1 Chronicles · chapter 16 · verse 27
1 Chronicles 16:27 in Kannada
ಮಹಿ ಮೆಯೂ ಪ್ರಭೆಯೂ ಆತನ ಮುಂದೆ ಅವೆ. ಬಲವೂ ಆನಂದವೂ ಆತನ ಸ್ಥಳದಲ್ಲಿ ಅವೆ.
Mahi meyoo prabheyoo aatana munde ave. Balavoo aanandavoo aatana sthaladalli ave.
1 Chronicles 16:27 in English
- King James Version (KJV)
- Glory and honour [are] in his presence; strength and gladness [are] in his place.
- World English Bible (WEB)
- Honor and majesty are before him. Strength and gladness are in his place.
- American Standard Version (ASV)
- Honor and majesty are before him: Strength and gladness are in his place.
- Bible in Basic English (BBE)
- Honour and glory are before him: strength and joy are in his holy place.
- Darby Translation (DBY)
- Majesty and splendour are before him; Strength and gladness in his place.
- Webster's Bible (WBS)
- Glory and honor [are] in his presence; strength and gladness [are] in his place.
- Young's Literal Translation (YLT)
- Honour and majesty [are] before Him, Strength and joy [are] in His place.
Read in context
- 25ಯಾಕಂದರೆ ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ;
- 26ಆತನು ಎಲ್ಲಾ ದೇವರುಗಳ ಮೇಲೆ ಭಯಂಕರನೂ. ಯಾಕಂದರೆ ಜನಗಳ ದೇವರುಗಳೆಲ್ಲಾ ಬೊಂಬೆಗಳಾಗಿವೆ. ಆದರೆ ಕರ್ತನು ಆಕಾಶಗಳನ್ನು ಉಂಟುಮಾಡಿದನು.
- 27ಮಹಿ ಮೆಯೂ ಪ್ರಭೆಯೂ ಆತನ ಮುಂದೆ ಅವೆ. ಬಲವೂ ಆನಂದವೂ ಆತನ ಸ್ಥಳದಲ್ಲಿ ಅವೆ.
- 28ಜನಸಂತತಿಗಳೇ, ಕರ್ತನಿಗೆ ಬಲ ಪ್ರಭಾವವನ್ನೂ ತನ್ನಿರಿ,
- 29ಕರ್ತನಿಗೆ ಆತನ ಹೆಸರಿನ ಘನವನ್ನೂ ತನ್ನಿರಿ; ಅರ್ಪಣೆಯನ್ನು ತೆಗೆದುಕೊಂಡು ಆತನ ಮುಂದೆ ಬನ್ನಿರಿ. ಪರಿಶುದ್ಧತ್ವ ವೆಂಬ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ.
Cross references
- Psalm 96:6 ಕೀರ್ತನೆಗಳು 96:6ಘನವೂ ಪ್ರಭೆಯೂ ಆತನ ಮುಂದೆ ಅವೆ; ಬಲವೂ ಸೌಂದರ್ಯವೂ ಆತನ ಪರಿಶುದ್ಧ ಸ್ಥಳದಲ್ಲಿ ಅವೆ.
- Psalm 16:11 ಕೀರ್ತನೆಗಳು 16:11ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.
- Psalm 43:2–4 ಕೀರ್ತನೆಗಳು 43:2–4ನೀನು ನನ್ನ ಬಲವಾದ ದೇವರಾಗಿದ್ದೀ; ಯಾಕೆ ನನ್ನನ್ನು ತಳ್ಳಿ ಬಿಟ್ಟಿದ್ದೀ? ಯಾಕೆ ನಾನು ಶತ್ರುವಿನ ಬಾಧೆಯಲ್ಲಿ ಇದ್ದು ದುಃಖದಲ್ಲಿ ನಡೆದುಕೊಳ್ಳಬೇಕು? ನಿನ್ನ ಬೆಳ ಕನ್ನೂ ಸತ್ಯವನ್ನೂ ಕಳುಹಿಸು; ಅವು ನನ್ನನ್ನು ನಡಿಸಿ ನಿನ್ನ ಪರಿಶುದ್ಧ ಪರ್ವತಕ್ಕೂ ಗುಡಾರಗಳಿಗೂ ನನ್ನನ್ನು ಬರಮಾಡಲಿ. ಆಗ ದೇವರ ಬಲಿಪೀಠದ ಬಳಿಗೂ ನನ್ನ ಅಧಿಕ ಸಂತೋಷವಾದ ದೇವರ ಬಳಿಗೂ ಬಂದು ಹೌದು, ಕಿನ್ನರಿಯಿಂದ, ನನ್ನ ದೇವರಾದ ಓ ದೇವರೇ, ನಿನ್ನನ್ನು ಕೊಂಡಾಡುವೆನು.ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
- Psalm 28:7–8 ಕೀರ್ತನೆಗಳು 28:7–8ಕರ್ತನು ನನ್ನ ಬಲವೂ ಗುರಾಣಿಯೂ ಆಗಿದ್ದಾನೆ; ನನ್ನ ಹೃದಯವು ಆತನಲ್ಲಿ ಭರವಸವಿಟ್ಟದ್ದರಿಂದ ಸಹಾಯ ಹೊಂದಿದೆನು; ಆದದರಿಂದ ನನ್ನ ಹೃದಯವು ಬಹಳವಾಗಿ ಉತ್ಸಾಹ ಪಡುವದು; ನನ್ನ ಹಾಡಿನಿಂದ ಆತನನ್ನು ಕೊಂಡಾ ಡುವೆನು. ಕರ್ತನು ಅವರಿಗೆ ಬಲವಾಗಿದ್ದಾನೆ; ತನ್ನ ಅಭಿಷಕ್ತನ ರಕ್ಷಣೆಯ ಬಲವು ಆತನೇ.ನಿನ್ನ ಜನ ರನ್ನು ರಕ್ಷಿಸು; ನಿನ್ನ ಸ್ವಾಸ್ಥ್ಯವನ್ನು ಆಶೀರ್ವದಿಸು; ಅವರನ್ನು ಪರಿಪಾಲಿಸುತ್ತಾ ಯುಗಯುಗಕ್ಕೂ ಅವ ರನ್ನು ಮೇಲಕ್ಕೆ ಎತ್ತು.
- Psalm 63:2–3 ಕೀರ್ತನೆಗಳು 63:2–3ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ. ನಿನ್ನ ಪ್ರೀತಿ ಕರುಣೆಯು ಜೀವಕ್ಕಿಂತ ಶ್ರೇಷ್ಠ ವಾದದ್ದು; ನನ್ನ ತುಟಿಗಳು ನಿನ್ನನ್ನು ಹೊಗಳುವವು.
- Psalm 8:1 ಕೀರ್ತನೆಗಳು 8:1ನಮ್ಮ ದೇವರಾದ ಓ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ. ನಿನ್ನ ಮಹಿಮೆಯನ್ನು ಆಕಾಶಗಳ ಮೇಲೆ ಇರಿಸಿದ್ದೀ.
- Psalm 27:4–6 ಕೀರ್ತನೆಗಳು 27:4–6ಒಂದ ನ್ನೇ ಕರ್ತನಿಂದ ಬಯಸಿದೆನು, ಅದನ್ನೇ ಹುಡುಕುವೆನು; ಕರ್ತನ ರಮ್ಯತೆಯನ್ನು ದೃಷ್ಟಿಸುವದೂ ಆತನ ಮಂದಿರ ದಲ್ಲಿ ವಿಚಾರಿಸುವದೂ ನನ್ನ ಜೀವನದ ದಿನಗಳಲ್ಲೆಲ್ಲಾ ಕರ್ತನ ಆಲಯದಲ್ಲಿ ವಾಸಮಾಡುವದೂ ಆಗಿದೆ. ಕೇಡಿನ ಸಮಯದಲ್ಲಿ ಆತನು ತನ್ನ ಗುಡಾರದಲ್ಲಿ ನನ್ನನ್ನು ಬಚ್ಚಿಡುವನು. ತನ್ನ ಗುಪ್ತವಾದ ಡೇರೆಯಲ್ಲಿ ನನ್ನನ್ನು ಮರೆಮಾಡುವನು; ಬಂಡೆಯ ಮೇಲೆ ನನ್ನನ್ನು ನಿಲ್ಲಿಸುವನು. ಈಗ ನನ್ನ ಸುತ್ತಲಿರುವ ಶತ್ರುಗಳ ಮೇಲೆ ನನ್ನ ತಲೆಯು ಎತ್ತಲ್ಪಟ್ಟಿರುವದು. ಆದದರಿಂದ ಆತನ ಗುಡಾರದಲ್ಲಿ ಉತ್ಸಾಹದ ಬಲಿಗಳನ್ನು ಅರ್ಪಿ ಸುವೆನು; ಹೌದು, ಕರ್ತನಿಗೆ ಹಾಡಿ ಕೀರ್ತಿಸುವೆನು.
- John 17:24 ಯೋಹಾನನು 17:24ತಂದೆ ಯೇ, ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನೀನು ನನಗೆ ಕೊಟ್ಟವರು ಸಹ ನೋಡುವ ಹಾಗೆಯೂ ನಾನಿರುವಲ್ಲಿ ಅವರು ನನ್ನೊಂದಿಗೆ ಇರುವಂತೆಯೂ ನಾನು ಇಚ್ಛೈಸುತ್ತೇನೆ. ಜಗದುತ್ಪತ್ತಿಗೆ ಮುಂಚೆ ನೀನು ನನ್ನನ್ನು ಪ್ರೀತಿಸಿದಿ.