John · chapter 15 · verse 12
John 15:12 in Kannada
ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನನ್ನ ಆಜ್ಞೆಯಾಗಿದೆ.
Naanu nimmannu preetisida merege neevu obbarannobbaru preetisabekembade nanna aajnyeyaagide.
John 15:12 in English
- King James Version (KJV)
- This is my commandment, That ye love one another, as I have loved you.
- World English Bible (WEB)
- “This is my commandment, that you love one another, even as I have loved you.
- American Standard Version (ASV)
- This is my commandment, that ye love one another, even as I have loved you.
- Bible in Basic English (BBE)
- This is the law I give you: Have love one for another, even as I have love for you.
- Darby Translation (DBY)
- This is my commandment, that ye love one another, as I have loved you.
- Webster's Bible (WBS)
- This is my commandment, That ye love one another, as I have loved you.
- Young's Literal Translation (YLT)
- 'This is my command, that ye love one another, according as I did love you;
Read in context
- 10ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ಆತನ ಪ್ರೀತಿಯಲ್ಲಿ ನೆಲೆಯಾಗಿರು ವಂತೆಯೇ ನೀವು ನನ್ನ ಆಜ್ಞೆಗಳನ್ನು ಕೈಕೊಂಡರೆ ನನ್ನ ಪ್ರೀತಿಯಲ್ಲಿ ನೆಲೆಯಾಗಿರುವಿರಿ.
- 11ನನ್ನ ಆನಂದವು ನಿಮ್ಮಲ್ಲಿರುವ ಹಾಗೆಯೂ ನಿಮ್ಮ ಆನಂದವು ಸಂಪೂರ್ಣವಾಗುವ ಹಾಗೆಯೂ ನಾನು ಇವುಗಳನ್ನು ನಿಮಗೆ ಹೇಳಿದ್ದೇನೆ.
- 12ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನನ್ನ ಆಜ್ಞೆಯಾಗಿದೆ.
- 13ಒಬ್ಬನು ತನ್ನ ಸ್ನೇಹಿತರಿ ಗೋಸ್ಕರ ತನ್ನ ಪ್ರಾಣವನ್ನು ಕೊಡುವ ಪ್ರೀತಿಗಿಂತ ಹೆಚ್ಚಿನದು ಯಾವದೂ ಇಲ್ಲ.
- 14ನಾನು ನಿಮಗೆ ಆಜ್ಞಾಪಿಸಿರುವವುಗಳನ್ನು ಮಾಡಿದರೆ ನೀವು ನನ್ನ ಸ್ನೇಹಿತರಾಗಿರುವಿರಿ.
Cross references
- 1 John 4:21 1 ಯೋಹಾನನು 4:21ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
- 1 Peter 4:8 1 ಪೇತ್ರನು 4:8ಎಲ್ಲವುಗಳಿಗೆ ಮಿಗಿಲಾಗಿ ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಯಾಕಂದರೆ ಪ್ರೀತಿಯು ಎಷ್ಟೋ ಪಾಪಗಳನ್ನು ಮುಚ್ಚುತ್ತದೆ.
- John 13:34 ಯೋಹಾನನು 13:34ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಒಂದು ಹೊಸ ಆಜ್ಞೆಯನ್ನು ನಾನು ನಿಮಗೆ ಕೊಡುತ್ತೇನೆ--ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು.
- Ephesians 5:2 ಎಫೆಸದವರಿಗೆ 5:2ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
- Romans 12:10 ರೋಮಾಪುರದವರಿಗೆ 12:10ಸಹೋದರ ಪ್ರೀತಿಯಿಂದ ಒಬ್ಬರಿಗೊಬ್ಬರು ಕರುಣಾ ವಾತ್ಸಲ್ಯವುಳ್ಳ ವರಾಗಿರ್ರಿ; ಸನ್ಮಾನಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರ್ರಿ.
- 1 John 3:23 1 ಯೋಹಾನನು 3:23ಆತನ ಆಜ್ಞೆ ಯಾವದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನ ಹೆಸರನ್ನು ನಂಬಿ ಆತನು ನಮಗೆ ಆಜ್ಞೆಕೊಟ್ಟ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ.ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ವಾಸಮಾಡುತ್ತಾನೆ. ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿದ ಆತ್ಮನಿಂದಲೇ ನಾವು ಬಲ್ಲೆವು.
- 1 Peter 3:8 1 ಪೇತ್ರನು 3:8ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.
- 1 Peter 1:22 1 ಪೇತ್ರನು 1:22ನೀವು ಆತ್ಮನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡದ್ದರಿಂದ ನಿಷ್ಕಪಟ ವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರ ಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.
- 1 Thessalonians 3:12 1 ಥೆಸಲೊನೀಕದವರಿಗೆ 3:12ನಮ್ಮ ಪ್ರಿತಿಯು ನಿಮ್ಮ ಕಡೆಗೆ ಹೇಗೋ ಹಾಗೆಯೇ ನಿಮ್ಮ ಪ್ರೀತಿಯೂ ಒಬ್ಬರಿಂದೊಬ್ಬರಿಗೂ ಎಲ್ಲರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ನಿಮಗೆ ಅನುಗ್ರಹಿಸಲಿ.ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ ನಿಮ್ಮ ಹೃದಯಗಳನ್ನು ದೃಢಪಡಿಸಿ ತಂದೆಯಾದ ದೇವರ ಸಮಕ್ಷಮದಲ್ಲಿ ನೀವು ಪರಿ ಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ಮಾಡಲಿ.
- 1 Thessalonians 4:9 1 ಥೆಸಲೊನೀಕದವರಿಗೆ 4:9ಆದರೆ ಸಹೋದರ ಪ್ರೀತಿಯ ವಿಷಯದಲ್ಲಿ ನಿಮಗೆ ಬರೆಯುವದು ಅವಶ್ಯವಿಲ್ಲ; ಒಬ್ಬರನ್ನೊಬ್ಬರು ಪ್ರೀತಿಸ ಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.
- 1 John 3:11–18 1 ಯೋಹಾನನು 3:11–18ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾರ್ತೆಯಾಗಿದೆ. ಕೆಡುಕ ನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನ ನಂತೆ ಅಲ್ಲ. ಯಾವ ಕಾರಣದಿಂದ ಅವನನ್ನು ಕೊಂದು ಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದದರಿಂದಲೇ. ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ. ನಾವಂತೂ ಸಹೋದರರನ್ನು ಪ್ರೀತಿಸುವವರಾಗಿರುವದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ. ಯಾರಾದರೂ ತನ್ನ ಸಹೋದರನನ್ನು ದ್ವೇಷಿಸುವ ವನು ಕೊಲೆಗಾರನಾಗಿದ್ದಾನೆ. ಯಾವ ಕೊಲೆಗಾರ ನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ. ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ? ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು.
- 1 John 2:7–10 1 ಯೋಹಾನನು 2:7–10ಸಹೋದರರೇ, ನಾನು ನಿಮಗೆ ಬರೆಯುವದು ಹೊಸ ಅಪ್ಪಣೆಯಲ್ಲ, ಮೊದಲಿನಿಂದಲೂ ನಿಮಗಿದ್ದ ಹಳೆಯ ಅಪ್ಪಣೆಯಾಗಿದೆ; ಈ ಹಳೆಯ ಅಪ್ಪಣೆಯು ಮೊದಲಿನಿಂದಲೂ ನೀವು ಕೇಳಿದ ವಾಕ್ಯವೇ. ತಿರಿಗಿ ನಾನು ನಿಮಗೆ ಬರೆಯುವದು ಹೊಸ ಅಪ್ಪಣೆಯೇ; ಇದು ಆತನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ; ಯಾಕಂದರೆ ಕತ್ತಲೆಯು ಕಳೆದುಹೋಗುತ್ತದೆ.ನಿಜವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ. ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ. ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ ಮತ್ತು ಅವನಲ್ಲಿ ಆಟಂಕವಾದದ್ದು ಏನೂ ಇಲ್ಲ.