John · chapter 7 · verse 2
John 7:2 in Kannada
ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.
Aaga yehoodyara gudaaragala habbavu hattiravaagittu.
John 7:2 in English
- King James Version (KJV)
- Now the Jews’ feast of tabernacles was at hand.
- World English Bible (WEB)
- Now the feast of the Jews, the Feast of Booths, was at hand.
- American Standard Version (ASV)
- Now the feast of the Jews, the feast of tabernacles, was at hand.
- Bible in Basic English (BBE)
- But the feast of the Jews, the feast of tents, was near.
- Darby Translation (DBY)
- Now the tabernacles, the feast of the Jews, was near.
- Webster's Bible (WBS)
- Now the Jews' feast of tabernacles was at hand.
- Young's Literal Translation (YLT)
- and the feast of the Jews was nigh — that of tabernacles —
Read in context
- 1ಇವುಗಳಾದ ಮೇಲೆ ಯೇಸು ಗಲಿಲಾ ಯದಲ್ಲಿ ಸಂಚಾರ ಮಾಡಿದನು; ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಹುಡುಕುತ್ತಿ ದ್ದದರಿಂದ ಯೂದಾಯದಲ್ಲಿ ಸಂಚರಿಸಲು ಆತನಿಗೆ ಮನಸ್ಸಿರಲಿಲ್ಲ.
- 2ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.
- 3ಆದದರಿಂದ ಆತನ ಸಹೋದರರು ಆತನಿಗೆ--ನೀನು ಮಾಡುವ ಕ್ರಿಯೆಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು;
- 4ಯಾಕಂದರೆ ತಾನು ಪ್ರಸಿದ್ಧಿಗೆ ಬರಬೇಕೆಂದಿರುವ ಯಾವನಾದರೂ ರಹಸ್ಯವಾಗಿ ಯಾವದನ್ನೂ ಮಾಡುವದಿಲ್ಲ; ನೀನು ಇವುಗಳನ್ನು ಮಾಡುವದಾದರೆ ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ ಅಂದರು.
Cross references
- Zechariah 14:16–19 ಜೆಕರ್ಯ 14:16–19ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು. ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು. ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು. ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು.
- Deuteronomy 16:13–16 ಧರ್ಮೋಪದೇಶಕಾಂಡ 16:13–16ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು. ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು. ನಿನ್ನ ದೇವರಾದ ಕರ್ತನಿಗೆ ಏಳು ದಿವಸ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ಹಬ್ಬ ಮಾಡಬೇಕು; ನಿನ್ನ ದೇವರಾದ ಕರ್ತನು ನಿನ್ನನ್ನು ಎಲ್ಲಾ ಆದಾಯದಲ್ಲಿಯೂ ಎಲ್ಲಾ ಕೈಕೆಲಸದಲ್ಲಿಯೂ ಆಶೀರ್ವದಿಸುವದರಿಂದ ನೀನು ನಿಜವಾಗಿಯೂ ಸಂತೋಷದಿಂದ ಇರಬೇಕು. ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು.
- Numbers 29:12–38 ಅರಣ್ಯಕಾಂಡ 29:12–38ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಕಷ್ಟಕರವಾದ ಕೆಲಸವನ್ನು ಮಾಡಬಾರದು. ಕರ್ತನಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು. ಕರ್ತನಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ಬಲಿಯನ್ನು ಅರ್ಪಿಸಬೇಕು; ಏನಂದರೆ, ಹದಿಮೂರು ಎಳೇ ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ; ಅವು ದೋಷವಿಲ್ಲದ್ದಾಗಿರಬೇಕು; ಅವುಗಳ ಆಹಾರ ಸಮರ್ಪಣೆಯು ಎಣ್ಣೇ ಕಲಸಿದ ಹಿಟ್ಟು; ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಮೂರು ದಶಾಂಶಗಳು; ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎರಡು ದಶಾಂಶಗಳು; ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶ; ಪಾಪಬಲಿಗೆ ಒಂದು ಮೇಕೆಮರಿ; ಇದಲ್ಲದೆ ನಿತ್ಯ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆ ಯನ್ನೂ ಪಾನದ ಅರ್ಪಣೆಯನ್ನೂ ಅರ್ಪಿಸಬೇಕು. ಎರಡನೇ ದಿವಸದಲ್ಲಿ ಮಚ್ಚೆಯಿಲ್ಲದ ಹನ್ನೆರಡು ಎಳೇ ಹೋರಿಗಳನ್ನೂ ಎರಡು ಟಗರುಗಳನ್ನೂ ವರು ಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಮೂರನೇ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿ ಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ನಾಲ್ಕನೇ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಐದನೇ ದಿವಸದಲ್ಲಿ ಮಚ್ಚೆಯಿಲ್ಲದ ಒಂಭತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರಪಾನ ಬಲಿ ಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿ ಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಆರನೇ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಏಳನೇ ದಿವಸದಲ್ಲಿ ದೋಷವಿಲ್ಲದ ಏಳು ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಎಂಟನೇ ದಿವಸದಲ್ಲಿ ನಿಮಗೆ ಹಬ್ಬದ ಸಭೆಯಾಗ ಬೇಕು. ಕಷ್ಟಕರವಾದ ಕೆಲಸವನ್ನು ನೀವು ಮಾಡ ಬಾರದು. ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾ ಸನೆಯ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ ಹೋರಿಗೆ ಟಗರಿಗೆ ಮತ್ತು ಕುರಿ ಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು.
- Leviticus 23:34–43 ಯಾಜಕಕಾಂಡ 23:34–43ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳ ವರೆಗೆ ಕರ್ತನಿಗೆ ಗುಡಾರಗಳ ಹಬ್ಬವಾಗಿರುವದು. ಮೊದಲನೆಯ ದಿವಸದಲ್ಲಿ ಪರಿಶುದ್ಧ ಸಭೆಯ ಕೂಟವಿರುವದು; ನೀವು ಅದರಲ್ಲಿ ಕಷ್ಟಕರವಾದ ಕೆಲಸ ವನ್ನು ಮಾಡಬಾರದು. ಏಳು ದಿವಸ ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ಕರ್ತನಿಗೆ ಅರ್ಪಿಸಬೇಕು. ಎಂಟನೆಯ ದಿವಸವು ನಿಮಗೆ ಪರಿ ಶುದ್ಧ ಕೂಟವಾಗಿರುವದು; ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಕರ್ತನಿಗೆ ಅರ್ಪಿಸಬೇಕು; ಅದೊಂದು ಗಂಭೀರ ಸಭೆಯಾಗಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು. ನೀವು ಪರಿಶುದ್ಧ ಸಭೆಯಾಗಿ ಪ್ರಕಟಿಸಬೇಕಾದ ಕರ್ತನ ಹಬ್ಬಗಳು ಇವೇ: ಇವುಗಳ ಒಂದೊಂದು ದಿವಸದಲ್ಲಿ ಕರ್ತನಿಗೆ ದಹನಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಯಜ್ಞವನ್ನೂ ಪಾನಕ ಸಮರ್ಪಣೆ ಗಳನ್ನೂ ಅರ್ಪಿಸಬೇಕು. ಕರ್ತನ ಸಬ್ಬತ್ತುಗಳ ಹೊರ ತಾಗಿಯೂ ನೀವು ಕರ್ತನಿಗೆ ಸಮರ್ಪಿಸುವ ನಿಮ್ಮ ದಾನ ಪ್ರಮಾಣಗಳ ನಿಮ್ಮ ಎಲ್ಲಾ ಸ್ವಇಷ್ಟವಾದ ಕಾಣಿಕೆಗಳ ಹೊರತಾಗಿಯೂ ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ಭೂಮಿಯ ಫಲವನ್ನು ಕೂಡಿಸಿದಾಗ ನೀವು ಕರ್ತನಿಗೆ ಏಳು ದಿವಸಗಳ ಹಬ್ಬ ವನ್ನು ಕೈಕೊಳ್ಳಬೇಕು. ಮೊದಲನೆಯ ದಿವಸವು ಸಬ್ಬತ್ತಾ ಗಿರಬೇಕು ಮತ್ತು ಎಂಟನೆಯ ದಿವಸವು ಸಬ್ಬತ್ತಾಗಿರ ಬೇಕು. ಮೊದಲನೆಯ ದಿವಸದಲ್ಲಿ ನೀವು ಸುಂದರ ವಾದ ಮರಗಳ ಕೊಂಬೆಗಳನ್ನೂ ಖರ್ಜೂರ ಮರಗಳ ಕೊಂಬೆಗಳನ್ನೂ ದಟ್ಟವಾದ ಮರಗಳ ಕೊಂಬೆಗಳನ್ನೂ ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳ ವರೆಗೆ ನಿಮ್ಮ ದೇವರಾಗಿರುವ ಕರ್ತನ ಎದುರಿನಲ್ಲಿ ಸಂತೋಷಪಡಬೇಕು. ಆ ವರುಷದಲ್ಲಿ ನೀವು ಏಳು ದಿವಸಗಳ ಹಬ್ಬವನ್ನು ಕರ್ತನಿಗಾಗಿ ಕೈಕೊಳ್ಳಬೇಕು. ಇದು ನಿಮ್ಮ ಸಂತತಿಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು; ನೀವು ಇದನ್ನು ಏಳನೆಯ ತಿಂಗಳಿನಲ್ಲಿ ಆಚರಿಸಬೇಕು. ಏಳು ದಿವಸಗಳ ವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು; ಇಸ್ರಾಯೇಲ್ಯ ರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸ ಬೇಕು. ನಾನು ಇಸ್ರಾಯೇಲ್ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದಾಗ ಅವರು ಗುಡಾರಗಳಲ್ಲಿ ವಾಸಿಸುವಂತೆ ಮಾಡಿದೆನೆಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು; ನಿಮ್ಮ ದೇವರಾ ಗಿರುವ ಕರ್ತನು ನಾನೇ ಎಂಬದು.ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಕರ್ತನ ಹಬ್ಬಗಳನ್ನು ಪ್ರಕಟ ಮಾಡಿದನು.
- Exodus 23:16–17 ವಿಮೋಚನಕಾಂಡ 23:16–17ನಿನ್ನ ಹೊಲದಲ್ಲಿ ಬಿತ್ತಿದ ಬೆಳೆಯ ಪ್ರಥಮ ಫಲಗಳ ಸುಗ್ಗಿ ಹಬ್ಬವನ್ನೂ ನಿನ್ನ ಬೆಳೆಯನ್ನು ಹೊಲದಿಂದ ಕೂಡಿಸಿದ ಮೇಲೆ ವರುಷದ ಅಂತ್ಯದಲ್ಲಿ ಕೂಡಿಸುವ ಹಬ್ಬವನ್ನೂ ಆಚರಿಸಬೇಕು. ವರುಷಕ್ಕೆ ಮೂರು ಸಾರಿ ನಿಮ್ಮ ಲ್ಲಿರುವ ಎಲ್ಲಾ ಪುರುಷರು ದೇವರಾದ ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.
- 1 Kings 8:2 1 ಅರಸುಗಳು 8:2ಏಳನೇ ತಿಂಗಳಾದ ಏತಾನೀಮ್ ಎಂಬ ತಿಂಗಳಲ್ಲಿ ಹಬ್ಬವಿದ್ದಾಗ ಇಸ್ರಾ ಯೇಲಿನ ಸಮಸ್ತ ಮನುಷ್ಯರು ಅರಸನಾದ ಸೊಲೊ ಮೋನನ ಬಳಿಗೆ ಕೂಡಿಬಂದರು.
- 1 Kings 8:65 1 ಅರಸುಗಳು 8:65ಅದೇ ಕಾಲದಲ್ಲಿ ಸೊಲೊಮೋನನೂ ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತದ ನದಿಯ ಮಟ್ಟಿಗೂ ಇರುವ ಮಹಾಸಭೆ ಯಾದ ಸಮಸ್ತ ಇಸ್ರಾಯೇಲ್ಯರೂ ನಮ್ಮ ದೇವರಾದ ಕರ್ತನ ಮುಂದೆ ಏಳೇಳು ಹದಿನಾಲ್ಕು ದಿವಸ ಹಬ್ಬವನ್ನು ಮಾಡಿದರು.ಎಂಟನೇ ದಿನದಲ್ಲಿ ಅವನು ಜನರಿಗೆ ಅಪ್ಪಣೆಯನ್ನು ಕೊಟ್ಟನು. ಆಗ ಅವರು ಅರಸನನ್ನು ಆಶೀರ್ವದಿಸಿ ಕರ್ತನು ತನ್ನ ಸೇವಕನಾದ ದಾವೀದನಿ ಗೋಸ್ಕರವೂ ತನ್ನ ಜನರಾದ ಇಸ್ರಾಯೇಲ್ಯರಿಗೋಸ್ಕ ರವೂ ಮಾಡಿದ ಸಮಸ್ತ ಉಪಕಾರದ ನಿಮಿತ್ತ ಸಂತೋಷಪಟ್ಟು ಹೃದಯದಲ್ಲಿ ಆನಂದವುಳ್ಳವರಾಗಿ ತಮ್ಮ ತಮ್ಮ ಡೇರೆಗಳಿಗೆ ಹೋದರು.
- Ezra 3:4 ಎಜ್ರನು 3:4ಇದಲ್ಲದೆ ಬರೆ ಯಲ್ಪಟ್ಟ ಹಾಗೆಯೇ ಅವರು ಪರ್ಣಶಾಲೆಗಳ ಹಬ್ಬ ವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ದಿನದಿನದ ದಹನಬಲಿ ಗಳನ್ನು ಅರ್ಪಿಸಿದರು.
- 2 Chronicles 7:9–10 2 ಪೂರ್ವಕಾಲವೃತ್ತಾಂತ 7:9–10ಎಂಟನೇ ದಿವಸದಲ್ಲಿ ಪರಿಶುದ್ಧ ಸಂಘವನ್ನು ಮಾಡಿಕೊಂಡರು; ಬಲಿಪೀಠದ ಪ್ರತಿಷ್ಠೆಯನ್ನೂ ಹಬ್ಬವನ್ನೂ ಏಳು ದಿವಸ ಕೈಕೊಂಡರು; ಏಳನೇ ತಿಂಗಳಿನ ಇಪ್ಪತ್ತ ಮೂರನೇ ದಿವಸದಲ್ಲಿ ಅವನು ಜನರನ್ನು ತಮ್ಮ ಡೇರೆ ಗಳಿಗೆ ಕಳುಹಿಸಿಬಿಟ್ಟನು. ಕರ್ತನು ದಾವೀದನಿಗೂ ಸೊಲೊಮೋನನಿಗೂ ತನ್ನ ಜನವಾದ ಇಸ್ರಾಯೇ ಲಿಗೂ ಮಾಡಿದ ಉಪಕಾರಕ್ಕೋಸ್ಕರ ಅವರು ಹೃದಯ ದಲ್ಲಿ ಆನಂದವಾಗಿ ಸಂತೋಷಪಡುತ್ತಾ ಹೋದರು.
- Nehemiah 8:14–18 ನೆಹೆಮೀಯ 8:14–18ಆಗ ಅವರು ಏಳನೇ ತಿಂಗಳ ಹಬ್ಬದಲ್ಲಿ ಇಸ್ರಾಯೇಲಿನ ಮಕ್ಕಳು ಗುಡಾರಗಳಲ್ಲಿ ವಾಸವಾಗಿರಬೇಕೆಂದು ಕರ್ತ ನು ಮೋಶೆಯ ಮುಖಾಂತರ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದದ್ದನ್ನು ಕಂಡರು. ಏನಂದರೆ, ಬರೆದಿರುವ ಪ್ರಕಾರ ಗುಡಾರ ಹಾಕುವ ಹಾಗೆ ಬೆಟ್ಟಕ್ಕೆ ಹೋಗಿ ಇಪ್ಪೆಯ ಕೊಂಬೆಗಳನ್ನೂ ತೈಲಗಿಡದ ಕೊಂಬೆ ಗಳನ್ನೂ ಗಂಧದ ಗಿಡದ ಕೊಂಬೆಗಳನ್ನೂ ತಾಳೆಯ ಕೊಂಬೆಗಳನ್ನೂ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತಕ್ಕೊಂಡು ಬನ್ನಿರಿ ಎಂದು ತಮ್ಮ ಎಲ್ಲಾ ಪಟ್ಟಣಗಳ ಲ್ಲಿಯೂ ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು ಎಂಬದೇ. ಹಾಗೆಯೇ ಜನರು ಹೊರಟು ಹೋಗಿ ತಕ್ಕೊಂಡು ಬಂದು ಅವರವರು ತಮ್ಮ ಮನೆ ಗಳ ಮೇಲೆಯೂ ತಮ್ಮ ಅಂಗಳಗಳಲ್ಲಿಯೂ ದೇವರ ಮನೆಯ ಅಂಗಳಗಳಲ್ಲಿಯೂ ನೀರಿನ ಬಾಗಲ ಬೀದಿಯಲ್ಲಿಯೂ ಎಫ್ರಾಯಾಮಿನ ಬಾಗಲ ಬೀದಿಯ ಲ್ಲಿಯೂ ತಮಗೆ ಗುಡಾರಗಳನ್ನು ಹಾಕಿದರು. ಈ ಪ್ರಕಾರ ಸೆರೆಯಿಂದ ತಿರಿಗಿ ಬಂದ ಸಭೆಯವರೆಲ್ಲರೂ ಗುಡಾರಗಳನ್ನು ಹಾಕಿ ಗುಡಾರಗಳಲ್ಲಿ ವಾಸವಾಗಿದ್ದರು. ನೂನನ ಮಗನಾದ ಯೆಹೋಶುವನ ದಿನವು ಮೊದಲ ಗೊಂಡು ಆ ದಿವಸದ ವರೆಗೂ ಇಸ್ರಾಯೇಲ್ ಮಕ್ಕಳು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷ ಇತ್ತು.ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು. ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು.