1 Chronicles · chapter 2 · verse 7
1 Chronicles 2:7 in Kannada
ಕರ್ವಿಾಯ ಮಕ್ಕಳು--ಶಪಿಸಲ್ಪಟ್ಟಿ ದ್ದರಲ್ಲಿ ಅಕೃತ್ಯಮಾಡಿ ಇಸ್ರಾಯೇಲನ್ನು ತೊಂದರೆ ಪಡಿಸುವವನಾದ ಆಕಾರನು.
Karviాya makkalu--shapisalpatti ddaralli akrutyamaadi israayelannu tondare padisuvavanaada aakaaranu.
1 Chronicles 2:7 in English
- King James Version (KJV)
- And the sons of Carmi; Achar, the troubler of Israel, who transgressed in the thing accursed.
- World English Bible (WEB)
- The son of Carmi: Achar, the troubler of Israel, who committed a trespass in the devoted thing.
- American Standard Version (ASV)
- And the sons of Carmi: Achar, the troubler of Israel, who committed a trespass in the devoted thing.
- Bible in Basic English (BBE)
- And the sons of Carmi: Achan, the troubler of Israel, who did wrong about the cursed thing.
- Darby Translation (DBY)
- And the sons of Carmi: Achar, the troubler of Israel, who transgressed in the accursed thing.
- Webster's Bible (WBS)
- And the sons of Carmi; Achar, the troubler of Israel, who transgressed in the thing accursed.
- Young's Literal Translation (YLT)
- And sons of Carmi: Achar, troubler of Israel, who trespassed in the devoted thing.
Read in context
- 5ಪೆರೆಚನ ಮಕ್ಕಳು--ಹೆಚ್ರೋನನು, ಹಾಮುಲನು;
- 6ಜೆರಹನ ಮಕ್ಕಳು ಜಿಮ್ರಿಯು, ಏತಾನನು, ಹೇಮಾನನು, ಕಲ್ಕೋಲನು, ದಾರನನು ಇವರೆಲ್ಲರು ಐದು ಮಂದಿ.
- 7ಕರ್ವಿಾಯ ಮಕ್ಕಳು--ಶಪಿಸಲ್ಪಟ್ಟಿ ದ್ದರಲ್ಲಿ ಅಕೃತ್ಯಮಾಡಿ ಇಸ್ರಾಯೇಲನ್ನು ತೊಂದರೆ ಪಡಿಸುವವನಾದ ಆಕಾರನು.
- 8ಏತಾನನ ಮಗನುಅಜರ್ಯನು.
- 9ಹೆಚ್ರೋನನಿಗೆ ಹುಟ್ಟಿದ ಮಕ್ಕಳುಯೇರಹ್ಮೇಲನು, ರಾಮನು, ಕೆಲೂಬಾಯ್.
Cross references
- Joshua 6:18 ಯೆಹೋಶುವ 6:18ನೀವು ಶಾಪ ಕ್ಕೊಳಗಾದವುಗಳನ್ನು ತೆಗೆದುಕೊಂಡಾಗ ನಿಮ್ಮನ್ನು ಶಾಪಕ್ಕೆ ಈಡಾಗಿ ಮಾಡಿಕೊಂಡು ಇಸ್ರಾಯೇಲಿನ ದಂಡನ್ನು ಶಾಪಕ್ಕೆ ಈಡುಮಾಡಿ ತೊಂದರೆಪಡಿಸದ ಹಾಗೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರ್ರಿ.
- Joshua 7:25 ಯೆಹೋಶುವ 7:25ಆಗ ಯೆಹೋಶುವನು ಅವನಿಗೆ--ನೀನು ನಮ್ಮನ್ನು ತೊಂದರೆ ಪಡಿಸಿದ್ದೇನು? ಇಂದು ಕರ್ತನು ನಿನ್ನನ್ನು ತೊಂದರೆ ಪಡಿಸುವನು ಅಂದನು. ಆಗ ಇಸ್ರಾಯೇಲ್ಯ ರೆಲ್ಲರೂ ಅವನ ಮೇಲೆ ಕಲ್ಲೆಸೆದರು. ತರುವಾಯ ಬೆಂಕಿಯಿಂದ ಅವರನ್ನು ಸುಟ್ಟುಬಿಟ್ಟುಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.
- Joshua 22:20 ಯೆಹೋಶುವ 22:20ಜೆರಹನ ಮಗನಾದ ಆಕಾನನು ಶಪಿಸಲ್ಪಟ್ಟದ್ದರಲ್ಲಿ ಅಪರಾಧಮಾಡಿದಾಗ ಈ ರೌದ್ರವು ಎಲ್ಲಾ ಸಭೆಯ ಮೇಲೆ ಬಿತ್ತಲ್ಲವೋ? ಅವನು ಮಾತ್ರ ತನ್ನ ಅಪರಾಧದಲ್ಲಿ ನಾಶವಾಗಲಿಲ್ಲ ಎಂದು ಹೇಳಿದರು.
- Joshua 7:1–5 ಯೆಹೋಶುವ 7:1–5ಯೆಹೂದ ಗೋತ್ರದ ಜೆರಹನ ಮಗನಾದ ಜಬ್ದೀಯ ಮಗನಾದ ಕರ್ವಿಾಯ ಮಗನಾದ ಆಕಾನನು ಶಾಪಕ್ಕೀಡಾದದ್ದರಲ್ಲಿ ಕೆಲವನ್ನು ತೆಗೆದುಕೊಂಡನು. ಈ ಕಾರಣದಿಂದ ಇಸ್ರಾಯೇಲ್ ಮಕ್ಕಳು ಶಾಪಕ್ಕೀಡಾದವರಲ್ಲಿ ಅಪರಾಧಿಗಳಾದರು. ಆದದರಿಂದ ಕರ್ತನ ಕೋಪವು ಇಸ್ರಾಯೇಲ್ ಮಕ್ಕಳ ಮೇಲೆ ಉರಿಯಹತ್ತಿತ್ತು. ಆಗ ಯೆಹೋಶುವನು ಅವರಿಗೆ--ನೀವು ದೇಶ ವನ್ನು ಪಾಳತಿ ನೋಡಿ ಬನ್ನಿರಿ ಎಂದು ಹೇಳಿ ಯೆರಿಕೋ ವಿನಿಂದ ಮನುಷ್ಯರನ್ನು ಬೇತೇಲಿಗೆ ಪೂರ್ವಕಡೆಯಾದ ಬೇತಾವೆನಿನ ಬಳಿಯಲ್ಲಿರುವ ಆಯಿಗೆ ಕಳುಹಿಸಿದನು. ಆಗ ಅವರು ಹೋಗಿ ಆಯಿಯನ್ನು ಪಾಳತಿನೋಡಿ ಯೆಹೋಶುವನ ಬಳಿಗೆ ತಿರಿಗಿ ಬಂದು ಅವನಿಗೆ--ಜನರೆಲ್ಲರೂ ಏರಿಹೋಗದೆ ಇರಲಿ; ಆಯಿಯನ್ನು ಹೊಡೆಯುವದಕ್ಕೆ ಎರಡು ಅಥವಾ ಮೂರು ಸಾವಿರ ಜನರು ಮಾತ್ರವೇ ಹೋಗಲಿ; ಅಲ್ಲಿಗೆ ಹೋಗುವ ಜನರೆಲ್ಲರನ್ನೂ ದಣಿಸಬೇಡ; ಯಾಕಂದರೆ ಸ್ವಲ್ಪ ಜನರು ಮಾತ್ರ ಇದ್ದಾರೆ ಅಂದರು. ಹಾಗೆಯೇ ಜನರಲ್ಲಿ ಹೆಚ್ಚು ಕಡಿಮೆ ಮೂರುಸಾವಿರ ಮಂದಿ ಅಲ್ಲಿಗೆ ಹೋದರು; ಆದರೆ ಅವರು ಆಯಿಯ ಮನುಷ್ಯರ ಮುಂದೆ ಓಡಿಹೋದರು. ಆಯಿ ಮನುಷ್ಯರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಹೊಡೆದು ಹಾಕಿದರು. ಬಾಗಲಿನಿಂದ ಪ್ರಾರಂಭಿಸಿ ಷೆಬಾರಿಮಿನ ವರೆಗೂ ಅವರನ್ನು ಹಿಂದಟ್ಟಿ ಇಳಿದು ಹೋಗುವ ವರೆಗೂ ಅವರನ್ನು ಹೊಡೆದರು. ಆದದ ರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.
- Deuteronomy 13:17 ಧರ್ಮೋಪದೇಶಕಾಂಡ 13:17ಇದಲ್ಲದೆ ನೀನು ನಿನ್ನ ದೇವರಾದ ಕರ್ತನ ಶಬ್ದವನ್ನು ಕೇಳಿ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿ ನಿನ್ನ ದೇವರಾದ ಕರ್ತನ ದೃಷ್ಟಿಯಲ್ಲಿ ಸರಿ ಯಾದದ್ದನ್ನು ಮಾಡಲಾಗಿಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರಿಗಿ ನಿನಗೆ ಕರುಣೆಯನ್ನು ತೋರಿಸಿ ನಿನ್ನ ಮೇಲೆ ಕನಿಕರಪಟ್ಟು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದಂತೆ ನಿನ್ನನ್ನು ಹೆಚ್ಚಿಸುವ ಹಾಗೆ ಆ ಶಾಪವನ್ನು ಹೊಂದಿದ್ದರಲ್ಲಿ ಏನಾದರೂ ನಿನ್ನ ಕೈಗೆ ಅಂಟಿಕೊಳ್ಳಬಾರದು.
- Deuteronomy 7:26 ಧರ್ಮೋಪದೇಶಕಾಂಡ 7:26ನೀನು ಅದರಂತೆ ಶಾಪಕ್ಕೊಳಗಾಗದ ಹಾಗೆ ಅಸಹ್ಯವಾದದ್ದನ್ನು ನಿನ್ನ ಮನೆಗೆ ತಕ್ಕೊಂಡು ಬರ ಬಾರದು; ಅದನ್ನು ಸಂಪೂರ್ಣವಾಗಿ ಅಸಹ್ಯಿಸಬೇಕು; ಸಂಪೂರ್ಣವಾಗಿ ಹೇಸಿಕೊಳ್ಳಬೇಕು; ಯಾಕಂದರೆ ಅದು ಶಪಿಸಲ್ಪಟ್ಟದ್ದೇ.
- Joshua 7:11–15 ಯೆಹೋಶುವ 7:11–15ಇಸ್ರಾಯೇಲ್ಯರು ಪಾಪಮಾಡಿ ನಾನು ನಿಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ವಿಾರಿದರು; ಅವರು ವಂಚನೆಮಾಡಿ ಶಾಪಕ್ಕೀಡಾದ ದ್ದರಲ್ಲಿ ಕಳವುಮಾಡಿ ತೆಗೆದುಕೊಂಡು ಅದನ್ನು ತಮ್ಮ ಸಾಮಾನುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಆದದ ರಿಂದ ಇಸ್ರಾಯೇಲ್ ಮಕ್ಕಳು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನುಕೊಟ್ಟರು. ಯಾಕಂದರೆ ಅವರು ಶಾಪಕ್ಕೀಡಾದರು. ನೀವು ಶಾಪ ಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವದಿಲ್ಲ. ನೀನು ಎದ್ದು ಜನರನ್ನು ಪರಿಶುದ್ಧ ಮಾಡಿ ಹೇಳ ಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ; ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು; ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವ ಪರಿಯಂತರ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ಇಸ್ರಾಯೇಲ್ ಕರ್ತನಾದ ದೇವರು ಹೇಳುತ್ತಾನೆ. ಆದದರಿಂದ ಹೊತ್ತಾರೆಯಲ್ಲಿ ನಿಮ್ಮ ಗೋತ್ರಗಳ ಪ್ರಕಾರವೇ ಸೇರಿ ಬನ್ನಿರಿ. ಆಗ ಕರ್ತನು ಹಿಡಿಯುವ ಗೋತ್ರವು ಕುಟುಂಬದ ಪ್ರಕಾರ ವಾಗಿಯೂ ಕರ್ತನು ಹಿಡಿಯುವ ಕುಟುಂಬವು ಮನೆ ಮನೆಯಾಗಿಯೂ ಕರ್ತನು ಹಿಡಿಯುವ ಮನೆಯಲ್ಲಿ ಒಬ್ಬೊಬ್ಬರಾಗಿಯೂ ಸೇರಲಿ. ಆಗ ಶಾಪಕ್ಕೀಡಾದ ದ್ದನ್ನು ತೆಗೆದುಕೊಂಡವನೆಂದು ಹಿಡಿಯಲ್ಪಡುವವನು ಕರ್ತನ ಒಡಂಬಡಿಕೆಯನ್ನು ವಿಾರಿ ಇಸ್ರಾಯೇಲಿ ನಲ್ಲಿ ಬುದ್ಧಿಹೀನವಾದ ಕಾರ್ಯವನ್ನು ಮಾಡಿದ್ದರಿಂದ ಅವನೂ ಅವನಲ್ಲಿರುವ ಸಮಸ್ತವೂ ಬೆಂಕಿಯಿಂದ ಸುಡಲ್ಪಡಬೇಕು ಅಂದನು.
- 1 Chronicles 4:1 1 ಪೂರ್ವಕಾಲವೃತ್ತಾಂತ 4:1ಯೆಹೂದನ ಕುಮಾರರು--ಪೇರಚನು, ಹೆಚ್ರೋನನು, ಕರ್ವಿಾಯು, ಹೂರನು, ಶೋಬಾಲನು.