1 Corinthians · chapter 14 · verse 36
1 Corinthians 14:36 in Kannada
ಏನು, ದೇವರ ವಾಕ್ಯವು ನಿಮ್ಮಿಂದಲೇ ಹೊರ ಟಿತೋ? ನಿಮಗೆ ಮಾತ್ರವೇ ಬಂತೋ?
Enu, devara vaakyavu nimmindale hora tito? Nimage maatrave banto?
1 Corinthians 14:36 in English
- King James Version (KJV)
- What? came the word of God out from you? or came it unto you only?
- World English Bible (WEB)
- What!? Was it from you that the word of God went out? Or did it come to you alone?
- American Standard Version (ASV)
- What? was it from you that the word of God went forth? or came it unto you alone?
- Bible in Basic English (BBE)
- What? was it from you that the word of God went out? or did it only come in to you?
- Darby Translation (DBY)
- Did the word of God go out from you, or did it come to you only?
- Webster's Bible (WBS)
- What? came the word of God out from you? or came it to you only?
- Young's Literal Translation (YLT)
- From you did the word of God come forth? or to you alone did it come?
Read in context
- 34ನಿಮ್ಮ ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಬೇಕು; ಮಾತನಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ವಿಧೇಯರಾಗಿರಬೇಕೆಂದು ನ್ಯಾಯಪ್ರಮಾಣವು ಸಹ ಹೇಳುತ್ತದಲ್ಲಾ.
- 35ಅವರು ಏನಾದರೂ ತಿಳುಕೊಳ್ಳುವದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವದು ನಾಚಿಗೆಗೆಟ್ಟದ್ದಾಗಿದೆ.
- 36ಏನು, ದೇವರ ವಾಕ್ಯವು ನಿಮ್ಮಿಂದಲೇ ಹೊರ ಟಿತೋ? ನಿಮಗೆ ಮಾತ್ರವೇ ಬಂತೋ?
- 37ಯಾವ ನಾದರೂ ತನ್ನನ್ನು ಪ್ರವಾದಿಯೆಂದಾಗಲಿ ಇಲ್ಲವೆ ಆತ್ಮಿಕನೆಂದಾಗಲಿ ಭಾವಿಸಿಕೊಂಡರೆ ನಾನು ನಿಮಗೆ ಬರೆದಿರುವ ವಿಷಯಗಳು ಕರ್ತನ ಆಜ್ಞೆಗಳೇ ಎಂದು ಚೆನ್ನಾಗಿ ತಿಳುಕೊಳ್ಳಲಿ.
- 38ಆದರೆ ಯಾವನಾದರೂ ತಿಳಿಯದವನಾಗಿದ್ದರೆ ಅವನು ತಿಳಿಯದವನಾಗಿಯೇ ಇರಲಿ.
Cross references
- Acts 13:1–3 ಅಪೊಸ್ತಲರ ಕೃತ್ಯಗಳು 13:1–3ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಕೆಲವರು ಪ್ರವಾದಿಗಳೂ ಬೋಧಕರೂ ಇದ್ದರು; ಯಾರಾರೆಂದರೆ, ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಚತುರಾಧಿ ಪತಿಯಾದ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಇವರೇ. ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿ ತ್ರಾತ್ಮನು--ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕೆ ನನಗಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು. ಆಗ ಅವರು ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ಅವರನ್ನು ಕಳುಹಿಸಿ ಕೊಟ್ಟರು.
- Acts 15:35–36 ಅಪೊಸ್ತಲರ ಕೃತ್ಯಗಳು 15:35–36ಆದರೆ ಪೌಲನೂ ಬಾರ್ನಬನೂ ಅಂತಿಯೋಕ್ಯ ದಲ್ಲಿಯೇ ನಿಂತು ಬೇರೆ ಅನೇಕರೊಂದಿಗೆ ಕರ್ತನ ವಾಕ್ಯವನ್ನು ಉಪದೇಶ ಮಾಡುತ್ತಾ ಸಾರುತ್ತಾ ಇದ್ದರು. ಕೆಲವು ದಿವಸಗಳಾದ ಮೇಲೆ ಪೌಲನು ಬಾರ್ನಬನಿಗೆ--ನಾವು ಕರ್ತನ ವಾಕ್ಯವನ್ನು ಸಾರಿದ ಎಲ್ಲಾ ಪಟ್ಟಣಗಳಿಗೆ ತಿರಿಗಿ ಹೋಗಿ ಅಲ್ಲಿರುವ ಸಹೋದರರು ಹೇಗಿದ್ದಾರೆಂದು ನೋಡೋಣ ಬಾ ಎಂದು ಹೇಳಿದನು.
- Acts 17:10–11 ಅಪೊಸ್ತಲರ ಕೃತ್ಯಗಳು 17:10–11ಕೂಡಲೆ ಸಹೊದರರು ರಾತ್ರಿಯಲ್ಲಿ ಪೌಲಸೀಲ ರನ್ನು ಬೆರೋಯಕ್ಕೆ ಕಳುಹಿಸಿಬಿಟ್ಟರು; ಅವರು ಅಲ್ಲಿಗೆ ಸೇರಿ ಯೆಹೂದ್ಯರ ಸಭಾಮಂದಿರದೊಳಕ್ಕೆ ಹೋದರು. ಅಲ್ಲಿಯವರು ಥೆಸಲೊನೀಕದವರಿಗಿಂತ ಸದ್ಗುಣ ವುಳ್ಳವರಾಗಿದ್ದು ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀ ಕರಿಸಿ ಇವರು ಹೇಳುವ ಮಾತುಗಳು ಹೌದೋ ಏನೋ ಎಂದು ಪ್ರತಿದಿನವೂ ಬರಹಗಳನ್ನು ಶೋಧಿ ಸುತ್ತಿದ್ದರು.
- Isaiah 2:3 ಯೆಶಾಯ 2:3ಅನೇಕ ಪ್ರಜೆಗಳು ಹೋಗಿ--ಬನ್ನಿರಿ, ಕರ್ತನ ಪರ್ವತಕ್ಕೂ ಯಾಕೋಬನ ದೇವರ ಆಲಯ ಕ್ಕೂ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು; ಚೀಯೋನಿನಿಂದ ನ್ಯಾಯಪ್ರಮಾಣವೂ ಯೆರೂಸಲೇಮಿನಿಂದ ಕರ್ತನ ವಾಕ್ಯವೂ ಹೊರಡುವದು.
- Acts 18:1–17 ಅಪೊಸ್ತಲರ ಕೃತ್ಯಗಳು 18:1–17ಇವುಗಳಾದ ಮೇಲೆ ಪೌಲನು ಅಥೇನೆ ಯದಿಂದ ಹೊರಟು ಕೊರಿಂಥಕ್ಕೆ ಬಂದು ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯ ನನ್ನು ಅಲ್ಲಿ ಕಂಡನು. (ಯೆಹೂದ್ಯರೆಲ್ಲರೂ ರೋಮಾ ಪುರವನ್ನು ಬಿಟ್ಟು ಹೋಗಬೇಕೆಂದು ಕ್ಲೌದ್ಯನು ಆಜ್ಞೆ ವಿಧಿಸಿದ್ದನು). ಆದಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿವಸಗಳ ಮುಂಚೆ ಇತಾಲ್ಯದಿಂದ ಅಲ್ಲಿಗೆ ಬಂದಿದ್ದರು; ಪೌಲನು ಅವರ ಅವರು ತಮ್ಮ ವೃತ್ತಿಯಿಂದ ಗುಡಾರ ಮಾಡುವವರಾಗಿದ್ದದರಿಂದ ಅವನು ಅವ ರೊಂದಿಗೆ ಇದ್ದು ಕೆಲಸ ಮಾಡುತ್ತಿದ್ದನು ಯಾಕಂದರೆ ಅವನೂ ಅದೇ ಕಸಬಿನವನಾಗಿದ್ದನು. ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು. ಸೀಲ ತಿಮೊಥೆಯರು ಮಕೆದೋನ್ಯದಿಂದ ಬಂದಾಗ ಪೌಲನು ಆತ್ಮದಲ್ಲಿ ಒತ್ತಾಯ ಮಾಡಲ್ಪಟ್ಟು ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಸಾಕ್ಷಿಕೊಟ್ಟನು. ಅವರು ಎದುರಿಸಿ ದೇವದೂಷಣೆ ಮಾಡಲಾಗಿ ಅವನು ತನ್ನ ವಸ್ತ್ರವನ್ನು ಝಾಡಿಸಿ ಅವರಿಗೆ--ನಿಮ್ಮ ರಕ್ತವು ನಿಮ್ಮ ತಲೆಗಳ ಮೇಲೆ ಇರಲಿ; ನಾನು ಇಂದಿನಿಂದ ದೋಷರಹಿತನಾಗಿ ಅನ್ಯಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿ ಆ ಸ್ಥಳದಿಂದ ಹೊರಟು ದೇವರನ್ನು ಆರಾಧಿಸುವವನಾಗಿದ್ದ ಯುಸ್ತನೆಂಬವನ ಮನೆಗೆ ಹೋದನು. ಅವನ ಮನೆ ಸಭಾಮಂದಿರದ ಮಗ್ಗುಲಲ್ಲೇ ಇತ್ತು. ಸಭಾಮಂದಿರದ ಮುಖ್ಯಾಧಿಕಾರಿಯಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಕೊರಿಂಥ ದಲ್ಲಿ ಅನೇಕರು ಕೇಳಿ ನಂಬಿ ಬಾಸ್ತಿಸ್ಮ ಮಾಡಿಸಿಕೊಂಡರು. ಇದಲ್ಲದೆ ಕರ್ತನು ರಾತ್ರಿಯಲ್ಲಿ ಪೌಲನಿಗೆ ದರ್ಶನ ಕೊಟ್ಟು--ನೀನು ಹೆದರಬೇಡ; ಸುಮ್ಮನಿರದೆ ಮಾತ ನಾಡುತ್ತಲೇ ಇರು. ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನ್ನ ಮೇಲೆ ಬಿದ್ದು ಕೇಡುಮಾಡುವದಿಲ್ಲ; ಈ ಪಟ್ಟಣದಲ್ಲಿ ಬಹಳ ಮಂದಿ ನನಗೆ ಇದ್ದಾರೆ ಎಂದು ಹೇಳಿದನು. ಅವನು ಒಂದು ವರುಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಅವರಲ್ಲಿ ದೇವರ ವಾಕ್ಯವನ್ನು ಉಪದೇಶ ಮಾಡುತ್ತಿದ್ದನು. ಗಲ್ಲಿಯೋನನು ಅಖಾಯದ ಪ್ರತಿನಿಧಿ ಯಾಗಿದ್ದಾಗ ಯೆಹೂದ್ಯರು ಒಮ್ಮನಸ್ಸಿನಿಂದ ಪೌಲನಿಗೆ ವಿರೋಧವಾಗಿ ಧಂಗೆ ಎಬ್ಬಿಸಿ ನ್ಯಾಯಸ್ಥಾನದ ಮುಂದೆ ಹಿಡುಕೊಂಡು ಬಂದು-- ಇವನು ನ್ಯಾಯ ಪ್ರಮಾಣಕ್ಕೆ ಪ್ರತಿಕೂಲವಾಗಿ ದೇವರನ್ನು ಆರಾಧಿಸ ಬೇಕೆಂದು ಮನುಷ್ಯರನ್ನು ಪ್ರೇರೇಪಿಸುತ್ತಾನೆ ಎಂದು ಹೇಳಿದರು. ಪೌಲನು ಪ್ರತಿವಾದ ಮಾಡಬೇಕೆಂದಿ ದ್ದಾಗ ಗಲ್ಲಿಯೋನನು ಯೆಹೂದ್ಯರಿಗೆ--ಯೆಹೂ ದ್ಯರೇ, ಅನ್ಯಾಯವು ದುಷ್ಕಾರ್ಯವು ಇಂಥದ್ದೇನಾ ದರೂ ಇದ್ದ ಪಕ್ಷಕ್ಕೆ ನಾನು ನಿಮ್ಮ ಮಾತನ್ನು ಸಹನ ದಿಂದ ಕೇಳುವದು ನ್ಯಾಯವೇ. ಆದರೆ ನೀವು ಮಾಡುವ ವಿವಾದದ ಮಾತುಗಳೂ ಹೆಸರುಗಳೂ ನಿಮ್ಮ ನ್ಯಾಯಪ್ರಮಾಣದ ವಿಷಯವಾಗಿರುವದಾದರೆ ಅವುಗಳನ್ನು ನೀವೇ ನೋಡಿಕೊಳ್ಳಿರಿ; ಇಂಥ ವಿಷಯ ಗಳನ್ನು ವಿಚಾರಣೆ ಮಾಡುವದಕ್ಕೆ ನನಗಂತೂ ಮನಸ್ಸಿಲ್ಲ ಎಂದು ಹೇಳಿ ಅವರನ್ನು ನ್ಯಾಯ ಸ್ಥಾನದಿಂದ ಹೊರಡಿಸಿಬಿಟ್ಟನು. ಆಗ ಗ್ರೀಕರೆಲ್ಲರೂ ಸಭಾಮಂದಿರದ ಮುಖ್ಯ ಅಧಿಕಾರಿಯಾಗಿದ್ದ ಸೋಸ್ಥೆನ ನನ್ನು ಹಿಡಿದುಕೊಂಡು ನ್ಯಾಯಸ್ಥಾನದ ಮುಂದೆ ಹೊಡೆದರು. ಗಲ್ಲಿಯೋನನಾದರೋ ಅವುಗಳಲ್ಲಿ ಒಂದಕ್ಕಾದರೂ ಲಕ್ಷ್ಯಕೊಡಲಿಲ್ಲ.
- Acts 16:9–10 ಅಪೊಸ್ತಲರ ಕೃತ್ಯಗಳು 16:9–10ಆಗ ರಾತ್ರಿ ಕಾಲದಲ್ಲಿ ಪೌಲನಿಗೆ ಒಂದು ದರ್ಶನವಾಯಿತು; ಏನಂ ದರೆ--ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು--ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು ಎಂದು ಅವನನ್ನು ಬೇಡಿಕೊಂಡನು. ಅವನು ಆ ದರ್ಶನವನ್ನು ನೋಡಿದ ತರುವಾಯ ಅವರಿಗೆ ಸುವಾರ್ತೆಯನ್ನು ಸಾರುವದಕ್ಕೆ ಕರ್ತನು ನಿಶ್ಚಯವಾಗಿ ನಮ್ಮನ್ನು ಕರೆದಿದ್ದಾನೆಂದು ತಿಳುಕೊಂಡು ಕೂಡಲೆ ಮಕೆದೋನ್ಯಕ್ಕೆ ಹೋಗುವಂತೆ ಪ್ರಯತ್ನಿ ಸಿದೆವು.
- Acts 17:1 ಅಪೊಸ್ತಲರ ಕೃತ್ಯಗಳು 17:1ಮುಂದೆ ಅವರು ಅಂಫಿಪೊಲಿ ಅಪೊ ಲೊನ್ಯಗಳನ್ನು ದಾಟಿ ಥೆಸಲೊನೀಕಕ್ಕೆ ಬಂದರು; ಅಲ್ಲಿ ಯೆಹೂದ್ಯರದೊಂದು ಸಭಾಮಂದಿರ ವಿತ್ತು.
- Micah 4:1–2 ಮೀಕ 4:1–2ಅಂತ್ಯದಿವಸಗಳಲ್ಲಿ ಆಗುವದೇನಂದರೆ, ಕರ್ತನ ಆಲಯದ ಪರ್ವತವು ಬೆಟ್ಟಗಳ ತುದಿಯಲ್ಲಿ ನೆಲೆಯಾಗಿ ಗುಡ್ಡಗಳಿಗಿಂತ ಎತ್ತರ ವಾಗಿರುವದು; ಜನಗಳು ಅದರ ಬಳಿಗೆ ಪ್ರವಾಹದಂತೆ ಬರುವರು. ಅನೇಕ ಜನಾಂಗಗಳು ಬಂದು ಹೇಳುವ ದೇನಂದರೆ--ಬನ್ನಿರಿ; ಕರ್ತನ ಬೆಟ್ಟಕ್ಕೆ ಯಾಕೋಬಿನ ದೇವರ ಆಲಯಕ್ಕೆ ಹೋಗೋಣ; ಆತನು ತನ್ನ ಮಾರ್ಗಗಳನ್ನು ನಮಗೆ ಬೋಧಿಸುವನು; ನಾವು ಆತನ ಹಾದಿಗಳಲ್ಲಿ ನಡೆಯುವೆವು; ಯಾಕಂದರೆ ಚೀಯೋನಿನೊಳಗಿಂದ ನ್ಯಾಯಪ್ರಮಾಣವೂ ಯೆರೂ ಸಲೇಮಿನೊಳಗಿಂದ ದೇವರ ವಾಕ್ಯವೂ ಹೊರಡು ವದು.
- 2 Corinthians 10:13–16 2 ಕೊರಿಂಥದವರಿಗೆ 10:13–16ನಾವಾದರೊ ಮೇರೆ ತಪ್ಪಿ ಹೊಗಳಿಕೊಳ್ಳದೆ ದೇವರು ನಮಗೆ ಹಂಚಿಕೊಟ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ; ಈ ಮೇರೆ ಯೊಳಗಿದ್ದು ನಿಮ್ಮ ಪರ್ಯಂತರಕ್ಕೂ ಬಂದಿದ್ದೇವೆ. ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ನಿಮ್ಮ ಬಳಿಗೆ ಬಂದ ನಾವು ನಿಮ್ಮನ್ನು ತಲುಪಲಿಲ್ಲವೋ ಎಂಬಂತೆ ಮೇರೆಯನ್ನು ಅತಿಕ್ರಮಿಸಿದವರಲ್ಲ. ನಾವು ಮೇರೆತಪ್ಪಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತಕ್ಕೊಂಡು ಇವು ನಮ್ಮವು ಎಂದು ಹೊಗಳಿಕೊಳ್ಳುವವರಲ್ಲ; ಆದರೆ ನಿಮ್ಮ ನಂಬಿಕೆಯು ಹೆಚ್ಚಿದ ಹಾಗೆಲ್ಲಾ ನಿಮ್ಮ ಮೂಲಕ ನಮ್ಮ ಮೇರೆಯೊಳಗೆ ಇನ್ನೂ ಅಭಿವೃದ್ಧಿ ಹೊಂದುವೆವು; ನಿಮಗೆ ಆಚೆ ಇರುವ ಸೀಮೆಗಳಲ್ಲಿ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆ ನಮಗುಂಟು; ಆದರೆ ಮತ್ತೊಬ್ಬರ ಮೇರೆಯಲ್ಲಿ ಸಿದ್ಧವಾಗಿರುವವುಗಳು ನಮಗೆ ಸಿಕ್ಕಿದವುಗಳೆಂದು ನಾವು ಹೆಚ್ಚಳಪಡುವದಿಲ್ಲ.
- Zechariah 14:8 ಜೆಕರ್ಯ 14:8ಆ ದಿನದಲ್ಲಿ ಆಗುವದೇನಂದರೆ, ಯೆರೂಸಲೇಮಿ ನೊಳಗಿದ್ದ ಜೀವಜಲಗಳು ಹೊರಡುವವು; ಅವುಗ ಳಲ್ಲಿ ಅರ್ಧ ಪೂರ್ವ ಸಮುದ್ರಕ್ಕೆ ಅರ್ಧ ಪಶ್ಚಿಮ ಸಮುದ್ರಕ್ಕೆ ಹೋಗುವವು; ಅದು ಬೇಸಿಗೆ ಕಾಲ ದಲ್ಲಿಯೂ ಚಳಿಗಾಲದಲ್ಲಿಯೂ ಇರುವದು.
- Acts 17:15 ಅಪೊಸ್ತಲರ ಕೃತ್ಯಗಳು 17:15ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡು ಹೋಗಿ ಸೀಲ ನನ್ನೂ ತಿಮೊಥೆಯನನ್ನೂ ಬೇಗ ತನ್ನ ಬಳಿಗೆ ಬರ ಬೇಕೆಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಹೋದರು.
- 1 Thessalonians 1:8 1 ಥೆಸಲೊನೀಕದವರಿಗೆ 1:8ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯದಲ್ಲಿಯೂ ಅಕಾಯ ದಲ್ಲಿಯೂ ಘೋಷಿತವಾದದ್ದಲ್ಲದೆ ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು; ಆದದರಿಂದ ಆ ವಿಷಯದಲ್ಲಿ ನಾವು ಏನೂ ಹೇಳಬೇಕಾದದ್ದಿಲ್ಲ.