1 Kings · chapter 8 · verse 2
1 Kings 8:2 in Kannada
ಏಳನೇ ತಿಂಗಳಾದ ಏತಾನೀಮ್ ಎಂಬ ತಿಂಗಳಲ್ಲಿ ಹಬ್ಬವಿದ್ದಾಗ ಇಸ್ರಾ ಯೇಲಿನ ಸಮಸ್ತ ಮನುಷ್ಯರು ಅರಸನಾದ ಸೊಲೊ ಮೋನನ ಬಳಿಗೆ ಕೂಡಿಬಂದರು.
Elane tingalaada etaaneem emba tingalalli habbaviddaaga israa yelina samasta manushyaru arasanaada solo monana balige koodibandaru.
1 Kings 8:2 in English
- King James Version (KJV)
- And all the men of Israel assembled themselves unto king Solomon at the feast in the month Ethanim, which [is] the seventh month.
- World English Bible (WEB)
- All the men of Israel assembled themselves to King Solomon at the feast in the month Ethanim, which is the seventh month.
- American Standard Version (ASV)
- And all the men of Israel assembled themselves unto king Solomon at the feast, in the month Ethanim, which is the seventh month.
- Bible in Basic English (BBE)
- And all the men of Israel came together to King Solomon at the feast, in the month Ethanim, the seventh month.
- Darby Translation (DBY)
- And all the men of Israel assembled themselves to king Solomon at the feast in the month Ethanim, that is, the seventh month.
- Webster's Bible (WBS)
- And all the men of Israel assembled themselves to king Solomon at the feast in the month Ethanim, which [is] the seventh month.
- Young's Literal Translation (YLT)
- and all the men of Israel are assembled unto king Solomon, in the month of Ethanim, in the festival — [is] the seventh month.
Read in context
- 1ಆಗ ಚೀಯೋನೆಂಬ ದಾವೀದನ ಪಟ್ಟಣ ದೊಳಗಿಂದ ಕರ್ತನ ಒಡಂಬಡಿಕೆಯ ಮಂಜೂಷವನ್ನು ತರುವ ನಿಮಿತ್ತ ಅರಸನಾದ ಸೊಲೊ ಮೋನನು ಇಸ್ರಾಯೇಲಿನ ಮಕ್ಕಳಲ್ಲಿ ಶ್ರೇಷ್ಠರಾಗಿರುವ ತಂದೆಗಳಾದ ಇಸ್ರಾಯೇಲಿನ ಹಿರಿಯರನ್ನೂ ಗೋತ್ರ ಗಳ ಮುಖ್ಯಸ್ಥರನ್ನೂ ಯೆರೂಸಲೇಮಿನಲ್ಲಿ ತನ್ನ ಬಳಿಗೆ ಕೂಡಿಬರುವಂತೆ ಮಾಡಿದನು.
- 2ಏಳನೇ ತಿಂಗಳಾದ ಏತಾನೀಮ್ ಎಂಬ ತಿಂಗಳಲ್ಲಿ ಹಬ್ಬವಿದ್ದಾಗ ಇಸ್ರಾ ಯೇಲಿನ ಸಮಸ್ತ ಮನುಷ್ಯರು ಅರಸನಾದ ಸೊಲೊ ಮೋನನ ಬಳಿಗೆ ಕೂಡಿಬಂದರು.
- 3ಇಸ್ರಾಯೇಲಿನ ಹಿರಿಯರೆಲ್ಲರೂ ಬಂದ ತರುವಾಯ ಯಾಜಕರು ಮಂಜೂಷವನ್ನು ಎತ್ತಿಕೊಂಡು ಕರ್ತನ ಮಂಜೂಷ ವನ್ನೂ ಸಭೆಯ ಗುಡಾರವನ್ನೂ ಗುಡಾರದಲ್ಲಿದ್ದ ಸಮಸ್ತ ಪರಿಶುದ್ಧವಾದ ಸಾಮಾನುಗಳನ್ನೂ ತಂದರು.
- 4ಯಾಜಕರೂ ಲೇವಿಯರೂ ಇವುಗಳನ್ನು ತಂದರು.
Cross references
- Leviticus 23:34 ಯಾಜಕಕಾಂಡ 23:34ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳ ವರೆಗೆ ಕರ್ತನಿಗೆ ಗುಡಾರಗಳ ಹಬ್ಬವಾಗಿರುವದು.
- 2 Chronicles 7:8–10 2 ಪೂರ್ವಕಾಲವೃತ್ತಾಂತ 7:8–10ಅದೇ ಕಾಲ ದಲ್ಲಿ ಸೊಲೊಮೋನನು ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತ ನದಿಯ ವರೆಗೆ ಇರುವ ಮಹಾ ಸಭೆಯಾದ ಸಮಸ್ತ ಇಸ್ರಾಯೇಲ್ಯರು ಏಳು ದಿವಸ ಹಬ್ಬವನ್ನು ಮಾಡಿದರು. ಎಂಟನೇ ದಿವಸದಲ್ಲಿ ಪರಿಶುದ್ಧ ಸಂಘವನ್ನು ಮಾಡಿಕೊಂಡರು; ಬಲಿಪೀಠದ ಪ್ರತಿಷ್ಠೆಯನ್ನೂ ಹಬ್ಬವನ್ನೂ ಏಳು ದಿವಸ ಕೈಕೊಂಡರು; ಏಳನೇ ತಿಂಗಳಿನ ಇಪ್ಪತ್ತ ಮೂರನೇ ದಿವಸದಲ್ಲಿ ಅವನು ಜನರನ್ನು ತಮ್ಮ ಡೇರೆ ಗಳಿಗೆ ಕಳುಹಿಸಿಬಿಟ್ಟನು. ಕರ್ತನು ದಾವೀದನಿಗೂ ಸೊಲೊಮೋನನಿಗೂ ತನ್ನ ಜನವಾದ ಇಸ್ರಾಯೇ ಲಿಗೂ ಮಾಡಿದ ಉಪಕಾರಕ್ಕೋಸ್ಕರ ಅವರು ಹೃದಯ ದಲ್ಲಿ ಆನಂದವಾಗಿ ಸಂತೋಷಪಡುತ್ತಾ ಹೋದರು.
- Deuteronomy 16:13 ಧರ್ಮೋಪದೇಶಕಾಂಡ 16:13ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು.
- 1 Kings 8:65 1 ಅರಸುಗಳು 8:65ಅದೇ ಕಾಲದಲ್ಲಿ ಸೊಲೊಮೋನನೂ ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತದ ನದಿಯ ಮಟ್ಟಿಗೂ ಇರುವ ಮಹಾಸಭೆ ಯಾದ ಸಮಸ್ತ ಇಸ್ರಾಯೇಲ್ಯರೂ ನಮ್ಮ ದೇವರಾದ ಕರ್ತನ ಮುಂದೆ ಏಳೇಳು ಹದಿನಾಲ್ಕು ದಿವಸ ಹಬ್ಬವನ್ನು ಮಾಡಿದರು.ಎಂಟನೇ ದಿನದಲ್ಲಿ ಅವನು ಜನರಿಗೆ ಅಪ್ಪಣೆಯನ್ನು ಕೊಟ್ಟನು. ಆಗ ಅವರು ಅರಸನನ್ನು ಆಶೀರ್ವದಿಸಿ ಕರ್ತನು ತನ್ನ ಸೇವಕನಾದ ದಾವೀದನಿ ಗೋಸ್ಕರವೂ ತನ್ನ ಜನರಾದ ಇಸ್ರಾಯೇಲ್ಯರಿಗೋಸ್ಕ ರವೂ ಮಾಡಿದ ಸಮಸ್ತ ಉಪಕಾರದ ನಿಮಿತ್ತ ಸಂತೋಷಪಟ್ಟು ಹೃದಯದಲ್ಲಿ ಆನಂದವುಳ್ಳವರಾಗಿ ತಮ್ಮ ತಮ್ಮ ಡೇರೆಗಳಿಗೆ ಹೋದರು.
- John 7:2 ಯೋಹಾನನು 7:2ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.
- Ezra 3:4 ಎಜ್ರನು 3:4ಇದಲ್ಲದೆ ಬರೆ ಯಲ್ಪಟ್ಟ ಹಾಗೆಯೇ ಅವರು ಪರ್ಣಶಾಲೆಗಳ ಹಬ್ಬ ವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ದಿನದಿನದ ದಹನಬಲಿ ಗಳನ್ನು ಅರ್ಪಿಸಿದರು.
- Zechariah 14:16–19 ಜೆಕರ್ಯ 14:16–19ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು. ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು. ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು. ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು.
- Numbers 29:12–40 ಅರಣ್ಯಕಾಂಡ 29:12–40ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಕಷ್ಟಕರವಾದ ಕೆಲಸವನ್ನು ಮಾಡಬಾರದು. ಕರ್ತನಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು. ಕರ್ತನಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ಬಲಿಯನ್ನು ಅರ್ಪಿಸಬೇಕು; ಏನಂದರೆ, ಹದಿಮೂರು ಎಳೇ ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ; ಅವು ದೋಷವಿಲ್ಲದ್ದಾಗಿರಬೇಕು; ಅವುಗಳ ಆಹಾರ ಸಮರ್ಪಣೆಯು ಎಣ್ಣೇ ಕಲಸಿದ ಹಿಟ್ಟು; ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಮೂರು ದಶಾಂಶಗಳು; ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎರಡು ದಶಾಂಶಗಳು; ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶ; ಪಾಪಬಲಿಗೆ ಒಂದು ಮೇಕೆಮರಿ; ಇದಲ್ಲದೆ ನಿತ್ಯ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆ ಯನ್ನೂ ಪಾನದ ಅರ್ಪಣೆಯನ್ನೂ ಅರ್ಪಿಸಬೇಕು. ಎರಡನೇ ದಿವಸದಲ್ಲಿ ಮಚ್ಚೆಯಿಲ್ಲದ ಹನ್ನೆರಡು ಎಳೇ ಹೋರಿಗಳನ್ನೂ ಎರಡು ಟಗರುಗಳನ್ನೂ ವರು ಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಮೂರನೇ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿ ಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ನಾಲ್ಕನೇ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಐದನೇ ದಿವಸದಲ್ಲಿ ಮಚ್ಚೆಯಿಲ್ಲದ ಒಂಭತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರಪಾನ ಬಲಿ ಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿ ಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಆರನೇ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಏಳನೇ ದಿವಸದಲ್ಲಿ ದೋಷವಿಲ್ಲದ ಏಳು ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಎಂಟನೇ ದಿವಸದಲ್ಲಿ ನಿಮಗೆ ಹಬ್ಬದ ಸಭೆಯಾಗ ಬೇಕು. ಕಷ್ಟಕರವಾದ ಕೆಲಸವನ್ನು ನೀವು ಮಾಡ ಬಾರದು. ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾ ಸನೆಯ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ ಹೋರಿಗೆ ಟಗರಿಗೆ ಮತ್ತು ಕುರಿ ಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಇದಲ್ಲದೆ ನಿಮ್ಮ ಪ್ರಮಾಣಗಳನ್ನೂ ಉಚಿತವಾದ ಬಲಿಗಳನ್ನೂ ದಹನಬಲಿಗಳನ್ನೂ ಆಹಾರ ಪಾನದ ಅರ್ಪಣೆಗಳನ್ನೂ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಕರ್ತನಿಗೆ ಮಾಡತಕ್ಕ ಅರ್ಪಣೆಗಳು ಇವೇ ಎಂದುಕರ್ತನು ತನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಹೇಳಿದನು. ಕರ್ತನು ತನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಹೇಳಿದನು.
- John 7:37 ಯೋಹಾನನು 7:37ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.
- Nehemiah 8:14–18 ನೆಹೆಮೀಯ 8:14–18ಆಗ ಅವರು ಏಳನೇ ತಿಂಗಳ ಹಬ್ಬದಲ್ಲಿ ಇಸ್ರಾಯೇಲಿನ ಮಕ್ಕಳು ಗುಡಾರಗಳಲ್ಲಿ ವಾಸವಾಗಿರಬೇಕೆಂದು ಕರ್ತ ನು ಮೋಶೆಯ ಮುಖಾಂತರ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದದ್ದನ್ನು ಕಂಡರು. ಏನಂದರೆ, ಬರೆದಿರುವ ಪ್ರಕಾರ ಗುಡಾರ ಹಾಕುವ ಹಾಗೆ ಬೆಟ್ಟಕ್ಕೆ ಹೋಗಿ ಇಪ್ಪೆಯ ಕೊಂಬೆಗಳನ್ನೂ ತೈಲಗಿಡದ ಕೊಂಬೆ ಗಳನ್ನೂ ಗಂಧದ ಗಿಡದ ಕೊಂಬೆಗಳನ್ನೂ ತಾಳೆಯ ಕೊಂಬೆಗಳನ್ನೂ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತಕ್ಕೊಂಡು ಬನ್ನಿರಿ ಎಂದು ತಮ್ಮ ಎಲ್ಲಾ ಪಟ್ಟಣಗಳ ಲ್ಲಿಯೂ ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು ಎಂಬದೇ. ಹಾಗೆಯೇ ಜನರು ಹೊರಟು ಹೋಗಿ ತಕ್ಕೊಂಡು ಬಂದು ಅವರವರು ತಮ್ಮ ಮನೆ ಗಳ ಮೇಲೆಯೂ ತಮ್ಮ ಅಂಗಳಗಳಲ್ಲಿಯೂ ದೇವರ ಮನೆಯ ಅಂಗಳಗಳಲ್ಲಿಯೂ ನೀರಿನ ಬಾಗಲ ಬೀದಿಯಲ್ಲಿಯೂ ಎಫ್ರಾಯಾಮಿನ ಬಾಗಲ ಬೀದಿಯ ಲ್ಲಿಯೂ ತಮಗೆ ಗುಡಾರಗಳನ್ನು ಹಾಕಿದರು. ಈ ಪ್ರಕಾರ ಸೆರೆಯಿಂದ ತಿರಿಗಿ ಬಂದ ಸಭೆಯವರೆಲ್ಲರೂ ಗುಡಾರಗಳನ್ನು ಹಾಕಿ ಗುಡಾರಗಳಲ್ಲಿ ವಾಸವಾಗಿದ್ದರು. ನೂನನ ಮಗನಾದ ಯೆಹೋಶುವನ ದಿನವು ಮೊದಲ ಗೊಂಡು ಆ ದಿವಸದ ವರೆಗೂ ಇಸ್ರಾಯೇಲ್ ಮಕ್ಕಳು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷ ಇತ್ತು.ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು. ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು.
- 2 Chronicles 5:3 2 ಪೂರ್ವಕಾಲವೃತ್ತಾಂತ 5:3ಆದ ದರಿಂದ ಏಳನೇ ತಿಂಗಳಿನ ಹಬ್ಬದಲ್ಲಿ ಇಸ್ರಾಯೇಲಿನ ಮನುಷ್ಯರೆಲ್ಲರೂ ಅರಸನ ಬಳಿಗೆ ಬಂದು ಕೂಡಿದರು.