Zephaniah · chapter 1 · verse 8
Zephaniah 1:8 in Kannada
ಕರ್ತನ ಬಲಿಯ ದಿನದಲ್ಲಿ ಆಗುವದೇನಂದರೆ--ನಾನು ಪ್ರಧಾನರನ್ನೂ ಅರಸನ ಕುಮಾರರ ಮಕ್ಕಳನ್ನೂ ಅನ್ಯರ ಉಡುಪನ್ನು ತೊಟ್ಟುಕೊಳ್ಳುವವರೆಲ್ಲರನ್ನೂ ದಂಡಿಸುವೆನು.
Kartana baliya dinadalli aaguvadenandare--naanu pradhaanarannoo arasana kumaarara makkalannoo anyara udupannu tottukolluvavarellarannoo dandisuvenu.
Zephaniah 1:8 in English
- King James Version (KJV)
- And it shall come to pass in the day of the LORD’s sacrifice, that I will punish the princes, and the king’s children, and all such as are clothed with strange apparel.
- World English Bible (WEB)
- It will happen in the day of the LORD’s sacrifice that I will punish the princes, the king’s sons, and all those who are clothed with foreign clothing.
- American Standard Version (ASV)
- And it shall come to pass in the day of Jehovah’s sacrifice, that I will punish the princes, and the king’s sons, and all such as are clothed with foreign apparel.
- Bible in Basic English (BBE)
- And it will come about in the day of the Lord's offering, that I will send punishment on the rulers and the king's sons and all who are clothed in robes from strange lands.
- Darby Translation (DBY)
- And it shall come to pass in the day of Jehovah's sacrifice, that I will punish the princes, and the king's sons, and all such as are clothed with foreign apparel.
- Webster's Bible (WBS)
- And it shall come to pass in the day of the LORD'S sacrifice, that I will punish the princes, and the king's children, and all such as are clothed with foreign apparel.
- Young's Literal Translation (YLT)
- And it hath come to pass, In the day of the sacrifice of Jehovah, That I have laid a charge on the heads, And on sons of the king, And on all putting on strange clothing.
Read in context
- 6ಕರ್ತನ ಕಡೆಯಿಂದ ಹಿಂತಿ ರುಗಿದವರನ್ನೂ ಕರ್ತನನ್ನು ಹುಡುಕದೆಯೂ ವಿಚಾರಿಸ ದೆಯೂ ಇರುವವರನ್ನೂ ಕಡಿದುಬಿಡುವೆನು.
- 7ಕರ್ತ ನಾದ ದೇವರ ಮುಂದೆ ಮೌನವಾಗಿರ್ರಿ: ಕರ್ತನ ದಿನವು ಸವಿಾಪವಾಗಿದೆ; ಕರ್ತನು ಬಲಿಯನ್ನು ಸಿದ್ಧ ಮಾಡಿದ್ದಾನೆ; ತನ್ನ ಅತಿಥಿಗಳನ್ನು ಆಹ್ವಾನಿಸಿದ್ದಾನೆ.
- 8ಕರ್ತನ ಬಲಿಯ ದಿನದಲ್ಲಿ ಆಗುವದೇನಂದರೆ--ನಾನು ಪ್ರಧಾನರನ್ನೂ ಅರಸನ ಕುಮಾರರ ಮಕ್ಕಳನ್ನೂ ಅನ್ಯರ ಉಡುಪನ್ನು ತೊಟ್ಟುಕೊಳ್ಳುವವರೆಲ್ಲರನ್ನೂ ದಂಡಿಸುವೆನು.
- 9ಆ ದಿನದಲ್ಲಿ ಹೊಸ್ತಿಲನ್ನು ಹಾರಿ ದಾಟುವವರೆಲ್ಲರನ್ನೂ ತಮ್ಮ ಯಜಮಾನರ ಮನೆ ಗಳನ್ನು ಬಲಾತ್ಕಾರ ಮೋಸಗಳಿಂದ ತುಂಬಿಸುವವರನ್ನೂ ದಂಡಿಸುವೆನು.
- 10ಆ ದಿನದಲ್ಲಿ ಆಗುವದೇನಂದರೆ--ವಿಾನುಬಾಗಲಿಂದ ಕೂಗಿನ ಶಬ್ದವೂ ಮತ್ತೊಂದ ರಿಂದ ಗೋಳಾಟವೂ ಗುಡ್ಡಗಳ ಕಡೆಯಿಂದ ದೊಡ್ಡ ಮುರಿಯೋಣವೂ ಇರುವದು.
Cross references
- Isaiah 24:21 ಯೆಶಾಯ 24:21ಆ ದಿವಸದಲ್ಲಿ ಆಗುವದೇನಂದರೆ--ಕರ್ತನು ಉನ್ನತದಲ್ಲಿರುವ ಉನ್ನತವಾದವರ ಸೈನ್ಯವನ್ನೂ ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸು ವನು.
- Isaiah 3:18–24 ಯೆಶಾಯ 3:18–24ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ, ಸರ, ಬಳೆ, ಮುಂಡಾಸ, ಟೊಪ್ಪಿಗೆ, ಕಾಲಸರಪಣಿ, ಶಿರೋ ವೇಷ್ಟನ, ಗಂಧದ ಡಬ್ಬಿ, ಓಲೆ, ಉಂಗುರ, ಮೂಗುತಿ, ಬದಲಾಯಿಸತಕ್ಕ ಬಟ್ಟೆ, ಶಾಲು, ತಲೆಕೌದಿ, ಅಲಂ ಕಾರದ ಪಿನ್ನುಗಳು, ಕೈಗನ್ನಡಿ, ನಾರು ಮಡಿ, ಮೇಲ್ಹೊ ದಿಕೆ ಮುಸುಕು ಈ ಎಲ್ಲಾ ಭೂಷಣಗಳನ್ನು ತೆಗೆದು ಹಾಕುವನು. ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ; ಜಡೆಯ ಬದಲಾಗಿ ಬೋಳುತಲೆ; ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀತಟ್ಟು; ಸೌಂದರ್ಯಕ್ಕೆ ಬದಲಾಗಿ ಬರೆ, ಇವು ಆಗುವವು;
- Isaiah 39:7 ಯೆಶಾಯ 39:7ನಿನ್ನಿಂದ ಹುಟ್ಟುವಂಥ ನೀನು ಪಡೆದ ನಿನ್ನ ಮಕ್ಕಳನ್ನು ತೆಗೆದು ಕೊಂಡು ಹೋಗುವರು; ಬಾಬೆಲಿನ ಅರಸನ ಅರಮನೆ ಯಲ್ಲಿ ಅವರು ಕಂಚುಕಿಗಳಾಗಿರುವರು ಎಂದು ಕರ್ತನು ಹೇಳುತ್ತಾನೆ ಅಂದನು.ಆಗ ಹಿಜ್ಕೀಯನು--ಹೇಗೂ ನನ್ನ (ದಿನಗಳಲ್ಲಿ) ಜೀವಮಾನ ದಲ್ಲಿ ಸಮಾಧಾನವು ಸತ್ಯವು ಇರುವವು ಎಂದು ಅಂದುಕೊಂಡು ಯೆಶಾಯ ನಿಗೆ--ನೀನು ಹೇಳಿದ ಕರ್ತನ ವಾಕ್ಯವು ಒಳ್ಳೇದೆ ಅಂದನು.
- Jeremiah 22:11–19 ಯೆರೆಮೀಯ 22:11–19ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ ಈ ಸ್ಥಳವನ್ನು ಬಿಟ್ಟು ಹೋದವನೂ ಆದ ಶಲ್ಲೂಮನನ್ನು ಕುರಿತು ಕರ್ತನು ಹೀಗೆ ಹೇಳು ತ್ತಾನೆ--ಅವನು ಇನ್ನು ಇಲ್ಲಿಗೆ ತಿರುಗಿ ಬರುವದೇ ಇಲ್ಲ. ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದ ಲ್ಲಿಯೇ ಸಾಯುವನು; ಈ ದೇಶವನ್ನು ಇನ್ನು ನೋಡು ವದೇ ಇಲ್ಲ; ಅನೀತಿಯಿಂದ ತನ್ನ ಮನೆಯನ್ನು ಅನ್ಯಾಯದಿಂದ ತನ್ನ ಕೊಠಡಿಗಳನ್ನು ಕಟ್ಟಿಸಿಕೊಳ್ಳು ವವನಿಗೂ ಕೂಲಿಕೊಡದೆ ತನ್ನ ನೆರೆಯವನ ಕೈಯಿಂದ ಸುಮ್ಮನೆ ಕೆಲಸತಕ್ಕೊಳ್ಳುವವನಿಗೂ ಅಯ್ಯೋ! ಅವನು--ನಾನು ವಿಸ್ತಾರವಾದ ಮನೆಯನ್ನೂ ವಿಶಾಲವಾದ ಕೊಠಡಿಗಳನ್ನೂ ಕಟ್ಟಿಕೊಳ್ಳುವೆನೆಂದು ಹೇಳಿ ಕಿಟಕಿಗಳನ್ನು ಕೊರೆದು ದೇವದಾರಿನ ಹಲಿಗೆ ಗಳನ್ನು ಹಾಕಿ ಕೆಂಪು ಬಣ್ಣವನ್ನು ಹಚ್ಚುವವನಿಗೂ ಅಯ್ಯೋ! ನೀನು ದೇವದಾರಿನಲ್ಲಿ ನಿನ್ನನ್ನು ಮುಚ್ಚಿ ಕೊಳ್ಳುವದರಿಂದ ದೊರೆತನ ಮಾಡುವಿಯೋ? ನಿನ್ನ ತಂದೆ ಉಂಡು, ಕುಡಿದು, ನ್ಯಾಯವನ್ನೂ ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾ ಗಲಿಲ್ಲವೋ? ಬಡವನ ಮತ್ತು ದರಿದ್ರನ ನ್ಯಾಯ ವನ್ನು ತೀರಿಸಿದನು. ಆಗ ಒಳ್ಳೇದಾಯಿತು; ನನ್ನನ್ನು ತಿಳುಕೊಳ್ಳುವದು ಇದೇ ಅಲ್ಲವೋ ಎಂದು ಕರ್ತನು ಅನ್ನುತ್ತಾನೆ. ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ. ಆದದ ರಿಂದ ಯೋಷೀಯನ ಮಗನಾದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೀಗೆ ಹೇಳುತ್ತಾನೆ--ಅವರು ಅವನನ್ನು ಕುರಿತು ಗೋಳಾಡಿ--ಹಾ, ನನ್ನ ಸಹೋದರನೇ, ಹಾ, ನನ್ನ ಸಹೋದರಿಯೇ ಎಂದು ಅನ್ನುವದಿಲ್ಲ; ಹಾ, ದೊರೆಯೇ, ಹಾ, ಅವನ ವೈಭವವೇ ಎಂದು ಅವನನ್ನು ಕುರಿತು ಗೋಳಾಡುವದಿಲ್ಲ. ಕತ್ತೆಯನ್ನು ಹೂಣಿಡುವ ಪ್ರಕಾರ ಅವನನ್ನು ಹೂಣಿಡುವರು; ಅವನನ್ನು ಎಳಕೊಂಡು ಹೋಗಿ ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.
- Jeremiah 39:6–7 ಯೆರೆಮೀಯ 39:6–7ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು. ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಅವನು ಕಿತ್ತುಹಾಕಿ ಬಾಬೆಲಿಗೆ ತಕ್ಕೊಂಡು ಹೋಗಬೇಕೆಂದು ಅವನನ್ನು ಸರಪಣಿಗಳಿಂದ ಕಟ್ಟಿಸಿದನು.
- Jeremiah 22:24–30 ಯೆರೆಮೀಯ 22:24–30ಕರ್ತನು ಹೇಳುವದೇನಂದರೆ--ನನ್ನ ಜೀವ ದಾಣೆ, ಯೆಹೋಯಾಕೀಮನ ಮಗನಾದ ಯೆಹೂ ದದ ಅರಸನಾದ ಕೊನ್ಯನು ನನ್ನ ಬಲಗೈಯ ಮುದ್ರೆ ಯುಂಗರವಾಗಿದ್ದರೂ ನಿನ್ನನ್ನು ಅಲ್ಲಿಂದ ಕಿತ್ತುಹಾಕಿ ನಿನ್ನ ಪ್ರಾಣವನ್ನು ಹುಡುಕುವವರ ಕೈಗೂ ನೀನು ಹೆದರಿಕೊಂಡವರ ಕೈಗೂ ಅಂದರೆ ಬಾಬೆಲಿನ ಅರಸ ನಾದ ನೆಬುಕದ್ನೆಚ್ಚರನ ಕೈಗೆ ಮತ್ತು ಕಸ್ದೀಯರ ಕೈಗೆ ಒಪ್ಪಿಸಿಬಿಡುತ್ತೇನೆ. ನಿನ್ನನ್ನೂ ನಿನ್ನ ಹೆತ್ತ ತಾಯಿ ಯನ್ನೂ ನೀವು ಹುಟ್ಟದಿರುವ ಬೇರೆ ದೇಶದಲ್ಲಿ ಎಸೆದು ಬಿಡುವೆನು; ಅಲ್ಲೇ ಸಾಯುವಿರಿ. ಆದರೆ ಅವರು ತಿರುಗಿ ಬರುವದಕ್ಕೆ ಮನಸ್ಸು ಮಾಡುವ ದೇಶಕ್ಕೆ ಹಿಂತಿರುಗಲಾರರು. ಕೊನ್ಯನೆಂಬ ಈ ಮನುಷ್ಯನು ಹೀನವಾಗಿ ಒಡೆದು ಹೋದ ವಿಗ್ರಹವೋ? ಮೆಚ್ಚಿಕೆ ಇಲ್ಲದ ಪಾತ್ರೆಯೋ? ಯಾಕೆ ಅವನೂ ಅವನ ಸಂತಾನವೂ ಬಿಸಾಡಲ್ಪಟ್ಟು ತಮಗೆ ತಿಳಿಯದ ದೇಶಕ್ಕೆ ಹಾಕಲ್ಪಟ್ಟರು? ಓ ಭೂಮಿಯೇ, ಭೂಮಿಯೇ, ಭೂಮಿಯೇ, ಕರ್ತನ ವಾಕ್ಯವನ್ನು ಕೇಳು.ಕರ್ತನು ಹೀಗೆ ಹೇಳುತ್ತಾನೆ--ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆ ಯಿರಿ; ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕೂತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವದಿಲ್ಲ. ಕರ್ತನು ಹೀಗೆ ಹೇಳುತ್ತಾನೆ--ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆ ಯಿರಿ; ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕೂತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವದಿಲ್ಲ.
- 2 Kings 25:19–21 2 ಅರಸುಗಳು 25:19–21ಇದಲ್ಲದೆ ಪಟ್ಟಣದೊಳಗಿಂದ ಯುದ್ಧಸ್ಥರ ಮೇಲಿದ್ದ ಒಬ್ಬ ಅಧಿ ಕಾರಿಯನ್ನೂ ಪಟ್ಟಣದಲ್ಲಿ ಸಿಕ್ಕಿದ ಅರಸನ ಸಮ್ಮುಖ ದಲ್ಲಿದ್ದ ಐದು ಮಂದಿಯನ್ನೂ ದೇಶದ ಜನರನ್ನೂ ಸೈನ್ಯದ ತರಬೇತು ಮಾಡಿದ ಪ್ರಧಾನನ ಲೇಖಕನೂ ಪಟ್ಟಣದಲ್ಲಿ ಸಿಕ್ಕಿದ ದೇಶದ ಜನರಾದ ಅರವತ್ತು ಮಂದಿಯನ್ನೂ ಅವನು ಹಿಡಿದನು. ಕಾವಲಿನ ವರ ಅಧಿಪತಿಯಾದ ನೆಬೂಜರದಾನನು ಇವರನ್ನು ತಕ್ಕೊಂಡು ರಿಬ್ಲದಲ್ಲಿದ್ದ ಬಾಬೆಲಿನ ಅರಸನ ಬಳಿಗೆ ಬಂದನು. ಬಾಬೆಲಿನ ಅರಸನು ಹಮಾತ್ ರಿಬ್ಲ ದಲ್ಲಿ ಅವರನ್ನು ಹೊಡೆದು ಕೊಂದುಹಾಕಿದನು. ಈ ಪ್ರಕಾರವೇ ಯೆಹೂದ್ಯರು ತಮ್ಮ ದೇಶದಲ್ಲಿಂದ ಸೆರೆ ಯಾಗಿ ಒಯ್ಯಲ್ಪಟ್ಟರು.
- 2 Kings 25:6–7 2 ಅರಸುಗಳು 25:6–7ಅವನ ದಂಡೆಲ್ಲಾ ಅವನ ಕಡೆಯಿಂದ ಚದರಿ ಹೋಯಿತು. ಅವರು ಅರಸನನ್ನು ಹಿಡಿದು ಕೊಂಡು, ರಿಬ್ಲದಲ್ಲಿರುವ ಬಾಬೆಲಿನ ಅರಸನ ಬಳಿಗೆ ತಕ್ಕೊಂಡು ಬಂದು ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು. ಅವರು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣೆದುರಿನಲ್ಲಿಯೇ ಕೊಂದ ತರುವಾಯ ಅವನ ಕಣ್ಣುಗಳನ್ನು ಕಿತ್ತುಹಾಕಿ ಅವನಿಗೆ ಹಿತ್ತಾಳೆಯ ಬೇಡಿ ಹಾಕಿ ಅವನನ್ನು ಬಾಬೆಲಿಗೆ ತಕ್ಕೊಂಡು ಹೋದರು.
- 2 Kings 23:30–34 2 ಅರಸುಗಳು 23:30–34ಅವನ ಸೇವಕರು ಸತ್ತವನಾದ ಅವನನ್ನು ರಥದಲ್ಲಿ ಮೆಗಿದ್ದೋವಿನಿಂದ ಯೆರೂಸಲೇಮಿಗೆ ತಕ್ಕೊಂಡು ಬಂದು ಅವನ ಸ್ವಂತ ಸಮಾಧಿಯಲ್ಲಿ ಹೂಣಿಟ್ಟರು. ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ಅಭಿಷೇಕಿಸಿ ಅವನ ತಂದೆಗೆ ಬದಲಾಗಿ ಅರಸನನ್ನಾಗಿ ಮಾಡಿದರು. ಯೆಹೋವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ಮೂರು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿ ಲಿಬ್ನ ಪಟ್ಟಣದ ಯೆರೆವಿಾಯನ ಮಗಳಾಗಿದ್ದು ಹಮೂಟಲ್ ಎಂಬವಳಾಗಿದ್ದಳು. ಅವನು ತನ್ನ ತಂದೆಗಳು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಅವನು ಯೆರೂಸಲೇಮಿನಲ್ಲಿ ಆಳದ ಹಾಗೆ ಫರೋಹನೆಕೋ ಎಂಬವನು ಹಮಾತ್ ದೇಶದ ರಿಬ್ಲಾದಲ್ಲಿ ಅವನನ್ನು ಬಂಧಿಸಿ ದೇಶದ ಮೇಲೆ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರವನ್ನೂ ದಂಡ ತೆರಬೇಕಾ ಯಿತು. ಫರೋಹನೆಕೋ ಯೋಷೀಯನ ಮಗ ನಾದ ಎಲ್ಯಾಕೀಮನನ್ನು ಅವನ ತಂದೆಯಾದ ಯೋಷೀ ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿ ಅವನಿಗೆ ಯೆಹೋಯಾಕೀಮನೆಂಬ ಬದಲು ಹೆಸರನ್ನಿಟ್ಟು ಯೆಹೋವಾಹಾಜನನ್ನು ತೆಗೆದುಕೊಂಡು ಹೋದನು; ಅವನು ಐಗುಪ್ತದಲ್ಲಿ ಸತ್ತನು.
- 2 Kings 10:22 2 ಅರಸುಗಳು 10:22ಆಗ ಅವನು ವಸ್ತ್ರಗಳ ಮನೆಯ ಮೇಲೆ ಇರುವವನಿಗೆ ಬಾಳನನ್ನು ಸೇವಿಸುವ ಎಲ್ಲರಿಗೋಸ್ಕರ ವಸ್ತ್ರಗಳನ್ನು ತಕ್ಕೊಂಡು ಬಾ ಎಂದು ಹೇಳಿದ್ದರಿಂದ ಅವನು ಅವರಿಗೋಸ್ಕರ ವಸ್ತ್ರಗಳನ್ನು ತಕ್ಕೊಂಡು ಬಂದನು.
- Isaiah 10:12 ಯೆಶಾಯ 10:12ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು.
- 2 Kings 24:12–13 2 ಅರಸುಗಳು 24:12–13ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು. ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು.