Genesis · chapter 28 · verse 13
Genesis 28:13 in Kannada
ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು.
Igo, kartanu adara mele nintukondu heliddenandare--ninna tande yaada abrahaamana kartanaada devaroo isaakana devaroo naane, neenu malagiruva bhoomiyannu ninagoo ninna santatigoo koduvenu.
Genesis 28:13 in English
- King James Version (KJV)
- And, behold, the LORD stood above it, and said, I [am] the LORD God of Abraham thy father, and the God of Isaac: the land whereon thou liest, to thee will I give it, and to thy seed;
- World English Bible (WEB)
- Behold, the LORD stood above it, and said, “I am the LORD, the God of Abraham your father, and the God of Isaac. I will give the land you lie on to you and to your offspring.
- American Standard Version (ASV)
- And, behold, Jehovah stood above it, and said, I am Jehovah, the God of Abraham thy father, and the God of Isaac: the land whereon thou liest, to thee will I give it, and to thy seed;
- Bible in Basic English (BBE)
- And he saw the Lord by his side, saying, I am the Lord, the God of Abraham your father, and the God of Isaac: I will give to you and to your seed this land on which you are sleeping.
- Darby Translation (DBY)
- And behold, Jehovah stood above it. And he said, I am Jehovah, the God of Abraham, thy father, and the God of Isaac: the land on which thou liest, to thee will I give it, and to thy seed.
- Webster's Bible (WBS)
- And behold, the LORD stood above it, and said, I [am] the LORD God of Abraham thy father, and the God of Isaac: the land on which thou liest, to thee will I give it, and to thy seed.
- Young's Literal Translation (YLT)
- and lo, Jehovah is standing upon it, and He saith, 'I [am] Jehovah, God of Abraham thy father, and God of Isaac; the land on which thou art lying, to thee I give it, and to thy seed;
Read in context
- 11ಅವನು ಒಂದು ಸ್ಥಳಕ್ಕೆ ಸೇರಿದಾಗ ಸೂರ್ಯಾಸ್ತಮಾನವಾದದ್ದರಿಂದ ಅಲ್ಲಿ ಇಳುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದುಕೊಂಡು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲಿ ಮಲಗಿಕೊಂಡನು.
- 12ಆಗ ಅವನು ಕನಸು ಕಂಡನು. ಇಗೋ, ಏಣಿಯು ಭೂಮಿಯ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದರ ತುದಿಯು ಆಕಾಶಕ್ಕೆ ಮುಟ್ಟಿತ್ತು. ಇಗೋ, ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.
- 13ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು.
- 14ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಆಗುವದು; ನೀನು ಪಶ್ಚಿಮ ಪೂರ್ವ ಉತ್ತರ ದಕ್ಷಿಣಗಳಿಗೆ ಹರಡಿಕೊಳ್ಳುತ್ತೀ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಕುಲದವರು ಆಶೀರ್ವದಿಸಲ್ಪ ಡುವರು.
- 15ಇಗೋ, ನಾನು ನಿನ್ನ ಸಂಗಡ ಇದ್ದು ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಪಾಡಿ ಈ ದೇಶಕ್ಕೆ ನಿನ್ನನ್ನು ತಿರಿಗಿ ಬರಮಾಡುವೆನು. ಯಾಕಂದರೆ ನಾನು ನಿನಗೆ ಹೇಳಿದ್ದನ್ನು ಮಾಡುವ ವರೆಗೆ ನಿನ್ನನ್ನು ಬಿಡುವದಿಲ್ಲ ಅಂದನು.
Cross references
- Genesis 13:15 ಆದಿಕಾಂಡ 13:15ನೀನು ನೋಡುವ ದೇಶ ವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.
- Genesis 35:12 ಆದಿಕಾಂಡ 35:12ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು.
- Genesis 48:3 ಆದಿಕಾಂಡ 48:3ಆಗ ಯಾಕೋಬನು ಯೋಸೇಫ ನಿಗೆ ಸರ್ವಶಕ್ತನಾದ ದೇವರು ಕಾನಾನ್ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು.
- Genesis 26:24 ಆದಿಕಾಂಡ 26:24ಅದೇ ರಾತ್ರಿಯಲ್ಲಿ ಕರ್ತನು ಅವನಿಗೆ ಕಾಣಿಸಿ ಕೊಂಡು--ನಿನ್ನ ತಂದೆಯಾದ ಅಬ್ರಹಾಮನ ದೇವರು ನಾನೇ; ಭಯಪಡಬೇಡ; ನಾನು ನಿನ್ನ ಸಂಗಡ ಇದ್ದೇನೆ; ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು ಅಂದನು.
- Genesis 35:1 ಆದಿಕಾಂಡ 35:1ದೇವರು ಯಾಕೋಬನಿಗೆ--ಎದ್ದು ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು; ನೀನು ನಿನ್ನ ಸಹೋದರನಾದ ಏಸಾವನೆದುರಿನಿಂದ ಓಡಿ ಹೋಗುತ್ತಿದ್ದಾಗ ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟು ಅಂದನು.
- Genesis 12:7 ಆದಿಕಾಂಡ 12:7ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಿನ್ನ ಸಂತತಿಗೆ ನಾನು ಈ ದೇಶವನ್ನು ಕೊಡುವೆನು ಅಂದನು. ಆಗ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಕರ್ತನಿಗೆ ಬಲಿಪೀಠವನ್ನು ಕಟ್ಟಿದನು.
- Exodus 3:6 ವಿಮೋಚನಕಾಂಡ 3:6ಇದಲ್ಲದೆ ಆತನು ಅವನಿಗೆ--ನಾನು ನಿನ್ನ ತಂದೆಯ ದೇವರು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಆಗಿದ್ದೇನೆ ಎಂದು ಹೇಳಿದನು. ಆಗ ಮೋಶೆಯು ದೇವರನ್ನು ನೋಡುವದಕ್ಕೆ ಭಯ ಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.
- Genesis 46:3 ಆದಿಕಾಂಡ 46:3ಆತನು ಅವನಿಗೆ--ನಿನ್ನ ತಂದೆಯ ದೇವರಾಗಿರುವ ದೇವರು ನಾನೇ. ನೀನು ಐಗುಪ್ತಕ್ಕೆ ಇಳಿದು ಹೋಗು ವದಕ್ಕೆ ಭಯಪಡಬೇಡ; ಯಾಕಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡಜನಾಂಗವಾಗ ಮಾಡುವೆನು.
- Hebrews 11:16 ಇಬ್ರಿಯರಿಗೆ 11:16ಆದರೆ ಈಗ ಅವರು ಪರಲೋಕವೆಂಬ ಉತ್ತಮದೇಶವನ್ನು ಹಾರೈಸುವವ ರಾಗಿದ್ದಾರೆ. ಆದದರಿಂದ ದೇವರು ಅವರ ದೇವರೆನಿ ಸಿಕೊಳ್ಳುವದಕ್ಕೆ ನಾಚಿಕೊಳ್ಳದೆ ಅವರಿಗೋಸ್ಕರ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾನೆ.
- Matthew 22:32 ಮತ್ತಾಯನು 22:32ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು.
- Genesis 31:42 ಆದಿಕಾಂಡ 31:42ಅಬ್ರಹಾಮನ ದೇವರೂ ನನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ ನಿಜವಾಗಿಯೂ ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದಿ; ನನ್ನ ಬಾಧೆ ಯನ್ನೂ ನನ್ನ ಕೈ ಕಷ್ಟವನ್ನೂ ದೇವರು ನೋಡಿ ನಿನ್ನೆ ರಾತ್ರಿ ನಿನ್ನನ್ನು ಗದರಿಸಿದನು ಅಂದನು.
- Genesis 35:17 ಆದಿಕಾಂಡ 35:17ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು.