Zephaniah · chapter 1 · verse 14
Zephaniah 1:14 in Kannada
ಕರ್ತನ ಮಹಾದಿನವು ಸವಿಾಪವಾಗಿದೆ, ಅದು ಬಹು ತ್ವರೆಪಡುತ್ತದೆ; ಕರ್ತನ ದಿನದ ಶಬ್ದವು ತ್ವರೆ ಪಡುತ್ತದೆ; ಶೂರನು ಅಲ್ಲಿ ಘೋರವಾಗಿ ಗೋಳಿಡು ವನು.
Kartana mahaadinavu saviాpavaagide, adu bahu tvarepaduttade; kartana dinada shabdavu tvare paduttade; shooranu alli ghoravaagi golidu vanu.
Zephaniah 1:14 in English
- King James Version (KJV)
- The great day of the LORD [is] near, [it is] near, and hasteth greatly, [even] the voice of the day of the LORD: the mighty man shall cry there bitterly.
- World English Bible (WEB)
- The great day of the LORD is near. It is near and hurries greatly, the voice of the day of the LORD. The mighty man cries there bitterly.
- American Standard Version (ASV)
- The great day of Jehovah is near, it is near and hasteth greatly, [even] the voice of the day of Jehovah; the mighty man crieth there bitterly.
- Bible in Basic English (BBE)
- The great day of the Lord is near, it is near and coming very quickly; the bitter day of the Lord is near, coming on more quickly than a man of war.
- Darby Translation (DBY)
- The great day of Jehovah is near, it is near, and hasteth greatly. The voice of the day of Jehovah: the mighty man shall cry there bitterly.
- Webster's Bible (WBS)
- The great day of the LORD [is] near, [it is] near, and hasteth greatly, [even] the voice of the day of the LORD: the mighty man shall cry there bitterly.
- Young's Literal Translation (YLT)
- Near [is] the great day of Jehovah, Near, and hasting exceedingly, The noise of the day of Jehovah, Bitterly shriek there doth a mighty one.
Read in context
- 12ಆ ಕಾಲದಲ್ಲಿ ಆಗುವದೇನಂದರೆ--ನಾನು ಯೆರೂಸಲೇಮನ್ನು ದೀಪಗಳಿಂದ ಶೋಧಿಸುವೆನು; ಕರ್ತನು ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡು ವದಿಲ್ಲವೆಂದು ತಮ್ಮ ಹೃದಯಗಳಲ್ಲಿ ಅನ್ನುವವರಾಗಿ ಮರೆಯಾದವುಗಳ ಮೇಲೆ ಕಟ್ಟಿಕೊಂಡಿರುವ ಮನುಷ್ಯ ರನ್ನು ದಂಡಿಸುವೆನು.
- 13ಆದದರಿಂದ ಅವರ ಸಂಪತ್ತು ಕೊಳ್ಳೆಯಾಗುವದು, ಅವರ ಮನೆಗಳು ಹಾಳಾಗು ವವು; ಅವರು ಮನೆಗಳನ್ನು ಕಟ್ಟಿ ವಾಸಮಾಡರು; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ರಸವನ್ನು ಕುಡಿಯರು.
- 14ಕರ್ತನ ಮಹಾದಿನವು ಸವಿಾಪವಾಗಿದೆ, ಅದು ಬಹು ತ್ವರೆಪಡುತ್ತದೆ; ಕರ್ತನ ದಿನದ ಶಬ್ದವು ತ್ವರೆ ಪಡುತ್ತದೆ; ಶೂರನು ಅಲ್ಲಿ ಘೋರವಾಗಿ ಗೋಳಿಡು ವನು.
- 15ಆ ದಿನವು ರೌದ್ರದ ದಿನವು, ಇಕ್ಕಟ್ಟು ಸಂಕಟಗಳ ದಿನವು, ಹಾಳು ಪಾಳುಗಳ ದಿನವು, ಕತ್ತಲೆ ಮೊಬ್ಬುಗಳ ದಿನವು, ಮೇಘ ಮೋಡಗಳ ದಿನವು.
- 16ಅದರ ಕೋಟೆಯುಳ್ಳ ಪಟ್ಟಣಗಳಿಗೆ ವಿರೋಧವಾಗಿಯೂ ಉನ್ನತವಾದ ಗೋಪುರಗಳಿಗೆ ವಿರೋಧವಾಗಿಯೂ ತುತೂರಿ ಅರ್ಭಟಗಳ ದಿನವು.
Cross references
- Malachi 4:5 ಮಲಾಕಿಯ 4:5ಇಗೋ, ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ ನಿಮಗೆ ಪ್ರವಾದಿಯಾದ ಎಲೀಯನನ್ನು ಕಳುಹಿಸುತ್ತೇನೆ.ನಾನು ಬಂದು ಭೂಮಿಯನ್ನು ಶಾಪದಿಂದ ಹೊಡೆಯದ ಹಾಗೆ ಅವನು ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ ಮಕ್ಕಳ ಹೃದಯವನ್ನು ತಮ್ಮ ತಂದೆಗಳ ಕಡೆಗೂ ತಿರುಗಿಸುವನು.
- Ezekiel 30:3 ಯೆಹೆಜ್ಕೇಲನು 30:3ಆ ದಿನವು ಸವಿಾಪವಾಯಿತು, ಕರ್ತನ ದಿನವು, ಆ ಕಾರ್ಮುಗಿಲಿನ ದಿನವು ಸವಿಾಪ ವಾಯಿತು; ಅದೇ ಅನ್ಯಜನಾಂಗಗಳ ಕಾಲವಾಗಿ ರುವದು.
- Zephaniah 1:7 ಚೆಫನ್ಯ 1:7ಕರ್ತ ನಾದ ದೇವರ ಮುಂದೆ ಮೌನವಾಗಿರ್ರಿ: ಕರ್ತನ ದಿನವು ಸವಿಾಪವಾಗಿದೆ; ಕರ್ತನು ಬಲಿಯನ್ನು ಸಿದ್ಧ ಮಾಡಿದ್ದಾನೆ; ತನ್ನ ಅತಿಥಿಗಳನ್ನು ಆಹ್ವಾನಿಸಿದ್ದಾನೆ.
- 1 Thessalonians 4:16 1 ಥೆಸಲೊನೀಕದವರಿಗೆ 4:16ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೂತನ ಶಬ್ದದೊಡನೆಯೂ ದೇವರ ತುತೂರಿಯೊಡನೆಯೂ ಆಕಾಶದಿಂದ ಇಳಿದು ಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು;
- Ezekiel 7:12 ಯೆಹೆಜ್ಕೇಲನು 7:12ಕಾಲವು ಬಂತು, ದಿನವು ಸವಿಾಪ ವಾಯಿತು; ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲ ದಿರಲಿ, ಮಾರುವವನು ದುಃಖಿಸದಿರಲಿ; ಯಾಕಂದರೆ ಎಲ್ಲಾ ಜನಸಮೂಹದ ಮೇಲೆ ರೌದ್ರವಿದೆ.
- Isaiah 33:7 ಯೆಶಾಯ 33:7ಇಗೋ, ಅವರ ಪರಾಕ್ರಮಶಾಲಿಗಳು ಹೊರಗೆ ಕೂಗುತ್ತಾರೆ; ಸಮಾಧಾನದ ರಾಯಭಾರಿಗಳು ಘೋರ ವಾಗಿ ಅಳುತ್ತಿದ್ದಾರೆ.
- Joel 2:11 ಯೋವೇಲ 2:11ಕರ್ತನು ತನ್ನ ಸೈನ್ಯದ ಮುಂದೆ ತನ್ನ ಶಬ್ದವನ್ನು ಮಾಡುತ್ತಾನೆ; ಆತನ ದಂಡು ಬಹು ದೊಡ್ಡದಾಗಿದೆ; ಹೌದು, ಬಲವಾದ ದ್ದಾಗಿದ್ದು ಆತನ ವಾಕ್ಯವನ್ನು ನಡಿಸುತ್ತದೆ; ಕರ್ತನ ದಿನವು ದೊಡ್ಡದು, ಮಹಾ ಭಯಂಕರವಾದದ್ದು, ಅದನ್ನು ತಾಳಿಕೊಳ್ಳುವವನ್ಯಾರು?
- Isaiah 15:4 ಯೆಶಾಯ 15:4ಹೆಷ್ಬೋನ್ ಮತ್ತು ಎಲೆ ಯಾಲೆ ಕೂಗುತ್ತವೆ; ಅವುಗಳ ಸ್ವರವು ಯಹಜಿನ ವರೆಗೂ ಕೇಳಿಸುತ್ತದೆ; ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು; ಅವನ ಪ್ರಾಣವು ತನ್ನೊಳಗೆ ತತ್ತರಿಸುತ್ತದೆ.
- 2 Peter 2:3 2 ಪೇತ್ರನು 2:3ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪನೆಯ ಮಾತು ಗಳನ್ನು ಹೇಳುತ್ತಾ ನಿಮ್ಮಿಂದ ಲಾಭವನ್ನು ಸಂಪಾದಿಸ ಬೇಕೆಂದಿರುವರು. ಅಂಥವರಿಗೆ ಬಹಳ ಕಾಲದಿಂದಿದ್ದ ತೀರ್ಪು ತಡವಾಗುವದಿಲ್ಲ. ಅವರಿಗಾಗುವ ನಾಶನವು ತೂಕಡಿಸುವದಿಲ್ಲ.
- Ezekiel 7:6–7 ಯೆಹೆಜ್ಕೇಲನು 7:6–7ಅಂತ್ಯವು ಬಂತು. ಅಂತ್ಯವು ಬಂದು ಅದು ನಿನಗೋಸ್ಕರ ಕಾಯುತ್ತಾ ಇದೆ. ಇಗೋ, ಅದು ಬಂತು. ಓ ದೇಶದಲ್ಲಿ ವಾಸಿಸುವವನೇ, ನಿನಗಾಗಿ ಮುಂಜಾನೆ ಬಂತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು ಮತ್ತು ಪರ್ವತಗಳ ಆರ್ಭಟದ ಧ್ವನಿ ಇಲ್ಲ.
- Joel 1:15 ಯೋವೇಲ 1:15ಆ ದಿನಕ್ಕಾಗಿ ಅಯ್ಯೋ, ಯಾಕಂದರೆ ಕರ್ತನ ದಿನವು ಸವಿಾಪವಾಗಿದೆ; ಸರ್ವಶಕ್ತನ ಕಡೆಯಿಂದ ನಾಶದಂತೆ ಬರುತ್ತದೆ.
- James 5:9 ಯಾಕೋಬನು 5:9ಸಹೋದರರೇ, ನೀವು ಒಬ್ಬರನ್ನೊಬ್ಬರು ದ್ವೇಷಿಸಬೇಡಿರಿ; ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಲಿನ ಮುಂದೆಯೇ ನಿಂತಿದ್ದಾನೆ.