1 Kings · chapter 20 · verse 26
1 Kings 20:26 in Kannada
ವರುಷಾಂತರದಲ್ಲಿ ಏನಾಯಿತಂದರೆ ಬೆನ್ಹದದನು ಅರಾಮ್ಯರನ್ನು ಲೆಕ್ಕಿಸಿ ಇಸ್ರಾಯೇಲಿನ ಸಂಗಡ ಯುದ್ಧ ಮಾಡಲು ಅಫೇಕಿಗೆ ಹೋದನು.
Varushaantaradalli enaayitandare benhadadanu araamyarannu lekkisi israayelina sangada yuddha maadalu aphekige hodanu.
1 Kings 20:26 in English
- King James Version (KJV)
- And it came to pass at the return of the year, that Ben-hadad numbered the Syrians, and went up to Aphek, to fight against Israel.
- World English Bible (WEB)
- At the return of the year, Ben Hadad mustered the Syrians and went up to Aphek to fight against Israel.
- American Standard Version (ASV)
- And it came to pass at the return of the year, that Ben-hadad mustered the Syrians, and went up to Aphek, to fight against Israel.
- Bible in Basic English (BBE)
- So, a year later, Ben-hadad got the Aramaeans together and went up to Aphek to make war on Israel.
- Darby Translation (DBY)
- And it came to pass, at the return of the year, that Ben-Hadad numbered the Syrians, and went up to Aphek, to fight against Israel.
- Webster's Bible (WBS)
- And it came to pass at the return of the year, that Ben-hadad numbered the Syrians, and went up to Aphek, to fight against Israel.
- Young's Literal Translation (YLT)
- And it cometh to pass at the turn of the year, that Ben-Hadad inspecteth the Aramaeans, and goeth up to Aphek, to battle with Israel,
Read in context
- 24ಇದಲ್ಲದೆ ನೀನು ಮಾಡ ಬೇಕಾದದ್ದೇನಂದರೆ -- ಅರಸುಗಳನ್ನು ತೆಗೆದುಹಾಕಿ ಅವರಿಗೆ ಬದಲಾಗಿ ಅಧಿಪತಿಗಳನ್ನು ನೇಮಿಸಿ ನೀನು ಕಳಕೊಂಡ ಸೈನ್ಯದ ಹಾಗೆ ಕುದುರೆಗೆ ಕುದುರೆಯೂ ರಥಕ್ಕೆ ರಥವೂ ಬೇರೆ ಸೈನ್ಯವನ್ನು ಲೆಕ್ಕಿಸು;
- 25ಆಗ ನಾವು ಸಮಭೂಮಿಯಲ್ಲಿ ಅವರ ಸಂಗಡ ಯುದ್ಧ ಮಾಡೋಣ; ನಿಶ್ಚಯವಾಗಿ ನಾವು ಅವರಿಗಿಂತ ಬಲ ಶಾಲಿಗಳಾಗುವೆವು ಅಂದರು. ಅವನು ಅವರ ಮಾತನ್ನು ಕೇಳಿ ಹಾಗೆಯೇ ಮಾಡಿದನು.
- 26ವರುಷಾಂತರದಲ್ಲಿ ಏನಾಯಿತಂದರೆ ಬೆನ್ಹದದನು ಅರಾಮ್ಯರನ್ನು ಲೆಕ್ಕಿಸಿ ಇಸ್ರಾಯೇಲಿನ ಸಂಗಡ ಯುದ್ಧ ಮಾಡಲು ಅಫೇಕಿಗೆ ಹೋದನು.
- 27ಆದದರಿಂದ ಇಸ್ರಾಯೇಲಿನ ಮಕ್ಕಳು ಲೆಕ್ಕ ಮಾಡಲ್ಪಟ್ಟು ಬೇಕಾದದ್ದನ್ನು ಸಿದ್ಧಮಾಡಿಕೊಂಡು ಅವರಿಗೆ ಎದುರಾಗಿ ಹೊರಟರು. ಇಸ್ರಾಯೇಲಿನ ಮಕ್ಕಳು ಅವರಿಗೆದುರಾಗಿ ದಂಡಿಳಿದಿರುವಾಗ ಅವರು ಮೇಕೆ ಮರಿಗಳ ಎರಡು ಮಂದೆಗಳ ಹಾಗಿದ್ದರು; ಆದರೆ ಅರಾಮ್ಯರು ದೇಶವನ್ನು ತುಂಬಿಕೊಂಡಿದ್ದರು.
- 28ಆಗ ದೇವರ ಮನುಷ್ಯನೊಬ್ಬನು ಬಂದು ಇಸ್ರಾ ಯೇಲಿನ ಅರಸನಿಗೆ--ಕರ್ತನು ತಗ್ಗುಗಳ ದೇವರಾ ಗಿರದೆ ಪರ್ವತಗಳ ದೇವರಾಗಿದ್ದಾನೆಂಬದಾಗಿ ಅರಾ ಮ್ಯರು ಹೇಳಿದ್ದರಿಂದ ನಾನು ಕರ್ತನಾಗಿದ್ದೇನೆಂದು ನೀವು ತಿಳಿಯುವ ಹಾಗೆ ಆ ದೊಡ್ಡ ಸಮೂಹವನ್ನೆಲ್ಲಾ ನಿನ್ನ ಕೈಯಲ್ಲಿ ಒಪ್ಪಿಸುವೆನೆಂದು ಕರ್ತನು ಹೇಳುತ್ತಾನೆ ಅಂದನು.
Cross references
- 2 Kings 13:17 2 ಅರಸುಗಳು 13:17ಅವನು ತನ್ನ ಕೈಯನ್ನು ಇರಿಸಿದನು. ಎಲೀಷನು ತನ್ನ ಕೈಗಳನ್ನು ಅರಸನ ಕೈಗಳ ಮೇಲೆ ಇಟ್ಟನು. ಆಗ ಅವನು--ಮೂಡಲಲ್ಲಿರುವ ಕಿಟಕಿಯನ್ನು ತೆರೆ ಅಂದನು. ಅವನು ತೆರೆದನು. ಎಲೀಷನು--ಎಸೆ ಅಂದನು. ಅವನು ಎಸೆದನು. ಇದು ಕರ್ತನ ರಕ್ಷಣೆಯ ಬಾಣ; ಅರಾಮ್ಯರಿಂದ ತಪ್ಪಿಸುವ ರಕ್ಷಣೆಯ ಬಾಣವೇ, ಏನಂದರೆ ಅಫೇಕದಲ್ಲಿ ಅರಾಮ್ಯರನ್ನು ನಾಶಮಾಡುವ ವರೆಗೂ ಅವರನ್ನು ಹೊಡೆ ಯುವಿ ಅಂದನು.
- 1 Kings 20:22 1 ಅರಸುಗಳು 20:22ಪ್ರವಾದಿಯು ಇಸ್ರಾಯೇಲಿನ ಅರಸನ ಬಳಿಗೆ ಬಂದು ಅವನಿಗೆ--ನೀನು ಹೋಗಿ ಬಲಗೊಂಡು ನೀನು ಮಾಡುವದನ್ನು ತಿಳುಕೊಂಡು ನೋಡು; ಯಾಕಂದರೆ ವರುಷಾಂತರದಲ್ಲಿ ಅರಾಮಿನ ಅರಸನು ನಿನಗೆ ವಿರೋಧವಾಗಿ ಬರುವನು ಅಂದನು.
- 1 Samuel 4:1 1 ಸಮುವೇಲನು 4:1ಸಮುವೇಲನ ವಾಕ್ಯವು ಸಮಸ್ತ ಇಸ್ರಾಯೇ ಲಿನಲ್ಲಿ ಮುಟ್ಟಿತು. ಆದರೆ ಇಸ್ರಾಯೇ ಲ್ಯರು ಫಿಲಿಷ್ಟಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಟು ಎಬೆನೆಜೆರಿನ ಸವಿಾಪದಲ್ಲಿ ದಂಡಿಳಿದರು. ಫಿಲಿಷ್ಟಿಯರು ಅಫೇಕಿನಲ್ಲಿ ದಂಡಿಳಿದರು.
- Joshua 13:4 ಯೆಹೋಶುವ 13:4ದಕ್ಷಿಣ ಪ್ರಾಂತ್ಯದಿಂದ ಅಮೋರಿಯರ ಮೇರೆಯಾದ ಅಫೇಕದ ವರೆಗೂ ಇರುವ ಕಾನಾನ್ಯರ ಸರ್ವ ದೇಶವು ಚೀದೋನ್ಯರಿಗೆ ಹೊಂದಿದ ಮೆಯಾರವು;
- 1 Kings 20:30 1 ಅರಸುಗಳು 20:30ಮಿಕ್ಕಾದವರು ಅಫೇಕ್ ಪಟ್ಟಣದೊಳಗೆ ಓಡಿ ಹೋದರು. ಅಲ್ಲಿ ಒಂದು ಗೋಡೆಯು ಉಳಿದ ಇಪ್ಪತ್ತೇಳು ಸಾವಿರ ಮಂದಿಯ ಮೇಲೆ ಬಿತ್ತು. ಆದರೆ ಬೆನ್ಹದದನು ಪಟ್ಟಣಕ್ಕೆ ಓಡಿಬಂದು ಕೊಠಡಿಯ ಒಳ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡನು.
- 1 Samuel 29:1 1 ಸಮುವೇಲನು 29:1ಆದರೆ ಫಿಲಿಷ್ಟಿಯರು ತಮ್ಮ ಎಲ್ಲಾ ಸೈನ್ಯಗಳನ್ನು ಅಫೇಕದಲ್ಲಿ ಕೂಡಿಸಿ ಕೊಂಡರು. ಹಾಗೆಯೇ ಇಸ್ರಾಯೇಲ್ಯರು ಇಜ್ರೇಲ್ ನಲ್ಲಿರುವ ಬುಗ್ಗೆಯ ಬಳಿಯಲ್ಲಿ ದಂಡಿಳಿದರು.
- Judges 1:31 ನ್ಯಾಯಸ್ಥಾಪಕರು 1:31ಆಶೇರ್ಯರು ಅಕ್ಕೋವಿನ ವಾಸಿಗಳನ್ನೂ ಚೀದೋನಿನ ವಾಸಿಗಳನ್ನೂ ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಪಟ್ಟಣ ಗಳ ವಾಸಿಗಳನ್ನೂ ಹೊರಡಿಸಿಬಿಡಲಿಲ್ಲ.
- Joshua 19:30 ಯೆಹೋಶುವ 19:30ಅದಕ್ಕೆ ಉಮ್ಮಾ, ಅಫೇಕ್ ರೆಹೋಬ್ ಎಂಬ ಪಟ್ಟಣಗಳು ಸೇರಿದ್ದವು. ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ.