1 Kings · chapter 20 · verse 27
1 Kings 20:27 in Kannada
ಆದದರಿಂದ ಇಸ್ರಾಯೇಲಿನ ಮಕ್ಕಳು ಲೆಕ್ಕ ಮಾಡಲ್ಪಟ್ಟು ಬೇಕಾದದ್ದನ್ನು ಸಿದ್ಧಮಾಡಿಕೊಂಡು ಅವರಿಗೆ ಎದುರಾಗಿ ಹೊರಟರು. ಇಸ್ರಾಯೇಲಿನ ಮಕ್ಕಳು ಅವರಿಗೆದುರಾಗಿ ದಂಡಿಳಿದಿರುವಾಗ ಅವರು ಮೇಕೆ ಮರಿಗಳ ಎರಡು ಮಂದೆಗಳ ಹಾಗಿದ್ದರು; ಆದರೆ ಅರಾಮ್ಯರು ದೇಶವನ್ನು ತುಂಬಿಕೊಂಡಿದ್ದರು.
Aadadarinda israayelina makkalu lekka maadalpattu bekaadaddannu siddhamaadikondu avarige eduraagi horataru. Israayelina makkalu avarigeduraagi dandilidiruvaaga avaru meke marigala eradu mandegala haagiddaru; aadare araamyaru deshavannu tumbikondiddaru.
1 Kings 20:27 in English
- King James Version (KJV)
- And the children of Israel were numbered, and were all present, and went against them: and the children of Israel pitched before them like two little flocks of kids; but the Syrians filled the country.
- World English Bible (WEB)
- The children of Israel were mustered and given provisions, and went against them. The children of Israel encamped before them like two little flocks of young goats, but the Syrians filled the country.
- American Standard Version (ASV)
- And the children of Israel were mustered, and were victualled, and went against them: and the children of Israel encamped before them like two little flocks of kids; but the Syrians filled the country.
- Bible in Basic English (BBE)
- And the children of Israel got themselves together, and food was made ready and they went against them; the tents of the children of Israel were like two little flocks of goats before them, but all the country was full of the Aramaeans.
- Darby Translation (DBY)
- And the children of Israel were numbered and victualled, and they went against them; and the children of Israel encamped before them like two little flocks of goats; but the Syrians filled the land.
- Webster's Bible (WBS)
- And the children of Israel were numbered, and were all present, and went against them: and the children of Israel encamped before them like two little flocks of kids; but the Syrians filled the country.
- Young's Literal Translation (YLT)
- and the sons of Israel have been inspected, and supported, and go to meet them, and the sons of Israel encamp before them, like two flocks of goats, and the Aramaeans have filled the land.
Read in context
- 25ಆಗ ನಾವು ಸಮಭೂಮಿಯಲ್ಲಿ ಅವರ ಸಂಗಡ ಯುದ್ಧ ಮಾಡೋಣ; ನಿಶ್ಚಯವಾಗಿ ನಾವು ಅವರಿಗಿಂತ ಬಲ ಶಾಲಿಗಳಾಗುವೆವು ಅಂದರು. ಅವನು ಅವರ ಮಾತನ್ನು ಕೇಳಿ ಹಾಗೆಯೇ ಮಾಡಿದನು.
- 26ವರುಷಾಂತರದಲ್ಲಿ ಏನಾಯಿತಂದರೆ ಬೆನ್ಹದದನು ಅರಾಮ್ಯರನ್ನು ಲೆಕ್ಕಿಸಿ ಇಸ್ರಾಯೇಲಿನ ಸಂಗಡ ಯುದ್ಧ ಮಾಡಲು ಅಫೇಕಿಗೆ ಹೋದನು.
- 27ಆದದರಿಂದ ಇಸ್ರಾಯೇಲಿನ ಮಕ್ಕಳು ಲೆಕ್ಕ ಮಾಡಲ್ಪಟ್ಟು ಬೇಕಾದದ್ದನ್ನು ಸಿದ್ಧಮಾಡಿಕೊಂಡು ಅವರಿಗೆ ಎದುರಾಗಿ ಹೊರಟರು. ಇಸ್ರಾಯೇಲಿನ ಮಕ್ಕಳು ಅವರಿಗೆದುರಾಗಿ ದಂಡಿಳಿದಿರುವಾಗ ಅವರು ಮೇಕೆ ಮರಿಗಳ ಎರಡು ಮಂದೆಗಳ ಹಾಗಿದ್ದರು; ಆದರೆ ಅರಾಮ್ಯರು ದೇಶವನ್ನು ತುಂಬಿಕೊಂಡಿದ್ದರು.
- 28ಆಗ ದೇವರ ಮನುಷ್ಯನೊಬ್ಬನು ಬಂದು ಇಸ್ರಾ ಯೇಲಿನ ಅರಸನಿಗೆ--ಕರ್ತನು ತಗ್ಗುಗಳ ದೇವರಾ ಗಿರದೆ ಪರ್ವತಗಳ ದೇವರಾಗಿದ್ದಾನೆಂಬದಾಗಿ ಅರಾ ಮ್ಯರು ಹೇಳಿದ್ದರಿಂದ ನಾನು ಕರ್ತನಾಗಿದ್ದೇನೆಂದು ನೀವು ತಿಳಿಯುವ ಹಾಗೆ ಆ ದೊಡ್ಡ ಸಮೂಹವನ್ನೆಲ್ಲಾ ನಿನ್ನ ಕೈಯಲ್ಲಿ ಒಪ್ಪಿಸುವೆನೆಂದು ಕರ್ತನು ಹೇಳುತ್ತಾನೆ ಅಂದನು.
- 29ಏಳು ದಿವಸ ಇವರು ಅವರಿಗೆ ಎದುರಾಗಿ ದಂಡಿಳಿದಿದ್ದರು. ಆದರೆ ಏಳನೇ ದಿವಸದಲ್ಲಿ ಯುದ್ಧಕ್ಕೆ ಕೂಡಿದಾಗ ಇಸ್ರಾಯೇಲಿನ ಮಕ್ಕಳು ಅರಾಮ್ಯದಲ್ಲಿ ಲಕ್ಷ ಕಾಲ್ಬಲವನ್ನು ಒಂದೇ ದಿವಸದಲ್ಲಿ ಸಂಹರಿಸಿದರು.
Cross references
- Judges 6:5 ನ್ಯಾಯಸ್ಥಾಪಕರು 6:5ಅವರು ತಮ್ಮ ಕುರಿದನಗಳೂ ಡೇರೆ ಗಳೂ ಸಹಿತವಾಗಿ ಮಿಡಿತೆಗಳ ಹಾಗೆ ಗುಂಪಾಗಿ ಬಂದರು. ಅವರಿಗೂ ಅವರ ಒಂಟೆಗಳಿಗೂ ಎಣಿಕೆ ಇರಲಿಲ್ಲ. ಹೀಗೆ ಅವರು ಅದನ್ನು ಕೆಡಿಸಿಬಿಡುವದಕ್ಕೆ ದೇಶದಲ್ಲಿ ಬಂದರು.
- 1 Samuel 13:5–8 1 ಸಮುವೇಲನು 13:5–8ಆಗ ಇಸ್ರಾಯೇಲ್ಯರ ಸಂಗಡ ಯುದ್ಧಮಾಡಲು ಫಿಲಿಷ್ಟಿಯರ ಮೂವತ್ತು ಸಾವಿರ ರಥಗಳೂ ಆರು ಸಾವಿರ ಕುದುರೆ ರಾಹುತರೂ ಸಮುದ್ರತೀರದ ಮರಳಷ್ಟು ಜನವೂ ಕೂಡಿಕೊಂಡು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಇಳುಕೊಂಡರು. ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದ್ದದರಿಂದ ತಾವು ಇಕ್ಕಟ್ಟಿನಲ್ಲಿ ಇರುವದನ್ನು ನೋಡಿ ಗವಿಗಳಲ್ಲಿಯೂ ಮುಳ್ಳಿನ ಪೊದೆಗಳಲ್ಲಿಯೂ ಗುಡ್ಡಗಳಲ್ಲಿಯೂ ದುರ್ಗಗಳಲ್ಲಿಯೂ ಕುಣಿಗಳಲ್ಲಿಯೂ ಅಡಗಿಕೊಂಡರು. ಇದಲ್ಲದೆ ಇಬ್ರಿಯರಲ್ಲಿರುವ ಕೆಲವರು ಯೊರ್ದನನ್ನು ದಾಟಿ ಗಾದ್ ದೇಶಕ್ಕೂ ಗಿಲ್ಯಾದಿಗೂ ಹೋದರು. ಆದರೆ ಸೌಲನು ಇನ್ನೂ ಗಿಲ್ಗಾಲಿನಲ್ಲಿದ್ದನು; ಜನರೆಲ್ಲರು ನಡುಗಿದವರಾಗಿ ಅವನನ್ನು ಹಿಂಬಾಲಿಸಿದರು. ಸೌಲನು ತನಗೆ ಸಮುವೇಲನು ನೇಮಿಸಿದ ಕಾಲದ ಪ್ರಕಾರ ಏಳು ದಿವಸ ಕಾದಿದ್ದನು. ಸಮುವೇಲನು ಗಿಲ್ಗಾಲಿಗೆ ಬಾರದೆ ಇದ್ದದರಿಂದ ಜನರು ಅವನನ್ನು ಬಿಟ್ಟು ಚದರಿಹೋದರು.
- Joshua 1:11 ಯೆಹೋಶುವ 1:11ನೀವು ದಂಡಿನ ಮಧ್ಯದಲ್ಲಿ ಹೋಗಿ ಜನರಿಗೆ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ನಿಮ ಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ; ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನನ್ನು ದಾಟಿ ಹೋಗ ಬೇಕು ಅಂದನು.
- Ecclesiastes 9:11 ಪ್ರಸಂಗಿ 9:11ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನೋಡಿದ್ದೇನಂದರೆ, ವೇಗಿಗಳಿಗೆ ಓಟವೂ ಪರಾಕ್ರಮ ಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ರೊಟ್ಟಿಯೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವದಿಲ್ಲ. ಕಾಲವೂ ಗತಿಯೂ ಅವರೆಲ್ಲರಿಗೆ ಸಂಭವಿ ಸುತ್ತವೆ.
- 2 Chronicles 32:7–8 2 ಪೂರ್ವಕಾಲವೃತ್ತಾಂತ 32:7–8ಬಲಗೊಳ್ಳಿರಿ; ಧೈರ್ಯ ವಾಗಿರ್ರಿ; ಅಶ್ಶೂರಿನ ಅರಸನ ನಿಮಿತ್ತವೂ ಅವನ ಸಂಗಡ ಕೂಡಿರುವ ಮಹಾಗುಂಪಿನ ನಿಮಿತ್ತವೂ ಭಯ ಪಡಬೇಡಿರಿ; ಹೆದರಬೇಡಿರಿ. ಯಾಕಂದರೆ ಅವನ ಸಂಗಡ ಇರುವವರಿಗಿಂತ ನಮ್ಮ ಸಂಗಡ ಅನೇಕರು ಇದ್ದಾರೆ. ಅವನ ಸಂಗಡ ಮಾಂಸದ ತೋಳು; ಆದರೆ ನಮ್ಮ ಸಂಗಡ ನಮಗೆ ಸಹಾಯ ಕೊಡುವದಕ್ಕೂ ನಮ್ಮ ಯುದ್ಧಗಳನ್ನು ನಡಿಸುವದಕ್ಕೂ ನಮ್ಮ ದೇವರಾದ ಕರ್ತನು ತಾನೇ ಇದ್ದಾನೆ ಎಂದು ಹೇಳಿದನು. ಆದ ದರಿಂದ ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳಲ್ಲಿ ಆತುಕೊಂಡರು.
- 1 Samuel 14:2 1 ಸಮುವೇಲನು 14:2ಸೌಲನು ಗಿಬೆಯ ಕಟ್ಟಕಡೇ ಮೇರೆಯಾದ ಮಿಗ್ರೋನಿನಲ್ಲಿರುವ ದಾಳಿಂಬರ ಗಿಡದ ಕೆಳಗಿದ್ದನು. ಅವನ ಸಂಗಡ ಸುಮಾರು ಆರು ನೂರು ಜನರಿದ್ದರು.
- Judges 7:8 ನ್ಯಾಯಸ್ಥಾಪಕರು 7:8ಆಗ ಜನರು ಆಹಾರವನ್ನೂ ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು; ಆದರೆ ಅವನು ಇಸ್ರಾಯೇಲ್ಯರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ ಆ ಮುನ್ನೂರು ಜನರನ್ನು ಇಟ್ಟುಕೊಂಡನು. ಮಿದ್ಯಾನ್ಯರ ದಂಡು ಅವನಿಗೆ ಕೆಳ ಭಾಗವಾದ ತಗ್ಗಿನಲ್ಲಿ ಇತ್ತು.
- Deuteronomy 32:30 ಧರ್ಮೋಪದೇಶಕಾಂಡ 32:30ಅವರ ಬಂಡೆ ಅವರನ್ನು ಮಾರಿ ಕರ್ತನು ಅವರನ್ನು ಅಟ್ಟಿಬಿಟ್ಟರೆ ಒಬ್ಬನು ಹೇಗೆ ಸಾವಿರ ಮಂದಿ ಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು?
Original words (Hebrew)
- children · H1121בֵּן bên
- Israel · H3478יִשְׂרָאֵל Yisrâʼêl
- numbered · H6485פָּקַד pâqad
- present · H3557כּוּל kûwl
- went · H3212יָלַךְ yâlak
- against · H7125קִרְאָה qirʼâh
- children · H1121בֵּן bên
- Israel · H3478יִשְׂרָאֵל Yisrâʼêl
- pitched · H2583חָנָה chânâh
- two · H8147שְׁנַיִם shᵉnayim
- flocks · H2835חָשִׂף châsiph
- kids · H5795עֵז ʻêz
- Syrians · H758אֲרָם ʼĂrâm
- filled · H4390מָלֵא mâlêʼ
- country · H776אֶרֶץ ʼerets