1 Corinthians · chapter 1 · verse 25
1 Corinthians 1:25 in Kannada
ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ.
Devara huchchutanavu manushyarigintaloo jnyaanavulladdaagide. Devara balaheenateyu manushyarigintaloo balavulladdaagide.
1 Corinthians 1:25 in English
- King James Version (KJV)
- Because the foolishness of God is wiser than men; and the weakness of God is stronger than men.
- World English Bible (WEB)
- because the foolishness of God is wiser than men, and the weakness of God is stronger than men.
- American Standard Version (ASV)
- Because the foolishness of God is wiser than men; and the weakness of God is stronger than men.
- Bible in Basic English (BBE)
- Because what seems foolish in God is wiser than men; and what seems feeble in God is stronger than men.
- Darby Translation (DBY)
- Because the foolishness of God is wiser than men, and the weakness of God is stronger than men.
- Webster's Bible (WBS)
- Because the foolishness of God is wiser than men; and the weakness of God is stronger than men.
- Young's Literal Translation (YLT)
- because the foolishness of God is wiser than men, and the weakness of God is stronger than men;
Read in context
- 23ನಾವಾದರೋ ಶಿಲುಬೆಗೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರ ಪಡಿಸುತ್ತೇವೆ. ಆತನು ಯೆಹೂದ್ಯರಿಗೆ ಅಭ್ಯಂತರವೂ ಗ್ರೀಕರಿಗೆ ಹುಚ್ಚುತನವೂ ಆಗಿದ್ದಾನೆ.
- 24ಆದರೆ ಕರೆಯಲ್ಪಟ್ಟ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾನೆ.
- 25ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ.
- 26ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ; ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಬಲಿಷ್ಠರೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ.
- 27ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ;
Cross references
- Romans 11:33–36 ರೋಮಾಪುರದವರಿಗೆ 11:33–36ಹಾ, ದೇವರ ಜ್ಞಾನದ ಮತ್ತು ತಿಳುವಳಿಕೆಯ ಐಶ್ವರ್ಯವು ಎಷ್ಟೋ ಅಗಾಧ ವಾಗಿದೆ! ಆತನ ತೀರ್ಪುಗಳು ಪರಿಶೋಧನೆಗೂ ಆತನ ಮಾರ್ಗಗಳು ಕಂಡು ಹಿಡಿಯುವದಕ್ಕೂ ಅಸಾಧ್ಯ ವಾಗಿವೆ! ಕರ್ತನ ಮನಸ್ಸನ್ನು ತಿಳಿದುಕೊಂಡವನು ಯಾರು? ಇಲ್ಲವೆ ಆತನಿಗೆ ಆಲೋಚನೆ ಹೇಳಿದವನು ಯಾರು? ಇಲ್ಲವೆ ಮೊದಲು ಆತನಿಗೆ ಕೊಟ್ಟು ಪ್ರತಿಫಲವನ್ನು ತೆಗೆದುಕೊಳ್ಳುವವನು ಯಾರು?ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್. ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್.
- 1 Corinthians 1:18 1 ಕೊರಿಂಥದವರಿಗೆ 1:18ನಾಶವಾಗುವವರಿಗೆ ಶಿಲುಬೆಯ ವಿಷಯವಾದ ಸಾರೋಣವು ಹುಚ್ಚುತನವಾಗಿದೆ; ರಕ್ಷಣೆ ಹೊಂದಿದ ನಮಗಾದರೋ ಅದು ದೇವರ ಶಕ್ತಿಯಾಗಿದೆ.
- Zechariah 4:6–7 ಜೆಕರ್ಯ 4:6–7ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಓ ಮಹಾ ಬೆಟ್ಟವೇ, ನೀನ್ಯಾರು? ಜೆರುಬ್ಬಾಬೆಲನ ಮುಂದೆ ಬೈಲಾಗುವಿ; ಅದಕ್ಕೆ--ಕೃಪೆಯೇ, ಕೃಪೆಯೇ ಎಂದು ಅರ್ಭಟಗಳ ಸಂಗಡ ಮುಖ್ಯ ಕಲ್ಲನ್ನು ಅವನು ಹೊರಗೆ ತರುವನು.
- 2 Corinthians 13:4 2 ಕೊರಿಂಥದವರಿಗೆ 13:4ಬಲಹೀನತೆಯ ಮೂಲಕ ಆತನು ಶಿಲುಬೆಗೆ ಹಾಕಲ್ಪಟ್ಟಿದ್ದಾಗ್ಯೂ ದೇವರ ಬಲದಿಂದ ಇನ್ನೂ ಬದುಕುತ್ತಾನೆ; ನಾವು ಸಹ ಆತನಲ್ಲಿ ಬಲಹೀನ ರಾಗಿದ್ದೇವೆ, ಆದರೂ ನಾವು ನಿಮಗೋಸ್ಕರವಾಗಿ ದೇವರ ಬಲದಿಂದ ಆತನೊಂದಿಗೆ ಬದುಕುವೆವು.
- Judges 7:2–8 ನ್ಯಾಯಸ್ಥಾಪಕರು 7:2–8ಆಗ ಕರ್ತನು ಗಿದ್ಯೋನನಿಗೆ--ನಾನು ಮಿದ್ಯಾನ್ಯ ರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವದಕ್ಕೆ ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ; ಇಸ್ರಾಯೇಲ್ಯರುನನ್ನ ಕೈ ನನ್ನನ್ನು ರಕ್ಷಿಸಿತು ಎಂದು ನನಗೆ ವಿರೋಧವಾಗಿ ಹೆಚ್ಚಳ ಪಟ್ಟಾರು. ಆದದರಿಂದ ನೀನು ಹೋಗಿ ಜನರು ಕೇಳುವ ಹಾಗೆ--ಯಾವನಿಗೆ ಭಯವೂ ಹೆದರಿ ಕೆಯೂ ಉಂಟೋ ಅವನು ತಿರಿಗಿ ತ್ವರೆಯಾಗಿ ಗಿಲ್ಯಾದ್ ಬೆಟ್ಟದಿಂದ ಹೋಗಲಿ ಎಂದು ಪ್ರಕಟಮಾಡು ಅಂದನು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ತಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು. ಕರ್ತನು ಗಿದ್ಯೋನನಿಗೆ--ಜನರು ಇನ್ನೂ ಬಹಳ ವಾಗಿದ್ದಾರೆ; ಅವರನ್ನು ಜಲದ ಸವಿಾಪಕ್ಕೆ ಇಳಿದು ಹೋಗುವಂತೆ ಮಾಡು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡುವೆನು; ಯಾರು ನಿನ್ನ ಸಂಗಡ ಹೋಗಬಹುದೆಂದು ಅಲ್ಲಿ ಯಾವನನ್ನು ಕುರಿತು ಹೇಳುವೆನೋ ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು--ನಿನ್ನ ಸಂಗಡ ಬರಬಾರದೆಂದು ಯಾವನ ಕುರಿತಾಗಿ ಹೇಳುವೆನೋ ಅವನು ಹೋಗಬಾರದು ಅಂದನು. ಗಿದ್ಯೋನನು ಜನರನ್ನು ಜಲದ ಬಳಿಗೆ ಕರಕೊಂಡು ಬಂದನು. ಆಗ ಕರ್ತನು ಗಿದ್ಯೋನನಿಗೆನಾಯಿ ನೆಕ್ಕುವ ಹಾಗೆ ಜಲವನ್ನು ತನ್ನ ನಾಲಿಗೆಯಿಂದ ನೆಕ್ಕುವ ಪ್ರತಿಯೊಬ್ಬನನ್ನೂ ಕುಡಿಯುವದಕ್ಕೆ ಮೊಣ ಕಾಲೂರಿ ಬೊಗ್ಗುವ ಪ್ರತಿಯೊಬ್ಬನನ್ನೂ ಬೇರೆ ಬೇರೆ ಯಾಗಿ ನಿಲ್ಲಿಸು ಅಂದನು. ಆಗ ತಮ್ಮ ಕೈಯಿಂದ ತೆಗೆದುಕೊಂಡು ತಮ್ಮ ಬಾಯಿಗೆ ಎತ್ತಿ ನೆಕ್ಕಿದವರ ಲೆಕ್ಕವು ಮುನ್ನೂರು ಜನವಾಗಿತ್ತು. ಉಳಿದ ಜನರೆಲ್ಲಾ ನೀರು ಕುಡಿಯುವದಕ್ಕೆ ಮೊಣಕಾಲೂರಿ ಬೊಗ್ಗಿದರು. ಆಗ ಕರ್ತನು ಗಿದ್ಯೋನನಿಗೆ--ನೆಕ್ಕಿ ಕುಡಿದ ಆ ಮುನ್ನೂರು ಜನರಿಂದ ನಾನು ನಿಮ್ಮನ್ನು ರಕ್ಷಿಸಿ ಮಿದ್ಯಾನ್ಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು; ಇತರ ಜನರೆಲ್ಲಾ ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ ಅಂದನು. ಆಗ ಜನರು ಆಹಾರವನ್ನೂ ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು; ಆದರೆ ಅವನು ಇಸ್ರಾಯೇಲ್ಯರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ ಆ ಮುನ್ನೂರು ಜನರನ್ನು ಇಟ್ಟುಕೊಂಡನು. ಮಿದ್ಯಾನ್ಯರ ದಂಡು ಅವನಿಗೆ ಕೆಳ ಭಾಗವಾದ ತಗ್ಗಿನಲ್ಲಿ ಇತ್ತು.
- Zechariah 12:7–8 ಜೆಕರ್ಯ 12:7–8ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು. ಆ ದಿನದಲ್ಲಿ ಕರ್ತನು ಯೆರೂಸಲೇಮಿನ ನಿವಾಸಿಗಳನ್ನು ಕಾಪಾಡುವನು; ಆ ದಿನದಲ್ಲಿ ಅವರೊಳಗೆ ಬಲಹೀನನು ದಾವೀದನ ಹಾಗೆಯೂ ದಾವೀದನ ಮನೆತನದವರು ದೇವರ ಹಾಗೆಯೂ ಅಂದರೆ ಅವರ ಮುಂದೆ ಕರ್ತನ ದೂತನ ಹಾಗೆಯೂ ಇರುವರು.
- 1 Corinthians 1:27–29 1 ಕೊರಿಂಥದವರಿಗೆ 1:27–29ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ಇದಲ್ಲದೆ ದೇವರು ಇರುವವುಗಳನ್ನು ಇಲ್ಲದಂತಾಗಿ ಮಾಡುವ ಹಾಗೆ ಈ ಲೋಕದ ಹೀನವಾದವರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣನೆಗೆ ಬಾರದವರನ್ನೂ ಆರಿಸಿಕೊಂಡಿದ್ದಾನೆ. ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
- Exodus 14:2–4 ವಿಮೋಚನಕಾಂಡ 14:2–4ಇಸ್ರಾಯೇಲ್ ಮಕ್ಕಳು ತಿರುಗಿಕೊಂಡು ಪೀಹಹೀರೋತಿಗೆ ಎದುರಾಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯದಲ್ಲಿ ಬಾಳ್ಚೆಫೋನಿಗೆ ಎದುರಾಗಿ ಇಳುಕೊಳ್ಳಬೇಕೆಂದು ಅವರಿಗೆ ಹೇಳು. ಅದಕ್ಕೆ ಎದುರಾಗಿ ನೀವು ಸಮುದ್ರದ ತೀರದಲ್ಲಿ ಇಳುಕೊಳ್ಳ ಬೇಕು. ಫರೋಹನು ಇಸ್ರಾಯೇಲ್ ಮಕ್ಕಳ ವಿಷಯದಲ್ಲಿ--ಅವರು ದೇಶದಲ್ಲಿ ಸಿಕ್ಕಿಕೊಂಡರು. ಅರಣ್ಯವು ಅವರನ್ನು ಒಳಗೆ ಮುಚ್ಚಿಬಿಟ್ಟಿತು ಎಂದು ಹೇಳುವನು. ಇದಲ್ಲದೆ ಫರೋಹನು ಅವರನ್ನು ಹಿಂದಟ್ಟುವಂತೆ ನಾನು ಅವನ ಹೃದಯವನ್ನು ಕಠಿಣ ಮಾಡುವೆನು; ಫರೋಹನಲ್ಲಿಯೂ ಅವನ ಎಲ್ಲಾ ಸೈನ್ಯದಲ್ಲಿಯೂ ನನ್ನನ್ನು ಘನಪಡಿಸಿಕೊಳ್ಳುವೆನು; ಆಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿಯುವರು ಎಂದು ಹೇಳಿದನು. ಅವರು ಹಾಗೆಯೇ ಮಾಡಿದರು.
- 1 Kings 20:14–22 1 ಅರಸುಗಳು 20:14–22ಅಹಾಬನು--ಯಾರ ಕೈ ಯಿಂದ ಅಂದನು. ಅದಕ್ಕವನು ಪ್ರಾಂತ್ಯಗಳ ಪ್ರಧಾ ನರ ಯೌವನಸ್ಥರಿಂದಲೇ ಎಂದು ಕರ್ತನು ಹೇಳು ತ್ತಾನೆ ಅಂದನು. ಆಗ ಅವನು--ಯುದ್ಧ ನಡಿಸುವವನು ಯಾರು ಅಂದನು. ಅದಕ್ಕವನು--ನೀನೇ ಅಂದನು. ಅವನು ಪ್ರಾಂತಗಳ ಪ್ರಧಾನರ ಯೌವನಸ್ಥರನ್ನು ಲೆಕ್ಕ ಮಾಡಿದಾಗ ಅವರು ಇನ್ನೂರ ಮೂವತ್ತೆರಡು ಜನರಾಗಿದ್ದರು. ಅವರ ತರುವಾಯ ಇಸ್ರಾಯೇಲ್ ಮಕ್ಕಳಾದ ಸಕಲ ಜನರನ್ನು ಲೆಕ್ಕ ಮಾಡಿದಾಗ ಏಳು ಸಾವಿರ ಜನರಾಗಿದ್ದರು. ಅವರು ಮಧ್ಯಾಹ್ನದಲ್ಲಿ ಹೊರಟರು; ಆದರೆ ಬೆನ್ಹದದನೂ ಅವನ ಸಹಾಯ ಕರಾದ ಮೂವತ್ತೆರಡು ಮಂದಿ ಅರಸುಗಳೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು. ಪ್ರಾಂತಗಳ ಪ್ರಧಾನರ ಸೇವಕರು ಮೊದಲು ಸೈನ್ಯವಾಗಿ ಹೊರಡುವಾಗ ಬೆನ್ಹದದನು ಮನುಷ್ಯರನ್ನು ಕಳುಹಿಸಿದನು. ಅವರು ತಿರಿಗಿ ಬಂದು --ಸಮಾರ್ಯದಿಂದ ಮನುಷ್ಯರು ಬಂದಿದ್ದಾರೆಂದು ಅವನಿಗೆ ತಿಳಿಸಿದರು. ಆಗ ಅವನು--ಅವರು ಸಮಾಧಾನಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ; ಯುದ್ಧಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ ಅಂದನು. ಪ್ರಾಂತಗಳ ಪ್ರಧಾನರ ಯೌವನಸ್ಥರೂ ಅವರ ಹಿಂದೆ ಬಂದ ಸೈನಿಕರೂ ಪಟ್ಟಣದಿಂದ ಹೊರಗೆ ಬಂದಾಗ ಪ್ರತಿ ಮನುಷ್ಯನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದನು. ಆಗ ಅರಾಮ್ಯರು ಓಡಿಹೋದರು; ಇಸ್ರಾಯೇಲ್ಯರು ಅವರನ್ನು ಹಿಂದಟ್ಟಿದರು; ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು. ಇದಲ್ಲದೆ ಇಸ್ರಾಯೇಲಿನ ಅರಸನು ಹೊರಟು ಕುದುರೆಗಳನ್ನೂ ರಥಗಳನ್ನೂ ಹೊಡೆದು ರಾಮ್ಯರನ್ನು ಮಹಾ ಸಂಹಾರದಿಂದ ಹೊಡೆದುಬಿಟ್ಟನು. ಪ್ರವಾದಿಯು ಇಸ್ರಾಯೇಲಿನ ಅರಸನ ಬಳಿಗೆ ಬಂದು ಅವನಿಗೆ--ನೀನು ಹೋಗಿ ಬಲಗೊಂಡು ನೀನು ಮಾಡುವದನ್ನು ತಿಳುಕೊಂಡು ನೋಡು; ಯಾಕಂದರೆ ವರುಷಾಂತರದಲ್ಲಿ ಅರಾಮಿನ ಅರಸನು ನಿನಗೆ ವಿರೋಧವಾಗಿ ಬರುವನು ಅಂದನು.
- Joshua 6:2–5 ಯೆಹೋಶುವ 6:2–5ಆಗ ಕರ್ತನು ಯೆಹೋಶುವ ನಿಗೆ--ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಬಲವುಳ್ಳ ಪರಾಕ್ರಮಿಗಳನ್ನೂ ನಿನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟಿದ್ದೇನೆ. ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣ ವನ್ನು ಸುತ್ತಬೇಕು, ಅಂದರೆ ಒಂದು ಸಾರಿ ಪಟ್ಟಣದ ಸುತ್ತಲೂ ಹೋಗಬೇಕು. ಈ ಪ್ರಕಾರ ಆರು ದಿವಸಗಳು ಮಾಡಬೇಕು. ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡುಕೊಂಡು ಮಂಜೂಷದ ಮುಂದೆ ಹೋಗಬೇಕು. ಆದರೆ ಅವರು ಏಳನೇ ದಿನ ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ತುತೂರಿಗಳನ್ನು ಊದಬೇಕು. ಅವರು ಟಗರಿನ ಕೊಂಬುಗಳ ತುತೂರಿಗಳಿಂದ ದೀರ್ಘ ಧ್ವನಿ ಗೈಯುವಾಗ ನೀವು ಆ ತುತೂರಿಯ ಧ್ವನಿಯನ್ನು ಕೇಳಿದವರಾಗಿ ಜನರೆಲ್ಲರು ಮಹಾ ಆರ್ಭಟವಾಗಿ ಆರ್ಭಟಿಸಬೇಕು; ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದು ಹೋಗುವದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಹೋಗುವನು ಎಂದು ಹೇಳಿದನು.
- Judges 15:15–16 ನ್ಯಾಯಸ್ಥಾಪಕರು 15:15–16ಅವನು ಒಂದು ಕತ್ತೆ ದವಡೆಯ ಹೊಸ ಎಲು ಬನ್ನು ಕಂಡುಕೊಂಡು ತನ್ನ ಕೈಯನ್ನು ಚಾಚಿ ಅದನ್ನು ತಕ್ಕೊಂಡು ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು. ಸಂಸೋನನು--ನಾನು ಕತ್ತೆಯ ದವಡೇ ಎಲುಬಿ ನಿಂದ ಕುಪ್ಪೆ ಕುಪ್ಪೆಯಾಗಿ, ಕತ್ತೆಯ ದವಡೇ ಎಲುಬಿ ನಿಂದ ಸಾವಿರ ಜನರನ್ನು ವಧಿಸಿಬಿಟ್ಟಿದ್ದೇನೆ ಅಂದನು.
- 1 Samuel 17:40–51 1 ಸಮುವೇಲನು 17:40–51ತನ್ನ ಕೋಲನ್ನು ತನ್ನ ಕೈಯಲ್ಲಿ ಹಿಡಿದು ಹಳ್ಳದಲ್ಲಿರುವ ಐದು ನುಣುಪಾದ ಕಲ್ಲುಗಳನ್ನು ಆರಿಸಿಕೊಂಡು ಅವು ಗಳನ್ನು ತನಗಿರುವ ಕುರುಬರ ಚೀಲದಲ್ಲಿ ಹಾಕಿ ಕವಣೆ ಯನ್ನು ತನ್ನ ಕೈಯಲ್ಲಿ ಹಿಡುಕೊಂಡು ಆ ಫಿಲಿಷ್ಟಿಯನ ಬಳಿಗೆ ಹೋದನು. ಆಗ ಫಿಲಿಷ್ಟಿಯನು ತ್ವರೆಯಾಗಿ ದಾವೀದನ ಸವಿಾಪಕ್ಕೆ ಬಂದನು. ಗುರಾಣಿ ಹಿಡಿಯುವವನು ಅವನ ಮುಂದೆ ನಡೆದನು. ಫಿಲಿಷ್ಟಿಯನು ದಾವೀದ ನನ್ನು ದೃಷ್ಟಿಸಿ ನೋಡಿ ಅವನು ಕೆಂಪಾದವನಾಗಿಯೂ ಸೌಂದರ್ಯ ರೂಪವುಳ್ಳವನಾಗಿಯೂ ಇರುವ ಹುಡು ಗನಾಗಿದ್ದದರಿಂದ ಅವನನ್ನು ತಿರಸ್ಕರಿಸಿ ದಾವೀದನಿಗೆ ನೀನು ಕೋಲು ಹಿಡುಕೊಂಡು ನನ್ನ ಬಳಿಗೆ ಬರುವ ಹಾಗೆ ನಾನು ನಾಯಿಯೋ ಎಂದು ಹೇಳಿ ಆ ಫಿಲಿಷ್ಟಿಯನು ತನ್ನ ದೇವರುಗಳಿಂದ ದಾವೀದನನ್ನು ಶಪಿಸಿದನು. ದಾವೀದನಿಗೆ--ನೀನು ನನ್ನ ಬಳಿಗೆ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು ಅಂದನು. ಆಗ ದಾವೀದನು ಫಿಲಿಷ್ಟಿಯನಿಗೆ--ನೀನು ಕತ್ತಿ ಈಟಿಯ ಗುರಾಣಿಯ ಸಂಗಡ ನನ್ನ ಬಳಿಗೆ ಬರುತ್ತೀ; ಆದರೆ ನೀನು ನಿಂದಿಸಿದ ಇಸ್ರಾಯೇ ಲಿನ ಸೈನ್ಯಗಳ ದೇವರಾದಂಥ ಸೈನ್ಯಗಳ ಕರ್ತನ ಹೆಸರಿ ನಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ. ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು. ಆ ಪಿಲಿಷ್ಟಿಯನು ಎದ್ದು ದಾವೀದನಿಗೆ ಎದುರಾಗಿ ಸವಿಾಪಿಸಿ ಬರುವಾಗ ದಾವೀದನು ತ್ವರೆಯಾಗಿ ಆ ಸೈನ್ಯಕ್ಕೆ ಫಿಲಿಷ್ಟಿಯನಿಗೆದುರಿಗೆ ಓಡಿಹೋಗಿ ತನ್ನ ಕೈಯನ್ನು ಚೀಲದಲ್ಲಿ ಹಾಕಿ ಅದರಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು ಕವಣೆಯಲ್ಲಿಟ್ಟು ಬೀಸಿ ಫಿಲಿಷ್ಟಿ ಯನ ಹಣೆಯನ್ನು ತಾಕುವಂತೆ ಎಸೆದನು. ಆ ಕಲ್ಲು ಅವನ ಹಣೆಯೊಳಗೆ ಹೊಕ್ಕಿದ್ದರಿಂದ ಅವನು ನೆಲದ ಮೇಲೆ ಬೋರಲು ಬಿದ್ದನು. ಹೀಗೆಯೇ ದಾವೀದನು ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನ ಮೇಲೆ ಬಲಗೊಂಡು ಫಿಲಿಷ್ಟಿಯನನ್ನು ಹೊಡೆದು ಅವನನ್ನು ಕೊಂದುಹಾಕಿದನು. ದಾವೀದನ ಕೈಯಲ್ಲಿ ಕತ್ತಿಯು ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನೇ ಒರೆಯಿಂದ ಕಿತ್ತು ಅವನ ತಲೆಯನ್ನು ಕಡಿದು ಅವನನ್ನು ಕೊಂದು ಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತುಹೋದದ್ದನ್ನು ಕಂಡಾಗ ಓಡಿಹೋದರು.