1 John · chapter 2 · verse 17
1 John 2:17 in Kannada
ಲೋಕವು ಅದರ ಆಶೆಯೂ ಗತಿಸಿಹೋಗುತ್ತವೆ, ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.
Lokavu adara aasheyoo gatisihoguttave, aadare devara chittavannu neraverisuvavanu endendigoo iruvanu.
1 John 2:17 in English
- King James Version (KJV)
- And the world passeth away, and the lust thereof: but he that doeth the will of God abideth for ever.
- World English Bible (WEB)
- The world is passing away with its lusts, but he who does God’s will remains forever.
- American Standard Version (ASV)
- And the world passeth away, and the lust thereof: but he that doeth the will of God abideth for ever.
- Bible in Basic English (BBE)
- And the world and its desires is coming to an end: but he who does God's pleasure is living for ever.
- Darby Translation (DBY)
- And the world is passing, and its lust, but he that does the will of God abides for eternity.
- Webster's Bible (WBS)
- And the world passeth away, and the lust of it: but he that doeth the will of God abideth for ever.
- Young's Literal Translation (YLT)
- and the world doth pass away, and the desire of it, and he who is doing the will of God, he doth remain — to the age.
Read in context
- 15ಲೋಕವನ್ನಾಗಲಿ ಲೋಕದಲ್ಲಿರುವವುಗಳ ನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕ ವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.
- 16ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
- 17ಲೋಕವು ಅದರ ಆಶೆಯೂ ಗತಿಸಿಹೋಗುತ್ತವೆ, ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.
- 18ಚಿಕ್ಕ ಮಕ್ಕಳೇ, ಇದು ಕಡೇ ಗಳಿಗೆಯಾಗಿದೆ;ಕ್ರಿಸ್ತವಿರೋಧಿಯು ಬರುತ್ತಾನೆಂದು ನೀವು ಕೇಳಿದ ಪ್ರಕಾರ ಈಗಲೂ ಕ್ರಿಸ್ತ ವಿರೋಧಿಗಳು ಬಹುಮಂದಿ ಇದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ನಾವು ತಿಳಿದುಕೊಳ್ಳುತ್ತೇವೆ.
- 19ಅವರು ನಮ್ಮಿಂದ ಹೊರಟುಹೋದರು; ಆದರೆ ಅವರು ನಮ್ಮವ ರಾಗಿರಲಿಲ್ಲ. ಯಾಕಂದರೆ ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಆದರೆ ಅವರು ನಮ್ಮಿಂದ ಹೊರಟು ಹೋದದರಿಂದ ಅವರೆಲ್ಲರೂ ನಮ್ಮವರಲ್ಲವೆಂಬದು ತೋರಿಬಂತು.
Cross references
- Matthew 24:35 ಮತ್ತಾಯನು 24:35ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
- 1 Corinthians 7:31 1 ಕೊರಿಂಥದವರಿಗೆ 7:31ಲೋಕವನ್ನು ಅನುಭೋಗಿಸುವವರು ಅದನ್ನು ದುರುಪಯೋಗ ಮಾಡದವರಂತೆಯೂ ಇರಬೇಕು; ಯಾಕಂದರೆ ಈ ಲೋಕದ ಆಡಂಬರವು ಗತಿಸಿಹೋಗುತ್ತದೆ.
- Romans 12:2 ರೋಮಾಪುರದವರಿಗೆ 12:2ಇಹಲೋಕವನ್ನು ಅನುಸರಿಸದೆ ಉತ್ತಮ ವಾದದ್ದೂ ಮೆಚ್ಚಿಕೆಯಾದದ್ದೂ ಪರಿಪೂರ್ಣ ವಾದದ್ದೂ ಆಗಿರುವ ದೇವರ ಚಿತ್ತವೇನೆಂದು ನೀವು ವಿವೇಚಿಸಿ ತಿಳಿದುಕೊಳ್ಳುವಂತೆ ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ.
- 1 Peter 4:2 1 ಪೇತ್ರನು 4:2ಹೀಗೆ ಶರೀರದಲ್ಲಿ ಇನ್ನು ಉಳಿದಿರುವ ತನ್ನ ಜೀವಿತಕಾಲದಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವನು.
- Hebrews 10:36 ಇಬ್ರಿಯರಿಗೆ 10:36ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ.
- Mark 3:35 ಮಾರ್ಕನು 3:35ಯಾಕಂದರೆ ಯಾವನು ದೇವರ ಚಿತ್ತದಂತೆ ಮಾಡುವನೋ ಅವನೇ ನನ್ನ ಸಹೋದರನೂ ನನ್ನ ಸಹೋದರಿಯೂ ನನ್ನ ತಾಯಿಯೂ ಆಗಿದ್ದಾರೆ ಅಂದನು.
- Isaiah 40:6–8 ಯೆಶಾಯ 40:6–8ವಾಣಿಯು ಕೂಗು ಅನ್ನುತ್ತದೆ. ಅವನು--ನಾನು ಏನು ಕೂಗಲಿ ಅನ್ನಲು ಎಲ್ಲಾ ನರಮನುಷ್ಯರು ಹುಲ್ಲಿನ ಹಾಗಿದ್ದಾರೆ. ಕರ್ತನ ಶ್ವಾಸವು ಅವರ ಮೇಲೆ ಬೀಸುವದರಿಂದ ಅವರ ಲಾವಣ್ಯವೆಲ್ಲಾ ಹೊಲದ ಹೂವಿನಂತಿದೆ. ಹುಲ್ಲು ಒಣಗಿ ಹೋಗು ವದು ಹೂವು ಬಾಡಿಹೋಗುವದು. ಕರ್ತನ ಆತ್ಮ ಅವುಗಳ ಮೇಲೆ ಊದುವನು; ನಿಶ್ಚಯವಾಗಿ ಜನರು ಹುಲ್ಲೇ. ಹುಲ್ಲು ಒಣಗಿಹೋಗುವದು ಹೂವು ಬಾಡಿಹೋಗುವದು. ಆದರೆ ನಮ್ಮ ದೇವರ ವಾಕ್ಯವು ಸದಾಕಾಲ ನಿಲ್ಲುವದು ಎಂದು ಉತ್ತರವಾಯಿತು.
- 1 Peter 1:24–25 1 ಪೇತ್ರನು 1:24–25ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯನ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವದು, ಅದರ ಹೂವು ಉದುರಿ ಹೋಗು ವದು;ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ. ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.
- John 10:28–30 ಯೋಹಾನನು 10:28–30ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ; ಅವು ಎಂದಿಗೂ ನಾಶವಾಗುವದಿಲ್ಲ; ಇಲ್ಲವೆ ಅವು ಗಳನ್ನು ಯಾವನೂ ನನ್ನ ಕೈಯೊಳಗಿಂದ ಕಸಕೊಳ್ಳ ಲಾರನು. ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತಲೂ ದೊಡ್ಡವನು; ನನ್ನ ತಂದೆಯ ಕೈಯೊಳ ಗಿಂದ ಅವುಗಳನ್ನು ಯಾವನೂ ಕಸಕೊಳ್ಳಲಾರನು. ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.
- Psalm 143:10 ಕೀರ್ತನೆಗಳು 143:10ನಿನ್ನ ಚಿತ್ತದಂತೆ ಮಾಡುವದಕ್ಕೆ ನನಗೆ ಬೋಧಿಸು; ನೀನು ನನ್ನ ದೇವರು; ಒಳ್ಳೇದಾಗಿರುವ ನಿನ್ನ ಆತ್ಮವು ನನ್ನನ್ನು ನೆಟ್ಟನೆಯ ಭೂಮಿಯಲ್ಲಿ ನಡಿಸಲಿ.
- 1 Thessalonians 4:3 1 ಥೆಸಲೊನೀಕದವರಿಗೆ 4:3ದೇವರ ಚಿತ್ತವೇನಂದರೆ, ನೀವು ಶುದ್ಧರಾಗಿರಬೇಕೆಂಬದೇ; ಆದದರಿಂದ ಹಾದರಕ್ಕೆ ದೂರವಾಗಿರಬೇಕು.
- 1 Peter 1:5 1 ಪೇತ್ರನು 1:5ಅಂತ್ಯ ಕಾಲದಲ್ಲಿ ಪ್ರಕಟವಾಗುವದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ನಂಬಿಕೆಯ ಮುಖಾಂತರ ದೇವರು ನಿಮ್ಮನ್ನು ತನ್ನ ಬಲದಿಂದ ಕಾಯುತ್ತಾನೆ.