1 Chronicles · chapter 16 · verse 28
1 Chronicles 16:28 in Kannada
ಜನಸಂತತಿಗಳೇ, ಕರ್ತನಿಗೆ ಬಲ ಪ್ರಭಾವವನ್ನೂ ತನ್ನಿರಿ,
Janasantatigale, kartanige bala prabhaavavannoo tanniri,
1 Chronicles 16:28 in English
- King James Version (KJV)
- Give unto the LORD, ye kindreds of the people, give unto the LORD glory and strength.
- World English Bible (WEB)
- Ascribe to the LORD, you families of the peoples, ascribe to the LORD glory and strength!
- American Standard Version (ASV)
- Ascribe unto Jehovah, ye kindreds of the peoples, Ascribe unto Jehovah glory and strength;
- Bible in Basic English (BBE)
- Give to the Lord, O you families of the peoples, give to the Lord glory and strength.
- Darby Translation (DBY)
- Give unto Jehovah, ye families of peoples, Give unto Jehovah glory and strength!
- Webster's Bible (WBS)
- Give to the LORD, ye kindreds of the people, give to the LORD glory and strength.
- Young's Literal Translation (YLT)
- Ascribe to Jehovah, ye families of peoples, Ascribe to Jehovah honour and strength.
Read in context
- 26ಆತನು ಎಲ್ಲಾ ದೇವರುಗಳ ಮೇಲೆ ಭಯಂಕರನೂ. ಯಾಕಂದರೆ ಜನಗಳ ದೇವರುಗಳೆಲ್ಲಾ ಬೊಂಬೆಗಳಾಗಿವೆ. ಆದರೆ ಕರ್ತನು ಆಕಾಶಗಳನ್ನು ಉಂಟುಮಾಡಿದನು.
- 27ಮಹಿ ಮೆಯೂ ಪ್ರಭೆಯೂ ಆತನ ಮುಂದೆ ಅವೆ. ಬಲವೂ ಆನಂದವೂ ಆತನ ಸ್ಥಳದಲ್ಲಿ ಅವೆ.
- 28ಜನಸಂತತಿಗಳೇ, ಕರ್ತನಿಗೆ ಬಲ ಪ್ರಭಾವವನ್ನೂ ತನ್ನಿರಿ,
- 29ಕರ್ತನಿಗೆ ಆತನ ಹೆಸರಿನ ಘನವನ್ನೂ ತನ್ನಿರಿ; ಅರ್ಪಣೆಯನ್ನು ತೆಗೆದುಕೊಂಡು ಆತನ ಮುಂದೆ ಬನ್ನಿರಿ. ಪರಿಶುದ್ಧತ್ವ ವೆಂಬ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ.
- 30ಸಮಸ್ತ ಭೂಮಿಯೇ, ಆತನ ಮುಂದೆ ನಡುಗು. ಲೋಕವು ಸ್ಥಿರವಾಗಿದೆ, ಕದಲುವದಿಲ್ಲ.
Cross references
- 1 Corinthians 15:10 1 ಕೊರಿಂಥದವರಿಗೆ 15:10ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ; ನನಗುಂಟಾದ ಆತನ ಕೃಪೆಯು ನಿಷ್ಪಲವಾಗಲಿಲ್ಲ; ನಾನು ಅವರೆಲ್ಲರಿ ಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು; ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.
- Philippians 4:13 ಫಿಲಿಪ್ಪಿಯವರಿಗೆ 4:13ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು.
- Psalm 100:1–2 ಕೀರ್ತನೆಗಳು 100:1–2ಸಮಸ್ತ ಭೂಮಿಯೇ, ಕರ್ತನಿಗೆ ಜಯಧ್ವನಿ ಮಾಡಿರಿ, ಸಂತೋಷ ದಿಂದ ಕರ್ತನನ್ನು ಸೇವಿಸಿರಿ; ಹಾಡುತ್ತಾ ಆತನ ಮುಂದೆ ಬನ್ನಿರಿ.
- 2 Corinthians 12:9–10 2 ಕೊರಿಂಥದವರಿಗೆ 12:9–10ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು. ಆದದರಿಂದ ನಾನು ಕ್ರಿಸ್ತನ ನಿಮಿತ್ತ ನಿರ್ಬಲಾವಸ್ಥೆಗಳಲ್ಲಿ ಅವಮಾನಗಳಲ್ಲಿ ಕೊರತೆ ಗಳಲ್ಲಿ ಹಿಂಸೆಗಳಲ್ಲಿ ಇಕ್ಕಟ್ಟುಗಳಲ್ಲಿ ಸಂತೋಷವಾಗಿ ದ್ದೇನೆ; ಯಾಕಂದರೆ ನಾನು ಯಾವಾಗ ನಿರ್ಬಲ ನಾಗಿದ್ದೇನೋ ಅವಾಗಲೇ ಬಲವುಳ್ಳವನಾಗಿದ್ದೇನೆ.
- Ephesians 1:17–19 ಎಫೆಸದವರಿಗೆ 1:17–19ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಪೂರ್ಣನಾದ ತಂದೆಯೂ ಆಗಿರುವಾತನು ತನ್ನ ವಿಷಯವಾದ ತಿಳುವಳಿಕೆಗನುಸಾರವಾಗಿ ಜ್ಞಾನ ಪ್ರಕಟನೆಗಳ ಆತ್ಮ ವನ್ನು ನಿಮಗೆ ಅನುಗ್ರಹಿಸುವಂತೆಯೂ ಆತನು ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ ಆತನ ಕರೆಯು ವಿಕೆಯ ನಿರೀಕ್ಷೆಯು ಎಂಥದೆಂಬದನ್ನೂ ಪರಿಶುದ್ಧ ರಲ್ಲಿರುವ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನೂ ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದ ದ್ದೆಂಬದನ್ನೂ ಆತನ ಬಲಾತಿಶಯವು ಎಷ್ಟು ಮಹತ್ತಾದ ದ್ದೆಂಬದನ್ನೂ ನೀವು ತಿಳುಕೊಳ್ಳು ವಂತೆ ಅನುಗ್ರಹಿಸಲಿ.
- Psalm 29:1–2 ಕೀರ್ತನೆಗಳು 29:1–2ಓ ಪರಾಕ್ರಮಶಾಲಿಗಳೇ, ಕರ್ತನಿಗೆ ಘನವನ್ನೂ ಬಲವನ್ನೂ ಸಲ್ಲಿಸಿರಿ; ಕರ್ತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕರ್ತನಿಗೆ ಪರಿಶುದ್ಧತ್ವದ ಸೌಂದರ್ಯದಲ್ಲಿ ಆರಾಧಿಸಿರಿ.
- Psalm 68:34 ಕೀರ್ತನೆಗಳು 68:34ದೇವರ ಬಲವನ್ನು ವಿವರಿಸಿರಿ; ಇಸ್ರಾಯೇಲಿನ ಮೇಲೆ ಆತನಿಗೆ ಘನ ತೆಯೂ ಮೇಘಗಳಲ್ಲಿ ಆತನಿಗೆ ಬಲವೂ ಇರುತ್ತದೆ.ಓ ದೇವರೇ, ನಿನ್ನ ಪರಿಶುದ್ಧ ಸ್ಥಳಗಳಿಂದ ನೀನು ಭಯಂಕರನಾಗಿದ್ದೀ; ಇಸ್ರಾಯೇಲಿನ ದೇವರಾದ ಈತನೇ ಜನರಿಗೆ ಬಲವನ್ನೂ ಶಕ್ತಿಯನ್ನೂ ಕೊಡುತ್ತಾನೆ. ದೇವರಿಗೆ ಸ್ತುತಿಯಾಗಿಲಿ.
- Psalm 66:1–2 ಕೀರ್ತನೆಗಳು 66:1–2ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹ ಧ್ವನಿಗೈಯಿರಿ; ಆತನ ಹೆಸರಿನ ಘನವನ್ನು ಕೀರ್ತಿಸಿರಿ; ಆತನ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
- Psalm 115:1–2 ಕೀರ್ತನೆಗಳು 115:1–2ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ. ಅವರ ದೇವರು ಎಲ್ಲಿ ಎಂದು ಅನ್ಯ ಜನಾಂಗಗಳು ಯಾಕೆ ಹೇಳಬೇಕು?
- Psalm 86:8–10 ಕೀರ್ತನೆಗಳು 86:8–10ಕರ್ತನೇ, ದೇವರುಗಳಲ್ಲಿ ನಿನ್ನ ಹಾಗೆ ಒಬ್ಬನೂ ಇಲ್ಲ; ನಿನ್ನ ಕೆಲಸಗಳ ಹಾಗೆ ಒಂದೂ ಇಲ್ಲ. ಓ ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು. ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.
- 1 Chronicles 29:10–14 1 ಪೂರ್ವಕಾಲವೃತ್ತಾಂತ 29:10–14ಆಗ ದಾವೀದನು ಸಮಸ್ತ ಕೂಟದ ಮುಂದೆ ಕರ್ತನನ್ನು ಕೊಂಡಾಡಿ ಹೇಳಿದ್ದೇನಂದರೆ -- ನಮ್ಮ ತಂದೆ ಯಾದ ಇಸ್ರಾಯೇಲಿನ ದೇವರಾದ ಕರ್ತನೇ, ನೀನು ಯುಗಯುಗಾಂತರಗಳಿಂದ ಯುಗಯುಗಾಂತರ ಗಳಿಗೂ ಸ್ತುತಿಸಲ್ಪಡುವವನಾಗಿದ್ದೀ. ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ. ನೀನು ಸಮಸ್ತವನ್ನು ಆಳುವಾತ ನಾಗಿದ್ದೀ. ಶಕ್ತಿಯೂ ಪರಾಕ್ರಮವೂ ನಿನ್ನ ಕೈಯಲ್ಲಿ ಅವೆ. ಎಲ್ಲರಿಗೂ ದೊಡ್ಡಸ್ತಿಕೆಯನ್ನೂ ಬಲವನ್ನೂ ಕೊಡುವದಕ್ಕೆ ನಿನ್ನ ಕೈಯಲ್ಲಿ ಅದೆ. ಆದದರಿಂದ ನಮ್ಮ ದೇವರೇ, ನಾವು ನಿನ್ನನ್ನು ಸ್ತುತಿಸಿ ನಿನ್ನ ಮಹಿಮೆ ಯುಳ್ಳ ನಾಮವನ್ನು ಕೊಂಡಾಡುತ್ತೇವೆ. ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು.
- Ephesians 1:6 ಎಫೆಸದವರಿಗೆ 1:6ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ.