1 Samuel · chapter 12 · verse 5
1 Samuel 12:5 in Kannada
ಅವನು ಅವರಿಗೆ--ನೀವು ನನ್ನಲ್ಲಿ ಏನಾದರೂ ಕಂಡು ಹಿಡಿಯಲಿಲ್ಲವೆಂಬದಕ್ಕೆ ಕರ್ತನೇ ನಿಮಗೆ ಸಾಕ್ಷಿಯಾಗಿ ದ್ದಾನೆ; ಆತನ ಅಭಿಷಿಕ್ತನು ಈಹೊತ್ತು ಸಾಕ್ಷಿಯಾಗಿದ್ದಾನೆ ಅಂದನು. ಅದಕ್ಕವರು--ಆತನು ಸಾಕ್ಷಿಯಾಗಿದ್ದಾನೆ ಅಂದರು.
Avanu avarige--neevu nannalli enaadaroo kandu hidiyalillavembadakke kartane nimage saakshiyaagi ddaane; aatana abhishiktanu eehottu saakshiyaagiddaane andanu. Adakkavaru--aatanu saakshiyaagiddaane andaru.
1 Samuel 12:5 in English
- King James Version (KJV)
- And he said unto them, The LORD [is] witness against you, and his anointed [is] witness this day, that ye have not found ought in my hand. And they answered, [He is] witness.
- World English Bible (WEB)
- He said to them, “The LORD is witness against you, and his anointed is witness today, that you have not found anything in my hand.” They said, “He is witness.”
- American Standard Version (ASV)
- And he said unto them, Jehovah is witness against you, and his anointed is witness this day, that ye have not found aught in my hand. And they said, He is witness.
- Bible in Basic English (BBE)
- Then he said, The Lord is witness against you, and the man on whom he has put the holy oil is witness this day that you have seen no wrong in me. And they said, He is witness.
- Darby Translation (DBY)
- And he said to them, Jehovah is witness against you, and his anointed is witness this day, that ye have not found aught in my hand! And [the people] said, [He is] witness!
- Webster's Bible (WBS)
- And he said to them, The LORD [is] witness against you, and his anointed [is] witness this day, that ye have not found aught in my hand. And they answered, [He is] witness.
- Young's Literal Translation (YLT)
- And he saith unto them, 'A witness [is] Jehovah against you: and a witness [is] His anointed this day, that ye have not found anything in my hand;' and they say, 'A witness.'
Read in context
- 3ಇಗೋ, ನಾನು ಇಲ್ಲಿದ್ದೇನೆ; ಕರ್ತನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿಕೊಡಿರಿ. ನಾನು ಯಾರ ಎತ್ತನ್ನಾದರೂ ಕತ್ತೆಯ ನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿ ದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ ತಿರಿಗಿಕೊಡುತ್ತೇನೆ ಅಂದನು.
- 4ಅವರು--ನೀನು ನಮಗೆ ವಂಚನೆ ಮಾಡಲಿಲ್ಲ, ನಮ್ಮನ್ನು ಹಿಂಸಿಸಲಿಲ್ಲ; ನೀನು ಯಾವನ ಕೈಯಿಂದ ಏನಾದರೂ ತಕ್ಕೊಳ್ಳಲಿಲ್ಲ ಅಂದರು.
- 5ಅವನು ಅವರಿಗೆ--ನೀವು ನನ್ನಲ್ಲಿ ಏನಾದರೂ ಕಂಡು ಹಿಡಿಯಲಿಲ್ಲವೆಂಬದಕ್ಕೆ ಕರ್ತನೇ ನಿಮಗೆ ಸಾಕ್ಷಿಯಾಗಿ ದ್ದಾನೆ; ಆತನ ಅಭಿಷಿಕ್ತನು ಈಹೊತ್ತು ಸಾಕ್ಷಿಯಾಗಿದ್ದಾನೆ ಅಂದನು. ಅದಕ್ಕವರು--ಆತನು ಸಾಕ್ಷಿಯಾಗಿದ್ದಾನೆ ಅಂದರು.
- 6ಆಗ ಸಮುವೇಲನು ಜನರಿಗೆ--ಮೋಶೆ ಯನ್ನೂ ಆರೋನನನ್ನೂ ಮುಂದಕ್ಕೆ ತಂದು ನಿಮ್ಮ ಪಿತೃಗಳನ್ನು ಐಗುಪ್ತದೇಶದೊಳಗಿಂದ ಬರಮಾಡಿದ ಕರ್ತನೇ ಇದಕ್ಕೆ ಸಾಕ್ಷಿ.
- 7ಆದದರಿಂದ ಈಗ ನಿಲ್ಲಿರಿ; ಕರ್ತನು ನಿಮಗೂ ನಿಮ್ಮ ತಂದೆಗಳಿಗೂ ಮಾಡಿದ ಸಮಸ್ತ ನೀತಿಯುಳ್ಳ ಕ್ರಿಯೆಗಳ ವಿಷಯ ಕರ್ತನ ಮುಂದೆ ನಿಮಗೆ ನ್ಯಾಯ ಹೇಳುತ್ತೇನೆ.
Cross references
- Exodus 22:4 ವಿಮೋಚನಕಾಂಡ 22:4ಕಳ್ಳತನ ಮಾಡಿದ ಎತ್ತಾಗಲಿ ಕತ್ತೆಯಾಗಲಿ ಕುರಿಯಾಗಲಿ ಕದ್ದವನ ಬಳಿಯಲ್ಲಿ ಜೀವವುಳ್ಳದ್ದಾಗಿ ನಿಜವಾಗಿ ಸಿಕ್ಕಿದರೆ ಅವನು ಎರಡರಷ್ಟು ತಿರಿಗಿ ಕೊಡಬೇಕು.
- Acts 24:20 ಅಪೊಸ್ತಲರ ಕೃತ್ಯಗಳು 24:20ಇಲ್ಲವಾದರೆ ಆಲೋಚನಾಸಭೆಯ ಮುಂದೆ ನಾನು ನಿಂತಿದ್ದಾಗ ನನ್ನಲ್ಲಿ ಏನಾದರೂ ಕೆಟ್ಟದ್ದನ್ನು ಅವರು ಕಂಡಿದ್ದರೆ ಅದನ್ನು ಈಗಲೇ ತಿಳಿಯಪಡಿಸಲಿ.
- Acts 23:9 ಅಪೊಸ್ತಲರ ಕೃತ್ಯಗಳು 23:9ಅಲ್ಲಿ ದೊಡ್ಡ ಕೂಗಾಟ ಉಂಟಾದದ್ದರಿಂದ ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳು ಎದ್ದು--ಈ ಮನುಷ್ಯನಲ್ಲಿ ಯಾವ ಕೆಟ್ಟ ದ್ದನ್ನೂ ನಾವು ಕಾಣಲಿಲ್ಲ; ಆತ್ಮವಾಗಲೀ ದೇವದೂತ ನಾಗಲೀ ಅವನ ಕೂಡ ಮಾತನಾಡಿದರೆ ನಾವು ದೇವರಿಗೆ ವಿರೋಧವಾಗಿ ವ್ಯಾಜ್ಯವಾಡದೆ ಇರೋಣ ಎಂದು ಹೇಳಿ ವಾಗ್ವಾದ ಮಾಡಿದರು.
- 1 Corinthians 4:4 1 ಕೊರಿಂಥದವರಿಗೆ 4:4ನಾನೇ ನಾನಾಗಿ ಏನೂ ತಿಳಿಯದವನಾಗಿದ್ದೇನೆ; ಆದಾಗ್ಯೂ ಅದರಿಂದ ನಾನು ನೀತಿವಂತನಾಗಲಿಲ್ಲ; ನನ್ನನ್ನು ವಿಚಾರಿಸುವಾತನು ಕರ್ತನೇ.
- 2 Corinthians 1:12 2 ಕೊರಿಂಥದವರಿಗೆ 1:12ನಾವು ಮನುಷ್ಯಜ್ಞಾನದಿಂದಲ್ಲ, ಆದರೆ ಸರಳತೆಯಿಂದಲೂ ಭಕ್ತಿಯ ನಿಷ್ಕಪಟದಿಂದಲೂ ದೇವರ ಕೃಪೆಯಿಂದಲೂ ಲೋಕದಲ್ಲಿ ಮತ್ತು ಇನ್ನೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸಿನ ಸಾಕ್ಷಿಯೇ ನಮ ಗಿರುವ ಸಂತೋಷವಾಗಿದೆ.
- Acts 24:16 ಅಪೊಸ್ತಲರ ಕೃತ್ಯಗಳು 24:16ಈ ವಿಷಯ ದೇವರ ಮುಂದೆಯೂ ಮನುಷ್ಯರ ಮುಂದೆಯೂ ಯಾವಾಗಲೂ ನಾನು ದೋಷರಹಿತವಾದ ಮನಸ್ಸಾಕ್ಷಿಯುಳ್ಳವನಾಗಿರುವಂತೆ ಅಭ್ಯಾಸಮಾಡಿಕೊಳ್ಳುತ್ತೇನೆ.
- 1 Samuel 26:9 1 ಸಮುವೇಲನು 26:9ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು.
- Job 42:7 ಯೋಬನು 42:7ಕರ್ತನು ಈ ಮಾತುಗಳನ್ನೆಲ್ಲಾ ಯೋಬನಿಗೆ ಹೇಳಿದ ಮೇಲೆ ಕರ್ತನು ತೇಮಾನ್ಯನಾದ ಎಲೀಫಜ ನಿಗೆ -- ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ಕೋಪಗೊಂಡಿದ್ದೇನೆ; ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾಡಲಿಲ್ಲ.
- John 18:38 ಯೋಹಾನನು 18:38ಪಿಲಾ ತನು ಆತನಿಗೆ--ಸತ್ಯ ಅಂದರೇನು? ಅಂದನು. ಅವನು ಇದನ್ನು ಕೇಳಿದ ಮೇಲೆ ತಿರಿಗಿ ಯೆಹೂದ್ಯರ ಬಳಿಗೆ ಹೊರಗೆ ಬಂದು ಅವರಿಗೆ--ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.
- Psalm 17:3 ಕೀರ್ತನೆಗಳು 17:3ನೀನು ನನ್ನ ಹೃದಯವನ್ನು ಶೋಧಿಸಿದ್ದೀ, ರಾತ್ರಿಯಲ್ಲಿ ನನ್ನನ್ನು ದರ್ಶಿಸಿದ್ದೀ; ನನ್ನನ್ನು ಪುಟಕ್ಕೆ ಹಾಕಿ ಏನೂ ಕಂಡುಕೊಳ್ಳಲಿಲ್ಲ. ನನ್ನ ಬಾಯಿ ಅತಿ ಕ್ರಮಿಸದಂತೆ ನಾನು ನಿಶ್ಚಯ ಮಾಡಿದ್ದೇನೆ.
- Job 31:35–40 ಯೋಬನು 31:35–40ಕೇಳುವವನು ನನಗೆ ಸಿಕ್ಕಿದರೆ ವಾಸಿ; ಇಗೋ, ಸರ್ವಶಕ್ತನು ನನಗೆ ಉತ್ತರಕೊಡಲಿ; ನನ್ನ ವಿರೋ ಧಿಯು ಪುಸ್ತಕವನ್ನು ಬರೆಯಲಿ, ಇದೇ ನನ್ನ ಆಶೆ. ನನ್ನ ಹೆಗಲಲ್ಲಿ ಅದನ್ನು ನಿಶ್ಚಯವಾಗಿ ಹೊರುವೆನು; ಅದನ್ನು ಕಿರೀಟವಾಗಿ ಕಟ್ಟಿಕೊಳ್ಳುವೆನು. ನನ್ನ ಹೆಜ್ಜೆ ಗಳ ಎಣಿಕೆಯನ್ನು ಆತನಿಗೆ ತೋರಿಸುವೆನು; ಅಧಿಪತಿ ಯಾಗಿ ಆತನ ಸವಿಾಪಕ್ಕೆ ಬರುವೆನು. ನನ್ನ ಭೂಮಿಯು ನನಗೆ ವಿರೋಧವಾಗಿ ಕೂಗಿದರೆ, ಅದರ ಸಾಲುಗಳು ಕೂಡ ದೂರಿದರೆ, ಅದರ ಫಲವನ್ನು ನಾನು ಹಣಕೊಡದೆ ತಿಂದಿದ್ದರೆ, ಅದರ ಯಾಜಮಾನರ ಪ್ರಾಣವನ್ನು ತೆಗೆದುಬಿಟ್ಟಿದ್ದರೆ,ಗೋಧಿಗೆ ಬದಲಾಗಿ ಮುಳ್ಳೂ ಜವೆಗೋಧಿಗೆ ಬದಲಾಗಿ ಕಳೆಯೂ ಬೆಳೆಯಲಿ. ಯೋಬನ ನುಡಿಗಳು ಮುಗಿದವು. ಗೋಧಿಗೆ ಬದಲಾಗಿ ಮುಳ್ಳೂ ಜವೆಗೋಧಿಗೆ ಬದಲಾಗಿ ಕಳೆಯೂ ಬೆಳೆಯಲಿ. ಯೋಬನ ನುಡಿಗಳು ಮುಗಿದವು.