Acts · chapter 7 · verse 45
Acts 7:45 in Kannada
ತರುವಾಯ ಬಂದ ನಮ್ಮ ಪಿತೃಗಳು ಸಹ ತಮ್ಮ ಮುಂದೆ ದೇವರು ಹೊರಡಿಸಿದ ಅನ್ಯಜನಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಂಡಾಗ ಯೆಹೋಶುವನ ಕೂಡ ಆ ಗುಡಾರವನ್ನು ತಂದರು. ಅದು ದಾವೀದನ ಕಾಲದ ವರೆಗೂ ಅಲ್ಲೇ ಇತ್ತು.
Taruvaaya banda namma pitrugalu saha tamma munde devaru horadisida anyajanagala svaastyavannu svaadheena maadikondaaga yehoshuvana kooda aa gudaaravannu tandaru. Adu daaveedana kaalada varegoo alle ittu.
Acts 7:45 in English
- King James Version (KJV)
- Which also our fathers that came after brought in with Jesus into the possession of the Gentiles, whom God drave out before the face of our fathers, unto the days of David;
- World English Bible (WEB)
- which also our fathers, in their turn, brought in with Joshua when they entered into the possession of the nations whom God drove out before the face of our fathers to the days of David,
- American Standard Version (ASV)
- Which also our fathers, in their turn, brought in with Joshua when they entered on the possession of the nations, that God thrust out before the face of our fathers, unto the days of David;
- Bible in Basic English (BBE)
- Which our fathers, in their turn, took with them when, with Joshua, they came into the heritage of the nations whom God was driving out before the face of our fathers, till the time of David,
- Darby Translation (DBY)
- which also our fathers, receiving from their predecessors, brought in with Joshua when they entered into possession of [the lands of] the nations, whom God drove out from [the] face of our fathers, until the days of David;
- Webster's Bible (WBS)
- Which also our fathers, that came after, brought in with Jesus into the possession of the Gentiles, whom God drove out before the face of our fathers, to the days of David;
- Young's Literal Translation (YLT)
- which also our fathers having in succession received, did bring in with Joshua, into the possession of the nations whom God did drive out from the presence of our fathers, till the days of David,
Read in context
- 43ಹೌದು, ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನು ರೊಂಫಾ ದೇವತೆಯ ನಕ್ಷತ್ರವನ್ನೂ ಹೊತ್ತುಕೊಂಡು ಹೋದಿರಿ. ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಅಟ್ಟಿಬಿಡುವೆನು ಎಂಬದು.
- 44ಸಾಕ್ಷೀಗುಡಾರವು ಅಡವಿಯೊಳಗೆ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ಮೋಶೆಯ ಸಂಗಡ ಮಾತನಾಡಿದಾತನು ಅವನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸ ಬೇಕೆಂದು ನೇಮಿಸಿದ್ದನು.
- 45ತರುವಾಯ ಬಂದ ನಮ್ಮ ಪಿತೃಗಳು ಸಹ ತಮ್ಮ ಮುಂದೆ ದೇವರು ಹೊರಡಿಸಿದ ಅನ್ಯಜನಗಳ ಸ್ವಾಸ್ತ್ಯವನ್ನು ಸ್ವಾಧೀನ ಮಾಡಿಕೊಂಡಾಗ ಯೆಹೋಶುವನ ಕೂಡ ಆ ಗುಡಾರವನ್ನು ತಂದರು. ಅದು ದಾವೀದನ ಕಾಲದ ವರೆಗೂ ಅಲ್ಲೇ ಇತ್ತು.
- 46ದಾವೀದನು ದೇವರ ಸನ್ನಿಧಾನದಲ್ಲಿ ದಯೆ ಹೊಂದಿ ಯಾಕೋಬನ ದೇವರಿಗೋಸ್ಕರ ಆಲಯ ವನ್ನು ಕಟ್ಟಬೇಕೆಂದು ಅಪೇಕ್ಷಿಸಿದನು.
- 47ಆದರೆ ಸೊಲೊಮೋನನು ಆತನಿಗೋಸ್ಕರ ಮನೆಯನ್ನು ಕಟ್ಟಿಸಿದನು.
Cross references
- Psalm 44:2 ಕೀರ್ತನೆಗಳು 44:2ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.
- Joshua 18:1 ಯೆಹೋಶುವ 18:1ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಶೀಲೋವಿನಲ್ಲಿ ಒಟ್ಟುಗೂಡಿ ಅಲ್ಲಿ ಸಭೆಯ ಗುಡಾರವನ್ನು ನಿಲ್ಲಿಸಿದರು. ದೇಶವು ಅವರ ವಶವಾಯಿತು.
- Joshua 23:9 ಯೆಹೋಶುವ 23:9ಕರ್ತನು ನಿಮ್ಮ ಮುಂದೆ ಬಲವಾದ ದೊಡ್ಡ ಜನಾಂಗಗಳನ್ನು ಹೊರಡಿಸಿಬಿಟ್ಟನು. ಆದರೆ ನಿಮ್ಮ ಮುಂದೆ ಈ ವರೆಗೂ ಒಬ್ಬರಾದರೂ ನಿಲ್ಲಲಾರದೆ ಹೋದರು.
- Joshua 24:18 ಯೆಹೋಶುವ 24:18ಇದಲ್ಲದೆ ದೇಶದಲ್ಲಿ ವಾಸವಾಗಿದ್ದ ಅಮೋರಿಯರ ಸಕಲ ಜನಗಳನ್ನು ಕರ್ತನು ನಮ್ಮ ಮುಂದೆ ಹೊರಡಿಸಿ ಬಿಟ್ಟನು. ಆದದರಿಂದ ನಾವು ಕರ್ತನನ್ನೇ ಸೇವಿಸುವೆವು; ಆತನು ನಮ್ಮ ದೇವರು ಅಂದರು.
- Acts 13:19 ಅಪೊಸ್ತಲರ ಕೃತ್ಯಗಳು 13:19ಕಾನಾನ್ ದೇಶದಲ್ಲಿದ್ದ ಏಳು ಜನಾಂಗ ಗಳನ್ನು ನಿರ್ಮೂಲ ಮಾಡಿದ ಮೇಲೆ ಚೀಟು ಹಾಕಿ ಆ ದೇಶವನ್ನು ಅವರಿಗೆ ಹಂಚಿಕೊಟ್ಟನು.
- Nehemiah 9:24 ನೆಹೆಮೀಯ 9:24ಹೀಗೆ ಮಕ್ಕಳು ಪ್ರವೇಶಿಸಿ ದೇಶವನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಕುಗ್ಗಿಸಿ ಅವರಿಗೆ ತಮ್ಮ ಇಚ್ಛೆಯ ಪ್ರಕಾರ ಮಾಡುವದಕ್ಕೆ ಅವರನ್ನೂ ಅವರ ಅರಸುಗಳನ್ನೂ ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿ.
- 1 Kings 8:4 1 ಅರಸುಗಳು 8:4ಯಾಜಕರೂ ಲೇವಿಯರೂ ಇವುಗಳನ್ನು ತಂದರು.
- Joshua 3:11–17 ಯೆಹೋಶುವ 3:11–17ಇಗೋ, ಸಮಸ್ತ ಭೂಮಿಗೆ ಕರ್ತನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದೆ ಯೊರ್ದನನ್ನು ದಾಟಿಹೋಗುವದು. ಆದದರಿಂದ ಈಗ ಇಸ್ರಾಯೇಲ್ ಗೋತ್ರಗಳಲ್ಲಿ ಹನ್ನೆರಡು ಮಂದಿ ಯನ್ನು ಒಂದೊಂದು ಗೋತ್ರಕ್ಕೆ ಒಬ್ಬೊಬ್ಬನಂತೆ ನೀವು ತಕ್ಕೊಳ್ಳಿರಿ. ಆಗ ಆಗುವದೇನಂದರೆ, ಸಮಸ್ತ ಭೂಮಿಗೂ ಕರ್ತನಾಗಿರುವ ಕರ್ತನ ಆ ಮಂಜೂಷ ವನ್ನು ಹೊರುವ ಯಾಜಕರ ಅಂಗಾಲುಗಳು ಯೊರ್ದ ನಿನ ನೀರಲ್ಲಿ ಇಟ್ಟಾಗಲೇ ನದಿಯ ನೀರು ಭೇದಿಸಲ್ಪಟ್ಟು ಮೇಲಿನಿಂದ ಹರಿದು ಬರುವ ನೀರು ಹರಿಯದೆ ರಾಶಿಯಾಗಿ ನಿಲ್ಲುವದು ಎಂದು ಹೇಳಿದನು. ಜನರು ಯೊರ್ದನನ್ನು ದಾಟಲು ತಮ್ಮ ಗುಡಾರ ಗಳಿಂದ ಹೊರಟರು. ಯಾಜಕರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಯೊರ್ದನಿನ ಬಳಿಗೆ ಬಂದರು. ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡವಿಾರಿ ಹರಿಯುವ ಯೊರ್ದನ್ ಹೊಳೆಯ ನೀರು ನಿಂತು ಹೋಯಿತು. ಮೇಲಿನಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಹೊಂದಿದ ಆದಾಮ್ ಪಟ್ಟಣದ ಹತ್ತಿರ ಬಂದು ರಾಶಿಯಾಗಿ ನಿಂತಿತು. ಕೆಳಗಣ ನೀರು ಉಪ್ಪು ಸಮುದ್ರವೆಂಬ ಸಮುದ್ರಕ್ಕೆ ಹರಿದು ಹೋಯಿತು.ಆಗ ಜನರೆಲ್ಲರು ಯೊರ್ದನನ್ನು ದಾಟುವ ವರೆಗೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ಒಣಗಿದ ಭೂಮಿಯ ಮಧ್ಯದಲ್ಲಿ ಧೃಡವಾಗಿ ನಿಂತಿದ್ದರು. ಆಗ ಜನರೆಲ್ಲರು ಯೊರ್ದನನ್ನು ದಾಟುವ ವರೆಗೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ಒಣಗಿದ ಭೂಮಿಯ ಮಧ್ಯದಲ್ಲಿ ಧೃಡವಾಗಿ ನಿಂತಿದ್ದರು.
- 1 Samuel 4:4 1 ಸಮುವೇಲನು 4:4ಹಾಗೆಯೇ ಜನರನ್ನು ಕೆರೂಬಿಗಳ ಮಧ್ಯ ದಲ್ಲಿರುವ ಸೈನ್ಯಗಳ ಕರ್ತನ ಒಡಂಬಡಿಕೆಯ ಮಂಜೂ ಷವನ್ನು ತಕ್ಕೊಂಡು ಬರುವಂತೆ ಶೀಲೋವಿಗೆ ಕಳು ಹಿಸಿದರು. ಅಲ್ಲಿ ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ದೇವರ ಒಡಂಬಡಿಕೆಯ ಮಂಜೂಷದ ಬಳಿಯಲ್ಲಿದ್ದರು;
- 1 Chronicles 16:39 1 ಪೂರ್ವಕಾಲವೃತ್ತಾಂತ 16:39ಯಾವಾಗಲೂ ಉದಯ ಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ದಹನಬಲಿ ಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಕರ್ತನು ಇಸ್ರಾಯೇಲಿಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡು ವದಕ್ಕೂ
- 2 Samuel 6:1–23 2 ಸಮುವೇಲನು 6:1–23ದಾವೀದನು ಇಸ್ರಾಯೇಲಿನಲ್ಲಿ ಆಯಲ್ಪಟ್ಟ ಮೂವತ್ತು ಸಾವಿರ ಜನರನ್ನು ಕೂಡಿಸಿ ಕೊಂಡು ಎದ್ದು ತನ್ನ ಸಂಗಡ ಇದ್ದ ಎಲ್ಲಾ ಜನರನ್ನು ಕರಕೊಂಡು ಕೆರೂಬಿಗಳ ಮಧ್ಯದಲ್ಲಿ ವಾಸವಾಗಿ ರುವ ಸೈನ್ಯಗಳ ಕರ್ತನೆಂಬ ಹೆಸರುಳ್ಳ ದೇವರ ಮಂಜೂ ಷವನ್ನು ಯೆಹೂದದ ಬಾಳಾದಿಂದ ತರುವದಕ್ಕೆ ಹೊರಟನು. ಆಗ ಅವರು ಗಿಬ್ಯದಲ್ಲಿರುವ ಅಬೀನಾ ದಾಬನ ಮನೆಯೊಳಗಿಂದ ದೇವರ ಮಂಜೂಷವನ್ನು ತೆಗೆದುಕೊಂಡು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಹೊಸ ಬಂಡಿಯನ್ನು ನಡಿಸಿದರು. ಗಿಬ್ಯ ದಲ್ಲಿದ್ದ ಅಬೀನಾದಾಬನ ಮನೆಯೊಳಗಿಂದ ಅದನ್ನು ಹೊರಗೆ ತಂದು ಅವರು ಅದರ ಸಂಗಡ ಹೋಗು ತ್ತಿರುವಾಗ ಅಹಿಯೋವನು ಮಂಜೂಷದ ಮುಂದೆ ನಡೆದನು. ದಾವೀದನೂ ಇಸ್ರಾಯೇಲ್ ಮನೆ ಯವರೆಲ್ಲರೂ ತುರಾಯಿ ಮರದಿಂದ ಮಾಡಲ್ಪಟ್ಟ ಸಕಲ ವಾದ್ಯಗಳಾದ ಕಿನ್ನರಿಗಳನ್ನೂ ವೀಣೆಗಳನ್ನೂ ದಮ್ಮಡಿಗಳನ್ನೂ ಸ್ವರಮಂಡಲಗಳನ್ನೂ ತಾಳಗಳನ್ನೂ ಕರ್ತನ ಮುಂದೆ ಬಾರಿಸಿಕೊಂಡು ಹೋದರು. ಅವರು ನಾಕೋನನ ಕಣದ ಬಳಿಗೆ ಬಂದಾಗ ಉಜ್ಜನು ದೇವರ ಮಂಜೂಷವನ್ನು ಹಿಡಿಯುವದಕ್ಕೆ ತನ್ನ ಕೈಚಾಚಿ ಅದನ್ನು ಹಿಡಿದನು. ಯಾಕಂದರೆ ಎತ್ತುಗಳು ಎಡವಿದವು. ಆಗ ಕರ್ತನ ಕೋಪವು ಉಜ್ಜನ ಮೇಲೆ ಉರಿಯಿತು; ದೇವರು ಅವನ ಅಪ ರಾಧಕ್ಕೋಸ್ಕರ ಅವನನ್ನು ಹೊಡೆದನು; ಅಲ್ಲಿ ಅವನು ದೇವರ ಮಂಜೂಷದ ಬಳಿಯಲ್ಲಿ ಸತ್ತನು. ಕರ್ತನು ಉಜ್ಜನನ್ನು ಹರಿದುಬಿಟ್ಟಿದ್ದರಿಂದ ದಾವೀದನು ವ್ಯಥೆ ಗೊಂಡು ಆ ಸ್ಥಳಕ್ಕೆ ಇಂದಿನ ವರೆಗೂ ಪೆರೆಚುಜ್ಜಾ ಎಂದು ಹೆಸರಿಟ್ಟನು. ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ಕರ್ತನ ಮಂಜೂಷವು ನನ್ನ ಬಳಿಗೆ ಬರುವದು ಹೇಗೆ ಅಂದನು. ದಾವೀದನು ಕರ್ತನ ಮಂಜೂಷವನ್ನು ತಾನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ ಗತ್ ಊರಿನ ಒಬೇದೆದೋಮನ ಮನೆಗೆ ಹೊತ್ತುಕೊಂಡು ಹೋದನು. ಕರ್ತನ ಮಂಜೂ ಷವು ಗತ್ ಊರಿನ ಒಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇದ್ದದ್ದರಿಂದ ಕರ್ತನು ಒಬೇದೆ ದೋಮನನ್ನೂ ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದನು. ದೇವರ ಮಂಜೂಷದ ನಿಮಿತ್ತ ಕರ್ತನು ಒಬೇ ದೆದೋಮನ ಮನೆಯನ್ನೂ ಅವನಿಗೆ ಉಂಟಾದ ದ್ದೆಲ್ಲವನ್ನೂ ಆಶೀರ್ವದಿಸಿದ್ದಾನೆಂದು ಅರಸನಾದ ದಾವೀದನಿಗೆ ತಿಳಿಸಲ್ಪಟ್ಟಿತು. ಆಗ ದಾವೀದನು ಹೊರಟು ಹೋಗಿ ದೇವರ ಮಂಜೂಷವನ್ನು ಒಬೇ ದೆದೋಮನ ಮನೆಯಿಂದ ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು. ಕರ್ತನ ಮಂಜೂಷ ವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ ಅವನು ಎತ್ತುಗಳನ್ನೂ ಕೊಬ್ಬಿದ ಪಶು ಗಳನ್ನೂ ಬಲಿಯಾಗಿ ಕೊಟ್ಟನು. ಇದಲ್ಲದೆ ದಾವೀ ದನು ನಾರಿನ ಎಫೋದನ್ನು ಧರಿಸಿಕೊಂಡು ತನ್ನ ಪೂರ್ಣ ಬಲದಿಂದ ಕರ್ತನ ಮುಂದೆ ನಾಟ್ಯವಾ ಡಿದನು. ಈ ಪ್ರಕಾರ ದಾವೀದನೂ ಇಸ್ರಾಯೇಲ್ ಮನೆಯವರೆಲ್ಲರೂ ಕರ್ತನ ಮಂಜೂಷವನ್ನು ಆರ್ಭಟ ದಿಂದಲೂ ತುತೂರಿಯ ಶಬ್ದದಿಂದಲೂ ಬರಮಾಡಿ ದರು. ಆದರೆ ಕರ್ತನ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ ಸೌಲನ ಮಗಳಾದ ವಿಾಕಲಳು ಕಿಟಿಕಿಯಿಂದ ನೋಡಿ ಅರಸನಾದ ದಾವೀ ದನು ಕರ್ತನ ಮುಂದೆ ಜಿಗಿಯುತ್ತಾ ನಾಟ್ಯವಾಡು ವದನ್ನು ಕಂಡು ತನ್ನ ಹೃದಯದಲ್ಲಿ ಅವನನ್ನು ತಿರಸ್ಕ ರಿಸಿದಳು. ಅವರು ಕರ್ತನ ಮಂಜೂಷವನ್ನು ಒಳಗೆ ತಂದು ದಾವೀದನು ಹಾಕಿಸಿದ ಗುಡಾರದೊಳಗೆ ಅದರ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ ದಾವೀದನು ಕರ್ತನ ಸನ್ನಿಧಿಯಲ್ಲಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು. ದಾವೀದನು ದಹನಬಲಿಗಳನ್ನೂ ಸಮಾಧಾನದಬಲಿಗಳನ್ನೂ ಅರ್ಪಿಸಿ ತೀರಿಸಿದ ತರುವಾಯ ಸೈನ್ಯಗಳ ಕರ್ತನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ ಜನರಿಗೆಲ್ಲಾ ಅಂದರೆ ಇಸ್ರಾಯೇಲಿನ ಸಮೂಹಕ್ಕೆಲ್ಲಾ ಸ್ತ್ರೀ ಪುರುಷರಲ್ಲಿ ಒಬ್ಬೊಬ್ಬರಿಗೆ ಒಂದು ರೊಟ್ಟಿ ತುಂಡನ್ನೂ ಒಂದು ದೊಡ್ಡ ತುಂಡು ಮಾಂಸವನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಕೊಟ್ಟನು. ತರುವಾಯ ಜನರೆ ಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ಆಗ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವದಕ್ಕೆ ಹೋದಾಗ ಸೌಲನ ಮಗಳಾದ ವಿಾಕಲಳು ದಾವೀದನಿಗೆ ಎದುರಾಗಿ ಬಂದು--ನಿಷ್ಪ್ರ ಯೋಜಕ ಮನುಷ್ಯರಲ್ಲಿ ಒಬ್ಬನು ನಾಚಿಕೆ ಇಲ್ಲದೆ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿದ ಹಾಗೆಯೇ ಈಹೊತ್ತು ತನ್ನ ಸೇವಕರ ದಾಸಿಗಳ ಕಣ್ಣುಮುಂದೆ ತನ್ನ ವಸ್ತ್ರ ಗಳನ್ನು ಬಿಚ್ಚಿಹಾಕಿದ್ದ ಇಸ್ರಾಯೇಲಿನ ಅರಸನು ಈ ಹೊತ್ತು ಎಷ್ಟು ಘನಪಟ್ಟನು ಅಂದಳು. ಆದರೆ ದಾವೀದನು ವಿಾಕಳಿಗೆ--ನಿನ್ನ ತಂದೆಗಿಂತಲೂ ಅವನ ಮನೆಯವರೆಲ್ಲರಿಗಿಂತಲೂ ನನ್ನನ್ನು ಕರ್ತನು ತನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿ ನೇಮಿಸುವೆನು ಎಂದು ಆದುಕೊಂಡ ಕರ್ತನ ಸಮ್ಮು ಖದ ಮುಂದೆಯೇ ಆಯಿತು. ನಾನು ಕರ್ತನ ಮುಂದೆ ಆಡುವೆನು. ಇನ್ನೂ ಇದಕ್ಕಿಂತ ಅಲ್ಪನಾಗಿ ಇರುವೆನು; ನಿನ್ನ ದೃಷ್ಟಿಯಲ್ಲಿ ನೀಚನಾಗಿರುವೆನು.ಆದರೆ ನೀನು ಹೇಳಿದ ದಾಸಿಗಳಿಂದ ನಿಶ್ಚಯವಾಗಿ ಘನವನ್ನು ಹೊಂದುವೆನು ಅಂದನು.ಆದದರಿಂದ ಸೌಲನ ಮಗಳಾದ ವಿಾಕಲಳು ತನ್ನ ಮರಣದ ದಿವಸದ ವರೆಗೂ ಮಕ್ಕಳಿಲ್ಲದವಳಾಗಿದ್ದಳು. ಆದದರಿಂದ ಸೌಲನ ಮಗಳಾದ ವಿಾಕಲಳು ತನ್ನ ಮರಣದ ದಿವಸದ ವರೆಗೂ ಮಕ್ಕಳಿಲ್ಲದವಳಾಗಿದ್ದಳು.
- Joshua 3:6–7 ಯೆಹೋಶುವ 3:6–7ಆಗ ಯೆಹೋಶುವನು ಯಾಜಕರಿಗೆ--ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹಾದುಹೋಗಿರಿ ಅಂದನು. ಹಾಗೆಯೇ ಅವರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹೋದರು. ಕರ್ತನು ಯೆಹೋಶುವನಿಗೆ--ನಾನು ಮೋಶೆಯ ಸಂಗಡ ಇದ್ದ ಪ್ರಕಾರ ನಿನ್ನ ಸಂಗಡ ಇರುವದನ್ನು ಇಸ್ರಾಯೇಲ್ಯರೆಲ್ಲರು ತಿಳಿಯುವ ಹಾಗೆ ಈ ದಿನ ನಿನ್ನನ್ನು ಅವರ ಮುಂದೆ ಘನಪಡಿಸಲು ಪ್ರಾರಂಭಿಸು ವೆನು.
Original words (Greek)
- Which · G3739ὅς hós
- also · G2532καί kaí
- our · G2257ἡμῶν hēmōn
- fathers · G3962πατήρ patḗr
- after · G1237διαδέχομαι diadéchomai
- in · G1521εἰσάγω eiságō
- with · G3326μετά metá
- Jesus · G2424Ἰησοῦς Iēsoûs
- into · G1722ἐν en
- possession · G2697κατάσχεσις katáschesis
- Gentiles · G1484ἔθνος éthnos
- whom · G3739ὅς hós
- God · G2316θεός theós
- out · G1856ἐξωθέω exōthéō
- before · G575ἀπό apó
- face · G4383πρόσωπον prósōpon
- of · G3962πατήρ patḗr
- our · G2257ἡμῶν hēmōn
- fathers · G3962πατήρ patḗr
- unto · G2193ἕως héōs
- days · G2250ἡμέρα hēméra
- David · G1138Δαβίδ Dabíd