Proverbs · chapter 11 · verse 25
Proverbs 11:25 in Kannada
ಉದಾರಿಯು ಪುಷ್ಠನಾಗು ವನು; ನೀರು ಹಾಯಿಸುವವನಿಗೆ ನೀರು ದೊರೆಯು ವದು.
Udaariyu pushthanaagu vanu; neeru haayisuvavanige neeru doreyu vadu.
Proverbs 11:25 in English
- King James Version (KJV)
- The liberal soul shall be made fat: and he that watereth shall be watered also himself.
- World English Bible (WEB)
- The liberal soul shall be made fat. He who waters shall be watered also himself.
- American Standard Version (ASV)
- The liberal soul shall be made fat; And he that watereth shall be watered also himself.
- Bible in Basic English (BBE)
- He who gives blessing will be made fat, but the curser will himself be cursed.
- Darby Translation (DBY)
- The liberal soul shall be made fat, and he that watereth shall be watered also himself.
- Webster's Bible (WBS)
- The liberal soul shall be made fat: and he that watereth shall be watered also himself.
- Young's Literal Translation (YLT)
- A liberal soul is made fat, And whoso is watering, he also is watered.
Read in context
- 23ನೀತಿವಂತರು ಒಳ್ಳೇಯದನ್ನು ಮಾತ್ರ ಅಪೇಕ್ಷಿಸುತ್ತಾರೆ; ದುಷ್ಟರ ಅಪೇಕ್ಷೆಯು ಕೋಪ ವಾಗಿದೆ.
- 24ಚದುರಿಸಿದಾಗ್ಯೂ ವೃದ್ಧಿಯಾಗುತ್ತದೆ; ಬೇಕಾದದ್ದಕ್ಕಿಂತ ಹೆಚ್ಚಿನದನ್ನು ಬಿಗಿಹಿಡಿಯುವಂಥದ್ದು ಬಡತನಕ್ಕೆ ನಡಿಸುತ್ತದೆ.
- 25ಉದಾರಿಯು ಪುಷ್ಠನಾಗು ವನು; ನೀರು ಹಾಯಿಸುವವನಿಗೆ ನೀರು ದೊರೆಯು ವದು.
- 26ಧಾನ್ಯವನ್ನು ಬಿಗಿಹಿಡಿಯುವವನನ್ನು ಜನರು ಶಪಿಸುವರು; ಅದನ್ನು ಮಾರುವವನ ತಲೆಯ ಮೇಲೆ ಆಶೀರ್ವಾದವು ನೆಲೆಯಾಗಿರುವದು.
- 27ಒಳ್ಳೇದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದು ತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವದು.
Cross references
- Matthew 5:7 ಮತ್ತಾಯನು 5:7ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು.
- 2 Corinthians 9:6–9 2 ಕೊರಿಂಥದವರಿಗೆ 9:6–9ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ. ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ. ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾ ಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆ ಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ. (ಬರೆದಿರುವ ಪ್ರಕಾರ--ಆತನು ಬಡವರಿಗೆ ಧಾರಾಳವಾಗಿ ಹಂಚಿಕೊಟ್ಟನು; ಆತನ ನೀತಿಯು ಸದಾಕಾಲವೂ ಇರುವದು ಎಂಬದೇ.
- Isaiah 58:7–11 ಯೆಶಾಯ 58:7–11ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ? ಹೀಗಾದರೆ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವದು. ನಿನ್ನ ಕ್ಷೇಮವು ಬೇಗನೆ ಚಿಗುರು ವದು. ನಿನ್ನ ನೀತಿಯು ನಿನಗೆ ಮುಂಬಲವಾಗಿ ಮುಂದ ರಿಯುವದು. ಕರ್ತನ ಮಹಿಮೆಯು ನಿನಗೆ ಹಿಂಬಲ ವಾಗಿರುವದು. ಆಗ ನೀನು ಕರೆದರೆ ಕರ್ತನು ಉತ್ತರ ಕೊಡುವನು; ನೀನು ಕೂಗುವಿ ಆಗ ಆತನು--ನಾನು ಇಲ್ಲಿ ಇದ್ದೇನೆ ಅನ್ನುವನು. ನೀನು ನಿನ್ನ ಮಧ್ಯದೊಳ ಗಿಂದ ನೊಗವನ್ನೂ ಬೆರಳ ಸನ್ನೆಯನ್ನೂ ವ್ಯರ್ಥವಾದ ಸಂಭಾಷಣೆಯನ್ನೂ ತೆಗೆದುಹಾಕಿ, ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ಕುಂದಿ ಹೋದವನ ಪ್ರಾಣವನ್ನು ತೃಪ್ತಿಪಡಿಸಿದರೆ ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವದು. ನಿನ್ನ ಅಂಧ ಕಾರವು ಮಧ್ಯಾಹ್ನದ ಹಾಗೆ ಇರುವದು. ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.
- Matthew 25:34–35 ಮತ್ತಾಯನು 25:34–35ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ--ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ; ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ;
- Isaiah 32:8 ಯೆಶಾಯ 32:8ಘನವಂತನಾ ದರೋ, ಘನಕಾರ್ಯಗಳನ್ನು ಕಲ್ಪಿಸುವನು; ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
- Proverbs 28:27 ಜ್ಞಾನೋಕ್ತಿಗಳು 28:27ಬಡವರಿಗೆ ದಾನಮಾಡು ವವರು ಕೊರತೆಪಡುವದಿಲ್ಲ; ತನ್ನ ಕಣ್ಣುಗಳನ್ನು ಮುಚ್ಚಿ ಕೊಳ್ಳುವವನಿಗೆ ಅನೇಕ ಶಾಪಗಳು.ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ. ಅವರು ನಾಶ ವಾದರೆ ನೀತಿವಂತರು ವೃದ್ಧಿಯಾಗುತ್ತಾರೆ.
- Job 29:13–18 ಯೋಬನು 29:13–18ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು. ನೀತಿಯನ್ನು ಧರಿಸಿಕೊಂಡೆನು; ಅದೇ ನನಗೆ ವಸ್ತ್ರದಹಾಗಿತ್ತು; ನಿಲು ವಂಗಿಯ ಹಾಗೆಯೂ ಕಿರೀಟದ ಹಾಗೆಯೂ ನನ್ನ ನ್ಯಾಯವು ನನಗೆ ಇತ್ತು. ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು. ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು. ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು. ನನ್ನ ಗೂಡಿನಲ್ಲಿ ನಾನು ಸಾಯುವೆನು, ಮರಳಿ ನಂತೆ ನನ್ನ ದಿವಸಗಳನ್ನು ಹೆಚ್ಚಿಸುವೆನು ಅಂದೆನು.
- Job 31:16–20 ಯೋಬನು 31:16–20ನಾನು ಬಡವರ ಇಷ್ಟವನ್ನು ಹಿಂತೆಗೆದಿದ್ದರೆ ವಿಧ ವೆಯ ಕಣ್ಣುಗಳನ್ನು ನಿರಾಶೆಪಡಿಸಿದ್ದರೆ, ದಿಕ್ಕಿಲ್ಲದ ವನು ಅದರಲ್ಲಿ ಉಣ್ಣದ ಹಾಗೆ ನಾನು ಮಾತ್ರ ನನ್ನ ತುತ್ತು ಉಂಡಿದ್ದರೆ, (ಯಾಕಂದರೆ ನನ್ನ ಯೌವನದಿಂದ ನನ್ನೊಂದಿಗೆ ನಾನು ಅವನನ್ನು ತಂದೆ ಯಂತೆ ಬೆಳೆಸಿದೆನಲ್ಲಾ. ನನ್ನ ತಾಯಿಯ ಗರ್ಭದಿಂದ ಅವಳನ್ನು ನಡಿಸಿದೆನಲ್ಲಾ). ಬಟ್ಟೆ ಇಲ್ಲದೆ ನಾಶ ವಾಗುವವನನ್ನೂ ದರಿದ್ರನಿಗೆ ಹೊದಿಕೆ ಇಲ್ಲದಿರುವ ದನ್ನೂ ನಾನು ನೋಡಿದ್ದರೆ ಅವನ ಸೊಂಟವು ನನ್ನನ್ನು ಆಶೀರ್ವದಿಸದಿದ್ದರೆ ನನ್ನ ಕುರಿ ಮಂದೆಯ ಉಣ್ಣೆಯಿಂದ ಅವನಿಗೆ ಬೆಚ್ಚಗೆ ಆಗದಿದ್ದರೆ