Judges · chapter 7 · verse 2
Judges 7:2 in Kannada
ಆಗ ಕರ್ತನು ಗಿದ್ಯೋನನಿಗೆ--ನಾನು ಮಿದ್ಯಾನ್ಯ ರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವದಕ್ಕೆ ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ; ಇಸ್ರಾಯೇಲ್ಯರುನನ್ನ ಕೈ ನನ್ನನ್ನು ರಕ್ಷಿಸಿತು ಎಂದು ನನಗೆ ವಿರೋಧವಾಗಿ ಹೆಚ್ಚಳ ಪಟ್ಟಾರು.
Aaga kartanu gidyonanige--naanu midyaanya rannu janara kaigalige oppisikoduvadakke ninna sangada iruva janaru bahalavaagiddaare; israayelyarunanna kai nannannu rakshisitu endu nanage virodhavaagi hechchala pattaaru.
Judges 7:2 in English
- King James Version (KJV)
- And the LORD said unto Gideon, The people that [are] with thee [are] too many for me to give the Midianites into their hands, lest Israel vaunt themselves against me, saying, Mine own hand hath saved me.
- World English Bible (WEB)
- The LORD said to Gideon, “The people who are with you are too many for me to give the Midianites into their hand, lest Israel brag against me, saying, ‘My own hand has saved me.’
- American Standard Version (ASV)
- And Jehovah said unto Gideon, The people that are with thee are too many for me to give the Midianites into their hand, lest Israel vaunt themselves against me, saying, Mine own hand hath saved me.
- Bible in Basic English (BBE)
- And the Lord said to Gideon, So great is the number of your people, that if I give the Midianites into their hands they will be uplifted in pride over me and will say, I myself have been my saviour.
- Darby Translation (DBY)
- And Jehovah said to Gideon, The people that are with thee are too many for me to give Midian into their hand, lest Israel vaunt themselves against me, saying, Mine own hand hath saved me.
- Webster's Bible (WBS)
- And the LORD said to Gideon, The people that [are] with thee [are] too many for me to give the Midianites into their hands, lest Israel vaunt themselves against me, saying, My own hand hath saved me.
- Young's Literal Translation (YLT)
- And Jehovah saith unto Gideon, 'Too many [are] the people who [are] with thee for My giving Midian into their hand, lest Israel beautify itself against Me, saying, My hand hath given salvation to me;
Read in context
- 1ಗಿದ್ಯೋನನೆಂಬ ಯೆರುಬ್ಬಾಳನೂ ಅವನ ಸಂಗಡ ಇದ್ದ ಜನರೆಲ್ಲರೂ ಉದಯದಲ್ಲಿ ಎದ್ದು ಹರೋದಿನ ಬಾವಿಯ ಬಳಿಯಲ್ಲಿ ದಂಡಿಳಿದರು. ಮಿದ್ಯಾನ್ಯರ ದಂಡು ಅವರಿಗೆ ಉತ್ತರಕ್ಕೆ ಮೋರೆ ಬೆಟ್ಟದ ತಗ್ಗಿನಲ್ಲಿ ಇಳಿದಿತ್ತು.
- 2ಆಗ ಕರ್ತನು ಗಿದ್ಯೋನನಿಗೆ--ನಾನು ಮಿದ್ಯಾನ್ಯ ರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವದಕ್ಕೆ ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ; ಇಸ್ರಾಯೇಲ್ಯರುನನ್ನ ಕೈ ನನ್ನನ್ನು ರಕ್ಷಿಸಿತು ಎಂದು ನನಗೆ ವಿರೋಧವಾಗಿ ಹೆಚ್ಚಳ ಪಟ್ಟಾರು.
- 3ಆದದರಿಂದ ನೀನು ಹೋಗಿ ಜನರು ಕೇಳುವ ಹಾಗೆ--ಯಾವನಿಗೆ ಭಯವೂ ಹೆದರಿ ಕೆಯೂ ಉಂಟೋ ಅವನು ತಿರಿಗಿ ತ್ವರೆಯಾಗಿ ಗಿಲ್ಯಾದ್ ಬೆಟ್ಟದಿಂದ ಹೋಗಲಿ ಎಂದು ಪ್ರಕಟಮಾಡು ಅಂದನು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ತಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು.
- 4ಕರ್ತನು ಗಿದ್ಯೋನನಿಗೆ--ಜನರು ಇನ್ನೂ ಬಹಳ ವಾಗಿದ್ದಾರೆ; ಅವರನ್ನು ಜಲದ ಸವಿಾಪಕ್ಕೆ ಇಳಿದು ಹೋಗುವಂತೆ ಮಾಡು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡುವೆನು; ಯಾರು ನಿನ್ನ ಸಂಗಡ ಹೋಗಬಹುದೆಂದು ಅಲ್ಲಿ ಯಾವನನ್ನು ಕುರಿತು ಹೇಳುವೆನೋ ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು--ನಿನ್ನ ಸಂಗಡ ಬರಬಾರದೆಂದು ಯಾವನ ಕುರಿತಾಗಿ ಹೇಳುವೆನೋ ಅವನು ಹೋಗಬಾರದು ಅಂದನು.
Cross references
- Deuteronomy 8:17 ಧರ್ಮೋಪದೇಶಕಾಂಡ 8:17ನನ್ನ ಬಲವೇ ಮತ್ತು ನನ್ನ ಕೈಯ ಸಾಮರ್ಥ್ಯವೇ ನನಗೆ ಈ ಆಸ್ತಿಯನ್ನು ಸಂಪಾದಿಸಿತೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೋ.
- 1 Corinthians 1:27–29 1 ಕೊರಿಂಥದವರಿಗೆ 1:27–29ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ಇದಲ್ಲದೆ ದೇವರು ಇರುವವುಗಳನ್ನು ಇಲ್ಲದಂತಾಗಿ ಮಾಡುವ ಹಾಗೆ ಈ ಲೋಕದ ಹೀನವಾದವರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣನೆಗೆ ಬಾರದವರನ್ನೂ ಆರಿಸಿಕೊಂಡಿದ್ದಾನೆ. ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
- 2 Corinthians 4:7 2 ಕೊರಿಂಥದವರಿಗೆ 4:7ಬಲಾಧಿಕ್ಯವು ನಮ್ಮದಲ್ಲ, ಅದು ದೇವರದಾಗಿ ರುವ ಹಾಗೆ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.
- Romans 11:18 ರೋಮಾಪುರದವರಿಗೆ 11:18ಆದರೂ ಆ ಕೊಂಬೆಗಳಿಗೆ ಮೇಲಾಗಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ, ಅದು ನಿನಗೆ ಆಧಾರವಾಗಿದೆಯಷ್ಟೆ.
- Zechariah 4:6 ಜೆಕರ್ಯ 4:6ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Zechariah 12:7 ಜೆಕರ್ಯ 12:7ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು.
- Deuteronomy 32:27 ಧರ್ಮೋಪದೇಶಕಾಂಡ 32:27ಅವರ ಶತ್ರುಗಳು--ನಮ್ಮ ಕೈಗಳು ಉನ್ನತವಾಗಿವೆ ಎಂದೂ ಕರ್ತನು ಇವುಗಳನ್ನೆಲ್ಲಾ ಮಾಡಲಿಲ್ಲವೆಂದೂ ಅಂದುಕೊಂಡು ಗರ್ವದಿಂದ ನಡೆಯುವ ಶತ್ರುವಿನ ಕೋಪಕ್ಕೆ ಹೆದರದೆ ಹೋದೆನು.
- 1 Samuel 14:6 1 ಸಮುವೇಲನು 14:6ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.
- 1 Corinthians 2:4–5 1 ಕೊರಿಂಥದವರಿಗೆ 2:4–5ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಮನುಷ್ಯಜ್ಞಾನ ವಾಕ್ಯಗಳನ್ನು ನಾನು ಪ್ರಯೋಗಿಸದೆ ಆತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು. ಹೀಗೆ ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಂಡಿರದೆ ದೇವರ ಶಕ್ತಿಯನ್ನೇ ಆಧಾರ ಮಾಡಿಕೊಂಡಿರಬೇಕು.
- Ezekiel 28:17 ಯೆಹೆಜ್ಕೇಲನು 28:17ನಿನ್ನ ಸೌಂದರ್ಯದ ನಿಮಿತ್ತ ನಿನ್ನ ಹೃದಯವು ಉಬ್ಬಿ ಕೊಂಡಿತು; ನಿನ್ನ ಪ್ರಕಾಶದ ನಿಮಿತ್ತ ನಿನ್ನ ಜ್ಞಾನವನ್ನು ಕೆಡಿಸಿಕೊಂಡಿ; ನಾನು ನಿನ್ನನ್ನು ನೆಲಕ್ಕೆ ಹಾಕುವೆನು. ಅರಸನ ಮುಂದೆ ಅವರು ನೋಡುವ ಹಾಗೆ ನಿನ್ನನ್ನು ಇಡುತ್ತೇನೆ;
- 2 Chronicles 14:11 2 ಪೂರ್ವಕಾಲವೃತ್ತಾಂತ 14:11ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು.
- Romans 3:27 ರೋಮಾಪುರದವರಿಗೆ 3:27ಹಾಗಾದರೆ ಹೊಗಳಿಕೊಳ್ಳುವದು ಹೇಗೆ? ಅದು ಇಲ್ಲದೆ ಹೋಯಿತು. ಯಾವ ನಿಯಮದಿಂದ? ಕ್ರಿಯೆಗಳಿಂದಲೋ? ಅಲ್ಲ; ವಿಶ್ವಾಸ ನಿಯಮವನ್ನು ಅನುಸರಿಸುವದರಿಂದಲೇ.