1 Corinthians · chapter 1 · verse 23
1 Corinthians 1:23 in Kannada
ನಾವಾದರೋ ಶಿಲುಬೆಗೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರ ಪಡಿಸುತ್ತೇವೆ. ಆತನು ಯೆಹೂದ್ಯರಿಗೆ ಅಭ್ಯಂತರವೂ ಗ್ರೀಕರಿಗೆ ಹುಚ್ಚುತನವೂ ಆಗಿದ್ದಾನೆ.
Naavaadaro shilubege haakalpattavanaada kristanannu prachura padisutteve. Aatanu yehoodyarige abhyantaravoo greekarige huchchutanavoo aagiddaane.
1 Corinthians 1:23 in English
- King James Version (KJV)
- But we preach Christ crucified, unto the Jews a stumblingblock, and unto the Greeks foolishness;
- World English Bible (WEB)
- but we preach Christ crucified, a stumbling block to Jews and foolishness to Greeks,
- American Standard Version (ASV)
- but we preach Christ crucified, unto Jews a stumblingblock, and unto Gentiles foolishness;
- Bible in Basic English (BBE)
- But we give the good news of Christ on the cross, a hard thing to the Jews, and a foolish thing to the Gentiles;
- Darby Translation (DBY)
- but we preach Christ crucified, to Jews an offence, and to nations foolishness;
- Webster's Bible (WBS)
- But we preach Christ crucified, to the Jews a stumbling-block, and to the Greeks foolishness;
- Young's Literal Translation (YLT)
- also we — we preach Christ crucified, to Jews, indeed, a stumbling-block, and to Greeks foolishness,
Read in context
- 21ಯಾಕಂದರೆ ದೇವರ ಜ್ಞಾನದಲ್ಲಿ ಲೋಕವು(ತನ್ನ) ಜ್ಞಾನದ ಮೂಲಕ ದೇವರನ್ನು ತಿಳಿದುಕೊಳ್ಳಲಿಲ್ಲವಾದ ದರಿಂದ ಪ್ರಸಂಗದ ಹುಚ್ಚುತನದಿಂದಲೇ ನಂಬುವ ವರನ್ನು ರಕ್ಷಿಸುವದು ದೇವರಿಗೆ ಇಷ್ಟವಾಗಿತ್ತು.
- 22ಯೆಹೂದ್ಯರು ಸೂಚಕಕಾರ್ಯವನ್ನು ಕೇಳುತ್ತಾರೆ; ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ;
- 23ನಾವಾದರೋ ಶಿಲುಬೆಗೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರ ಪಡಿಸುತ್ತೇವೆ. ಆತನು ಯೆಹೂದ್ಯರಿಗೆ ಅಭ್ಯಂತರವೂ ಗ್ರೀಕರಿಗೆ ಹುಚ್ಚುತನವೂ ಆಗಿದ್ದಾನೆ.
- 24ಆದರೆ ಕರೆಯಲ್ಪಟ್ಟ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾನೆ.
- 25ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ.
Cross references
- 1 Corinthians 2:14 1 ಕೊರಿಂಥದವರಿಗೆ 2:14ಪ್ರಾಕೃತ ಮನುಷ್ಯನು ದೇವರಾತ್ಮನ ವಿಷಯಗಳನ್ನು ಅಂಗೀಕರಿಸುವದಿಲ್ಲ; ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ; ಇಲ್ಲವೆ ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸ ಲಾರನು.
- 1 Peter 2:8 1 ಪೇತ್ರನು 2:8ಅದು ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿದೆ; ಅವರು ವಾಕ್ಯಕ್ಕೆ ಅವಿಧೇಯರಾದದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರು ನೇಮಕವಾದರು.
- 1 Corinthians 2:2 1 ಕೊರಿಂಥದವರಿಗೆ 2:2ಶಿಲುಬೆಗೆ ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯ ಕೂಡದೆಂದು ನಾನು ನಿಮ್ಮಲ್ಲಿ ತಿರ್ಮಾನಿಸಿ ಕೊಂಡೆನು.
- Galatians 5:11 ಗಲಾತ್ಯದವರಿಗೆ 5:11ಸಹೋದರರೇ, ನಾನಾದರೋ ಸುನ್ನತಿಯಾಗ ಬೇಕೆಂದು ಇನ್ನೂ ಸಾರುವವನಾಗಿದ್ದರೆ ಇನ್ನು ನನಗೆ ಹಿಂಸೆಯಾಗುವದು ಯಾಕೆ? ಆ ಪಕ್ಷದಲ್ಲಿ ಶಿಲುಬೆಯ ದೆಸೆಯಿಂದ ಉಂಟಾದ ಆಕ್ಷೇಪವು ನಿಂತು ಹೋಯಿ ತಲ್ಲಾ?
- Isaiah 8:14–15 ಯೆಶಾಯ 8:14–15ಆತನೇ ಪರಿಶುದ್ಧ ಸ್ಥಾನವಾಗಿರುವನು; ಆದರೆ ಇಸ್ರಾಯೇಲಿನ ಎರಡು ಮನೆಗಳಿಗೆ ಎಡವುವ ಕಲ್ಲು, ಮುಗ್ಗರಿಸುವ ಬಂಡೆಯು ಮತ್ತು ಯೆರೂ ಸಲೇಮಿನ ನಿವಾಸಿಗಳಿಗೆ ಬಲೆಯೂ ಬೋನೂ ಆಗಿರುವನು. ಅವರಲ್ಲಿ ಅನೇಕರು ಎಡವಿಬಿದ್ದು, ಹೊಡೆಯಲ್ಪಟ್ಟು ಬಲೆಗೆ ಸಿಕ್ಕಿ ಬೀಳುವರು.
- 1 Corinthians 1:18 1 ಕೊರಿಂಥದವರಿಗೆ 1:18ನಾಶವಾಗುವವರಿಗೆ ಶಿಲುಬೆಯ ವಿಷಯವಾದ ಸಾರೋಣವು ಹುಚ್ಚುತನವಾಗಿದೆ; ರಕ್ಷಣೆ ಹೊಂದಿದ ನಮಗಾದರೋ ಅದು ದೇವರ ಶಕ್ತಿಯಾಗಿದೆ.
- Luke 2:34 ಲೂಕನು 2:34ಸಿಮೆಯೋನನು ಅವರನ್ನು ಆಶೀರ್ವದಿಸಿ ಆತನ ತಾಯಿಯಾದ ಮರಿಯಳಿಗೆ-- ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವದಕ್ಕೂ ತಿರಿಗಿ ಏಳುವದಕ್ಕೂ ಎದುರು ಮಾತನಾಡುವದಕ್ಕೂ ಈ ಶಿಶುವು ಗುರುತಾಗಿರುವನು.
- Matthew 11:6 ಮತ್ತಾಯನು 11:6ನನ್ನ ವಿಷಯವಾಗಿ ಸಂಶಯಪಡದವನೇ ಧನ್ಯನು ಅಂದನು.
- John 6:53–66 ಯೋಹಾನನು 6:53–66ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು. ಕಪೆರ್ನೌಮಿನಲ್ಲಿ ಬೋಧಿಸುತ್ತಿರುವಾಗ ಸಭಾ ಮಂದಿರದಲ್ಲಿ ಆತನು ಇವುಗಳನ್ನು ಹೇಳಿದನು. ಆದದರಿಂದ ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ--ಇದು ಕಠಿಣವಾದ ಮಾತು; ಇದನ್ನು ಯಾರು ಕೇಳಾರು ಅಂದರು. ತನ್ನ ಶಿಷ್ಯರೂ ಇದಕ್ಕೆ ಗುಣು ಗುಟ್ಟುತ್ತಾರೆಂದು ಯೇಸು ತನ್ನಲ್ಲಿ ತಿಳಿದುಕೊಂಡು ಅವರಿಗೆ--ಇದು ನಿಮಗೆ ಅಭ್ಯಂತರವಾಯಿತೋ? ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ? ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ. ಆದರೆ ನಂಬದವರು ಕೆಲವರು ನಿಮ್ಮಲ್ಲಿ ಇದ್ದಾರೆ ಅಂದನು. ಯಾಕಂದರೆ ನಂಬದವರು ಯಾರೆಂದೂ ತನ್ನನ್ನು ಹಿಡುಕೊಡು ವವನು ಯಾರೆಂದೂ ಮೊದಲಿನಿಂದಲೇ ಯೇಸು ತಿಳಿದಿದ್ದನು. ಆತನು--ನನ್ನ ತಂದೆಯಿಂದ ಒಬ್ಬನಿಗೆ ಕೊಡಲ್ಪಟ್ಟ ಹೊರತು ಯಾವನೂ ನನ್ನ ಬಳಿಗೆ ಬರ ಲಾರನು; ಇದಕ್ಕೋಸ್ಕರವೇ ನಾನು ನಿಮಗೆ ಹೇಳಿದೆನು ಅಂದನು. ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟುಹೋಗಿ ಮತ್ತೆ ಅವರು ಆತನ ಸಂಗಡ ಎಂದಿಗೂ ಸಂಚರಿಸಲೇ ಇಲ್ಲ.
- 2 Corinthians 4:5 2 ಕೊರಿಂಥದವರಿಗೆ 4:5ನಮ್ಮನ್ನು ನಾವೇ ಅಲ್ಲ, ಆದರೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ಸೇವಕರೆಂದು ಕರ್ತನಾದ ಕ್ರಿಸ್ತ ಯೇಸುವನ್ನೇ ಸಾರುತ್ತೇವೆ.
- Matthew 13:57 ಮತ್ತಾಯನು 13:57ಅವರು ಆತನ ವಿಷಯದಲ್ಲಿ ಅಭ್ಯಂತರ ಪಟ್ಟರು. ಆದರೆ ಯೇಸು ಅವರಿಗೆ--ಪ್ರವಾದಿಗೆ ಮತ್ತೆಲ್ಲಿಯಾದರೂ ಸನ್ಮಾನವಿದೆ, ಆದರೆ ತನ್ನ ಸ್ವಂತ ದೇಶದಲ್ಲಿ ತನ್ನ ಸ್ವಂತ ಮನೆಯಲ್ಲಿ ಮಾತ್ರ ಇಲ್ಲ ಅಂದನು.ಆತನು ಅವರ ಅಪನಂಬಿಕೆಯ ದೆಸೆ ಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ನಡಿಸಲಿಲ್ಲ.
- Galatians 6:14 ಗಲಾತ್ಯದವರಿಗೆ 6:14ನನಗಾದರೋ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ವಿಷಯದಲ್ಲಿ ಹೊರತು ಹೆಚ್ಚಳಪಡುವದು ಬೇಡವೇ ಬೇಡ. ಆತನ ಮೂಲಕ ಲೋಕವು ನನ್ನ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡಿತು. ನಾನು ಲೋಕದ ಪಾಲಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ.