Jeremiah · chapter 38 · verse 18
Jeremiah 38:18 in Kannada
ನೀನು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋಗದಿದ್ದರೆ ಈ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಡುವದು; ಅವರು ಅದನ್ನು ಬೆಂಕಿಯಿಂದ ಸುಡುವರು; ನೀನು ಅವರ ಕೈಯಿಂದ ತಪ್ಪಿಸಿಕೊಳ್ಳುವದಿಲ್ಲ ಅಂದನು.
Neenu baabelina arasana pradhaanara balige horage hogadiddare ee pattanavu kasdeeyara kaiyalli oppisalpaduvadu; avaru adannu benkiyinda suduvaru; neenu avara kaiyinda tappisikolluvadilla andanu.
Jeremiah 38:18 in English
- King James Version (KJV)
- But if thou wilt not go forth to the king of Babylon’s princes, then shall this city be given into the hand of the Chaldeans, and they shall burn it with fire, and thou shalt not escape out of their hand.
- World English Bible (WEB)
- But if you will not go out to the king of Babylon’s princes, then this city will be given into the hand of the Chaldeans, and they will burn it with fire, and you won’t escape out of their hand.’”
- American Standard Version (ASV)
- But if thou wilt not go forth to the king of Babylon’s princes, then shall this city be given into the hand of the Chaldeans, and they shall burn it with fire, and thou shalt not escape out of their hand.
- Bible in Basic English (BBE)
- But if you do not go out to the king of Babylon's captains, then this town will be given into the hands of the Chaldaeans and they will put it on fire, and you will not get away from them.
- Darby Translation (DBY)
- But if thou wilt not go forth to the king of Babylon's princes, then shall this city be given into the hand of the Chaldeans, and they shall burn it with fire, and thou shalt not escape out of their hand.
- Webster's Bible (WBS)
- But if thou wilt not go forth to the king of Babylon's princes, then shall this city be given into the hand of the Chaldeans, and they shall burn it with fire, and thou shalt not escape from their hand.
- Young's Literal Translation (YLT)
- And if thou dost not go forth unto the heads of the king of Babylon, then hath this city been given into the hand of the Chaldeans, and they have burnt it with fire, and thou dost not escape from their hand.'
Read in context
- 16ಹೀಗೆ ಅರಸನಾದ ಚಿದ್ಕೀಯನು ಯೆರೆ ವಿಾಯನಿಗೆ ಅಂತರಂಗದಲ್ಲಿ ಪ್ರಮಾಣ ಮಾಡಿ --ನಮಗೆ ಈ ಪ್ರಾಣವನ್ನುಂಟು ಮಾಡಿದ ಕರ್ತನ ಜೀವದಾಣೆ; ನಾನು ನಿನ್ನನ್ನು ಕೊಂದು ಹಾಕುವದಿಲ್ಲ; ನಿನ್ನ ಪ್ರಾಣವನ್ನು ಹುಡುಕುವ ಈ ಮನುಷ್ಯರ ಕೈಯಲ್ಲಿ ಒಪ್ಪಿಸುವದಿಲ್ಲ ಅಂದನು.
- 17ಆಗ ಯೆರೆವಿಾಯನು ಚಿದ್ಕೀಯನಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿಶ್ಚಯ ವಾಗಿ ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋದರೆ ನಿನ್ನ ಪ್ರಾಣವು ಬದುಕುವದು. ಈ ಪಟ್ಟಣವು ಬೆಂಕಿಯಿಂದ ಸುಡ ಲ್ಪಡುವದಿಲ್ಲ; ಮತ್ತು ನೀನೂ ನಿನ್ನ ಮನೆಯವರೂ ಬದುಕುವಿರಿ.
- 18ನೀನು ಬಾಬೆಲಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋಗದಿದ್ದರೆ ಈ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲ್ಪಡುವದು; ಅವರು ಅದನ್ನು ಬೆಂಕಿಯಿಂದ ಸುಡುವರು; ನೀನು ಅವರ ಕೈಯಿಂದ ತಪ್ಪಿಸಿಕೊಳ್ಳುವದಿಲ್ಲ ಅಂದನು.
- 19ಆಗ ಅರಸನಾದ ಚಿದ್ಕೀಯನು ಯೆರೆವಿಾಯನಿಗೆ--ನಾನು ಕಸ್ದೀಯರಿಗೆ ಒಳಬಿದ್ದ ಯೆಹೂದ್ಯರ ವಿಷಯ ಅಂಜು ತ್ತೇನೆ; ಒಂದು ವೇಳೆ ಅವರು ನನ್ನನ್ನು ಅವರ ಕೈಯಲ್ಲಿ ಒಪ್ಪಿಸಿಯಾರು.
- 20ಆಗ ಅವರು ನನ್ನನ್ನು ಅಪಹಾಸ್ಯ ಮಾಡುವರು ಅಂದನು. ಆದರೆ ಯೆರೆವಿಾಯನು ಹೇಳಿದ್ದೇನಂದರೆ --ಅವರು ನಿನ್ನನ್ನು ಒಪ್ಪಿಸುವದಿಲ್ಲ; ನಾನು ನಿನಗೆ ಹೇಳುವ ಕರ್ತನ ವಾಕ್ಯವನ್ನು ಮಾತ್ರ ಕೇಳು; ಆಗ ನಿನಗೆ ಒಳ್ಳೇದಾಗುವದು; ನಿನ್ನ ಪ್ರಾಣ ಬದುಕು ವದು.
Cross references
- Jeremiah 24:8–10 ಯೆರೆಮೀಯ 24:8–10ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳಾಗಿರುವ ಆ ಕೆಟ್ಟ ಅಂಜೂರದ ಹಣ್ಣುಗಳ ಹಾಗೆ ನಿಶ್ಚಯವಾಗಿ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಪ್ರಧಾನರನ್ನೂ ಈ ದೇಶದಲ್ಲಿ ಉಳಿಯುವ ಯೆರೂಸಲೇಮಿನ ಶೇಷವನ್ನೂ ಐಗುಪ್ತದೇಶದಲ್ಲಿ ವಾಸಿಸುವವರನ್ನೂ ಒಪ್ಪಿಸುತ್ತೇನೆಂದು ಕರ್ತನು ಹೇಳುತ್ತಾನೆ. ನಾನು ಅವರನ್ನು ಓಡಿಸಿಬಿಡುವ ಎಲ್ಲಾ ಸ್ಥಳಗಳಲ್ಲಿ ನಿಂದೆಗೂ ಗಾದೆಗೂ ಹಾಸ್ಯಕ್ಕೂ ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.ನಾನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶದೊಳ ಗಿಂದ ಅವರು ನಾಶವಾಗುವ ವರೆಗೂ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಅವರಲ್ಲಿ ಕಳುಹಿಸುವೆನು. ನಾನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶದೊಳ ಗಿಂದ ಅವರು ನಾಶವಾಗುವ ವರೆಗೂ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಅವರಲ್ಲಿ ಕಳುಹಿಸುವೆನು.
- Jeremiah 32:3–5 ಯೆರೆಮೀಯ 32:3–5ಯೆಹೂದದ ಅರಸನಾದ ಚಿದ್ಕೀಯನು ಯೆರೆವಿಾಯನಿಗೆ--ಕರ್ತನು ಹೇಳುವ ದೇನಂದರೆ--ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಯಲ್ಲಿ ಕೊಡುತ್ತೇನೆ; ಅವನು ಅದನ್ನು ವಶಪಡಿಸಿಕೊಳ್ಳುವನು; ಯೆಹೂದದ ಅರಸನಾದ ಚಿದ್ಕೀಯನು ಕಸ್ದೀಯರ ಕೈಗೆ ತಪ್ಪಿಸಿಕೊಳ್ಳದೆ ನಿಶ್ಚಯ ವಾಗಿ ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವನು, ಸಾಕ್ಷಾತ್ತಾಗಿ ಅವನ ಸಂಗಡ ಮಾತನಾಡುವನು; ಅವನ ಕಣ್ಣುಗಳು ಅವನ ಕಣ್ಣುಗಳನ್ನು ನೋಡುವವು. ಅವನು ಚಿದ್ಕೀಯನನ್ನು ಬಾಬೆಲಿಗೆ ಒಯ್ಯುವನು, ನಾನು ಅವನನ್ನು ದರ್ಶಿಸುವ ವರೆಗೆ ಅಲ್ಲೇ ಇರುವನೆಂಬದಾಗಿ ಕರ್ತನು ಅನ್ನುತ್ತಾನೆ, ನೀವು ಕಸ್ದೀಯರ ಸಂಗಡ ಯುದ್ಧ ಮಾಡಿದಾಗ್ಯೂ ನಿಮಗೆ ಸಫಲವಾಗುವದಿಲ್ಲವೆಂದು ಯಾಕೆ ಪ್ರವಾದಿಸುತ್ತೀ ಎಂದು ಹೇಳಿ ಅವನನ್ನು ಸೆರೆಯಲ್ಲಿ ಹಾಕಿಸಿದನು.
- Jeremiah 38:3 ಯೆರೆಮೀಯ 38:3ಅವನು ಬದುಕುವನು. ಕರ್ತನು ಹೇಳುವದೇನಂದರೆ--ಈ ಪಟ್ಟಣವು ನಿಶ್ಚಯವಾಗಿ ಬಾಬೆಲ್ ಅರಸನ ಸೈನ್ಯದ ಕೈಯಲ್ಲಿ ಒಪ್ಪಿಸಲ್ಪಡುವದು; ಅದು ಅದನ್ನು ವಶಮಾಡಿ ಕೊಳ್ಳುವದು.
- 2 Kings 25:4–10 2 ಅರಸುಗಳು 25:4–10ಪಟ್ಟಣವು ವಿಭಾಗಿಸಲ್ಪಟ್ಟಿದ್ದರಿಂದ ಸೈನ್ಯದ ಜನರೆಲ್ಲರೂ ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಬಾಗಲ ಮಾರ್ಗವಾಗಿ ಓಡಿಹೋದರು; ಆದರೆ ಅರಸನು ಬಯಲು ಮಾರ್ಗ ವಾಗಿ ಹೋದನು. ಕಸ್ದೀಯರು ಪಟ್ಟಣದ ಬಳಿಯಲ್ಲಿ ಇದ್ದದರಿಂದ ಅವರ ದಂಡು ಅರಸನನ್ನು ಹಿಂಬಾಲಿಸಿ ಯೆರಿಕೋವಿನ ಬಯಲು ಸ್ಥಳಗಳಲ್ಲಿ ಅವನನ್ನು ಹಿಡು ಕೊಂಡರು. ಅವನ ದಂಡೆಲ್ಲಾ ಅವನ ಕಡೆಯಿಂದ ಚದರಿ ಹೋಯಿತು. ಅವರು ಅರಸನನ್ನು ಹಿಡಿದು ಕೊಂಡು, ರಿಬ್ಲದಲ್ಲಿರುವ ಬಾಬೆಲಿನ ಅರಸನ ಬಳಿಗೆ ತಕ್ಕೊಂಡು ಬಂದು ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು. ಅವರು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣೆದುರಿನಲ್ಲಿಯೇ ಕೊಂದ ತರುವಾಯ ಅವನ ಕಣ್ಣುಗಳನ್ನು ಕಿತ್ತುಹಾಕಿ ಅವನಿಗೆ ಹಿತ್ತಾಳೆಯ ಬೇಡಿ ಹಾಕಿ ಅವನನ್ನು ಬಾಬೆಲಿಗೆ ತಕ್ಕೊಂಡು ಹೋದರು. ಐದನೇ ತಿಂಗಳಿನ ಏಳನೇ ದಿವಸಕ್ಕೆ ಸರಿಯಾಗಿ ಬಾಬೆಲಿನ ಅರಸನಾದ ನೆಬೂಕದ್ನೆಚರನ ಆಳ್ವಿಕೆಯ ಹತ್ತೊಂಭತ್ತನೇ ವರುಷದಲ್ಲಿ ಬಾಬೆಲಿನ ಅರಸನ ಸೇವಕ ನಾದ ಕಾವಲಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇಮಿಗೆ ಬಂದು, ಕರ್ತನ ಮನೆಯನ್ನೂ ಅರಮನೆಯನ್ನೂ ಯೆರೂಸಲೇಮಿನಲ್ಲಿರುವ ಎಲ್ಲಾ ಮನೆಗಳನ್ನೂ ಪ್ರತಿ ದೊಡ್ಡ ಮನುಷ್ಯನ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು. ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಕಸ್ದೀಯರ ಸೈನ್ಯದವರೆ ಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆ ಗಳನ್ನು ಕೆಡವಿಬಿಟ್ಟರು.
- Jeremiah 37:8 ಯೆರೆಮೀಯ 37:8ಕಸ್ದೀಯರು ತಿರುಗಿಕೊಂಡು ಈ ಪಟ್ಟಣಕ್ಕೆ ವಿರೋಧ ವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡುವರು.
- 2 Kings 24:12 2 ಅರಸುಗಳು 24:12ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು.
- Jeremiah 34:2–3 ಯೆರೆಮೀಯ 34:2–3ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಹೋಗಿ ಯೆಹೂದದ ಅರಸನಾದ ಚಿದ್ಕೀಯನ ಸಂಗಡ ಮಾತನಾಡಿ ಅವನಿಗೆ ಹೇಳತಕ್ಕ ದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸುತ್ತೇನೆ; ಅವನು ಅದನ್ನು ಬೆಂಕಿಯಿಂದ ಸುಡು ವನು. ನೀನು ಅವನ ಕೈಯೊಳಗಿಂದ ತಪ್ಪಿಸಿಕೊಳ್ಳು ವದಿಲ್ಲ; ಆದರೆ ನಿಶ್ಚಯವಾಗಿ ಹಿಡಿಯಲ್ಪಟ್ಟು, ಅವನ ಕೈಯಲ್ಲಿ ಒಪ್ಪಿಸಲ್ಪಡುವಿ; ನಿನ್ನ ಕಣ್ಣುಗಳು ಬಾಬೆಲಿನ ಅರಸನ ಕಣ್ಣುಗಳನ್ನು ನೋಡುವವು, ಅವನು ಎದುರೆ ದುರಾಗಿ ಸಾಕ್ಷಾತ್ತಾಗಿ ನಿನ್ನ ಸಂಗಡ ಮಾತನಾಡು ವನು; ನೀನು ಬಾಬೆಲಿಗೆ ಹೋಗುವಿ.
- Jeremiah 34:19–22 ಯೆರೆಮೀಯ 34:19–22ಯೆಹೂದದ ಪ್ರಧಾನ ರನ್ನೂ ಯೆರೂಸಲೇಮಿನ ಪ್ರಧಾನರನ್ನೂ ಕಂಚುಕಿ ಯರನ್ನೂ ಯಾಜಕರನ್ನೂ ಕರುವಿನ ತುಂಡುಗಳ ನಡುವೆ ದಾಟಿಹೋದ ದೇಶದ ಜನರೆಲ್ಲರನ್ನೂ ಅವರ ಶತ್ರುಗಳ ಕೈಯಲ್ಲಿಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಲ್ಲಿಯೂ ಒಪ್ಪಿಸುವೆನು: ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗುವವು. ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಪ್ರಧಾನರನ್ನೂ ಅವರ ಶತ್ರುಗಳ ಕೈಯಲ್ಲಿಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಲ್ಲಿಯೂ ನಿಮ್ಮನ್ನು ಬಿಟ್ಟು ಹೋಗಿರುವ ಬಾಬೆಲಿನ ಅರಸನ ಸೈನ್ಯದ ಕೈಯಲ್ಲಿಯೂ ಒಪ್ಪಿಸುವೆನು.ಕರ್ತನು ಹೇಳುವದೇನಂದರೆ--ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರಿಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡು ವರು; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗ ಮಾಡುವೆನು. ಕರ್ತನು ಹೇಳುವದೇನಂದರೆ--ಇಗೋ, ನಾನು ಆಜ್ಞಾಪಿಸಿ ಅವರನ್ನು ಈ ಪಟ್ಟಣದ ಬಳಿಗೆ ತಿರಿಗಿ ಬರಮಾಡುವೆನು; ಅವರು ಅದಕ್ಕೆ ವಿರೋಧವಾಗಿ ಯುದ್ಧಮಾಡಿ ಅದನ್ನು ಹಿಡಿದು ಬೆಂಕಿಯಿಂದ ಸುಡು ವರು; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳಾಗ ಮಾಡುವೆನು.
- Jeremiah 52:7–11 ಯೆರೆಮೀಯ 52:7–11ಆಗ ಪಟ್ಟಣವು ವಿಭಾಗವಾಯಿತು; ಯುದ್ಧಸ್ಥರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದ ಬಾಗಲಿನ ಮಾರ್ಗವಾಗಿ ರಾತ್ರಿಯಲ್ಲಿ ಪಟ್ಟಣವನ್ನು ಬಿಟ್ಟು ಹೊರಟು, ಬೈಲು ಸೀಮೆಯ ಮಾರ್ಗವಾಗಿ ಹೋದರು. ಆದರೆ ಕಸ್ದೀಯರು ಪಟ್ಟಣದ ಸುತ್ತಲೂ ಇದ್ದರು. ಆಗ ಕಸ್ದೀಯರ ದಂಡು ಅರಸನನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಹಿಡಿದರು. ಅವನ ದಂಡೆಲ್ಲಾ ಅವನನ್ನು ಬಿಟ್ಟು ಚದರಿಹೋಯಿತು. ಆಗ ಅವರು ಅರಸನನ್ನು ಹಿಡಿದು, ಬಾಬೆಲಿನ ಅರಸನ ಬಳಿಗೆ ಹಮಾತ್ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು; ಅಲ್ಲಿ ಅವನು ಅವನ ವಿಷಯ ನ್ಯಾಯತೀರ್ಪು ಮಾಡಿದನು. ಬಾಬೇಲಿನ ಅರಸನು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣುಗಳ ಮುಂದೆ ಕೊಂದು ಹಾಕಿಸಿದನು. ಯೆಹೂದದ ಪ್ರಧಾನರೆಲ್ಲ ರನ್ನೂ ಸಹ ರಿಬ್ಲದಲ್ಲಿ ಕೊಂದು ಹಾಕಿಸಿದನು. ಇದಲ್ಲದೆ ಬಾಬೆಲಿನ ಅಸನು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿಸಿ, ಅವನನ್ನು ಹಿತ್ತಾಳೆಯ ಸಂಕೋಲೆಗಳಿಂದ ಕಟ್ಟಿಸಿ, ಬಾಬೆಲಿಗೆ ಒಯ್ದು ಅವನು ಸಾಯುವ ದಿನದ ವರೆಗೆ ಸೆರೆಮನೆಯಲ್ಲಿ ಇಟ್ಟನು.
- Jeremiah 39:3 ಯೆರೆಮೀಯ 39:3ಆಗ ಬಾಬೆಲಿನ ಅರಸನ ಪ್ರಧಾನರೆಲ್ಲರೂ ನೇರ್ಗಲ್ಸ ರೇಚರನೂ ಸಮ್ಗರ್ನೆಬೋವನೂ ಸರ್ಸೆಕೀಮನೂ ನೇರ್ಗೆಲ್ಸರೆಚರನೂ ರಬ್ಶರೀಸ್ ಉಳಿದ ಬಾಬೆಲಿನ ಅರಸನ ಪ್ರಧಾನರೆಲ್ಲರೂ ಬಂದು ನಡುಬಾಗಲಲ್ಲಿ ಕೂತುಕೊಂಡರು.
- Jeremiah 39:5–7 ಯೆರೆಮೀಯ 39:5–7ಅವನು ಬೈಲುಸೀಮೆಯ ಮಾರ್ಗ ವಾಗಿ ಹೊರಟನು. ಆದರೆ ಕಸ್ದೀಯರ ದಂಡು ಅವರನ್ನು ಹಿಂದಟ್ಟಿ ಚಿದ್ಕೀಯನನ್ನು ಯೆರಿಕೋವಿನ ಬೈಲಿನಲ್ಲಿ ಅವರು ಅವನನ್ನು ಹಿಡಿದು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹಮಾತ್ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು. ಅಲ್ಲಿ ಅವನು ಅವನಿಗೆ ನ್ಯಾಯತೀರಿಸಿದನು. ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು. ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಅವನು ಕಿತ್ತುಹಾಕಿ ಬಾಬೆಲಿಗೆ ತಕ್ಕೊಂಡು ಹೋಗಬೇಕೆಂದು ಅವನನ್ನು ಸರಪಣಿಗಳಿಂದ ಕಟ್ಟಿಸಿದನು.
- 2 Kings 25:27–30 2 ಅರಸುಗಳು 25:27–30ಆದರೆ ಯೆಹೂದದ ಅರಸನಾದ ಯೆಹೋ ಯಾಖೀನನ ಸೆರೆಯ ಮೂವತ್ತೇಳನೇ ವರುಷದ ಹನ್ನೆರಡನೇ ತಿಂಗಳಿನ ಇಪ್ಪತ್ತೇಳನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ಎವಿಲ್ಮೆ ರೋದಕನು ಆಳಲು ಆರಂಭಿಸಿದ ವರುಷದಲ್ಲಿ ಅವನು ಯೆಹೂದದ ಅರಸನಾದ ಯೆಹೋಯಾ ಖೀನನನ್ನು ಸೆರೆಮನೆಯಿಂದ ಬಿಡಿಸಿ ಅವನ ಸಂಗಡ ಒಳ್ಳೇ ಮಾತುಗಳನ್ನು ಆಡಿ, ಅವನ ಸಿಂಹಾಸನವನ್ನು ಬಾಬೆಲಿನಲ್ಲಿ ತನ್ನ ಸಂಗಡ ಇರುವ ಅರಸುಗಳ ಸಿಂಹಾಸನಕ್ಕಿಂತ ದೊಡ್ಡದಾಗಿ ಮಾಡಿ ಅವನ ಸೆರೆ ವಸ್ತ್ರಗಳನ್ನು ಬದಲಾಯಿಸಿದನು. ಅವನು ಜೀವದಿಂದಿರುವ ವರೆಗೂ ಅರಸನ ಸಮ್ಮುಖದಲ್ಲಿ ರೊಟ್ಟಿಯನ್ನು ಯಾವಾಗಲೂ ತಿನ್ನುತ್ತಾ ಇದ್ದನು.ಇದಲ್ಲದೆ ಅವನು ಬದುಕಿರುವ ವರೆಗೂ ಪ್ರತಿ ದಿನಕ್ಕೆ ನೇಮಕವಾದ ಭೋಜನವು ಅರಸನಿಂದ ಯಾವಾಗಲೂ ಕೊಡಲ್ಪಡುತ್ತಾ ಇತ್ತು. ಇದಲ್ಲದೆ ಅವನು ಬದುಕಿರುವ ವರೆಗೂ ಪ್ರತಿ ದಿನಕ್ಕೆ ನೇಮಕವಾದ ಭೋಜನವು ಅರಸನಿಂದ ಯಾವಾಗಲೂ ಕೊಡಲ್ಪಡುತ್ತಾ ಇತ್ತು.