1 Chronicles · chapter 16 · verse 18
1 Chronicles 16:18 in Kannada
ಹೇಳಿದ್ದೇನಂದರೆ--ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯ ತೆಯ ಪಾಲಾಗಿ ಕೊಡುವೆನು.
Heliddenandare--ninage kaanaan deshavannu nimma baadhya teya paalaagi koduvenu.
1 Chronicles 16:18 in English
- King James Version (KJV)
- Saying, Unto thee will I give the land of Canaan, the lot of your inheritance;
- World English Bible (WEB)
- saying, “I will give you the land of Canaan, The lot of your inheritance,”
- American Standard Version (ASV)
- Saying, Unto thee will I give the land of Canaan, The lot of your inheritance;
- Bible in Basic English (BBE)
- Saying, To you will I give the land of Canaan, the measured line of your heritage:
- Darby Translation (DBY)
- Saying, Unto thee will I give the land of Canaan, The lot of your inheritance;
- Webster's Bible (WBS)
- Saying, To thee will I give the land of Canaan, the lot of your inheritance;
- Young's Literal Translation (YLT)
- Saying: To thee I give the land of Canaan, The portion of your inheritance,
Read in context
- 16ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನು ಇಸಾಕನಿಗೆ ಇಟ್ಟ ಆಣೆಯನ್ನು ಇದನ್ನು ನಿತ್ಯವೂ ಜ್ಞಾಪಕಮಾಡಿಕೊಳ್ಳಿರಿ.
- 17ಅದನ್ನು ಯಾಕೋಬನಿಗೆ ನೇಮಕವಾಗಿಯೂ ಇಸ್ರಾಯೇಲಿಗೆ ನಿತ್ಯ ಒಡಂಬಡಿಕೆಯಾಗಿಯೂ ಸ್ಥಾಪಿಸಿ
- 18ಹೇಳಿದ್ದೇನಂದರೆ--ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯ ತೆಯ ಪಾಲಾಗಿ ಕೊಡುವೆನು.
- 19ಆಗ ನೀವು ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾಗಿಯೂ ಅದರಲ್ಲಿ ಇದ್ದಿರಿ.
- 20ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಮತ್ತೊಂದಕ್ಕೂ ಹೋಗುತ್ತಿದ್ದರು.
Cross references
- Genesis 13:15 ಆದಿಕಾಂಡ 13:15ನೀನು ನೋಡುವ ದೇಶ ವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.
- Deuteronomy 32:8 ಧರ್ಮೋಪದೇಶಕಾಂಡ 32:8ಮಹೋನ್ನತನು ಜನಾಂಗಗಳಿಗೆ ಸ್ವಾಸ್ತ್ಯ ಹಂಚಿ ಆತನು ಆದಾಮನ ಮಕ್ಕಳನ್ನು ವಿಂಗಡಿಸಿದಾಗ ಇಸ್ರಾ ಯೇಲ್ ಮಕ್ಕಳ ಲೆಕ್ಕದ ಪ್ರಕಾರ ಜನಗಳ ಮೇರೆಗಳನ್ನು ಇಟ್ಟನು.
- Numbers 26:53–56 ಅರಣ್ಯಕಾಂಡ 26:53–56ಇವರಿಗೆ ದೇಶವನ್ನು ಹೆಸರುಗಳ ಲೆಕ್ಕದ ಪ್ರಕಾರ ಸ್ವಾಸ್ತ್ಯವಾಗಿ ಹಂಚಿಕೊಡಬೇಕು. ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು. ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು. ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು.
- Genesis 28:13–14 ಆದಿಕಾಂಡ 28:13–14ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು. ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಆಗುವದು; ನೀನು ಪಶ್ಚಿಮ ಪೂರ್ವ ಉತ್ತರ ದಕ್ಷಿಣಗಳಿಗೆ ಹರಡಿಕೊಳ್ಳುತ್ತೀ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಕುಲದವರು ಆಶೀರ್ವದಿಸಲ್ಪ ಡುವರು.
- Genesis 12:7 ಆದಿಕಾಂಡ 12:7ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಿನ್ನ ಸಂತತಿಗೆ ನಾನು ಈ ದೇಶವನ್ನು ಕೊಡುವೆನು ಅಂದನು. ಆಗ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಕರ್ತನಿಗೆ ಬಲಿಪೀಠವನ್ನು ಕಟ್ಟಿದನು.
- Genesis 35:11–12 ಆದಿಕಾಂಡ 35:11–12ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು. ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು.
- Genesis 17:8 ಆದಿಕಾಂಡ 17:8ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು.
- Micah 2:5 ಮೀಕ 2:5ಆದದರಿಂದ ಕರ್ತನ ಸಭೆಯಲ್ಲಿ ಪಾಲಿಗಾಗಿ ನೂಲು ಹಾಕುವವನು ನಿನಗೆ ಒಬ್ಬನೂ ಇರುವದಿಲ್ಲ.