1 Chronicles · chapter 7 · verse 27
1 Chronicles 7:27 in Kannada
ಇವನ ಮಗನು ನೋನನು, ಇವನ ಮಗನು ಯೆಹೋಷುವನು.
Ivana maganu nonanu, ivana maganu yehoshuvanu.
1 Chronicles 7:27 in English
- King James Version (KJV)
- Non his son, Jehoshua his son.
- World English Bible (WEB)
- Nun his son, and Joshua his son.
- American Standard Version (ASV)
- Nun his son, Joshua his son.
- Bible in Basic English (BBE)
- Nun his son, Joshua his son.
- Darby Translation (DBY)
- Nun his son, Joshua his son.
- Webster's Bible (WBS)
- Non his son, Jehoshua his son.
- Young's Literal Translation (YLT)
- Non his son, Jehoshua his son.
Read in context
- 25ಬೆರೀಯ ಮಗನು ರೆಫಹ, ಇವನ ಮಗನು ರೆಷೆಫನು; ಇವನಮಗನು ತೆಲಹನು.
- 26ಇವನ ಮಗನು ತಹನ್, ಇವನ ಮಗನು ಲದ್ದಾನ್, ಇವನ ಮಗನು ಅವ್ಮೆಾಹೂದನು, ಇವನ ಮಗನು ಎಲೀಷಾಮನು,
- 27ಇವನ ಮಗನು ನೋನನು, ಇವನ ಮಗನು ಯೆಹೋಷುವನು.
- 28ಅವರ ಸ್ವಾಸ್ಥ್ಯಗಳೂ ನಿವಾಸಗಳೂ ಯಾವ ವೆಂದರೆ, ಬೇತೇಲೂ ಅದರ ಗ್ರಾಮಗಳೂ ಮೂಡಣ ದಿಕ್ಕಿನಲ್ಲಿ ನಾರಾನೂ ಪಡುವಣ ದಿಕ್ಕಿನಲ್ಲಿ ಗೆಜೆರೂ ಅದರ ಗ್ರಾಮಗಳೂ ಶೆಕೆಮೂ ಅದರ ಗ್ರಾಮಗಳೂ ಗಾಜವೂ ಅದರ ಗ್ರಾಮಗಳೂ
- 29ಮನಸ್ಸೆಯ ಮಕ್ಕಳ ಮೇರೆಯಲ್ಲಿರುವ ಬೇತ್ಷಾನೂ ಅದರ ಗ್ರಾಮಗಳೂ ತಾನಾಕವೂ ಅದರ ಗ್ರಾಮಗಳೂ ಮೆಗಿದ್ದೋನೂ ಅದರ ಗ್ರಾಮಗಳೂ ದೋರೂ ಅದರ ಗ್ರಾಮಗಳೂ ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಕುಮಾರರು ವಾಸವಾಗಿದ್ದರು.
Cross references
- Deuteronomy 31:23 ಧರ್ಮೋಪದೇಶಕಾಂಡ 31:23ಆತನು ನೂನನ ಮಗನಾದ ಯೆಹೋಶುವನಿಗೆ ಆಜ್ಞೆಕೊಟ್ಟು--ಬಲವಾಗಿರು; ಧೈರ್ಯವಾಗಿರು; ನಾನು ಇಸ್ರಾಯೇಲ್ ಮಕ್ಕಳಿಗೆ ಪ್ರಮಾಣಮಾಡಿದ ದೇಶಕ್ಕೆ ನೀನು ತರುವಿ; ನಾನು ನಿನ್ನ ಸಂಗಡ ಇರುವೆನು ಅಂದನು.
- Numbers 13:16 ಅರಣ್ಯಕಾಂಡ 13:16ಮೋಶೆಯು ದೇಶವನ್ನು ಪಾಳತಿ ನೋಡುವದಕ್ಕಾಗಿ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶು ವನೆಂದು ಹೆಸರಿಟ್ಟನು.
- Numbers 27:18 ಅರಣ್ಯಕಾಂಡ 27:18ಆಗ ಕರ್ತನು ಮೋಶೆಗೆ--ಆತ್ಮವುಳ್ಳ ಮನುಷ್ಯನಾಗಿರುವ ನೂನನ ಮಗನಾದ ಯೆಹೋಶು ವನನ್ನು ತಕ್ಕೊಂಡು ನಿನ್ನ ಕೈಯನ್ನು ಅವನ ಮೇಲೆ ಇಟ್ಟು
- Numbers 13:8 ಅರಣ್ಯಕಾಂಡ 13:8ಎಫ್ರಾಯಾಮ್ ಗೋತ್ರದ ನೂನನ ಮಗನಾದ ಹೋಶೇಯನು,
- Exodus 17:9–14 ವಿಮೋಚನಕಾಂಡ 17:9–14ಆಗ ಮೋಶೆಯು ಯೆಹೋಶುವನಿಗೆ--ನೀನು ನಮ ಗಾಗಿ ಮನುಷ್ಯರನ್ನು ಆರಿಸಿಕೊಂಡು ಅಮಾಲೇಕ್ಯರ ಸಂಗಡ ಯುದ್ಧಮಾಡುವದಕ್ಕೆ ಹೊರಟುಹೋಗು; ನಾಳೆ ನಾನು ದೇವರ ಕೋಲನ್ನು ಕೈಯಲ್ಲಿ ಹಿಡಿದು ಕೊಂಡು ಗುಡ್ಡದ ಮೇಲೆ ನಿಂತುಕೊಳ್ಳುವೆನು ಅಂದನು. ಮೋಶೆಯು ತನಗೆ ಹೇಳಿದಂತೆ ಯೆಹೋಶುವನು ಅಮಾಲೇಕ್ಯರೊಂದಿಗೆ ಯುದ್ಧಮಾಡಿದನು. ಮೋಶೆ ಯೂ ಆರೋನನೂ ಹೂರನೂ ಗುಡ್ಡದ ಮೇಲೆ ಏರಿಹೋದರು. ಮೋಶೆಯು ತನ್ನ ಕೈಯನ್ನು ಎತ್ತಿದಾಗ ಇಸ್ರಾಯೇಲ್ಯರು ಜಯಿಸಿದರು. ಅವನು ತನ್ನ ಕೈಯನ್ನು ಇಳಿಸಿದಾಗ ಅಮಾಲೇಕ್ಯರು ಜಯಿಸಿದರು. ಆದರೆ ಮೋಶೆಯ ಕೈಗಳು ಭಾರವಾಗಿರಲಾಗಿ ಅವರು ಒಂದು ಕಲ್ಲನ್ನು ತಂದು ಅವನ ಕೆಳಗೆ ಇಟ್ಟಾಗ ಅವನು ಅದರ ಮೇಲೆ ಕೂತುಕೊಂಡನು. ಆರೋನನೂ ಹೂರನೂ ಒಬ್ಬನು ಒಂದು ಕಡೆಯಲ್ಲಿಯೂ ಇನ್ನೊಬ್ಬನು ಇನ್ನೊಂದು ಕಡೆಯಲ್ಲಿಯೂ ಅವನ ಕೈಗಳಿಗೆ ಆಧಾರ ಕೊಟ್ಟರು. ಹೀಗೆ ಸೂರ್ಯನು ಮುಳುಗುವ ವರೆಗೆ ಅವನ ಕೈಗಳು ಇಳಿಯದೇ ಇದ್ದವು. ಯೆಹೋಶು ವನು ಅಮಾಲೇಕ್ಯನನ್ನೂ ಅವನ ಜನರನ್ನೂ ಕತ್ತಿಯಿಂದ ಸೋಲಿಸಿದನು. ಆಗ ಕರ್ತನು ಮೋಶೆಗೆ--ಇದನ್ನು ಜ್ಞಾಪಕಾರ್ಥ ವಾಗಿ ಪುಸ್ತಕದಲ್ಲಿ ಬರೆ; ನಾನು ಅಮಾಲೇಕ್ಯರ ನೆನಪು ಆಕಾಶದ ಕೆಳಗೆ ಇರದಂತೆ ಸಂಪೂರ್ಣವಾಗಿ ಅಳಿಸಿ ಬಿಡುವೆನು. ಇದನ್ನು ತಿರಿಗಿ ಯೆಹೋಶುವನಿಗೆ ಹೇಳು ಅಂದನು.
- Exodus 24:13 ವಿಮೋಚನಕಾಂಡ 24:13ಆಗ ಮೋಶೆಯೂ ಅವನ ಸೇವಕನಾದ ಯೆಹೋಶುವನೂ ಎದ್ದು ನಿಂತರು. ಮೋಶೆಯಾ ದರೋ ದೇವರ ಬೆಟ್ಟವನ್ನು ಏರಿದನು.
- Exodus 32:17 ವಿಮೋಚನಕಾಂಡ 32:17ಜನರು ಕೂಗುತ್ತಿದ್ದ ಶಬ್ದವನ್ನು ಯೆಹೋಶುವನು ಕೇಳಿದಾಗ ಮೋಶೆಗೆ--ಪಾಳೆಯದಲ್ಲಿ ಯುದ್ಧದ ಶಬ್ದವು ಇದೆ ಎಂದು ಹೇಳಿದನು.
- Numbers 11:28 ಅರಣ್ಯಕಾಂಡ 11:28ಅದಕ್ಕೆ ತನ್ನ ಯೌವನಸ್ಥರಲ್ಲಿ ಒಬ್ಬನೂ ಮೋಶೆಯ ಸೇವಕನೂ ಆಗಿದ್ದ ನೂನನ ಮಗನಾದ ಯೆಹೋಶುವನು ಹೇಳಿದ್ದೇನಂದರೆ--ನನ್ನ ಒಡೆಯನಾದ ಮೋಶೆಯೇ, ಅವರನ್ನು ತಡೆ ಅಂದನು.
- Acts 7:45 ಅಪೊಸ್ತಲರ ಕೃತ್ಯಗಳು 7:45ತರುವಾಯ ಬಂದ ನಮ್ಮ ಪಿತೃಗಳು ಸಹ ತಮ್ಮ ಮುಂದೆ ದೇವರು ಹೊರಡಿಸಿದ ಅನ್ಯಜನಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಂಡಾಗ ಯೆಹೋಶುವನ ಕೂಡ ಆ ಗುಡಾರವನ್ನು ತಂದರು. ಅದು ದಾವೀದನ ಕಾಲದ ವರೆಗೂ ಅಲ್ಲೇ ಇತ್ತು.
- Hebrews 4:8 ಇಬ್ರಿಯರಿಗೆ 4:8ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ.
- Numbers 14:6 ಅರಣ್ಯಕಾಂಡ 14:6ಆಗ ದೇಶವನ್ನು ಪಾಳತಿ ನೋಡಿದವರಲ್ಲಿದ್ದ ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಕೊಂಡು