Zechariah · chapter 14 · verse 16
Zechariah 14:16 in Kannada
ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು.
Aaguvadenandare--yeroosalemige virodhavaagi banda ellaa janaanga galalli ulidavarellaa varusha varushakke sainyagala kartanaada arasanannu aaraadhisuvadakkoo gudaa ragala habbavannu aacharisuvadakkoo hoguvaru.
Zechariah 14:16 in English
- King James Version (KJV)
- And it shall come to pass, [that] every one that is left of all the nations which came against Jerusalem shall even go up from year to year to worship the King, the LORD of hosts, and to keep the feast of tabernacles.
- World English Bible (WEB)
- It will happen that everyone who is left of all the nations that came against Jerusalem will go up from year to year to worship the King, the LORD of Armies, and to keep the feast of booths.
- American Standard Version (ASV)
- And it shall come to pass, that every one that is left of all the nations that came against Jerusalem shall go up from year to year to worship the King, Jehovah of hosts, and to keep the feast of tabernacles.
- Bible in Basic English (BBE)
- And it will come about that everyone who is still living, of all those nations who came against Jerusalem, will go up from year to year to give worship to the King, the Lord of armies, and to keep the feast of tents.
- Darby Translation (DBY)
- And it shall come to pass, that all that are left of all the nations which came against Jerusalem shall go up from year to year to worship the King, Jehovah of hosts, and to celebrate the feast of tabernacles.
- Webster's Bible (WBS)
- And it shall come to pass, [that] every one that is left of all the nations which came against Jerusalem shall even go up from year to year to worship the King, the LORD of hosts, and to keep the feast of tabernacles.
- Young's Literal Translation (YLT)
- And it hath come to pass, Every one who hath been left of all the nations, Who are coming in against Jerusalem, They have also gone up from year to year, To bow themselves to the King, Jehovah of Hosts, And to celebrate the feast of the booths.
Read in context
- 14ಯೆಹೂದವು ಸಹ ಯೆರೂಸಲೇಮಿನಲ್ಲಿ ಯುದ್ಧ ಮಾಡುವದು; ಸುತ್ತಲಿರುವ ಎಲ್ಲಾ ಅನ್ಯ ಜನಾಂಗಗಳ ಸಂಪತ್ತಾಗಿ ರುವ, ಚಿನ್ನ, ಬೆಳ್ಳಿ, ವಸ್ತ್ರಗಳು ಬಹು ಹೇರಳವಾಗಿ ಕೂಡಿಸಲ್ಪಡುವವು.
- 15ಆ ಗುಡಾರಗಳಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳ ಬಾಧೆಯು ಈ ಬಾಧೆಯ ಹಾಗೆಯೇ ಇರುವದು.
- 16ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು.
- 17ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು.
- 18ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು.
Cross references
- Isaiah 66:23 ಯೆಶಾಯ 66:23ಇದಾದ ಮೇಲೆ ಒಂದು ಅಮಾವಾಸ್ಯೆಯಿಂದ ಇನ್ನೊಂದಕ್ಕೂ ಒಂದು ಸಬ್ಬತ್ತಿನಿಂದ ಇನ್ನೊಂದಕ್ಕೂ ಮನುಷ್ಯರೆಲ್ಲಾ ನನ್ನ ಮುಂದೆ ಆರಾಧಿಸುವದಕ್ಕೆ ಬರುವರೆಂದು ಕರ್ತನು ಹೇಳುತ್ತಾನೆ.ಅವರು ಮುಂದೆ ಹೋಗಿ ನನಗೆ ವಿರೋಧವಾಗಿ ದ್ರೋಹ ಮಾಡಿದ ಮನುಷ್ಯರ ಹೆಣಗಳನ್ನು ನೋಡುವರು; ಯಾಕಂದರೆ ಅವರ ಹುಳ ಸಾಯುವದಿಲ್ಲ; ಅವರ ಬೆಂಕಿ ಆರುವದಿಲ್ಲ; ಅವರು ಎಲ್ಲಾ ಮನುಷ್ಯರಿಗೆ ಹೇಸಿಕೆಯಾಗುವರು.
- Zechariah 14:17–19 ಜೆಕರ್ಯ 14:17–19ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು. ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು. ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು.
- Zechariah 8:20–23 ಜೆಕರ್ಯ 8:20–23ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು; ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು. ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.
- Isaiah 66:18–21 ಯೆಶಾಯ 66:18–21ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗ ಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು; ಆಗ ಅವರು ಬಂದು ನನ್ನ ಮಹಿ ಮೆಯನ್ನು ನೋಡುವರು. ಅವರ ಮಧ್ಯದಲ್ಲಿ ಒಂದು ಗುರುತನ್ನಿಟ್ಟು ಅವರಲ್ಲಿ ತಪ್ಪಿಸಿಕೊಂಡವರನ್ನು ಜನಾಂಗಗಳಿಗೂ ತಾರ್ಷೀಷಿಗೂ ಫೂಲಿಗೂ ಲೂದಿಗೂ ಬಿಲ್ಲು ಬೊಗ್ಗಿಸುವವರಿಗೂ ತೂಬಲಿಗೂ ಯಾವಾನಿಗೂ ನನ್ನ ಸಮಾಚಾರವನ್ನು ಕೇಳದೆ ನನ್ನ ಮಹಿಮೆಯನ್ನು ನೋಡದೆ ಇರುವ ದೂರದ ದ್ವೀಪ ಗಳಿಗೂ ಕಳುಹಿಸುವೆನು; ಅವರು ಅನ್ಯಜನಾಂಗಗಳಲ್ಲಿ ನನ್ನ ಮಹಿಮೆಯನ್ನು ತಿಳಿಸುವರು. ಅವರು ನಿಮ್ಮ ಸಹೋದರರನ್ನು ಕುದುರೆಗಳ ಮೇಲೆಯೂ ರಥ ಗಳಲ್ಲಿಯೂ ಪಾಲ್ಕಿಗಳಲ್ಲಿಯೂ ಹೇಸರ ಕತ್ತೆಗಳ ಮೇಲೆಯೂ ವೇಗವಾಗಿ ಹೋಗುವ ಪ್ರಾಣಿಗಳ ಮೇಲೆಯೂ ಸಮಸ್ತ ಜನಾಂಗಗಳೊಳಗಿಂದ ಕರ್ತ ನಿಗೆ ಕಾಣಿಕೆಯಾಗಿ ಇಸ್ರಾಯೇಲಿನ ಮಕ್ಕಳು ಕಾಣಿಕೆ ಯನ್ನು ಶುದ್ಧ ಪಾತ್ರೆಯಲ್ಲಿ ಕರ್ತನ ಮನೆಗೆ ತರುವ ಪ್ರಕಾರ ನನ್ನ ಪರಿಶುದ್ಧ ಪರ್ವತವಾದ ಯೆರೂಸ ಲೇಮಿಗೆ ತರುವರೆಂದು ಕರ್ತನು ಹೇಳುತ್ತಾನೆ. ಅವರಲ್ಲಿ ಯಾಜಕರಿಗಾಗಿಯೂ ಲೇವಿಯರಿಗಾ ಗಿಯೂ ಅವರಿಂದ ತಕ್ಕೊಳ್ಳುವೆನೆಂದು ಕರ್ತನು ಹೇಳುತ್ತಾನೆ.
- Joel 2:32 ಯೋವೇಲ 2:32ಆಗುವದೇನಂದರೆ--ಕರ್ತನ ಹೆಸರನ್ನು ಹೇಳಿ ಕೊಳ್ಳುವವರೆಲ್ಲರೂ ರಕ್ಷಿಸಲ್ಪಡುವರು; ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಕರ್ತನು ಕರೆಯುವ ಉಳಿದವರಲ್ಲಿಯೂ ಕರ್ತನು ಹೇಳಿದ ಪ್ರಕಾರ ಬಿಡುಗಡೆಯು ಇರುವದು.
- Deuteronomy 31:10–13 ಧರ್ಮೋಪದೇಶಕಾಂಡ 31:10–13ಮೋಶೆಯು ಅವರಿಗೆ--ಪ್ರತಿ ಏಳು ವರುಷಗಳ ಕೊನೆಯಲ್ಲಿರುವ ಬಿಡುಗಡೆಯ ಪರಿಶುದ್ಧವಾದ ವರುಷದಲ್ಲಿ, ಅಂದರೆ ಗುಡಾರಗಳ ಹಬ್ಬದಲ್ಲಿ ನಿನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ, ಆತನು ಆದು ಕೊಳ್ಳುವ ಸ್ಥಳದಲ್ಲಿ ಇಸ್ರಾಯೇಲಿನವರೆಲ್ಲರು ಕಾಣಿಸಿ ಕೊಳ್ಳುವದಕ್ಕೆ ಬಂದಾಗ ನೀನು ಈ ನ್ಯಾಯಪ್ರಮಾಣ ವನ್ನು ಇಸ್ರಾಯೇಲಿನವರೆಲ್ಲರ ಮುಂದೆ ಅವರು ಕೇಳುವಹಾಗೆ ಓದಬೇಕು. ಜನರನ್ನೂ ಅಂದರೆ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ನಿನ್ನ ಬಾಗಲುಗಳಲ್ಲಿರುವ ಪರವಾಸಿಗಳನ್ನೂ ಅವರು ಕೇಳಿ ಕಲಿತು ನಿಮ್ಮ ದೇವರಾದ ಕರ್ತನಿಗೆ ಭಯಪಟ್ಟು ಈ ನ್ಯಾಯಪ್ರಮಾಣದ ವಾಕ್ಯಗಳನ್ನೆಲ್ಲಾ ಕಾಪಾಡಿ ಮಾಡುವ ಹಾಗೆ ಕೂಡಿಸು. ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ ನೀವು ಸ್ವಾಧೀನಮಾಡಿಕೊಳ್ಳುವ ದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ನೀವು ಬದುಕುವ ದಿವಸಗಳೆಲ್ಲಾ ನಿಮ್ಮ ದೇವರಾದ ಕರ್ತನಿಗೆ ಭಯಪಡುವದಕ್ಕೆ ಕಲಿತುಕೊಳ್ಳಲಿ ಎಂದು ಆಜ್ಞಾಪಿಸಿ ಹೇಳಬೇಕು.
- Isaiah 60:6–9 ಯೆಶಾಯ 60:6–9ಒಂಟೆಗಳ ಸಮೂಹವು ನಿನ್ನನ್ನು ಮುಚ್ಚುವದು; ಮಿದ್ಯಾನಿನ, ಏಫದ ವೇಗವುಳ್ಳ ಒಂಟೆಗಳು ಅವೆಲ್ಲಾ ಶೇಬದಿಂದಲೂ ಬರುವವು; ಅವು ಬಂಗಾರವನ್ನೂ ಧೂಪವನ್ನೂ ತರುವವು; ಅವು ಕರ್ತನ ಸ್ತೋತ್ರ ಗಳನ್ನು ಸಾರುವವು. ಕೇದಾರಿನ ಮಂದೆಗಳೆಲ್ಲಾ ನಿನ್ನ ಬಳಿಗೆ ಕೂಡಿಸಲ್ಪಡುವವು; ನೆಬಾಯೋತಿನ ಟಗರು ಗಳು ನಿನ್ನನ್ನು ಸೇವಿಸುವವು; ಅವು ನನ್ನ ಬಲಿಪೀಠದ ಮೇಲೆ ಅಂಗೀಕಾರವಾಗುವವು, ನಾನು ನನ್ನ ಮಹಿ ಮೆಯ ಆಲಯವನ್ನು ಘನಪಡಿಸುವೆನು. ಮೇಘದಂತೆಯೂ ತಮ್ಮ ಗೂಡುಗಳಿಗೆ ಹೋಗುವ ಪಾರಿವಾಳಗಳಂತೆಯೂ ಹಾರುವ ಇವರು ಯಾರು? ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ.
- Romans 11:26 ರೋಮಾಪುರದವರಿಗೆ 11:26ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
- John 1:49 ಯೋಹಾನನು 1:49ನತಾನ ಯೇಲನು ಪ್ರತ್ಯುತ್ತರವಾಗಿ ಆತನಿಗೆ--ರಬ್ಬಿಯೇ, ನೀನು ದೇವರಕುಮಾರನು; ನೀನು ಇಸ್ರಾಯೇಲಿನ ಅರಸನು ಅಂದನು.
- Romans 11:5 ರೋಮಾಪುರದವರಿಗೆ 11:5ಅದರಂತೆ ಈಗಿನ ಕಾಲದಲ್ಲಿ ಕೃಪೆಯ ಆಯ್ಕೆಯ ಪ್ರಕಾರ ಒಂದಂಶವು ಉಳಿದಿದೆ.
- John 7:37–39 ಯೋಹಾನನು 7:37–39ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು. (ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)
- Malachi 1:14 ಮಲಾಕಿಯ 1:14ಆದರೆ ತನ್ನ ಮಂದೆಯಲ್ಲಿ ಗಂಡು ಇರಲಾಗಿ ಪ್ರಮಾಣ ಮಾಡಿ ಕರ್ತನಿಗೆ ಕೆಟ್ಟು ಹೋದದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ; ನಾನು ಮಹಾ ಅರಸನು, ನನ್ನ ಹೆಸರು ಅನ್ಯಜನಾಂಗಗಳಲ್ಲಿ ಭಯಂಕರ ವಾದದ್ದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
Original words (Hebrew)
- left · H3498יָתַר yâthar
- nations · H1471גּוֹי gôwy
- came · H935בּוֹא bôwʼ
- Jerusalem · H3389יְרוּשָׁלַ͏ִם Yᵉrûwshâlaim
- up · H5927עָלָה ʻâlâh
- from · H1767דַּי day
- year · H8141שָׁנֶה shâneh
- year · H8141שָׁנֶה shâneh
- worship · H7812שָׁחָה shâchâh
- King · H4428מֶלֶךְ melek
- hosts · H6635צָבָא tsâbâʼ
- keep · H2287חָגַג châgag
- feast · H2282חַג chag
- tabernacles · H5521סֻכָּה çukkâh