1 Corinthians · chapter 3 · verse 6
1 Corinthians 3:6 in Kannada
ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು.
Naanu sasiyannu nettenu, apollo sanu neeru hoyidanu. Aadare belesuttaa bandaatanu devaru.
1 Corinthians 3:6 in English
- King James Version (KJV)
- I have planted, Apollos watered; but God gave the increase.
- World English Bible (WEB)
- I planted. Apollos watered. But God gave the increase.
- American Standard Version (ASV)
- I planted, Apollos watered; but God gave the increase.
- Bible in Basic English (BBE)
- I did the planting, Apollos did the watering, but God gave the increase.
- Darby Translation (DBY)
- I have planted; Apollos watered; but God has given the increase.
- Webster's Bible (WBS)
- I have planted, Apollos watered: but God hath given the increase.
- Young's Literal Translation (YLT)
- I planted, Apollos watered, but God was giving growth;
Read in context
- 4ಒಬ್ಬನು--ನಾನು ಪೌಲನ ವನೆಂದೂ ಮತ್ತೊಬ್ಬನು--ನಾನು ಅಪೊಲ್ಲೋಸನ ವನೆಂದೂ ಹೇಳುತ್ತಿರುವಾಗ ನೀವು ಪ್ರಾಪಂಚಿಕ ರಲ್ಲವೇ?
- 5ಹಾಗಾದರೆ ಪೌಲನು ಯಾರು? ಅಪೊಲ್ಲೋಸನು ಯಾರು? ಅವರು ಸೇವಕರು, ಅವರ ಮುಖಾಂತರ ನೀವು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆ ಮಾಡುವವ ರಾಗಿದ್ದಾರೆ.
- 6ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು.
- 7ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು.
- 8ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ; ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು.
Cross references
- 1 Corinthians 3:9–10 1 ಕೊರಿಂಥದವರಿಗೆ 3:9–10ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ. ದೇವರು ನನಗೆ ಕೃಪೆಯನ್ನು ಕೊಟ್ಟ ಪ್ರಕಾರ ನಾನು ಪ್ರವೀಣಶಿಲ್ಪಿಯಂತೆ ಆಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ; ಪ್ರತಿಯೊಬ್ಬನು ತಾನು ಅದರ ಮೇಲೆ ಹೇಗೆ ಕಟ್ಟುತ್ತಾನೋ ಎಚ್ಚರಿಕೆಯಾಗಿರಬೇಕು.
- Proverbs 11:25 ಜ್ಞಾನೋಕ್ತಿಗಳು 11:25ಉದಾರಿಯು ಪುಷ್ಠನಾಗು ವನು; ನೀರು ಹಾಯಿಸುವವನಿಗೆ ನೀರು ದೊರೆಯು ವದು.
- 2 Corinthians 10:14–15 2 ಕೊರಿಂಥದವರಿಗೆ 10:14–15ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ನಿಮ್ಮ ಬಳಿಗೆ ಬಂದ ನಾವು ನಿಮ್ಮನ್ನು ತಲುಪಲಿಲ್ಲವೋ ಎಂಬಂತೆ ಮೇರೆಯನ್ನು ಅತಿಕ್ರಮಿಸಿದವರಲ್ಲ. ನಾವು ಮೇರೆತಪ್ಪಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತಕ್ಕೊಂಡು ಇವು ನಮ್ಮವು ಎಂದು ಹೊಗಳಿಕೊಳ್ಳುವವರಲ್ಲ; ಆದರೆ ನಿಮ್ಮ ನಂಬಿಕೆಯು ಹೆಚ್ಚಿದ ಹಾಗೆಲ್ಲಾ ನಿಮ್ಮ ಮೂಲಕ ನಮ್ಮ ಮೇರೆಯೊಳಗೆ ಇನ್ನೂ ಅಭಿವೃದ್ಧಿ ಹೊಂದುವೆವು;
- 1 Corinthians 9:1 1 ಕೊರಿಂಥದವರಿಗೆ 9:1ನಾನು ಅಪೊಸ್ತಲನಲ್ಲವೇ? ನಾನು ಸ್ವತಂತ್ರನಲ್ಲವೇ? ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಾನು ನೋಡಿದವನಲ್ಲವೇ? ಕರ್ತನಲ್ಲಿ ನೀವು ನನ್ನ ಕೆಲಸವಲ್ಲವೇ?
- Acts 18:4–11 ಅಪೊಸ್ತಲರ ಕೃತ್ಯಗಳು 18:4–11ಅವನು ಪ್ರತಿ ಸಬ್ಬತ್ ದಿನವೂ ಸಭಾಮಂದಿರದಲ್ಲಿ ಚರ್ಚಿಸಿ ಯೆಹೂದ್ಯರನ್ನೂ ಗ್ರೀಕರನ್ನೂ ಒಡಂಬಡಿಸುತ್ತಿದ್ದನು. ಸೀಲ ತಿಮೊಥೆಯರು ಮಕೆದೋನ್ಯದಿಂದ ಬಂದಾಗ ಪೌಲನು ಆತ್ಮದಲ್ಲಿ ಒತ್ತಾಯ ಮಾಡಲ್ಪಟ್ಟು ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಸಾಕ್ಷಿಕೊಟ್ಟನು. ಅವರು ಎದುರಿಸಿ ದೇವದೂಷಣೆ ಮಾಡಲಾಗಿ ಅವನು ತನ್ನ ವಸ್ತ್ರವನ್ನು ಝಾಡಿಸಿ ಅವರಿಗೆ--ನಿಮ್ಮ ರಕ್ತವು ನಿಮ್ಮ ತಲೆಗಳ ಮೇಲೆ ಇರಲಿ; ನಾನು ಇಂದಿನಿಂದ ದೋಷರಹಿತನಾಗಿ ಅನ್ಯಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿ ಆ ಸ್ಥಳದಿಂದ ಹೊರಟು ದೇವರನ್ನು ಆರಾಧಿಸುವವನಾಗಿದ್ದ ಯುಸ್ತನೆಂಬವನ ಮನೆಗೆ ಹೋದನು. ಅವನ ಮನೆ ಸಭಾಮಂದಿರದ ಮಗ್ಗುಲಲ್ಲೇ ಇತ್ತು. ಸಭಾಮಂದಿರದ ಮುಖ್ಯಾಧಿಕಾರಿಯಾದ ಕ್ರಿಸ್ಪನು ತನ್ನ ಮನೆಯವರೆಲ್ಲರ ಸಹಿತ ಕರ್ತನಲ್ಲಿ ನಂಬಿಕೆಯಿಟ್ಟನು. ಕೊರಿಂಥ ದಲ್ಲಿ ಅನೇಕರು ಕೇಳಿ ನಂಬಿ ಬಾಸ್ತಿಸ್ಮ ಮಾಡಿಸಿಕೊಂಡರು. ಇದಲ್ಲದೆ ಕರ್ತನು ರಾತ್ರಿಯಲ್ಲಿ ಪೌಲನಿಗೆ ದರ್ಶನ ಕೊಟ್ಟು--ನೀನು ಹೆದರಬೇಡ; ಸುಮ್ಮನಿರದೆ ಮಾತ ನಾಡುತ್ತಲೇ ಇರು. ನಾನೇ ನಿನ್ನೊಂದಿಗಿದ್ದೇನೆ; ಯಾರೂ ನಿನ್ನ ಮೇಲೆ ಬಿದ್ದು ಕೇಡುಮಾಡುವದಿಲ್ಲ; ಈ ಪಟ್ಟಣದಲ್ಲಿ ಬಹಳ ಮಂದಿ ನನಗೆ ಇದ್ದಾರೆ ಎಂದು ಹೇಳಿದನು. ಅವನು ಒಂದು ವರುಷ ಆರು ತಿಂಗಳು ಅಲ್ಲೇ ಇದ್ದುಕೊಂಡು ಅವರಲ್ಲಿ ದೇವರ ವಾಕ್ಯವನ್ನು ಉಪದೇಶ ಮಾಡುತ್ತಿದ್ದನು.
- 1 Corinthians 1:30 1 ಕೊರಿಂಥದವರಿಗೆ 1:30ಆದರೆ ನೀವು ಕ್ರಿಸ್ತ ಯೇಸುವಿನಲ್ಲಿ ರುವದು ಆತನಿಂದಲೇ; ಆತನು ನಮಗೆ ದೇವರ ಕಡೆಯಿಂದ ಜ್ಞಾನವು ನೀತಿ ಶುದ್ಧೀಕರಣ ವಿಮೋಚನೆ ಗಳಾಗಿ ಮಾಡಲ್ಪಟ್ಟಿದ್ದಾನೆ.ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
- Acts 19:1 ಅಪೊಸ್ತಲರ ಕೃತ್ಯಗಳು 19:1ಇದಾದ ಮೇಲೆ ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮೇಲ್ಭಾ ಗದ ತೀರಗಳನ್ನು ದಾಟಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡನು.
- Isaiah 55:10–11 ಯೆಶಾಯ 55:10–11ಮಳೆಯೂ ಹಿಮವೂ ಆಕಾಶದಿಂದ ಇಳಿದು ಬಂದು ಅಲ್ಲಿಗೆ ಹಿಂತಿರುಗಿ ಹೋಗದೆ ಭೂಮಿಯನ್ನು ತೋಯಿಸಿ ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ರೊಟ್ಟಿಯನ್ನೂ ಕೊಡು ವಂತೆಯೂ ಫಲವನ್ನು ಹುಟ್ಟಿಸಿ ಚಿಗುರುಗೊಳಿಸುವ ಹಾಗೆಯೂ, ನನ್ನ ಬಾಯಿಂದ ಹೊರಡುವ ನನ್ನ ವಾಕ್ಯವು ಹಾಗೆಯೂ ಇರುವದು; ಅದು ಸುಮ್ಮನೆ ನನ್ನ ಬಳಿಗೆ ಹಿಂತಿರುಗದೆ ನಾನು ಯಾವದನ್ನು ಮೆಚ್ಚು ತ್ತೇನೋ ಅದನ್ನು ಅದು ಮಾಡುವದು; ನಾನು ಅದನ್ನು ಯಾವದರ ನಿಮಿತ್ತ ಕಳುಹಿಸಿದೆನೋ ಅದರಲ್ಲಿ ಅದು ಸಫಲವಾಗುವದು.
- Acts 18:26–27 ಅಪೊಸ್ತಲರ ಕೃತ್ಯಗಳು 18:26–27ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಪೂರ್ಣವಾಗಿ ವಿವರಿಸಿದರು. ಅವನು ಅಖಾಯಕ್ಕೆ ಹೋಗಬೇಕೆಂದು ಮನಸ್ಸು ಮಾಡಿದಾಗ ಅಲ್ಲಿದ್ದ ಶಿಷ್ಯರು ಅವನನ್ನು ಸೇರಿಸಿಕೊಳ್ಳಬೇಕೆಂದು ಪ್ರೋತ್ಸಾಹ ಮಾಡಿ ಸಹೋದರರು ಅವರಿಗೆ ಬರೆದರು; ಅವನು ಅಲ್ಲಿಗೆ ಬಂದು ಕೃಪೆಯಿಂದ ನಂಬಿದ್ದವರಿಗೆ ಹೆಚ್ಚಾಗಿ ಸಹಾಯ ಮಾಡಿದನು;ಹೇಗಂದರೆ ಯೇಸುವೇ ಕ್ರಿಸ್ತನೆಂದು ಅವನು ಬರಹಗಳಿಂದ ತೋರಿಸಿ ಬಹಿ ರಂಗದಲ್ಲಿ ಯೆಹೂದ್ಯರು ಬಲವಾಗಿ ಒಪ್ಪಿಕೊಳ್ಳುವಂತೆ ಮಾಡಿದನು.
- Psalm 92:13–15 ಕೀರ್ತನೆಗಳು 92:13–15ಅವರು ಕರ್ತನ ಆಲಯದಲ್ಲಿ ನೆಡಲ್ಪಟ್ಟು ನಮ್ಮ ದೇವರ ಅಂಗಳಗಳಲ್ಲಿ ವೃದ್ಧಿಯಾಗುವರು. ಮುದಿ ಪ್ರಾಯದಲ್ಲಿಯೂ ಫಲ ಫಲಿಸುವರು. ಅವರು ಪುಷ್ಟಿಯಾಗಿ ವೃದ್ಧಿಯಾಗುವರು.ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ. ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ.
- 2 Corinthians 3:2–5 2 ಕೊರಿಂಥದವರಿಗೆ 3:2–5ನಮ್ಮನ್ನು ನಾವೇ ತಿರಿಗಿ ಹೊಗಳಿಕೊಳ್ಳು ವದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿಮ್ಮಿಂದ ಪಡಕೊಳ್ಳ ಬೇಕೋ? ನೀವು ಕ್ರಿಸ್ತನು ನಮ್ಮ ಕೈಯಿಂದ ಬರೆಯಿಸಿ ಕೊಟ್ಟ ಪತ್ರಿಕೆಯಾಗಿದ್ದೀರೆಂಬದು ಪ್ರತ್ಯಕ್ಷವಾಗಿಯೇ ಇದೆ; ಅದು ಮಸಿಯಿಂದ ಬರೆದದ್ದಲ್ಲ, ಆದರೆ ಜೀವವುಳ್ಳ ದೇವರ ಆತ್ಮನಿಂದಲೇ ಬರೆದದ್ದು; ಕಲ್ಲಿನ ಹಲಿಗೆಗಳ ಮೇಲೆಯಲ್ಲ, ಮನುಷ್ಯನ ಹೃದಯವೆಂಬ ಹಲಿಗೆಗಳ ಮೇಲೆ ಬರೆದದ್ದು. ಇಂಥ ಭರವಸವು ಕ್ರಿಸ್ತನ ಮೂಲಕವೇ ದೇವರ ಮುಂದೆ ನಮಗುಂಟು. ನಮ್ಮಿಂದಲೇ ಏನಾದರೂ ಉಂಟಾಯಿ ತೆಂದು ಆಲೋಚಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು;
- Acts 16:14 ಅಪೊಸ್ತಲರ ಕೃತ್ಯಗಳು 16:14ದೇವರನ್ನು ಆರಾಧಿಸು ತ್ತಿದ್ದವಳೂ ಥುವತೈರ ಪಟ್ಟಣದವಳೂ ಧೂಮ್ರ ವರ್ಣದ ವಸ್ತ್ರಗಳನ್ನು ಮಾರುತ್ತಿದ್ದವಳೂ ಆದ ಲುದ್ಯ ಳೆಂಬ ಹೆಸರುಳ್ಳ ಒಬ್ಬ ಸ್ತ್ರೀಯು ನಮ್ಮ ಮಾತುಗಳನ್ನು ಕೇಳುತ್ತಿದ್ದಳು. ಕರ್ತನು ಆಕೆಯ ಹೃದಯವನ್ನು ತೆರದ ದ್ದರಿಂದ ಪೌಲನು ಹೇಳಿದ ಮಾತುಗಳಿಗೆ ಆಕೆಯು ಲ