1 Corinthians · chapter 14 · verse 5
1 Corinthians 14:5 in Kannada
ನೀವೆಲ್ಲರೂ ಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸುತ್ತೇನೆ; ಆದರೆ ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬದೇ ನನ್ನಿಷ್ಟ. ಭಾಷೆಗಳನ್ನಾಡು ವವನು ಸಭೆಗೆ ಭಕ್ತಿವೃದ್ಧಿಯಾಗುವದಕ್ಕಾಗಿ ಆ ಭಾಷೆಯ ಅರ್ಥವನ್ನು ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠ.
Neevellaroo bhaashegalannaadabekendu naanu apekshisuttene; aadare adakkintaloo neevu pravaadisabekembade nannishta. Bhaashegalannaadu vavanu sabhege bhaktivruddhiyaaguvadakkaagi aa bhaasheya arthavannu helade hodare avaniginta pravaadisuvavanu shreshtha.
1 Corinthians 14:5 in English
- King James Version (KJV)
- I would that ye all spake with tongues, but rather that ye prophesied: for greater [is] he that prophesieth than he that speaketh with tongues, except he interpret, that the church may receive edifying.
- World English Bible (WEB)
- Now I desire to have you all speak with other languages, but even more that you would prophesy. For he is greater who prophesies than he who speaks with other languages, unless he interprets, that the assembly may be built up.
- American Standard Version (ASV)
- Now I would have you all speak with tongues, but rather that ye should prophesy: and greater is he that prophesieth than he that speaketh with tongues, except he interpret, that the church may receive edifying.
- Bible in Basic English (BBE)
- Now though it is my desire for you all to have the power of tongues, it would give me more pleasure to be hearing the prophet's word from you; for this is a greater thing than using tongues, if the sense is not given at the same time, for the good of the church.
- Darby Translation (DBY)
- Now I desire that ye should all speak with tongues, but rather that ye should prophesy. But greater is he that prophesies than he that speaks with tongues, unless he interpret, that the assembly may receive edification.
- Webster's Bible (WBS)
- I would that ye all spoke in languages, but rather that ye prophesied: for greater [is] he that prophesieth than he that speaketh in languages, except he interpret, that the church may receive edifying.
- Young's Literal Translation (YLT)
- and I wish you all to speak with tongues, and more that ye may prophecy, for greater is he who is prophesying than he who is speaking with tongues, except one may interpret, that the assembly may receive edification.
Read in context
- 3ಪ್ರವಾದಿಸುವವನಾದರೋ ಮನುಷ್ಯರ ಸಂಗಡ ಮಾತನಾಡುವವನಾಗಿ ಅವರಿಗೆ ಭಕ್ತಿವೃದ್ಧಿಯನ್ನೂ ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟು ಮಾಡುತ್ತಾನೆ.
- 4ಭಾಷೆಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟು ಮಾಡಿಕೊಳ್ಳುತ್ತಾನೆ. ಪ್ರವಾದಿಸು ವವನಾದರೋ ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡು ತ್ತಾನೆ.
- 5ನೀವೆಲ್ಲರೂ ಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸುತ್ತೇನೆ; ಆದರೆ ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬದೇ ನನ್ನಿಷ್ಟ. ಭಾಷೆಗಳನ್ನಾಡು ವವನು ಸಭೆಗೆ ಭಕ್ತಿವೃದ್ಧಿಯಾಗುವದಕ್ಕಾಗಿ ಆ ಭಾಷೆಯ ಅರ್ಥವನ್ನು ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠ.
- 6ಹೀಗಿರುವದರಿಂದ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ಪ್ರಕಟ ವಾದದ್ದರಿಂದಾಗಲಿ ಇಲ್ಲವೆ ಜ್ಞಾನದಿಂದಾಗಲಿ ಇಲ್ಲವೆ ಪ್ರವಾದನೆಯಿಂದಾಗಲಿ ಇಲ್ಲವೆ ಬೋಧನೆಯಿಂದಾ ಗಲಿ ಮಾತನಾಡದೆ ಭಾಷೆಗಳಿಂದ ಮಾತ್ರ ಮಾತನಾಡಿ ದರೆ ನನ್ನಿಂದ ನಿಮಗೇನು ಪ್ರಯೋಜನ?
- 7ಕೊಳಲು ವೀಣೆ ಮೊದಲಾದ ಅಚೇತನವಾದ್ಯಗಳು ಸ್ವರಗಳಲಿ ಯಾವ ಭೇದವನ್ನೂ ತೋರಿಸದಿದ್ದರೆ ಊದಿದ್ದು ಅಥವಾ ಬಾರಿಸಿದ್ದು ತಿಳಿಯುವದು ಹೇಗೆ?
Cross references
- 1 Corinthians 12:28–30 1 ಕೊರಿಂಥದವರಿಗೆ 12:28–30ದೇವರು ಕೆಲವರನ್ನು ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಉಪದೇಶಕರನ್ನು ಇಟ್ಟಿದ್ದಾನೆ; ಆಮೇಲೆ ಮಹತ್ಕಾರ್ಯ ಗಳನ್ನೂ ವಾಸಿಮಾಡುವ ವರಗಳನ್ನೂ ಸಹಾಯ ಮಾಡುವದನ್ನೂ ಕಾರ್ಯಗಳನ್ನು ನಿರ್ವಹಿಸುವದನ್ನೂ ವಿವಿಧ ಭಾಷೆಗಳನಾ ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿ ಗಳೋ? ಎಲ್ಲರೂ ಉಪದೇಶಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ? ವಾಸಿ ಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಭಾಷೆಗಳನ್ನಾಡುವರೋ? ಭಾಷೆಗಳ ಅರ್ಥವನ್ನು ಎಲ್ಲರೂ ಹೇಳುವರೋ?ಆದರೆ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಆದಾಗ್ಯೂ ನಾನು ನಿಮಗೆ ಉತ್ಕೃಷ್ಟವಾದ ಮಾರ್ಗವನ್ನು ತೋರಿಸುತ್ತೇನೆ.
- 1 Corinthians 12:10 1 ಕೊರಿಂಥದವರಿಗೆ 12:10ಒಬ್ಬನಿಗೆ ಮಹತುಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಮತ್ತೊಬ್ಬನಿಗೆ ಆತ್ಮಗಳನ್ನು ವಿವೇಚಿಸುವ ವರವು, ಇನ್ನೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಮತ್ತೊಬ್ಬನಿಗೆ ಭಾಷೆಗಳ ಅರ್ಥವನ್ನು ಹೇಳುವ ವರವು ಕೊಡಲ್ಪಡುತ್ತದೆ.
- Mark 16:17 ಮಾರ್ಕನು 16:17ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;
- 1 Corinthians 13:1 1 ಕೊರಿಂಥದವರಿಗೆ 13:1ನಾನು ಮನುಷ್ಯರ ಮತ್ತು ದೂತರ ಭಾಷೆಗಳನ್ನು ಆಡುವವನಾದರೂ ಪ್ರೀತಿ ಯಿಲ್ಲದವನಾಗಿದ್ದರೆ ನಾದಕೊಡುವ ಕಂಚೂ ಗಣಗಣಿ ಸುವ ತಾಳವೂ ಆಗಿದ್ದೇನೆ.
- Numbers 11:28–29 ಅರಣ್ಯಕಾಂಡ 11:28–29ಅದಕ್ಕೆ ತನ್ನ ಯೌವನಸ್ಥರಲ್ಲಿ ಒಬ್ಬನೂ ಮೋಶೆಯ ಸೇವಕನೂ ಆಗಿದ್ದ ನೂನನ ಮಗನಾದ ಯೆಹೋಶುವನು ಹೇಳಿದ್ದೇನಂದರೆ--ನನ್ನ ಒಡೆಯನಾದ ಮೋಶೆಯೇ, ಅವರನ್ನು ತಡೆ ಅಂದನು. ಮೋಶೆಯು ಅವನಿಗೆ ಹೇಳಿದ್ದೇ ನಂದರೆ--ನನ್ನ ನಿಮಿತ್ತವಾಗಿ ನೀನು ಹೊಟ್ಟೇಕಿಚ್ಚು ಪಡುತ್ತೀಯೋ? ಕರ್ತನ ಜನರೆಲ್ಲಾ ಪ್ರವಾದಿಗಳಾ ಗಿದ್ದು ಕರ್ತನು ತನ್ನ ಆತ್ಮವನ್ನು ಅವರ ಮೇಲೆ ಇಟ್ಟರೆ ಎಷ್ಟೋ ಒಳ್ಳೇದು ಅಂದನು!
- 1 Corinthians 14:3–4 1 ಕೊರಿಂಥದವರಿಗೆ 14:3–4ಪ್ರವಾದಿಸುವವನಾದರೋ ಮನುಷ್ಯರ ಸಂಗಡ ಮಾತನಾಡುವವನಾಗಿ ಅವರಿಗೆ ಭಕ್ತಿವೃದ್ಧಿಯನ್ನೂ ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟು ಮಾಡುತ್ತಾನೆ. ಭಾಷೆಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟು ಮಾಡಿಕೊಳ್ಳುತ್ತಾನೆ. ಪ್ರವಾದಿಸು ವವನಾದರೋ ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡು ತ್ತಾನೆ.
- 1 Corinthians 14:1 1 ಕೊರಿಂಥದವರಿಗೆ 14:1ಪ್ರೀತಿಯನ್ನು ಅನುಸರಿಸಿರಿ; ಆದರೂ ಆತ್ಮಿಕ ವರಗಳನ್ನು, ಅದರಲ್ಲೂ ಪ್ರವಾದಿಸುವ ದನ್ನೇ ಅಪೇಕ್ಷಿಸಿರಿ.
- 1 Corinthians 13:4 1 ಕೊರಿಂಥದವರಿಗೆ 13:4ಪ್ರೀತಿ ಬಹು ತಾಳ್ಮೆಯುಳ್ಳದ್ದು, ಕರುಣೆಯುಳ್ಳದ್ದು; ಪ್ರೀತಿಯು ಹೊಟ್ಟೇಕಿಚ್ಚು ಪಡುವದಿಲ್ಲ, ಹೊಗಳಿ ಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ,
- 1 Corinthians 14:18–40 1 ಕೊರಿಂಥದವರಿಗೆ 14:18–40ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಭಾಷೆಗಳನ್ನಾಡುತ್ತೇನೆಂದು ನನ್ನ ದೇವರನ್ನು ಕೊಂಡಾಡುತ್ತೇನೆ. ಆದರೂ ಸಭೆಯಲ್ಲಿ ಅನ್ಯಭಾಷೆಯಿಂದ ಹತ್ತುಸಾವಿರ ಮಾತು ಗಳನ್ನಾಡುವದಕ್ಕಿಂತ ನನ್ನ ಬುದ್ಧಿಯಿಂದ ಐದೇ ಮಾತು ಗಳನ್ನಾಡಿ ಇತರರಿಗೆ ಉಪದೇಶಮಾಡುವದು ನನಗೆ ಇಷ್ಟವಾದದ್ದು. ಸಹೋದರರೇ, ಬುದ್ಧಿಯ ವಿಷಯ ದಲ್ಲಿ ಬಾಲಕರಾಗಿರಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು. ಬೇರೆ ಭಾಷೆಯವರ ಮೂಲಕವಾಗಿಯೂ ಬೇರೆ ಯವರ ತುಟಿಗಳಿಂದಲೂ ನಾನು ಈ ಜನರೊಂದಿಗೆ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವದಿಲ್ಲ ಎಂದು ಕರ್ತನು ಹೇಳುತ್ತಾನೆಂಬ ದಾಗಿ ನ್ಯಾಯಪ್ರಮಾಣದಲ್ಲಿ ಬರೆದದೆ. ಆದದ ರಿಂದ ಭಾಷೆಗಳು ನಂಬುವವರಿಗೆ ಅಲ್ಲ, ನಂಬದವರಿಗೆ ಸೂಚನೆಯಾಗಿವೆ; ಆದರೆ ಪ್ರವಾದಿಸುವದು ನಂಬದ ವರಿಗಲ್ಲ, ನಂಬುವವರಿಗೆ ಸೂಚನೆಯಾಗಿದೆ. ಆದ ಕಾರಣ ಸಭೆಯೆಲ್ಲವೂ ಒಂದು ಸ್ಥಳದಲ್ಲಿ ಕೂಡಿ ಬಂದಾಗ ಎಲ್ಲರೂ ಭಾಷೆಗಳನ್ನಾಡುವದಾದರೆ ತಿಳುವಳಿಕೆ ಯಿಲ್ಲದವರು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು ನೀವು ಹುಚ್ಚರಾಗಿದ್ದೀರೆಂದು ಹೇಳುವದಿಲ್ಲವೇ? ಆದರೆ ಎಲ್ಲರೂ ಪ್ರವಾದಿಸುವಾಗ ಒಬ್ಬ ಅವಿಶ್ವಾಸಿ ಯಾಗಲಿ ಇಲ್ಲವೆ ತಿಳುವಳಿಕೆಯಿಲ್ಲದವನಾಗಲಿ ಒಳಗೆ ಬಂದರೆ ಅವನು ಎಲ್ಲರಿಂದ ಅರುಹು ಹೊಂದುತ್ತಾನೆ, ಎಲ್ಲರಿಂದ ಪರಿಶೋಧಿತನಾಗುತ್ತಾನೆ. ಹೀಗೆ ಅವನ ಹೃದಯದ ರಹಸ್ಯಗಳು ತೋರಿಬರುತ್ತವೆ; ಅವನು ಸಾಷ್ಟಾಂಗವೆರಗಿ ದೇವರನ್ನು ಆರಾಧಿಸಿ ನಿಜಕ್ಕೂ ನಿಮ್ಮಲ್ಲಿ ದೇವರಿದ್ದಾನೆಂದು ಹೇಳುವನು. ಹಾಗಾದರೇನು? ಸಹೋದರರೇ, ನೀವು ಕೂಡಿ ಬಂದಾಗ ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಕೀರ್ತನೆಯಾಗಲಿ, ಬೋಧನೆಯಾಗಲಿ, ಭಾಷೆಯಾಗಲಿ, ಪ್ರಕಟನೆಯಾ ಗಲಿ ಭಾಷೆಯ ಅರ್ಥ ಹೇಳುವದಾಗಲಿ ಇರುತ್ತದಷ್ಟೆ. ಎಲ್ಲವುಗಳು ಭಕ್ತವೃದ್ಧಿಗಾಗಿಯೇ ನಡೆಯಲಿ. ಯಾವ ನಾದರೂ ಅನ್ಯಭಾಷೆಯನ್ನಾಡುವದಾದರೆ ಇಬ್ಬರು ಅಥವಾ ಮೂವರಿಗಿಂತ ಹೆಚ್ಚಿಲ್ಲದೆ ಒಬ್ಬೊಬ್ಬರಾಗಿ ಮಾತನಾಡಬೇಕು; ಒಬ್ಬನು ಅರ್ಥವನ್ನು ಹೇಳಲಿ; ಅರ್ಥವನ್ನು ಹೇಳುವವನಿಲ್ಲದಿದ್ದರೆ ಅವನು (ಭಾಷೆ ಯನ್ನಾಡುವವನು) ಸಭೆಯಲ್ಲಿ ಮೌನವಾಗಿರಲಿ; ಅವನು ತನ್ನೊಂದಿಗೆಯೂ ದೇವರೊಂದಿಗೆಯೂ ಮಾತನಾಡಿಕೊಳ್ಳಲಿ. ಪ್ರವಾದಿಗಳು ಇಬ್ಬರಾಗಲಿ ಮೂವರಾಗಲಿ ಮಾತನಾಡಲಿ, ಮಿಕ್ಕಾದವರು ವಿವೇಚ ನೆಮಾಡಲಿ. ಪಕ್ಕದಲ್ಲಿ ಕೂತಿರುವ ಮತ್ತೊಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲಿನವನು ಸುಮ್ಮನಾಗಲಿ. ನೀವೆಲ್ಲರೂ ಒಬ್ಬೊಬ್ಬರಾಗಿ ಪ್ರವಾದಿಸಬಹುದು; ಹೀಗೆ ಮಾಡಿದರೆ ಎಲ್ಲರೂ ಕಲಿತುಕೊಳ್ಳುವರು, ಎಲ್ಲರೂ ಆದರಣೆ ಹೊಂದುವರು. ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ. ಪರಿಶುದ್ಧರ ಎಲ್ಲಾ ಸಭೆಗಳಲ್ಲಿರುವ ಪ್ರಕಾರ ದೇವರು ಸಮಾಧಾನಕ್ಕೇ ಹೊರತು ಗಲಿಬಿಲಿಗೆ ಕಾರಣನಲ್ಲ. ನಿಮ್ಮ ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಬೇಕು; ಮಾತನಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ವಿಧೇಯರಾಗಿರಬೇಕೆಂದು ನ್ಯಾಯಪ್ರಮಾಣವು ಸಹ ಹೇಳುತ್ತದಲ್ಲಾ. ಅವರು ಏನಾದರೂ ತಿಳುಕೊಳ್ಳುವದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವದು ನಾಚಿಗೆಗೆಟ್ಟದ್ದಾಗಿದೆ. ಏನು, ದೇವರ ವಾಕ್ಯವು ನಿಮ್ಮಿಂದಲೇ ಹೊರ ಟಿತೋ? ನಿಮಗೆ ಮಾತ್ರವೇ ಬಂತೋ? ಯಾವ ನಾದರೂ ತನ್ನನ್ನು ಪ್ರವಾದಿಯೆಂದಾಗಲಿ ಇಲ್ಲವೆ ಆತ್ಮಿಕನೆಂದಾಗಲಿ ಭಾವಿಸಿಕೊಂಡರೆ ನಾನು ನಿಮಗೆ ಬರೆದಿರುವ ವಿಷಯಗಳು ಕರ್ತನ ಆಜ್ಞೆಗಳೇ ಎಂದು ಚೆನ್ನಾಗಿ ತಿಳುಕೊಳ್ಳಲಿ. ಆದರೆ ಯಾವನಾದರೂ ತಿಳಿಯದವನಾಗಿದ್ದರೆ ಅವನು ತಿಳಿಯದವನಾಗಿಯೇ ಇರಲಿ. ಆದಕಾರಣ ಸಹೋದರರೇ, ಪ್ರವಾದಿಸುವದನ್ನು ಆಶಿಸಿರಿ. ಮತ್ತು ಭಾಷೆಗಳನ್ನಾಡುವದಕ್ಕೆ ಅಡ್ಡಿಮಾಡ ಬೇಡಿರಿ.ಎಲ್ಲವುಗಳು ಮರ್ಯಾದೆಯಿಂದಲೂ ಕ್ರಮವಾಗಿಯೂ ನಡೆಯಲಿ. ಎಲ್ಲವುಗಳು ಮರ್ಯಾದೆಯಿಂದಲೂ ಕ್ರಮವಾಗಿಯೂ ನಡೆಯಲಿ.
- 1 Corinthians 14:12–13 1 ಕೊರಿಂಥದವರಿಗೆ 14:12–13ಅದರಂತೆಯೇ ನೀವು ಆತ್ಮಿಕ ವರಗಳಲ್ಲಿ ಆಸಕ್ತಿಯುಳ್ಳವರಾಗಿರುವದರಿಂದ ಸಭೆಯ ಹೆಚ್ಚಿನ ಭಕ್ತಿವೃದ್ಧಿಗಾಗಿ ತವಕಪಡಿರಿ. ಆದದರಿಂದ ಅನ್ಯಭಾಷೆಯಲ್ಲಿ ಮಾತನಾಡುವವನು ಅದರ ಅರ್ಥ ಹೇಳುವಂತೆ ಪ್ರಾರ್ಥಿಸಲಿ.
Original words (Greek)
- would · G2309θέλω thélō
- ye · G5209ὑμᾶς hymâs
- all · G3956πᾶς pâs
- spake · G2980λαλέω laléō
- tongues · G1100γλῶσσα glōssa
- but · G1161δέ dé
- rather · G3123μᾶλλον mâllon
- that · G2443ἵνα hína
- prophesied · G4395προφητεύω prophēteúō
- for · G1063γάρ gár
- greater · G3187μείζων meízōn
- that · G3588ὁ ho
- prophesieth · G4395προφητεύω prophēteúō
- than · G2228ἤ ḗ
- that · G3588ὁ ho
- speaketh · G2980λαλέω laléō
- tongues · G1100γλῶσσα glōssa
- except · G1622ἐκτός ektós
- interpret · G1329διερμηνεύω diermēneúō
- that · G2443ἵνα hína
- church · G1577ἐκκλησία ekklēsía
- receive · G2983λαμβάνω lambánō
- edifying · G3619οἰκοδομή oikodomḗ