂ ನನ್ನ ಸಂತೋಷದ ಪಟ್ಟಣವೂ ಬಿಡಲ್ಪಟ್ಟಿದೆಯಲ್ಲವೋ? ಆದದರಿಂದ ಅದರ ಯೌವನಸ್ಥರು ಚೌಕಗಳಲ್ಲಿ ಬೀಳುವರು; ಯುದ್ಧಸ್ಥರೆಲ್ಲರೂ ಆ ದಿನದಲ್ಲಿ ಕಡಿದುಹಾಕಲ್ಪಡುವರು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನಾನು ದಮಸ್ಕದ ಗೋಡೆಯಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಬೆನ್ಹದದನ ಅರಮನೆಗಳನ್ನು ತಿಂದುಬಿಡುವದು.
- Jeremiah 16:19 ಯೆರೆಮೀಯ 16:19ಓ ಕರ್ತನೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಅನ್ಯರು ನಿನ್ನ ಬಳಿಗೆ ಬಂದು--ನಿಶ್ಚಯ ವಾಗಿ ನಮ್ಮ ತಂದೆಗಳು ಸುಳ್ಳನ್ನು ವ್ಯರ್ಥವನ್ನು ಲಾಭ ವಿಲ್ಲದವುಗಳನ್ನು ಬಾಧ್ಯವಾಗಿ ಹೊಂದಿದ್ದಾರೆ.
- Malachi 1:1 ಮಲಾಕಿಯ 1:1ಇಸ್ರಾಯೇಲಿಗೆ ಮಲಾಕಿಯಿಂದ ಉಂಟಾದ ಕರ್ತನ ವಾಕ್ಯದ ದೈವೋಕ್ತಿ.
- Isaiah 17:7–8 ಯೆಶಾಯ 17:7–8ಆ ದಿನದಲ್ಲಿ ಮನುಷ್ಯನು ತನ್ನನ್ನು ಉಂಟು ಮಾಡಿದವನ ಮೇಲೆ ದೃಷ್ಟಿಯಿಡು ವನು ಇಸ್ರಾಯೇಲಿನ ಪರಿಶುದ್ಧನ ಕಡೆಗೆ ಅವನ ಕಣ್ಣುಗಳು ಲಕ್ಷಿಸುವವು. ಅವನು ತನ್ನ ಕೈಕೆಲಸ ವಾದ ಬಲಿಪೀಠಗಳನ್ನು ದೃಷ್ಟಿಸನು ತನ್ನ ಬೆರಳುಗಳು ಮಾಡಿದ್ದನೂಅಥವಾ ತೋಪುಗಳನ್ನೂ ವಿಗ್ರಹ ಗಳನ್ನೂ ನೋಡನು.
- Psalm 145:15 ಕೀರ್ತನೆಗಳು 145:15ಎಲ್ಲರ ಕಣ್ಣುಗಳು ನಿನಗೆ ಕಾದುಕೊಳ್ಳುತ್ತವೆ; ನೀನು ಅವರಿಗೆ ಅವರ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀ.
- Isaiah 52:10 ಯೆಶಾಯ 52:10ಕರ್ತನು ತನ್ನ ಪರಿ ಶುದ್ಧವಾದ ಬಾಹುವನ್ನು ಸಕಲ ಜನಾಂಗಗಳ ಕಣ್ಣು ಗಳಿಗೆ ತೋರಮಾಡಿದ್ದಾನೆ. ಭೂಮಿಯ ಅಂತ್ಯದವ ರೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡುವರು.
- Genesis 14:15 ಆದಿಕಾಂಡ 14:15ರಾತ್ರಿಯಲ್ಲಿ ಅವರಿಗೆ ವಿರೋಧ ವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ ಅವರನ್ನು ಹೊಡೆದು ದಮಸ್ಕದ ಬಲಗಡೆಯಲ್ಲಿರುವ ಹೋಬಾದ ವರೆಗೆ ಅವರನ್ನು ಸಂಹರಿಸಿ
- Zechariah 5:4 ಜೆಕರ್ಯ 5:4ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.
- Jeremiah 23:33–38 ಯೆರೆಮೀಯ 23:33–38ಇದಲ್ಲದೆ ಈ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ಕರ್ತನ ಭಾರವೇನೆಂದು ನಿನ್ನನ್ನು ಕೇಳುವಾಗ ನೀನು ಅವರಿಗೆ--ಏನು ಭಾರ? ನಾನು ನಿಮ್ಮನ್ನು ತಳ್ಳಿಬಿಡುವೆನೆಂದು ಕರ್ತನು ಅನ್ನುತ್ತಾನೆಂದು ಹೇಳಬೇಕು. ಕರ್ತನ ಭಾರವೆಂದೆನ್ನುವ ಪ್ರವಾದಿ ಯಾಗಲಿ ಯಾಜಕನಾಗಲಿ ಜನರಾಗಲಿ ಅವರ ವಿಷಯ ವೇನಂದರೆ--ನಾನು ಅಂಥಾ ಮನುಷ್ಯನನ್ನೂ ಅವನ ಮನೆಯನ್ನೂ ಶಿಕ್ಷಿಸುವೆನು. ನೀವು ನಿಮ್ಮ ನಿಮ್ಮ ನೆರೆಯವರಿಗೂ ನಿಮ್ಮ ನಿಮ್ಮ ಸಹೋದರರಿಗೂ--ಕರ್ತನು ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು. ಆದರೆ ಕರ್ತನ ಭಾರವನ್ನು ಇನ್ನು ಎಂದಿಗೂ ನುಡಿಯುವದಿಲ್ಲ; ಒಬ್ಬೊ ಬ್ಬನಿಗೆ ತನ್ನ ನುಡಿಯೇ ಭಾರವಾಗುವದು; ನೀವು ಜೀವವುಳ್ಳ ದೇವರ ವಾಕ್ಯಗಳನ್ನು ಅಂದರೆ ನಮ್ಮ ದೇವರಾದ ಸೈನ್ಯಗಳ ಕರ್ತನ ವಾಕ್ಯಗಳನ್ನೇ ಮಾರ್ಪಡಿ ಸಿದ್ದೀರಿ. ನೀನು ಪ್ರವಾದಿಗೆ--ಕರ್ತನು ನಿನಗೆ ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು. ಆದರೆ ನೀವು--ಕರ್ತನ ಭಾರವೆಂದು ಹೇಳುತ್ತಿದ್ದೀರಿ. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಕರ್ತನ ಭಾರವೆಂದು ನೀವು ಹೇಳಬಾರದೆಂಬದಾಗಿ ನಾನು ನಿಮಗೆ ಹೇಳಿ ಕಳುಹಿ ಸಿದ ಮೇಲೆ ಕರ್ತನ ಭಾರವೆಂಬ ಈ ಮಾತನ್ನು ನೀವು ಹೇಳುವದರಿಂದ