1 Kings · chapter 12 · verse 26
1 Kings 12:26 in Kannada
ಆದರೆ ಯಾರೊಬ್ಬಾಮನು ತನ್ನ ಹೃದಯದಲ್ಲಿ--ಈಗ ರಾಜ್ಯವು ದಾವೀದನ ಮನೆಗೆ ಹಿಂತಿರುಗುವದು.
Aadare yaarobbaamanu tanna hrudayadalli--eega raajyavu daaveedana manege hintiruguvadu.
1 Kings 12:26 in English
- King James Version (KJV)
- And Jeroboam said in his heart, Now shall the kingdom return to the house of David:
- World English Bible (WEB)
- Jeroboam said in his heart, “Now the kingdom will return to David’s house.
- American Standard Version (ASV)
- And Jeroboam said in his heart, Now will the kingdom return to the house of David:
- Bible in Basic English (BBE)
- And Jeroboam said in his heart, Now the kingdom will go back to the family of David:
- Darby Translation (DBY)
- And Jeroboam said in his heart, Now shall the kingdom return to the house of David.
- Webster's Bible (WBS)
- And Jeroboam said in his heart, Now shall the kingdom return to the house of David:
- Young's Literal Translation (YLT)
- and Jeroboam saith in his heart, 'Now doth the kingdom turn back to the house of David —
Read in context
- 24ಆದದರಿಂದ ಅವರು ಕರ್ತನ ವಾಕ್ಯವನ್ನು ಕೇಳಿ ಆ ವಾಕ್ಯದ ಪ್ರಕಾರವೇ ಹಿಂತಿರುಗಿ ಹೋದರು.
- 25ಯಾರೊಬ್ಬಾಮನು ಎಫ್ರಾಯಾಮನ ಬೆಟ್ಟದಲ್ಲಿ ಶೆಕೆಮನನ್ನು ಕಟ್ಟಿಸಿ ಅದರಲ್ಲಿ ವಾಸಿಸಿದನು. ಅಲ್ಲಿಂದ ಹೊರಟುಹೋಗಿ ಪೆನೂವೇಲನ್ನು ಕಟ್ಟಿಸಿದನು.
- 26ಆದರೆ ಯಾರೊಬ್ಬಾಮನು ತನ್ನ ಹೃದಯದಲ್ಲಿ--ಈಗ ರಾಜ್ಯವು ದಾವೀದನ ಮನೆಗೆ ಹಿಂತಿರುಗುವದು.
- 27ಈ ಜನರು ಯೆರೂಸಲೇಮಿನಲ್ಲಿರುವ ಕರ್ತನ ಮಂದಿರಕ್ಕೆ ಬಲಿ ಅರ್ಪಿಸಲು ಹೋದರೆ ಆಗ ಈ ಜನರ ಹೃದಯವು ಯೆಹೂದದ ಅರಸನಾದ ರೆಹಬ್ಬಾಮನ ಕಡೆಗೆ ಅಂದರೆ ತಮ್ಮ ಯಜಮಾನನ ಕಡೆಗೆ ಮತ್ತೆ ತಿರುಗುವದು. ಅವರು ನನ್ನನ್ನು ಕೊಂದು ಹಾಕಿ ಯೆಹೂದದ ಅರಸನಾದ ರೆಹೆಬ್ಬಾಮನ ಕಡೆಗೆ ತಿರುಗಿ ಹೋದಾರು.
- 28ಎಂದು ಅರಸನು ಆಲೋ ಚನೆ ಕೇಳಿಕೊಂಡು ಎರಡು ಬಂಗಾರದ ಹೋರಿಗ ಳನ್ನು ಮಾಡಿಸಿ ಜನರಿಗೆ--ಯೆರೂಸಲೇಮಿನ ವರೆಗೂ ಹೋಗುವದು ನಿಮಗೆ ಕಷ್ಟವಾಗಿದೆ. ಓ ಇಸ್ರಾಯೇಲೇ, ಇಗೋ, ಐಗುಪ್ತದಿಂದ ನಿನ್ನನ್ನು ಬರಮಾಡಿದ ನಿನ್ನ ಈ ದೇವರುಗಳು ಅಂದನು.
Cross references
- Mark 2:6–8 ಮಾರ್ಕನು 2:6–8ಆದರೆ ಅಲ್ಲಿ ಕೂತುಕೊಂಡಿದ್ದ ಶಾಸ್ತ್ರಿಗಳಲ್ಲಿ ಕೆಲವರು-- ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು. ಹೀಗೆ ಅವರು ತಮ್ಮೊಳಗೆ ಅಂದುಕೊಂಡದ್ದನ್ನು ಯೇಸು ಕೂಡಲೆ ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ--ನೀವು ನಿಮ್ಮ ಹೃದಯ ಗಳಲ್ಲಿ ಯಾಕೆ ಇವುಗಳನ್ನು ಆಲೋಚಿಸುತ್ತೀರಿ ಎಂದು ಹೇಳಿ
- Jeremiah 38:18–21 ಯೆರೆಮೀಯ 38:18–21ನೀನು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋಗದಿದ್ದರೆ ಈ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಡುವದು; ಅವರು ಅದನ್ನು ಬೆಂಕಿಯಿಂದ ಸುಡುವರು; ನೀನು ಅವರ ಕೈಯಿಂದ ತಪ್ಪಿಸಿಕೊಳ್ಳುವದಿಲ್ಲ ಅಂದನು. ಆಗ ಅರಸನಾದ ಚಿದ್ಕೀಯನು ಯೆರೆವಿಾಯನಿಗೆ--ನಾನು ಕಸ್ದೀಯರಿಗೆ ಒಳಬಿದ್ದ ಯೆಹೂದ್ಯರ ವಿಷಯ ಅಂಜು ತ್ತೇನೆ; ಒಂದು ವೇಳೆ ಅವರು ನನ್ನನ್ನು ಅವರ ಕೈಯಲ್ಲಿ ಒಪ್ಪಿಸಿಯಾರು. ಆಗ ಅವರು ನನ್ನನ್ನು ಅಪಹಾಸ್ಯ ಮಾಡುವರು ಅಂದನು. ಆದರೆ ಯೆರೆವಿಾಯನು ಹೇಳಿದ್ದೇನಂದರೆ --ಅವರು ನಿನ್ನನ್ನು ಒಪ್ಪಿಸುವದಿಲ್ಲ; ನಾನು ನಿನಗೆ ಹೇಳುವ ಕರ್ತನ ವಾಕ್ಯವನ್ನು ಮಾತ್ರ ಕೇಳು; ಆಗ ನಿನಗೆ ಒಳ್ಳೇದಾಗುವದು; ನಿನ್ನ ಪ್ರಾಣ ಬದುಕು ವದು. ಆದರೆ ನೀನು ಹೊರಗೆ ಹೋಗಲು ಮನಸ್ಸಿ ಲ್ಲದ ಪಕ್ಷದಲ್ಲಿ ಕರ್ತನು ನನಗೆ ತೋರಿಸಿದ ಮಾತು ಇದೇ--
- 1 Kings 11:38 1 ಅರಸುಗಳು 11:38ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ ನನ್ನ ಮಾರ್ಗಗಳಲ್ಲಿ ನಡೆದು ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡು ನನ್ನ ದೃಷ್ಟಿಗೆ ಯಥಾರ್ಥ ವಾದದ್ದನ್ನು ಮಾಡಿದರೆ ನಾನು ನಿನ್ನ ಸಂಗಡ ಇದ್ದು ದಾವೀದನಿಗೋಸ್ಕರ ಕಟ್ಟಿದ ಹಾಗೆ ನಿನಗೆ ಸ್ಥಿರವಾದ ಮನೆಯನ್ನು ಕಟ್ಟಿ ಇಸ್ರಾಯೇಲ್ಯರನ್ನು ನಿನಗೆ ಕೊಡು ವೆನು.
- Acts 4:16–17 ಅಪೊಸ್ತಲರ ಕೃತ್ಯಗಳು 4:16–17ಈ ಮನುಷ್ಯರಿಗೆ ನಾವೇನು ಮಾಡೋಣ? ನಿಜ ವಾಗಿಯೂ ಅವರ ಮೂಲಕ ನಡೆದ ಪ್ರಸಿದ್ಧವಾದ ಒಂದು ಅದ್ಭುತಕಾರ್ಯವು ಯೆರೂಸಲೇಮಿನಲ್ಲಿ ವಾಸಮಾಡುವವರಿಗೆಲ್ಲಾ ಗೊತ್ತಾಗಿರುವದರಿಂದ ನಾವು ಅದನ್ನು ಅಲ್ಲಗಳೆಯಲಾರೆವು. ಆದರೆ ಇದು ಜನ ರಲ್ಲಿ ಇನ್ನೂ ಹಬ್ಬದಂತೆ ಇಂದಿನಿಂದ ಅವರು ಯಾವ ಮನುಷ್ಯನ ಸಂಗಡ ಈ ಹೆಸರಿನಲ್ಲಿ ಮಾತನಾಡ ಬಾರದೆಂದು ನಾವು ಖಂಡಿತವಾಗಿ ಅವರನ್ನು ಗದರಿ ಸೋಣ ಎಂದು ಅಂದುಕೊಂಡು
- John 11:47–50 ಯೋಹಾನನು 11:47–50ಆಗ ಪ್ರಧಾನಯಾಜಕರೂ ಫರಿಸಾಯರೂ ಆಲೋಚನಾ ಸಭೆಯನ್ನು ಕೂಡಿಸಿ--ಈ ಮನುಷ್ಯನು ಅನೇಕ ಅದ್ಭುತಕಾರ್ಯಗಳನ್ನು ಮಾಡುತ್ತಾನಲ್ಲಾ, ನಾವು ಏನು ಮಾಡೋಣ? ನಾವು ಅವನನ್ನು ಹಾಗೆಯೇ ಬಿಟ್ಟರೆ ಎಲ್ಲರೂ ಅವನ ಮೇಲೆ ನಂಬಿಕೆಯಿಡುವರು ಮತ್ತು ರೋಮಾಯರು ಬಂದು ನಮ್ಮ ಸ್ಥಳವನ್ನೂ ಜನಾಂಗವನ್ನೂ ತೆಗೆದುಕೊಂಡು ಬಿಟ್ಟಾರು ಅಂದರು. ಆದರೆ ಅವರಲ್ಲಿ ಆ ವರುಷದ ಮಹಾಯಾಜಕ ನಾದ ಕಾಯಫನೆಂಬವನು ಅವರಿಗೆ-- ನಿಮಗೆ ಏನೂ ತಿಳಿಯದು; ಜನಾಂಗವೆಲ್ಲಾ ನಾಶವಾಗದ ಹಾಗೆ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವದು ನಮಗೆ ವಿಹಿತವಾಗಿದೆ ಎಂದು ನೀವು ಯೋಚಿಸುವದೂ ಇಲ್ಲ ಅಂದನು.
- Isaiah 7:9 ಯೆಶಾಯ 7:9ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ.
- John 12:10–11 ಯೋಹಾನನು 12:10–11ಆದರೆ ಪ್ರಧಾನ ಯಾಜಕರು ಲಾಜರನನ್ನು ಸಹ ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು. ಯಾಕಂದರೆ ಅವನ ನಿಮಿತ್ತ ಅನೇಕ ಯೆಹೂದ್ಯರು ಹೋಗಿ ಯೇಸುವಿನಲ್ಲಿ ನಂಬಿಕೆಯಿಟ್ಟರು.
- Luke 7:39 ಲೂಕನು 7:39ಆಗ ಆತನನ್ನು ಕರೆದ ಫರಿಸಾಯನು ಅದನ್ನು ನೋಡಿ ತನ್ನೊಳಗೆ--ಈ ಮನುಷ್ಯನು ಒಬ್ಬ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿದ್ದವಳು ಯಾರು ಎಂದೂ ಎಂಥತರವಾದ ಹೆಂಗಸು ಎಂದೂ ತಿಳಿದುಕೊಳ್ಳುತ್ತಿದ್ದನು; ಯಾಕಂದರೆ ಅವಳು ಒಬ್ಬ ಪಾಪಿ ಎಂದು ತನ್ನೊಳಗೆ ಅಂದು ಕೊಂಡನು.
- 2 Chronicles 20:20 2 ಪೂರ್ವಕಾಲವೃತ್ತಾಂತ 20:20ಅವರು ಉದಯದಲ್ಲಿ ಎದ್ದು ತೆಕೋವದ ಅರ ಣ್ಯಕ್ಕೆ ಹೊರಟರು. ಅವರು ಹೊರಟು ಹೋಗುತ್ತಿ ರುವಾಗ ಯೆಹೋಷಾಫಾಟನು ನಿಂತುಕೊಂಡು--ಓ ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಕರ್ತನನ್ನು ನಂಬಿಕೊಳ್ಳಿರಿ, ಸ್ಥಿರವಾಗಿರ್ರಿ; ಆತನ ಪ್ರವಾದಿಗಳನ್ನು ನಂಬಿಕೊಳ್ಳಿರಿ; ಆಗ ಜಯಹೊಂದುವಿರಿ ಅಂದನು.
- 1 Samuel 27:1 1 ಸಮುವೇಲನು 27:1ದಾವೀದನು ತನ್ನ ಹೃದಯದಲ್ಲಿ--ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಮಡಿದುಹೋಗುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿಹೋಗುವ ದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು ಅಂದು ಕೊಂಡನು.
- Psalm 14:1 ಕೀರ್ತನೆಗಳು 14:1ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಕೃತ್ಯಗಳನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
- John 12:19 ಯೋಹಾನನು 12:19ಆದದರಿಂದ ಫರಿಸಾಯರು ತಮ್ಮತಮ್ಮೊಳಗೆ--ನಿಮ್ಮ ಯತ್ನವೇನೂ ಸಾಗಲಿಲ್ಲವೆಂದು ನೀವು ತಿಳಿಯುವದಿಲ್ಲವೋ? ಇಗೋ, ಲೋಕವು ಆತನ ಹಿಂದೆ ಹೋಯಿತು ಎಂದು ಅಂದುಕೊಂಡರು.