1 Samuel · chapter 17 · verse 10
1 Samuel 17:10 in Kannada
ಆ ಫಿಲಿಷ್ಟಿಯನು--ನಾನು ಈ ದಿನ ಇಸ್ರಾಯೇಲಿನ ಸೈನ್ಯಗಳನ್ನು ನಿಂದಿಸುತ್ತೇನೆ; ನಾವು ಒಬ್ಬರಿಗೊಬ್ಬರು ಯುದ್ಧಮಾಡುವ ಹಾಗೆ ನನಗೆ ಒಬ್ಬನನ್ನು ಬಿಟ್ಟುಬಿಡಿರಿ ಅಂದನು.
Aa philishtiyanu--naanu ee dina israayelina sainyagalannu nindisuttene; naavu obbarigobbaru yuddhamaaduva haage nanage obbanannu bittubidiri andanu.
1 Samuel 17:10 in English
- King James Version (KJV)
- And the Philistine said, I defy the armies of Israel this day; give me a man, that we may fight together.
- World English Bible (WEB)
- The Philistine said, “I defy the armies of Israel today! Give me a man, that we may fight together!”
- American Standard Version (ASV)
- And the Philistine said, I defy the armies of Israel this day; give me a man, that we may fight together.
- Bible in Basic English (BBE)
- And the Philistine said, I have put to shame the armies of Israel this day; give me a man so that we may have a fight together.
- Darby Translation (DBY)
- And the Philistine said, I have defied the ranks of Israel this day; give me a man, that we may fight together.
- Webster's Bible (WBS)
- And the Philistine said, I defy the armies of Israel this day; give me a man, that we may fight together.
- Young's Literal Translation (YLT)
- And the Philistine saith, 'I have reproached the ranks of Israel this day; give to me a man, and we fight together.'
Read in context
- 8ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾ ಯೇಲ್ ಸೈನ್ಯದವರಿಗೆ ಕೂಗಿ ಹೇಳಿದ್ದೇನಂದರೆ--ಯಾಕೆ ನೀವು ವ್ಯೂಹ ಕಟ್ಟಲು ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರ ಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆದು ಕೊಳ್ಳಿರಿ; ಅವನು ನನ್ನ ಮುಂದೆ ಬರಲಿ.
- 9ಅವನು ನನ್ನ ಸಂಗಡ ಯುದ್ಧ ಮಾಡಬಲ್ಲವನಾಗಿದ್ದು ನನ್ನನ್ನು ಕೊಂದರೆ ನಾವು ನಿಮಗೆ ಸೇವಕರಾಗಿರುವೆವು; ನಾನು ಅವನ ಸಂಗಡ ಯುದ್ಧಮಾಡಬಲ್ಲವನಾಗಿದ್ದು ಅವನನ್ನು ಕೊಂದರೆ ನೀವು ನಮಗೆ ಸೇವಕರಾಗಿದ್ದು ನಮ್ಮನ್ನು ಸೇವಿಸಬೇಕು ಅಂದನು.
- 10ಆ ಫಿಲಿಷ್ಟಿಯನು--ನಾನು ಈ ದಿನ ಇಸ್ರಾಯೇಲಿನ ಸೈನ್ಯಗಳನ್ನು ನಿಂದಿಸುತ್ತೇನೆ; ನಾವು ಒಬ್ಬರಿಗೊಬ್ಬರು ಯುದ್ಧಮಾಡುವ ಹಾಗೆ ನನಗೆ ಒಬ್ಬನನ್ನು ಬಿಟ್ಟುಬಿಡಿರಿ ಅಂದನು.
- 11ಸೌಲನೂ ಸಮಸ್ತ ಇಸ್ರಾಯೇಲ್ಯರೂ ಆ ಫಿಲಿಷ್ಟಿಯನ ಮಾತುಗಳನ್ನು ಕೇಳಿದಾಗ ಎದೆಗುಂದಿ ಬಹು ಭಯಪಟ್ಟರು.
- 12ದಾವೀದನು ಯೆಹೂದದ ಬೇತ್ಲೆಹೇಮ್ ಊರಿನ ಎಫ್ರಾತ್ಯನಾದ ಇಷಯನೆಂಬವನ ಮಗನಾ ಗಿದ್ದನು. ಈ ಇಷಯನಿಗೆ ಎಂಟು ಮಂದಿ ಕುಮಾರ ರಿದ್ದರು. ಇವನು ಸೌಲನ ದಿವಸಗಳಲ್ಲಿ ಜನರೊಳಗೆ ವೃದ್ಧನಾಗಿದ್ದನು.
Cross references
- 1 Samuel 17:25–26 1 ಸಮುವೇಲನು 17:25–26ಇಸ್ರಾಯೇಲ್ ಮನು ಷ್ಯರು--ಏರಿ ಬಂದ ಈ ಮನುಷ್ಯನನ್ನು ನೋಡಿ ದಿರೋ? ಇಸ್ರಾಯೇಲನ್ನು ಹೀಯಾಳಿಸಲು ಏರಿ ಬಂದಿದ್ದಾನಲ್ಲಾ. ಯಾವನು ಇವನನ್ನು ಕೊಂದುಬಿಡು ವನೋ ಅವನನ್ನು ಅರಸನು ಬಹಳ ಐಶ್ವರ್ಯ ವಂತನಾಗ ಮಾಡಿ ಅವನಿಗೆ ತನ್ನ ಮಗಳನ್ನು ಕೊಟ್ಟು ಅವನ ತಂದೆಯ ಮನೆಯನ್ನು ಇಸ್ರಾಯೇಲ್ಯರಲ್ಲಿ ಸರ್ವ ಮಾನ್ಯವನ್ನು ಕೊಡುವನು ಅಂದರು. ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ--ಈ ಫಿಲಿಷ್ಟಿಯನನ್ನು ಕೊಂದು ಇಸ್ರಾಯೇಲಿನ ಮೇಲಿನಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಮಾಡಲ್ಪಡುವದು? ಯಾಕಂದರೆ ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಹೀಯಾ ಳಿಸುವದಕ್ಕೆ ಎಷ್ಟರವನು ಅಂದನು.
- 1 Samuel 17:45 1 ಸಮುವೇಲನು 17:45ಆಗ ದಾವೀದನು ಫಿಲಿಷ್ಟಿಯನಿಗೆ--ನೀನು ಕತ್ತಿ ಈಟಿಯ ಗುರಾಣಿಯ ಸಂಗಡ ನನ್ನ ಬಳಿಗೆ ಬರುತ್ತೀ; ಆದರೆ ನೀನು ನಿಂದಿಸಿದ ಇಸ್ರಾಯೇ ಲಿನ ಸೈನ್ಯಗಳ ದೇವರಾದಂಥ ಸೈನ್ಯಗಳ ಕರ್ತನ ಹೆಸರಿ ನಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ.
- 1 Samuel 17:36 1 ಸಮುವೇಲನು 17:36ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ ಆ ಕರಡಿಯನ್ನೂ ಕೊಂದು ಬಿಟ್ಟನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಪ್ರತಿಭಟಿಸಿದ್ದರಿಂದ ಅವುಗಳಲ್ಲಿ ಒಂದರ ಹಾಗೆ ಆಗುವನು ಅಂದನು.
- Nehemiah 2:19 ನೆಹೆಮೀಯ 2:19ಆದರೆ ಹೋರೋನ್ಯನಾದ ಸನ್ಬಲ್ಲಟನೂ ಅಮ್ಮೋನ್ಯನ ದಾಸನಾದ ಟೋಬೀಯನೂ ಅರಬಿ ಯನಾದ ಗೆಷೆಮನೂ ಇದನ್ನು ಕೇಳಿದಾಗ ಅವರು ನಮ್ಮನ್ನು ಗೇಲಿಮಾಡಿ ತಿರಸ್ಕರಿಸಿ--ನೀವು ಮಾಡುವ ಈ ಕಾರ್ಯವೇನು? ನೀವು ಅರಸನಿಗೆ ವಿರೋಧವಾಗಿ ತಿರಿಗಿ ಬೀಳುವಿರೋ ಅಂದರು.ಆಗ ನಾನು ಅವರಿಗೆ ಪ್ರತ್ಯುತ್ತರವಾಗಿ--ಪರಲೋಕದ ದೇವರು ನಮಗೆ ಸಫಲ ಮಾಡುವನು; ಆತನ ಸೇವಕರಾದ ನಾವು ಎದ್ದು ಕಟ್ಟುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಪಾಲಾದರೂ ಹಕ್ಕಾದರೂ ಜ್ಞಾಪಕಾರ್ಥವಾದ ಗುರುತಾದರೂ ಇಲ್ಲವೆಂದು ಹೇಳಿದನು.
- 2 Samuel 21:21 2 ಸಮುವೇಲನು 21:21ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾಗಿರುವ ಶಿಮ್ಮನ ಮಗ ನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ಮಹಾಶರೀರದವನಿಗೆ ಹುಟ್ಟಿದ್ದರು; ಇವರು ದಾವೀದ ನಿಂದಲೂ ಅವನ ಸೇವಕರಿಂದಲೂ ಸಂಹಾರವಾದರು.
- Numbers 23:7–8 ಅರಣ್ಯಕಾಂಡ 23:7–8ಆಗ ಅವನು ಸಾಮ್ಯರೂಪವಾಗಿ--ಮೋವಾಬಿನ ಅರಸನಾದ ಬಾಲಾಕನು ನನ್ನನ್ನು ಅರಾಮಿನಿಂದಲೂ ಪೂರ್ವ ಪರ್ವತಗಳಿಂದಲೂ ಕರೆಯಿಸಿ--ನನಗೋ ಸ್ಕರ ಯಾಕೋಬನನ್ನು ಶಪಿಸ ಬಾ; ಇಸ್ರಾಯೇಲನ್ನು ಎದುರಿಸುವದಕ್ಕೆ ಬಾ ಎಂದು ನನಗೆ ಹೇಳಿದ್ದಾನೆ. ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಕರ್ತನು ಎದುರಿಸದವನನ್ನು ನಾನು ಹೇಗೆ ಎದುರಿ ಸಲಿ?
- Job 40:9–12 ಯೋಬನು 40:9–12ಇಲ್ಲವೆ ದೇವರ ಹಾಗೆ ತೋಳುಳ್ಳವನಾಗಿದ್ದೀಯೋ? ಇಲ್ಲವೆ ಆತನ ಹಾಗೆ ಗುಡುಗಿನಿಂದ ಆರ್ಭಟ ಮಾಡು ವಿಯೋ? ಗಾಂಭೀರ್ಯದಿಂದಲೂ ಘನತೆಯಿಂದ ಲೂ ನಿನ್ನನ್ನು ಅಲಂಕರಿಸಿಕೋ; ಮಹಿಮೆಯನ್ನೂ ಪ್ರಭೆಯನ್ನೂ ಧರಿಸಿಕೋ. ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು. ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು.
- Psalm 9:4–5 ಕೀರ್ತನೆಗಳು 9:4–5ನೀನು ನನ್ನ ನ್ಯಾಯ ವನ್ನೂ ವ್ಯಾಜ್ಯವನ್ನೂ ಸ್ಥಾಪಿಸಿದ್ದೀ. ನೀತಿಯುಳ್ಳ ನ್ಯಾಯಾ ಧಿಪತಿಯಾಗಿ ಸಿಂಹಾಸನದಲ್ಲಿ ಕೂತುಕೊಂಡಿದ್ದೀ. ನೀನು ಜನಾಂಗಗಳನ್ನು ಗದರಿಸಿ ದುಷ್ಟರನ್ನು ನಾಶ ಮಾಡಿದ್ದೀ; ಅವರ ಹೆಸರನ್ನು ಯುಗ ಯುಗಾಂತರ ಗಳ ವರೆಗೂ ಅಳಿಸಿ ಬಿಟ್ಟಿದ್ದೀ.
- Proverbs 16:18 ಜ್ಞಾನೋಕ್ತಿಗಳು 16:18ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.
- Jeremiah 9:23 ಯೆರೆಮೀಯ 9:23ಕರ್ತನು ಹೀಗೆ ಹೇಳುತ್ತಾನೆ--ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳಪಡದಿರಲಿ; ಬಲಿಷ್ಟನು ತನ್ನ ಬಲ ದಲ್ಲಿ ಹೆಚ್ಚಳ ಪಡದಿರಲಿ; ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳಪಡದಿರಲಿ.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- 2 Samuel 23:9 2 ಸಮುವೇಲನು 23:9ಇವನ ತರುವಾಯ ಅಹೋಹ್ಯನಾ ಗಿರುವ ದೋದೋನ ಮಗನಾಗಿರುವ ಎಲ್ಲಾಜಾರನು. ಇವನು ಇಸ್ರಾಯೇಲ್ ಜನರು ಓಡಿಹೋದ ತರುವಾಯ ಯುದ್ಧಕ್ಕೆ ಕೂಡಿ ಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು.