1 Corinthians · chapter 10 · verse 5
1 Corinthians 10:5 in Kannada
ಆದರೆ ಅವ ರೊಳಗೆ ಅನೇಕರ ವಿಷಯದಲ್ಲಿ ದೇವರು ಸಂತೋಷಿ ಸಲಿಲ್ಲ; ಯಾಕಂದರೆ ಅವರು ಅಡವಿಯೊಳಗೆ ಸಂಹರಿ ಸಲ್ಪಟ್ಟರು.
Aadare ava rolage anekara vishayadalli devaru santoshi salilla; yaakandare avaru adaviyolage sanhari salpattaru.
1 Corinthians 10:5 in English
- King James Version (KJV)
- But with many of them God was not well pleased: for they were overthrown in the wilderness.
- World English Bible (WEB)
- However with most of them, God was not well pleased, for they were overthrown in the wilderness.
- American Standard Version (ASV)
- Howbeit with most of them God was not well pleased: for they were overthrown in the wilderness.
- Bible in Basic English (BBE)
- But with most of them God was not pleased: for they came to their end in the waste land.
- Darby Translation (DBY)
- yet God was not pleased with the most of them, for they were strewed in the desert.
- Webster's Bible (WBS)
- But with many of them God was not well pleased: for they were overthrown in the wilderness.
- Young's Literal Translation (YLT)
- but in the most of them God was not well pleased, for they were strewn in the wilderness,
Read in context
- 3ಅವರೆಲ್ಲರೂ ಆತ್ಮಿಕವಾದ ಒಂದೇ ಆಹಾರವನ್ನು ತಿಂದರು;
- 4ಅವರೆಲ್ಲರೂ ಆತ್ಮಿಕವಾದ ಒಂದೇ ಪಾನವನ್ನು ಕುಡಿದರು; ಯಾಕಂದರೆ ಅವರನ್ನು ಹಿಂಬಾಲಿಸಿದ ಆ ಆತ್ಮಿಕ ಬಂಡೆಯೊಳಗಿಂದ ಅವರು ಕುಡಿದರು; ಆ ಬಂಡೆಯು ಕ್ರಿಸ್ತನೇ.
- 5ಆದರೆ ಅವ ರೊಳಗೆ ಅನೇಕರ ವಿಷಯದಲ್ಲಿ ದೇವರು ಸಂತೋಷಿ ಸಲಿಲ್ಲ; ಯಾಕಂದರೆ ಅವರು ಅಡವಿಯೊಳಗೆ ಸಂಹರಿ ಸಲ್ಪಟ್ಟರು.
- 6ಅವರು ಕೆಟ್ಟವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿ ಗಳು ನಮಗೆ ನಿದರ್ಶನಗಳಾಗಿವೆ.
- 7ಇಲ್ಲವೆ--ಜನರು ತಿನ್ನುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆಟವಾಡುವದಕ್ಕೆ ಎದ್ದರು ಎಂದು ಬರೆದಿರುವ ಪ್ರಕಾರ ನೀವೂ ಅವರಲ್ಲಿ ಕೆಲವರಂತೆ ವಿಗ್ರಹಾರಾಧಕರಾಗ ಬೇಡಿರಿ.
Cross references
- Hebrews 3:17 ಇಬ್ರಿಯರಿಗೆ 3:17ಆದರೆ ನಾಲ್ವತ್ತು ವರುಷ ಆತನು ಯಾರಮೇಲೆ ಸಂತಾಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!
- Jude 1:5 ಯೂದನು 1:5ನೀವು ಇದನ್ನು ಒಂದು ಸಾರಿ ತಿಳಿದವರಾಗಿದ್ದರೂ ನಾನು ಅದನ್ನೇ ನಿಮ್ಮ ಜ್ಞಾಪಕಕ್ಕೆ ತರಬೇಕೆಂದು ಅಪೇಕ್ಷಿಸುತ್ತೇನೆ. ಅದು ಯಾವದಂದರೆ--ಕರ್ತನು (ತನ್ನ) ಪ್ರಜೆಯನ್ನು ಐಗುಪ್ತದೇಶದೊಳಗಿಂದ ರಕ್ಷಿಸಿ ದರೂ ತರುವಾಯ ಅವರೊಳಗೆ ನಂಬದೆ ಹೋದ ವರನ್ನು ಸಂಹಾರ ಮಾಡಿದನು.
- Numbers 26:64–65 ಅರಣ್ಯಕಾಂಡ 26:64–65ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳನ್ನು ಎಣಿಸಿದಾಗ ಎಣಿಸಲ್ಪಟ್ಟವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ. ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.
- Numbers 14:37 ಅರಣ್ಯಕಾಂಡ 14:37ದೇಶದ ಕೆಟ್ಟ ಸುದ್ದಿಯನ್ನು ಎಬ್ಬಿಸಿದ ಇವರೇ ಕರ್ತನ ಸನ್ನಿಧಿ ಯಲ್ಲಿ ವ್ಯಾಧಿಯಿಂದ ಸತ್ತರು.
- Psalm 106:26 ಕೀರ್ತನೆಗಳು 106:26ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ
- Numbers 14:11–12 ಅರಣ್ಯಕಾಂಡ 14:11–12ಆಗ ಕರ್ತನು ಮೋಶೆಗೆ--ಎಷ್ಟರ ವರೆಗೆ ಈ ಜನರು ನನಗೆ ಕೋಪವನ್ನೆಬ್ಬಿಸುವರು? ನಾನು ಅವರ ಮಧ್ಯದಲ್ಲಿ ನಡಿಸಿದ ಸಕಲ ಸೂಚಕಕಾರ್ಯಗಳ ದೆಸೆ ಯಿಂದ ನನ್ನನ್ನು ಎಷ್ಟು ಮಾತ್ರಕ್ಕೂ ನಂಬದೆ ಇರುವ ರಲ್ಲಾ? ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲಮಾಡಿ ನಿನ್ನನ್ನು ಅವರಿಗಿಂತ ದೊಡ್ಡದಾದ ಬಲವುಳ್ಳ ಜನಾಂಗವನ್ನಾಗಿ ಮಾಡುವೆನು ಅಂದನು.
- Psalm 78:32–34 ಕೀರ್ತನೆಗಳು 78:32–34ಇದೆಲ್ಲಾ ಆದಾಗ್ಯೂ ಅವರು ಇನ್ನೂ ಪಾಪಮಾಡಿ ಆತನ ಆದ್ಭುತಗಳನ್ನು ನಂಬ ಲಿಲ್ಲ. ಆಗ ಆತನು ಅವರ ದಿವಸಗಳನ್ನು ಉಸಿರಿ ನಂತೆಯೂ ಅವರ ವರುಷಗಳನ್ನು ಕಳವಳದಲ್ಲಿಯೂ ಮುಗಿಸಿದನು. ಅವರನ್ನು ಕೊಲ್ಲುವಾಗ ಅವರು ಆತನನ್ನು ಹುಡುಕಿ ತಿರುಗಿಕೊಂಡು ದೇವರನ್ನು ಹೊತ್ತಾರೆ ವಿಚಾರಿಸಿ
- Numbers 14:28–35 ಅರಣ್ಯಕಾಂಡ 14:28–35ಆದದರಿಂದ ನೀನು ಅವರಿಗೆ--ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು ಎಂದು ಕರ್ತನು ಹೇಳುತ್ತಾನೆ. ಈ ಅರಣ್ಯದಲ್ಲಿ ನಿಮ್ಮ ಹೆಣಗಳು ಬೀಳುವವು. ನನಗೆ ವಿರೋಧವಾಗಿ ಗುಣುಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಆದ ನೀವೇ. ಯೆಫುನ್ನೆಯ ಮಗನಾದ ಕಾಲೇಬನು ನೂನನ ಮಗನಾದ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡಿಸುವದಕ್ಕಾಗಿ ಪ್ರಮಾಣಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವು ಬಾರದೆ ಇರುವಿರಿ. ಆದರೆ ಸುಲಿಗೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು; ನೀವು ಅಲಕ್ಷ್ಯ ಮಾಡಿದ ದೇಶವನ್ನು ಅವರು ಅನುಭವಿಸುವರು. ನಿಮ್ಮ ವಿಷಯವಾಗಿಯಾದರೋ ನಿಮ್ಮ ಹೆಣಗಳು ಈ ಅರಣ್ಯದಲ್ಲಿ ಬೀಳುವವು. ಇದಲ್ಲದೆ ನಿಮ್ಮ ಮಕ್ಕಳು ನಾಲ್ವತ್ತು ವರುಷ ಅರಣ್ಯದಲ್ಲಿ ಅಲೆದಾಡಿ ನಿಮ್ಮ ಹೆಣಗಳು ಅರಣ್ಯದಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಜಾರತ್ವ ಗಳನ್ನು ತಾಳಿಕೊಳ್ಳುವರು. ನೀವು ಆ ದೇಶವನ್ನು ಪರೀಕ್ಷಿಸಿದ ನಾಲ್ವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಾಲ್ವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ. ಕರ್ತನಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಕೂಡಿ ಕೊಂಡಿರುವ ಈ ಕೆಟ್ಟ ಸಮೂಹಕ್ಕೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಅರಣ್ಯದಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು.
- Deuteronomy 1:34–35 ಧರ್ಮೋಪದೇಶಕಾಂಡ 1:34–35ಕರ್ತನು ನಿಮ್ಮ ಮಾತುಗಳ ಧ್ವನಿಯನ್ನು ಕೇಳಿ ಕೋಪಿಸಿಕೊಂಡು ಪ್ರಮಾಣಮಾಡಿ-- ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ.
- Psalm 95:11 ಕೀರ್ತನೆಗಳು 95:11ಆದದರಿಂದ ನನ್ನ ವಿಶ್ರಾಂತಿಯಲ್ಲಿ ಅವರು ಪ್ರವೇಶಿಸರೆಂದು ಕೋಪ ದಿಂದ ಆಣೆ ಇಟ್ಟುಕೊಂಡೆನು.
- Deuteronomy 2:15–16 ಧರ್ಮೋಪದೇಶಕಾಂಡ 2:15–16ಅವರು ಮುಗಿದುಹೋಗುವ ವರೆಗೆ ಅವರನ್ನು ಸೈನ್ಯದೊಳ ಗಿಂದ ನಿರ್ಮೂಲ ಮಾಡುವದಕ್ಕೆ ಕರ್ತನ ಹಸ್ತವು ಅವರ ಮೇಲಿತ್ತು. ಜನರೊಳಗಿಂದ ಸೈನಿಕರೆಲ್ಲರೂ ಸತ್ತುಹೋದ ನಂತರ
- Psalm 90:1 ಕೀರ್ತನೆಗಳು 90:1ಕರ್ತನೇ, ತಲತಲಾಂತರಗಳಲ್ಲಿ ನೀನು ನಮ್ಮ ವಾಸಸ್ಥಾನವಾಗಿದ್ದೀ.