1 John · chapter 3 · verse 13
1 John 3:13 in Kannada
ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.
Nanna sahodarare, lokavu nimmannu dveshisidare aashcharyapadabediri.
1 John 3:13 in English
- King James Version (KJV)
- Marvel not, my brethren, if the world hate you.
- World English Bible (WEB)
- Don’t be surprised, my brothers, if the world hates you.
- American Standard Version (ASV)
- Marvel not, brethren, if the world hateth you.
- Bible in Basic English (BBE)
- Do not be surprised, my brothers, if the world has no love for you.
- Darby Translation (DBY)
- Do not wonder, brethren, if the world hate you.
- Webster's Bible (WBS)
- Marvel not, my brethren, if the world hate you.
- Young's Literal Translation (YLT)
- Do not wonder, my brethren, if the world doth hate you;
Read in context
- 11ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾರ್ತೆಯಾಗಿದೆ.
- 12ಕೆಡುಕ ನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನ ನಂತೆ ಅಲ್ಲ. ಯಾವ ಕಾರಣದಿಂದ ಅವನನ್ನು ಕೊಂದು ಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದದರಿಂದಲೇ.
- 13ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.
- 14ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.
- 15ಯಾರಾದರೂ ತನ್ನ ಸಹೋದರನನ್ನು ದ್ವೇಷಿಸುವ ವನು ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರ ನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ.
Cross references
- John 15:18–19 ಯೋಹಾನನು 15:18–19ಲೋಕವು ನಿಮ್ಮನ್ನು ದ್ವೇಷಮಾಡಿದರೆ ನಿಮಗಿಂತ ಮೊದಲು ಅದು ನನ್ನನ್ನು ದ್ವೇಷಮಾಡಿದೆ ಎಂದು ನಿಮಗೆ ತಿಳಿದದೆ. ನೀವು ಲೋಕದವರಾಗಿದ್ದರೆ ಲೋಕವು ತನ್ನವರನ್ನು ಪ್ರೀತಿಸುತ್ತಿತ್ತು; ಆದರೆ ನೀವು ಲೋಕದವರಲ್ಲದೆ ಇರುವದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಮಾಡುತ್ತದೆ.
- John 17:14 ಯೋಹಾನನು 17:14ನಾನು ನಿನ್ನ ವಾಕ್ಯವನ್ನು ಅವರಿಗೆ ಕೊಟ್ಟಿದ್ದೇನೆ ನಾನು ಲೋಕದವನಲ್ಲದ ಪ್ರಕಾರ ಅವರೂ ಲೋಕದವರಲ್ಲವಾದದರಿಂದ ಲೋಕವು ಅವರನ್ನು ಹಗೆಮಾಡಿಯದೆ.
- Luke 21:17 ಲೂಕನು 21:17ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಎಲ್ಲರೂ ದ್ವೇಷಿಸುವರು.
- Luke 6:22 ಲೂಕನು 6:22ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ಹಗೆಮಾಡಿ ನಿಮ್ಮನ್ನು ಬಹಿಷ್ಕರಿಸಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕಿದರೆ ನೀವು ಧನ್ಯರು.
- James 4:4 ಯಾಕೋಬನು 4:4ವ್ಯಭಿಚಾರಿಗಳೇ, ವ್ಯಭಿಚಾರಿಣಿ ಯರೇ, ಇಹಲೋಕ ಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಿರ ಬೇಕೆಂದಿರುವವನು ದೇವರಿಗೆ ವೈರಿಯಾಗಿದ್ದಾನೆ.
- Mark 13:13 ಮಾರ್ಕನು 13:13ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡು ವರು. ಆದರೆ ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು.
- 2 Timothy 3:12 2 ತಿಮೊಥೆಯನಿಗೆ 3:12ಹೌದು, ಕ್ರಿಸ್ತ ಯೇಸುವಿನಲ್ಲಿ ಭಕ್ತಿ ಯುಳ್ಳವರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವ ರೆಲ್ಲರೂ ಹಿಂಸೆಗೊಳಗಾಗುವರು.
- Romans 8:7 ರೋಮಾಪುರದವರಿಗೆ 8:7ಶರೀರ ಸಂಬಂಧವಾದ ಮನಸ್ಸು ದೇವರಿಗೆ ಶತ್ರುತ್ವವು; ಕಾರಣವೇನಂದರೆ ಅಂಥ ಮನಸ್ಸು ದೇವರ ನಿಯಮಕ್ಕೆ ಒಳಪಡುವದಿಲ್ಲ, ಒಳಪಡುವದಕ್ಕಾಗುವದೂ ಇಲ್ಲ.
- John 16:33 ಯೋಹಾನನು 16:33ನನ್ನಲ್ಲಿ ನಿಮಗೆ ಸಮಾಧಾನವು ಉಂಟಾಗುವಂತೆ ಇವುಗಳನ್ನು ನಾನು ನಿಮಗೆ ಹೇಳಿದ್ದೇನೆ, ಲೋಕದಲ್ಲಿ ನಿಮಗೆ ಸಂಕಟ ಇರುವದು; ಆದರೆ ಧೈರ್ಯವಾಗಿರ್ರಿ; ನಾನು ಲೋಕ ವನ್ನು ಜಯಿಸಿದ್ದೇನೆ ಅಂದನು.
- Matthew 24:9 ಮತ್ತಾಯನು 24:9ಆಗ ನಿಮ್ಮನ್ನು ಸಂಕಟಪಡಿ ಸುವದಕ್ಕಾಗಿ ಒಪ್ಪಿಸುವರು; ಮತ್ತು ನಿಮ್ಮನ್ನು ಕೊಲ್ಲು ವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆ ಮಾಡುವರು.
- Matthew 10:22 ಮತ್ತಾಯನು 10:22ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡುವರು; ಆದರೆ ಕಡೆಯ ವರೆಗೆ ತಾಳುವವನು ರಕ್ಷಣೆ ಹೊಂದುವನು.
- Ecclesiastes 5:8 ಪ್ರಸಂಗಿ 5:8ಬಡವರ ಹಿಂಸೆಯನ್ನೂ ಒಬ್ಬ ಅಧಿಪತಿಯಲ್ಲಿ ನೀತಿ ನ್ಯಾಯಗಳ ಬಲಾತ್ಕಾರದ ವಕ್ರತೆಯನ್ನೂ ನೀನು ನೋಡಿದರೆ ಆ ಸಂಗತಿಯಲ್ಲಿ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷಿಸುತ್ತಾನೆ; ಅವರಿಗಿಂತ ಉನ್ನತವಾ ದವರು ಇದ್ದಾರೆ.