1 Chronicles · chapter 11 · verse 20
1 Chronicles 11:20 in Kannada
ಇದಲ್ಲದೆ ಯೋವಾಬನ ಸಹೋದರನಾದ ಅಬ್ಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನಾಗಿದ್ದನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ ಮೂವರಲ್ಲಿ ಹೆಸರುಗೊಂಡವನಾಗಿದ್ದನು.
Idallade yovaabana sahodaranaada abshaiyu mooru mandiyalli mukhyasthanaagiddanu. Avanu munnooru mandige virodhavaagi tanna eetiyannu etti avarannu konduhaakiddarinda moovaralli hesarugondavanaagiddanu.
1 Chronicles 11:20 in English
- King James Version (KJV)
- And Abishai the brother of Joab, he was chief of the three: for lifting up his spear against three hundred, he slew [them], and had a name among the three.
- World English Bible (WEB)
- Abishai, the brother of Joab, was chief of the three; for he lifted up his spear against three hundred and killed them, and had a name among the three.
- American Standard Version (ASV)
- And Abishai, the brother of Joab, he was chief of the three; for he lifted up his spear against three hundred and slew them, and had a name among the three.
- Bible in Basic English (BBE)
- And Abishai, the brother of Joab, was chief of the thirty, for he put to death three hundred with his spear, but he had not a name among the three.
- Darby Translation (DBY)
- And Abishai the brother of Joab, he was the chief of three; and he brandished his spear against three hundred and slew them; and he had a name among the three.
- Webster's Bible (WBS)
- And Abishai the brother of Joab, he was chief of the three: for lifting his spear against three hundred, he slew [them] , and had a name among the three.
- Young's Literal Translation (YLT)
- And Abishai brother of Joab, he hath been head of the three: and he is lifting up his spear against three hundred — wounded, and hath a name among three.
Read in context
- 18ಆಗ ಆ ಮೂವರು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತೆಗೆದುಕೊಂಡು ಬಂದರು.
- 19ಆದರೆ ದಾವೀದನು ಅದನ್ನು ಕುಡಿಯಲೊಲ್ಲದೆ ಕರ್ತನಿಗೆ ಹೊಯ್ದು--ನನ್ನ ದೇವರು ಇಂಥಾ ಕಾರ್ಯವನ್ನು ನನಗೆ ದೂರವಾಗ ಮಾಡಲಿ; ನಾನು ಈ ಮನುಷ್ಯರ ಪ್ರಾಣ ರಕ್ತವನ್ನು ಕುಡಿಯಬಹುದೇ? ತಮ್ಮ ಪ್ರಾಣ ಗಳಿಂದ ಅದನ್ನು ತಂದರಲ್ಲಾ ಎಂದು ಹೇಳಿ ಕುಡಿಯ ಲೊಲ್ಲದೆ ಇದ್ದನು. ಈ ಕಾರ್ಯಗಳನ್ನು ಮುಖ್ಯಸ್ಥರಾದ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
- 20ಇದಲ್ಲದೆ ಯೋವಾಬನ ಸಹೋದರನಾದ ಅಬ್ಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನಾಗಿದ್ದನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ ಮೂವರಲ್ಲಿ ಹೆಸರುಗೊಂಡವನಾಗಿದ್ದನು.
- 21ಈ ಮೂವರಲ್ಲಿ ಅವರಿಗೆ ಅವನು ಪ್ರಧಾನನಾಗಿದ್ದನು; ಆದರೆ ಮೂವರ ಕೂಡ ಸೇರದೆ ಇದ್ದನು. ಇಬ್ಬರಿಗಿಂತ ಅವನು ಘನವುಳ್ಳವನಾಗಿದ್ದನು;
- 22ಕಬ್ಜಯೇಲಿನವ ನಾದ ಪರಾಕ್ರಮಶಾಲಿಯ ಮಗನಾದಂಥ ಯೆಹೋ ಯಾದನ ಮಗನಾದ ಬೆನಾಯನು ಅನೇಕ ಕ್ರಿಯೆಗ ಳನ್ನು ಮಾಡಿದನು; ಅವನು ಸಿಂಹದ ಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದನು. ಇನ್ನೊಮ್ಮೆ ಹಿಮದ ದಿವಸದಲ್ಲಿ ಇಳಿದು ಹೋಗಿ ಕುಣಿಯೊಳಗೆ ಒಂದು ಸಿಂಹವನ್ನು ಕೊಂದುಬಿಟ್ಟನು.
Cross references
- 1 Samuel 26:6 1 ಸಮುವೇಲನು 26:6ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನೂ ಚೆರೂಯಳ ಮಗ ನಾಗಿರುವ ಯೋವಾಬನ ಸಹೋದರನಾದ ಅಬೀಷೈ ಯನ್ನೂ ನೋಡಿ--ನನ್ನ ಸಂಗಡ ದಂಡಿನಲ್ಲಿ ಪ್ರವೇಶಿ ಸಲು ಬರುವವನು ಯಾರೆಂದು ಕೇಳಿದನು; ಅದಕ್ಕೆ ಅಬೀಷೈಯು--ನಾನು ನಿನ್ನ ಸಂಗಡ ಬರುವೆನು ಅಂದನು.
- 1 Chronicles 2:16 1 ಪೂರ್ವಕಾಲವೃತ್ತಾಂತ 2:16ಅವರ ಸಹೋದರಿಗಳು ಚೆರೂಯಳು ಅಬೀಗೈಲಳು. ಚೆರೂಯಳ ಮಕ್ಕಳುಅಬ್ಷೈನು ಯೋವಾಬನು ಅಸಾಹೇಲನು ಎಂಬ ಈ ಮೂವರು.
- 2 Samuel 21:17 2 ಸಮುವೇಲನು 21:17ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.
- 2 Samuel 18:2 2 ಸಮುವೇಲನು 18:2ಅವನು ಸೈನ್ಯವನ್ನು ಮೂರು ಪಾಲು ಮಾಡಿ ಒಂದು ಪಾಲನ್ನು ಯೋವಾಬನಿಗೂ ಇನ್ನೊಂದನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಗೂ ಮತ್ತೊಂದನ್ನು ಗಿತ್ತೀಯನಾದ ಇತ್ತೈಗೂ ಒಪ್ಪಿಸಿ--ನಾನೂ ನಿಮ್ಮ ಸಂಗಡ ಬರುತ್ತೇನೆ ಎಂದು ಹೇಳಿದನು.
- 2 Samuel 2:18 2 ಸಮುವೇಲನು 2:18ಚೆರೂಯಳ ಮೂವರು ಮಕ್ಕಳಾದ ಯೋವಾ ಬನೂ ಅಬಿಷೈಯೂ ಅಸಾಹೇಲನೂ ಅಲ್ಲಿ ಇದ್ದರು. ಅಸಾಹೇಲನು ಅಡವಿಯ ಜಿಂಕೆಯ ಹಾಗೆ ಪಾದ ತ್ವರಿತನಾಗಿದ್ದನು.
- 2 Samuel 23:18–39 2 ಸಮುವೇಲನು 23:18–39ಯೋವಾಬನ ಸಹೋದರನಾದ ಚೆರೂಯಳ ಮಗನಾಗಿರುವ ಅಬೀಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಈಟಿಯನ್ನು ಎತ್ತಿ ಮುನ್ನೂರು ಜನರನ್ನು ಸಂಹರಿಸಿದ್ದರಿಂದ ಮೂವ ರೊಳಗೆ ಹೆಸರುಗೊಂಡನು. ಈ ಮೂರು ಮಂದಿ ಯಲ್ಲಿ ಅವನು ಬಹು ಘನವುಳ್ಳವನಾಗಿದ್ದದ್ದು ಇದ ರಿಂದಲೇ. ಆದದರಿಂದ ಅವನು ಅವರಲ್ಲಿ ಪ್ರಧಾನ ನಾದನು. ಹೇಗಿದ್ದರೂ ಆ ಮೊದಲಿನ ಮೂರು ಜನಕ್ಕೆ ಅವನು ಸಮಾನನಾಗಿರಲಿಲ್ಲ. ಕಬ್ಜಯೇಲಿನಲ್ಲಿದ್ದ ಪರಾಕ್ರಮಶಾಲಿಯ ಮಗನಾದ ಯೆಹೋಯಾದಾ ವನ ಮಗನಾಗಿರುವ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದ್ದನು. ಅವನು ಸಿಂಹದಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದುಬಿಟ್ಟನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು. ಅವನು ರೂಪವುಳ್ಳ ಒಬ್ಬ ಐಗುಪ್ತದ ಮನುಷ್ಯನನ್ನು ಕೊಂದು ಬಿಟ್ಟನು. ಆ ಐಗುಪ್ತನ ಕೈಯಲ್ಲಿ ಒಂದು ಈಟಿಯು ಇತ್ತು. ಇವನು ಒಂದು ಕೋಲನ್ನು ತಕ್ಕೊಂಡು ಅವನ ಬಳಿಗೆ ಹೋಗಿ ಆ ಈಟಿಯನ್ನು ಐಗುಪ್ತನ ಕೈಯಿಂದ ಕಸಕೊಂಡು ಅವನನ್ನು ಅವನ ಈಟಿಯಿಂದಲೇ ಕೊಂದುಹಾಕಿದನು. ಇವುಗಳನ್ನು ಯೆಹೋಯಾ ದಾವನ ಮಗನಾದ ಬೆನಾಯನು ಮಾಡಿದ್ದರಿಂದ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರು ಗೊಂಡವನಾಗಿದ್ದನು. ಇವನು ಮೂವತ್ತು ಜನರಿ ಗಿಂತ ಹೆಚ್ಚು ಘನವುಳ್ಳವನಾಗಿದ್ದನು; ಆದರೆ ಆ ಮೊದಲಿನ ಮೂರು ಮಂದಿಗೆ ಅವನು ಸಮಾನ ನಾಗಿರಲಿಲ್ಲ; ದಾವೀದನು ಅವನನ್ನು ತನ್ನ ಮೈಗಾವಲಿ ನವರ ಮೇಲೆ ಯಜಮಾನನನ್ನಾಗಿಟ್ಟನು. ಯೋವಾಬನ ಸಹೋದರನಾದ ಅಸಾಹೇಲನು ಮೂವತ್ತು ಮಂದಿಯಲ್ಲಿ ಒಬ್ಬನಾಗಿದ್ದನು. ಈ ಮೂವತ್ತು ಮಂದಿ ಯಾರಂದರೆ; ಬೇತ್ಲೆಹೇಮ್ ಊರಿನ ದೋದೋವಿನ ಮಗನಾದ ಎಲ್ಹಾನಾನು; ಹರೋದಿನವನಾದ ಶಮ್ಮನು, ಎಲೀಕನು, ಪೆಲೆಟ ನಾದ ಹೆಲೆಚ್, ತೆಕೋವಿಯನಾದ ಇಕ್ಕೇಷನ ಮಗನಾದ ಈರಾ. ಅಣತೋತಿನವನಾದ ಅಬೀ ಯೆಜರ್, ಹುಷಾ ಊರಿನವನಾದ ಮೆಬುನೈ, ಅಹೋಹಿನವನಾದ ಚಲ್ಮೋನ್, ನೆಟೋಫದ ವನಾದ ಮಹರೈ, ನೆಟೋಫದವನಾದ ಬಾಣನ ಮಗ ಹೆಲೇಬ್, ಬೆನ್ಯಾವಿಾನನ ಮಕ್ಕಳ ಗಿಬೆ ಊರಿನವನಾದ ರೀಬೈ ಮಗನಾದ ಇತೈ, ಪಿತೋನ್ಯ ನಾದ ಬೆನಾಯನು, ನಹಲೇ ಗಾಷ್ ಊರಿನವನಾದ ಹಿದೈ ಅರಾಬಾದ ಅಬೀಅಲ್ಬೋನ್, ಬರ್ಹುಮ್ಯನಾದ ಅಜ್ಮಾವೇತನು, ಶಾಲ್ಬೋನ್ಯನಾದ ಎಲೆಯಖ್ಬಾ ಯಾಷೇನನ ಕುಮಾರರಲ್ಲಿ ಒಬ್ಬನಾದ ಯೋನಾತಾ ನನು, ಹರಾರ್ಯನಾದ ಶಮ್ಮನು, ಅರಾರ್ಯನಾದ ಶಾರಾರನ ಮಗನಾದ ಅಹೀಯಾಮ್, ಮಾಕಾತ್ಯರಲ್ಲಿ ಒಬ್ಬನ ಮಗನಾಗಿರುವ ಅಹಸ್ಬೈ ಮಗನಾದ ಎಲೀಫೆ ಲೆಟನು, ಗಿಲೋವಿಯನಾಗಿರುವ ಅಹೀತೋಫೆಲನ ಮಗನಾದ ಎಲೀಯಾಮನು, ಕರ್ಮೇಲ್ಯನಾದ ಹೆಚ್ರೊ, ಅರ್ಬಿಯನಾದ ಪಾರೈ, ಚೋಬದವನಾದ ನಾತಾನ್ ಮಗನಾಗಿರುವ ಇಗಾಲ್, ಗಾದ್ಯನಾದ ಬಾನಿ, ಅಮ್ಮೋನ್ಯನಾದ ಚೇಲೆಕ್, ಚೆರೂಯಳ ಮಗನಾದ ಯೋವಾಬನ ಆಯುಧಗಳನ್ನು ಹಿಡಿಯುವ ಬೇರೋತ್ಯನಾದ ನಹರೈ, ಇತ್ರಿಯರಾದ ಈರಾ ಗಾರೇಬನು,ಹಿತ್ತಿಯನಾದ ಊರೀಯನು ಇವ ರೆಲ್ಲಾ ಮೂವತ್ತೇಳು ಮಂದಿಯು. ಹಿತ್ತಿಯನಾದ ಊರೀಯನು ಇವ ರೆಲ್ಲಾ ಮೂವತ್ತೇಳು ಮಂದಿಯು.
- 2 Samuel 20:6 2 ಸಮುವೇಲನು 20:6ಆದದರಿಂದ ದಾವೀದನು ಅಬೀಷೈಗೆಈಗ ಅಬ್ಷಾಲೋಮನಿಗಿಂತ ಬಿಕ್ರಿಯ ಮಗನಾದ ಶೆಬನು ನಮಗೆ ಹೆಚ್ಚಿನ ಕೇಡನ್ನು ಮಾಡುವನು. ಅವನು ತನಗೆ ಗಡಿ ಸ್ಥಳಗಳಾದ ಪಟ್ಟಣಗಳನ್ನು ಸಂಪಾ ದಿಸಿಕೊಂಡು ನಮ್ಮಿಂದ ತಪ್ಪಿಸಿಕೊಳ್ಳದ ಹಾಗೆ ನೀನು ನಿನ್ನ ಯಜಮಾನನ ಸೇವಕರನ್ನು ತಕ್ಕೊಂಡು ಹೊರಟು ಅವನನ್ನು ಹಿಂದಟ್ಟು ಅಂದನು.
- 2 Samuel 3:30 2 ಸಮುವೇಲನು 3:30ಹೀಗೆಯೇ ಅಬ್ನೇರ ನನ್ನು ಕೊಂದುಹಾಕಿದರು; ಅವನು ಅವರ ಸಹೋ ದರನಾದ ಅಸಾಹೇಲನನ್ನು ಗಿಬ್ಯೋನಿನ ಯುದ್ಧದಲ್ಲಿ ಕೊಂದುಹಾಕಿದ್ದನು.
Original words (Hebrew)
- Abishai · H52אֲבִישַׁי ʼĂbîyshay
- brother · H251אָח ʼâch
- Joab · H3097יוֹאָב Yôwʼâb
- chief · H7218רֹאשׁ rôʼsh
- three · H7969שָׁלוֹשׁ shâlôwsh
- up · H5782עוּר ʻûwr
- spear · H2595חֲנִית chănîyth
- three · H7969שָׁלוֹשׁ shâlôwsh
- hundred · H3967מֵאָה mêʼâh
- slew · H2491חָלָל châlâl
- name · H8034שֵׁם shêm
- three · H7969שָׁלוֹשׁ shâlôwsh