Proverbs · chapter 16 · verse 18
Proverbs 16:18 in Kannada
ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.
Naashanakke mundaagi garva hogu ttade; beeluvikeya munche jambada manassu.
Proverbs 16:18 in English
- King James Version (KJV)
- Pride [goeth] before destruction, and an haughty spirit before a fall.
- World English Bible (WEB)
- Pride goes before destruction, and an arrogant spirit before a fall.
- American Standard Version (ASV)
- Pride [goeth] before destruction, And a haughty spirit before a fall.
- Bible in Basic English (BBE)
- Pride goes before destruction, and a stiff spirit before a fall.
- Darby Translation (DBY)
- Pride [goeth] before destruction, and a haughty spirit before a fall.
- Webster's Bible (WBS)
- Pride [goeth] before destruction, and a haughty spirit before a fall.
- Young's Literal Translation (YLT)
- Before destruction [is] pride, And before stumbling — a haughty spirit.'
Read in context
- 16ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವದು ಎಷ್ಟೋ ಉತ್ತಮ.
- 17ಯಥಾರ್ಥವಂತರ ಹೆದ್ದಾರಿಯು ಕೆಟ್ಟತನದಿಂದ ತೊಲಗುವಂಥದ್ದಾಗಿದೆ. ತನ್ನ ಮಾರ್ಗ ವನ್ನು ಕಾಯುವವನು ತನ್ನ ಪ್ರಾಣವನ್ನು ಕಾಪಾಡಿ ಕೊಳ್ಳುತ್ತಾನೆ.
- 18ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು.
- 19ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳು ವದಕ್ಕಿಂತ ದೀನರೊಂದಿಗೆ ವಿನಯ ಮನಸ್ಸುಳ್ಳವರಾಗಿ ಇರುವದು ಉತ್ತಮ.
- 20ಕಾರ್ಯವನ್ನು ಜ್ಞಾನದಿಂದ ನಡಿಸುವವನು ಒಳ್ಳೇದನ್ನು ಪಡೆಯುವನು; ಕರ್ತನಲ್ಲಿ ಭರವಸವಿಡುವವನು ಧನ್ಯನು.
Cross references
- Proverbs 11:2 ಜ್ಞಾನೋಕ್ತಿಗಳು 11:2ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ದೀನರಲ್ಲಿ ಜ್ಞಾನವಿದೆ.
- Isaiah 2:11–12 ಯೆಶಾಯ 2:11–12ಮನು ಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವದು, ಮನು ಷ್ಯರ ಗರ್ವವು ತಗ್ಗುವದು, ಆಗ ಕರ್ತನೊಬ್ಬನೇ ಆ ದಿನದಲ್ಲಿ ಉನ್ನತನಾಗಿರುವನು. ಸೈನ್ಯಗಳ ಕರ್ತನ ದಿನವು ಗರ್ವ ಮತ್ತು ಅಹಂಭಾವದಿಂದ ತುಂಬಿರು ವವರ ಮೇಲೆಯೂ ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವದು; ಆತನು ಅವರನ್ನು ತಗ್ಗಿಸುವನು.
- Proverbs 18:12 ಜ್ಞಾನೋಕ್ತಿಗಳು 18:12ನಾಶನಕ್ಕೆ ಮುಂದೆ ಮನುಷ್ಯನ ಹೃದಯವು ಗರ್ವವಾಗಿದೆ; ಸನ್ಮಾನಕ್ಕೆ ಮುಂಚೆ ವಿನಯವಾಗಿದೆ.
- Obadiah 1:3–4 ಓಬದ್ಯ 1:3–4ನೀನು ಬಹಳವಾಗಿ ತಿರಸ್ಕರಿಸಲ್ಪಟ್ಟಿದ್ದೀ. ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸ ಮಾಡಿಕೊಂಡವನೇ--ಯಾರು ನನ್ನನ್ನು ನೆಲಕ್ಕೆ ಇಳಿಸ ಬಲ್ಲರೆಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ. ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನೆಂದು ಕರ್ತನು ಅನ್ನುತ್ತಾನೆ.
- Proverbs 29:23 ಜ್ಞಾನೋಕ್ತಿಗಳು 29:23ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.
- 1 Timothy 3:6 1 ತಿಮೊಥೆಯನಿಗೆ 3:6ಅವನು ಹೊಸಬನಾಗಿರಬಾರದು; ಅಂಥ ವನಾದರೆ ಉಬ್ಬಿಕೊಂಡು ಸೈತಾನನ ಶಿಕ್ಷಾವಿಧಿಗೆ ಒಳಗಾಗುವನು.
- Proverbs 17:19 ಜ್ಞಾನೋಕ್ತಿಗಳು 17:19ಕಲಹವನ್ನು ಪ್ರೀತಿಮಾಡುವವನು ದೋಷವನ್ನು ಪ್ರೀತಿಮಾಡುತ್ತಾನೆ; ತನ್ನ ದ್ವಾರವನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಹುಡುಕುತ್ತಾನೆ.
- Romans 11:20 ರೋಮಾಪುರದವರಿಗೆ 11:20ಒಳ್ಳೆಯದು, ಅವರು ನಂಬದೆ ಹೋದದರಿಂದ ಮುರಿದುಹಾಕಲ್ಪಟ್ಟರು, ನೀನು ನಿಂತಿರುವದು ನಂಬಿಕೆಯಿಂದಲೇ, ಗರ್ವ ಪಡಬೇಡ, ಭಯದಿಂದಿರು;
- Esther 6:6 ಎಸ್ತೇರಳು 6:6ಹಾಮಾನನು ಒಳಕ್ಕೆ ಬಂದಾಗ ಅರಸನು ಅವನಿಗೆ--ಅರಸನು ಇಷ್ಟಪಟ್ಟು ಘನಪಡಿಸಬೇಕೆಂದಿ ರುವ ಮನುಷ್ಯನಿಗೆ ಮಾಡಬೇಕಾದದ್ದೇನು ಅಂದನು. ಆಗ ಹಾಮಾನನು ತನ್ನ ಹೃದಯದಲ್ಲಿ--ಅರಸನು ನನಗಿಂತ ಹೆಚ್ಚಾಗಿ ಇನ್ನಾರನ್ನು ಘನಪಡಿಸಬೇಕೆಂದಿ ರುವನು ಎಂದು ಅಂದುಕೊಂಡನು.
- Daniel 4:30–37 ದಾನಿಯೇಲನು 4:30–37ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು. ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಶಬ್ದವು ಉಂಟಾಯಿತು; ಏನಂದರೆ--ಓ ಅರಸನಾದ ನೆಬೂಕದ್ನೆ ಚ್ಚರನೇ, ನಿನಗೆ ಹೇಳುವದೇನಂದರೆ, ನಿನ್ನ ರಾಜ್ಯವು ನಿನ್ನನ್ನು ಬಿಟ್ಟು ಹೋಯಿತು. ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು. ಅದೇ ಗಳಿಗೆಯಲ್ಲಿ ಈ ಸಂಗತಿಯು ನೆಬೂಕದ್ನೆಚ್ಚರನಲ್ಲಿ ನೆರವೇರಿತು. ಅವನು ಮನುಷ್ಯ ರಿಂದ ತಳ್ಳಲ್ಪಟ್ಟು ಎತ್ತುಗಳಂತೆ ಹುಲ್ಲು ಮೇಯುತ್ತಿದ್ದನು. ಕೊನೆಗೆ ಅವನ ಕೂದಲು ಹದ್ದಿನ ಗರಿಗಳಂತೆಯೂ ಅವನ ಉಗುರುಗಳು ಪಕ್ಷಿಗಳ ಉಗುರುಗಳ ಹಾಗೂ ಬೆಳೆಯುವ ವರೆಗೆ ಅವನ ಶರೀರವು ಆಕಾಶದ ಮಂಜಿ ನಿಂದ ತೇವವಾಯಿತು. ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು. ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು. ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು. ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Esther 7:10 ಎಸ್ತೇರಳು 7:10ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.
- Daniel 5:22 ದಾನಿಯೇಲನು 5:22ಅವನ ಮಗನಾದ ಓ ಬೇಲ್ಯಚ್ಚರನೇ--ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ