1 Chronicles · chapter 15 · verse 4
1 Chronicles 15:4 in Kannada
ಇದಲ್ಲದೆ ದಾವೀದನು ಆರೋನನ ಮಕ್ಕಳನ್ನೂ ಲೇವಿಯರನ್ನೂ ಬರಮಾಡಿದನು.
Idallade daaveedanu aaronana makkalannoo leviyarannoo baramaadidanu.
1 Chronicles 15:4 in English
- King James Version (KJV)
- And David assembled the children of Aaron, and the Levites:
- World English Bible (WEB)
- David gathered together the sons of Aaron and the Levites:
- American Standard Version (ASV)
- And David gathered together the sons of Aaron, and the Levites:
- Bible in Basic English (BBE)
- And David got together the sons of Aaron, and the Levites;
- Darby Translation (DBY)
- And David gathered the sons of Aaron and the Levites:
- Webster's Bible (WBS)
- And David assembled the children of Aaron, and the Levites:
- Young's Literal Translation (YLT)
- And David gathereth the sons of Aaron, and the Levites.
Read in context
- 2ಆಗ ದಾವೀದನು -- ಲೇವಿಯರ ಹೊರತಾಗಿ ಮತ್ತಾರೂ ದೇವರ ಮಂಜೂಷವನ್ನು ಹೊರಬಾರದು; ಯಾಕಂದರೆ ದೇವರ ಮಂಜೂಷವನ್ನು ಹೊರಲೂ ಯುಗಯುಗಕ್ಕೆ ಆತನಿಗೆ ಸೇವೆಮಾಡಲೂ ಕರ್ತನು ಅವರನ್ನು ಆರಿಸಿಕೊಂಡಿದ್ದಾನೆ ಅಂದನು.
- 3ದಾವೀ ದನು ಕರ್ತನ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತಕ್ಕೊಂಡು ಬರುವ ನಿಮಿತ್ತ ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲನ್ನು ಕೂಡಿಸಿ ಬರಮಾಡಿದನು.
- 4ಇದಲ್ಲದೆ ದಾವೀದನು ಆರೋನನ ಮಕ್ಕಳನ್ನೂ ಲೇವಿಯರನ್ನೂ ಬರಮಾಡಿದನು.
- 5ಕೆಹಾತನ ಕುಮಾರರಲ್ಲಿ ಮುಖ್ಯಸ್ಥನಾದ ಉರೀ ಯೇಲನೂ ಅವನ ಸಹೋದರರಾದ ನೂರ ಇಪ್ಪತ್ತು ಮಂದಿಯೂ;
- 6ಮೆರಾರೀಯ ಕುಮಾರರಲ್ಲಿ ಮುಖ್ಯಸ್ಥ ನಾದ ಅಸಾಯನೂ ಅವನ ಸಹೋದರರಾದ ಇನ್ನೂರ ಇಪ್ಪತ್ತು ಮಂದಿಯೂ;
Cross references
- 1 Chronicles 6:16–30 1 ಪೂರ್ವಕಾಲವೃತ್ತಾಂತ 6:16–30ಲೇವಿಯ ಕುಮಾರರು--ಗೇರ್ಷೋನನು ಕೆಹಾ ತನು ಮೆರಾರೀಯು. ಗೇರ್ಷೋನನ ಕುಮಾರರ ಹೆಸರುಗಳು--ಲಿಬ್ನೀಯು ಶಿವ್ಮೆಾಯು. ಕೆಹಾತನ ಕುಮಾರರು--ಅಮ್ರಾಮನು ಇಚ್ಹಾರನು ಹೆಬ್ರೋ ನನು ಉಜ್ಜೀಯೇಲನು. ಮೆರಾರೀಯ ಕುಮಾರರುಮಹ್ಲೀಯು ಮೂಷೀಯು. ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರ ವಾಗಿ ಯಾವವೆಂದರೆ-- ಗೇರ್ಷೋನಿನವರು--ಇವನ ಮಗನಾದ ಲಿಬ್ನೀಯು; ಇವನ ಮಗನಾದ ಯಹತ್; ಇವನ ಮಗನಾದ ಜಿಮ್ಮನು; ಇವನ ಮಗನಾದ ಯೋವಾಹನು; ಇವನ ಮಗನಾದ ಇದ್ದೋನು; ಇವನ ಮಗನಾದ ಜೆರಹನು; ಇವನ ಮಗನಾದ ಯೆವತ್ರೈಯನು. ಕೆಹಾತನ ಕುಮಾರರು--ಇವನ ಮಗನಾದ ಅವ್ಮೆಾನದಾಬನು; ಇವನ ಮಗನಾದ ಕೋರಹನು; ಇವನ ಮಗನಾದ ಅಸ್ಸೀರನು; ಇವನ ಮಗನಾದ ಎಲ್ಕಾನನು; ಇವನ ಮಗನಾದ ಎಬ್ಯಾಸಾಫನು; ಇವನ ಮಗನಾದ ಅಸ್ಸೀರನು; ಇವನ ಮಗನಾದ ತಹತನು; ಇವನ ಮಗನಾದ ಊರಿಯೇಲನು; ಇವನ ಮಗನಾದ ಉಜ್ಜೀಯನು; ಇವನ ಮಗನಾದ ಸೌಲನು. ಎಲ್ಕಾನನ ಕುಮಾರರು--ಅಮಾಸೈಯು ಅಹೀಮೋತನು ಎಲ್ಕಾನನು. ಈ ಎಲ್ಕಾನನ ಕುಮಾರರು ಯಾರಂದರೆ -- ಇವನ ಮಗನಾದ ಚೂಫೈಯು; ಇವನ ಮಗನಾದ ನಹತನು; ಇವನ ಮಗನಾದ ಎಲೀಯಾಬನು; ಇವನ ಮಗನಾದ ಯೆರೋಹಾಮನು; ಇವನ ಮಗನಾದ ಎಲ್ಕಾನನು. ಸಮುವೇಲನ ಕುಮಾರರು--ಚೊಚ್ಚಲ ಮಗನಾದ ವಷ್ನಿಯನು, ಅಬೀಯನು. ಮೆರಾರೀಯ ಕುಮಾರರು--ಮಹ್ಲೀಯು ಇವನ ಮಗನಾದ ಲಿಬ್ನೀಯು; ಇವನ ಮಗನಾದ ಶಿವ್ಮೆಾ; ಇವನ ಮಗನಾದ ಉಜ್ಜಾನು; ಇವನ ಮಗನಾದ ಶಿಮ್ಮಾನು; ಇವನ ಮಗನಾದ ಹಗ್ಗೀಯನು; ಇವನ ಮಗನಾದ ಅಸಾಯನು.
- 1 Chronicles 6:49–50 1 ಪೂರ್ವಕಾಲವೃತ್ತಾಂತ 6:49–50ಆದರೆ ಆರೋನನು ಅವನ ಕುಮಾ ರರು ದಹನಬಲಿಯ ಪೀಠದ ಮೇಲೆಯೂ ಧೂಪ ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಾನದ ಸಮಸ್ತ ಕಾರ್ಯಕ್ಕೂ ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕೂ ನೇಮಿಸಲ್ಪಟ್ಟರು. ಆರೋನನ ಕುಮಾರರು-- ಇವನ ಮಗನು ಎಲ್ಲಾಜಾರನು, ಇವನ ಮಗನು ಫಿನೇ ಹಾಸನು, ಇವನ ಮಗನು ಅಬೀಷೂವನು,
- Numbers 3:4 ಅರಣ್ಯಕಾಂಡ 3:4ನಾದಾಬನೂ ಅಬೀಹೂ ಕರ್ತನ ಸಮ್ಮುಖದಲ್ಲಿ ಅನ್ಯಬೆಂಕಿಯನ್ನು ಅರ್ಪಿಸಿದಾಗ ಸೀನಾಯಿ ಅರಣ್ಯದಲ್ಲಿ ಕರ್ತನ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ; ಹೀಗೆ ಎಲ್ಲಾಜಾ ರನು ಈತಾಮಾರನು ತಮ್ಮ ತಂದೆಯಾದ ಆರೋನನ ಎದುರಿನಲ್ಲಿ ಯಾಜಕೋದ್ಯೋಗವನ್ನು ಮಾಡಿದರು.
- 1 Chronicles 12:26–28 1 ಪೂರ್ವಕಾಲವೃತ್ತಾಂತ 12:26–28ಲೇವಿಯ ಮಕ್ಕ ಳಲ್ಲಿ ನಾಲ್ಕು ಸಾವಿರದ ಆರುನೂರು ಮಂದಿ. ಆರೋನಿಯರಲ್ಲಿ ಯೆಹೋಯಾದಾವನು ನಾಯ ಕನಾಗಿದ್ದನು; ಅವನ ಸಂಗಡ ಮೂರು ಸಾವಿರದ ಏಳು ನೂರು ಮಂದಿ; ಇದಲ್ಲದೆ ಬಲವುಳ್ಳ ಪರಾ ಕ್ರಮಶಾಲಿಯಾದ ಪ್ರಾಯಸ್ಥನಾಗಿದ್ದ ಚಾದೋಕನೂ ಅವನ ತಂದೆಯ ಮನೆಯಿಂದ ಇಪ್ಪತ್ತೆರಡು ಮಂದಿ ಪ್ರಧಾನರೂ.
- Exodus 6:16–22 ವಿಮೋಚನಕಾಂಡ 6:16–22ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನ್ ಕೆಹಾತ್ ಮೆರಾರೀ. ಲೇವಿಯು ನೂರ ಮೂವತ್ತೇಳು ವರುಷ ಬದುಕಿದನು. ಗೇರ್ಷೋನನ ಕುಮಾರರು ಅವರ ಗೋತ್ರಗಳಿಗನುಸಾರವಾಗಿ: ಲಿಬ್ನೀ ಶಿವ್ಮೆಾಯರು. ಕೆಹಾತನ ಕುಮಾರರು: ಅಮ್ರಾಮ್ ಇಚ್ಹಾರ್ ಹೆಬ್ರೋನ್ ಉಜ್ಜೀಯೇಲ್. ಕೆಹಾತನು ಜೀವಿಸಿದ ವರುಷಗಳು ನೂರ ಮೂವತ್ತುಮೂರು. ಮೆರಾರೀಯ ಕುಮಾರರು: ಮಹ್ಲೀ ಮೂಷೀ. ವಂಶಾ ವಳಿಗಳ ಪ್ರಕಾರ ಇವರೇ ಲೇವಿಯ ಗೋತ್ರಗಳು. ಅಮ್ರಾಮನು ತನ್ನ ಸೋದರತ್ತೆಯಾದ ಯೋಕೆಬೆ ದಳನ್ನು ಹೆಂಡತಿಯಾಗಿ ತಕ್ಕೊಂಡನು. ಆಕೆಯು ಅವನಿಗೆ ಆರೋನನನ್ನೂ ಮೋಶೆಯನ್ನೂ ಹೆತ್ತಳು. ಅಮ್ರಾಮನು ಜೀವಿಸಿದ ಕಾಲ ನೂರ ಮೂವತ್ತೇಳು ವರುಷಗಳು. ಇಚ್ಹಾರನ ಕುಮಾರರು: ಕೋರಹ ನೆಫೆಗ್ ಜಿಕ್ರೀ. ಉಜ್ಜೀಯೇಲನ ಕುಮಾರರು: ವಿಾಷಾಯೇಲ್ ಎಲ್ಚಾಫಾನ್ ಸಿತ್ರೀ.