1 John · chapter 4 · verse 21
1 John 4:21 in Kannada
ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
Devarannu preetisuvavanu tanna sahodaranannoo preetisabekemba ee aajnye yannu naavu aataninda hondiddeve.
1 John 4:21 in English
- King James Version (KJV)
- And this commandment have we from him, That he who loveth God love his brother also.
- World English Bible (WEB)
- This commandment we have from him, that he who loves God should also love his brother.
- American Standard Version (ASV)
- And this commandment have we from him, that he who loveth God love his brother also.
- Bible in Basic English (BBE)
- And this is the word which we have from him, that he who has love for God is to have the same love for his brother.
- Darby Translation (DBY)
- And this commandment have we from him, That he that loves God love also his brother.
- Webster's Bible (WBS)
- And this commandment have we from him, That he who loveth God, love his brother also.
- Young's Literal Translation (YLT)
- and this [is] the command we have from Him, that he who is loving God, may also love his brother.
Read in context
- 19ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ.
- 20ಒಬ್ಬನು--ನಾನು ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳಿ ತನ್ನ ಸಹೋದರನನ್ನು ಹಗೆ ಮಾಡಿದರೆ ಅವನು ಸುಳ್ಳುಗಾರನಾಗಿದ್ದಾನೆ. ಯಾಕಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು ಕಾಣದಿರುವ ದೇವರನ್ನು ಅವನು ಹೇಗೆ ಪ್ರೀತಿಸಾನು?ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
- 21ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
Cross references
- Matthew 22:37–39 ಮತ್ತಾಯನು 22:37–39ಯೇಸು ಅವ ನಿಗೆ--ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣ ದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು. ಈ ಆಜ್ಞೆಯು ಮೊದಲನೆಯದೂ ದೊಡ್ಡದೂ ಆಗಿದೆ. ಅದರಂತೆ-- ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕೆಂಬದು ಎರಡನೆಯದು.
- Leviticus 19:18 ಯಾಜಕಕಾಂಡ 19:18ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆಮುಯ್ಯಿ ತೀರಿಸದವ ನಾಗಿಯೂ ಸೇಡು ತೀರಿಸದೆಯೂ ಇರು. ಆದರೆ ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು; ನಾನೇ ಕರ್ತನು.
- 1 John 3:11 1 ಯೋಹಾನನು 3:11ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾರ್ತೆಯಾಗಿದೆ.
- Galatians 5:14 ಗಲಾತ್ಯದವರಿಗೆ 5:14ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬ ಒಂದೇ ಮಾತಿನಲ್ಲಿ ನ್ಯಾಯಪ್ರಮಾಣವೆಲಾ ನೆರವೇರುತ್ತದೆ.
- 1 Peter 3:8 1 ಪೇತ್ರನು 3:8ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.
- 1 Thessalonians 4:9 1 ಥೆಸಲೊನೀಕದವರಿಗೆ 4:9ಆದರೆ ಸಹೋದರ ಪ್ರೀತಿಯ ವಿಷಯದಲ್ಲಿ ನಿಮಗೆ ಬರೆಯುವದು ಅವಶ್ಯವಿಲ್ಲ; ಒಬ್ಬರನ್ನೊಬ್ಬರು ಪ್ರೀತಿಸ ಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.
- John 15:12 ಯೋಹಾನನು 15:12ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನನ್ನ ಆಜ್ಞೆಯಾಗಿದೆ.
- John 13:34–35 ಯೋಹಾನನು 13:34–35ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಒಂದು ಹೊಸ ಆಜ್ಞೆಯನ್ನು ನಾನು ನಿಮಗೆ ಕೊಡುತ್ತೇನೆ--ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಇದರಿಂದ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳು ವರು ಎಂದು ಹೇಳಿದನು.
- Romans 12:9–10 ರೋಮಾಪುರದವರಿಗೆ 12:9–10ಪ್ರೀತಿಯು ನಿಷ್ಕಪಟವಾಗಿರಲಿ ಕೆಟ್ಟತನವನ್ನು ಹೇಸಿ ಕೊಂಡು ಒಳ್ಳೆಯದಕ್ಕೆ ಅಂಟಿಕೊಳ್ಳಿರಿ. ಸಹೋದರ ಪ್ರೀತಿಯಿಂದ ಒಬ್ಬರಿಗೊಬ್ಬರು ಕರುಣಾ ವಾತ್ಸಲ್ಯವುಳ್ಳ ವರಾಗಿರ್ರಿ; ಸನ್ಮಾನಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರ್ರಿ.
- 1 John 3:23 1 ಯೋಹಾನನು 3:23ಆತನ ಆಜ್ಞೆ ಯಾವದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನ ಹೆಸರನ್ನು ನಂಬಿ ಆತನು ನಮಗೆ ಆಜ್ಞೆಕೊಟ್ಟ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ.ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ವಾಸಮಾಡುತ್ತಾನೆ. ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿದ ಆತ್ಮನಿಂದಲೇ ನಾವು ಬಲ್ಲೆವು.
- 1 Peter 4:8 1 ಪೇತ್ರನು 4:8ಎಲ್ಲವುಗಳಿಗೆ ಮಿಗಿಲಾಗಿ ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಯಾಕಂದರೆ ಪ್ರೀತಿಯು ಎಷ್ಟೋ ಪಾಪಗಳನ್ನು ಮುಚ್ಚುತ್ತದೆ.
- 1 John 3:14 1 ಯೋಹಾನನು 3:14ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.