1 Samuel · chapter 17 · verse 36
1 Samuel 17:36 in Kannada
ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ ಆ ಕರಡಿಯನ್ನೂ ಕೊಂದು ಬಿಟ್ಟನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಪ್ರತಿಭಟಿಸಿದ್ದರಿಂದ ಅವುಗಳಲ್ಲಿ ಒಂದರ ಹಾಗೆ ಆಗುವನು ಅಂದನು.
Heegeye ninna sevakanu aa sinhavannoo aa karadiyannoo kondu bittanu. Sunnati illada ee philishtiyanu jeevavulla devara sainyagalannu pratibhatisiddarinda avugalalli ondara haage aaguvanu andanu.
1 Samuel 17:36 in English
- King James Version (KJV)
- Thy servant slew both the lion and the bear: and this uncircumcised Philistine shall be as one of them, seeing he hath defied the armies of the living God.
- World English Bible (WEB)
- Your servant struck both the lion and the bear. This uncircumcised Philistine shall be as one of them, since he has defied the armies of the living God.”
- American Standard Version (ASV)
- Thy servant smote both the lion and the bear: and this uncircumcised Philistine shall be as one of them, seeing he hath defied the armies of the living God.
- Bible in Basic English (BBE)
- Your servant has overcome lion and bear: and the fate of this Philistine, who is without circumcision, will be like theirs, seeing that he has put shame on the armies of the living God.
- Darby Translation (DBY)
- Thy servant smote both the lion and the bear; and this uncircumcised Philistine shall be as one of them, because he has defied the armies of the living God.
- Webster's Bible (WBS)
- Thy servant slew both the lion and the bear: and this uncircumcised Philistine shall be as one of them, seeing he hath defied the armies of the living God.
- Young's Literal Translation (YLT)
- Both the lion and the bear hath thy servant smitten, and this uncircumcised Philistine hath been as one of them, for he hath reproached the ranks of the living God.'
Read in context
- 34ದಾವೀದನು ಸೌಲನಿಗೆ--ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿ ಇರುವ ಕುರಿಮರಿಯನ್ನು ಹಿಡಿದವು.
- 35ಆಗ ನಾನು ಅದರ ಹಿಂದೆ ಹೋಗಿ ಅದನ್ನು ಹೊಡೆದು ಆ ಕುರಿಮರಿಯನ್ನು ಅದರ ಬಾಯಿಂದ ತಪ್ಪಿಸಿದೆನು. ಅದು ನನ್ನ ಮೇಲೆ ಹಿಂತಿರುಗಿ ಬಿದ್ದಾಗ ನಾನು ಅದರ ಗಡ್ಡವನ್ನು ಹಿಡಿದು ಹೊಡೆದು ಕೊಂದುಹಾಕಿದೆನು.
- 36ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ ಆ ಕರಡಿಯನ್ನೂ ಕೊಂದು ಬಿಟ್ಟನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಪ್ರತಿಭಟಿಸಿದ್ದರಿಂದ ಅವುಗಳಲ್ಲಿ ಒಂದರ ಹಾಗೆ ಆಗುವನು ಅಂದನು.
- 37ಇದಲ್ಲದೆ ದಾವೀದನು--ನನ್ನನ್ನು ಸಿಂಹದ ಕೈಗೂ ಕರಡಿಯ ಕೈಗೂ ತಪ್ಪಿಸಿ ಬಿಟ್ಟ ಕರ್ತನು ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವನು ಅಂದನು. ಆಗ ಸೌಲನು ದಾವೀದ ನಿಗೆ--ನೀನು ಹೋಗು; ಕರ್ತನು ನಿನ್ನ ಸಂಗಡ ಇರಲಿ ಅಂದನು.
- 38ಆಗ ಸೌಲನು ದಾವೀದನಿಗೆ ತನ್ನ ಆಯುಧಗಳನ್ನು ತೊಡಿಸಿ ಅವನ ತಲೆಯ ಮೇಲೆ ಒಂದು ಹಿತ್ತಾಳೆಯ ಶಿರಸ್ತ್ರಾಣವನ್ನು ಇಟ್ಟು ಅವನಿಗೆ ಕವಚವನ್ನು ತೊಡಿಸಿದನು.
Cross references
- 1 Samuel 17:10 1 ಸಮುವೇಲನು 17:10ಆ ಫಿಲಿಷ್ಟಿಯನು--ನಾನು ಈ ದಿನ ಇಸ್ರಾಯೇಲಿನ ಸೈನ್ಯಗಳನ್ನು ನಿಂದಿಸುತ್ತೇನೆ; ನಾವು ಒಬ್ಬರಿಗೊಬ್ಬರು ಯುದ್ಧಮಾಡುವ ಹಾಗೆ ನನಗೆ ಒಬ್ಬನನ್ನು ಬಿಟ್ಟುಬಿಡಿರಿ ಅಂದನು.
- Romans 2:28–29 ರೋಮಾಪುರದವರಿಗೆ 2:28–29ಹೊರಗೆ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಹೊರಗೆ ಶರೀರದಲ್ಲಿ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.ಆದರೆ ಒಳಗೆ ಯೆಹೂದ್ಯ ನಾಗಿರುವವನೇ ಯೆಹೂದ್ಯನು; ಸುನ್ನತಿಯು ಹೃದಯಕ್ಕೆ ಸಂಬಂಧಪಟ್ಟದ್ದಾಗಿ ಅಕ್ಷರೀಕವಾಗಿರದೆ ಆತ್ಮೀಕವಾದದ್ದೇ ಆಗಿದೆ. ಹೀಗೆ ಅವನ ಹೊಗಳಿಕೆಯು ಮನುಷ್ಯರಿಂದಾ ಗಿರದೆ ದೇವರಿಂದಲೇ ಆಗಿರುವದು. ಆದರೆ ಒಳಗೆ ಯೆಹೂದ್ಯ ನಾಗಿರುವವನೇ ಯೆಹೂದ್ಯನು; ಸುನ್ನತಿಯು ಹೃದಯಕ್ಕೆ ಸಂಬಂಧಪಟ್ಟದ್ದಾಗಿ ಅಕ್ಷರೀಕವಾಗಿರದೆ ಆತ್ಮೀಕವಾದದ್ದೇ ಆಗಿದೆ. ಹೀಗೆ ಅವನ ಹೊಗಳಿಕೆಯು ಮನುಷ್ಯರಿಂದಾ ಗಿರದೆ ದೇವರಿಂದಲೇ ಆಗಿರುವದು.
- Zechariah 2:8 ಜೆಕರ್ಯ 2:8ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮನ್ನು ಸುಲುಕೊಂಡ ಜನಾಂಗ ಗಳ ಬಳಿಗೆ ಮಹಿಮೆಯ ತರುವಾಯ ನನ್ನನ್ನು ಆತನು ಕಳುಹಿಸಿದ್ದಾನೆ; ನಿಮ್ಮನ್ನು ಮುಟ್ಟುವವನು ಆತನ ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.
- Isaiah 10:15 ಯೆಶಾಯ 10:15ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿ ಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಅಥವಾ ಬೆತ್ತವು ತಾನು ಮರವಲ್ಲ ಎಂಬಂತೆ ತನ್ನನ್ನು ತಾನು ಎತ್ತಿಕೊಂಡ ಹಾಗೆ ಇರುವದು.
- Zechariah 12:3 ಜೆಕರ್ಯ 12:3ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು.
- Acts 12:22–23 ಅಪೊಸ್ತಲರ ಕೃತ್ಯಗಳು 12:22–23ಆಗ ಜನರು--ಇದು ಮನುಷ್ಯನ ಸ್ವರವಲ್ಲ, ದೇವರ ಸ್ವರವೇ ಎಂದು ಅರ್ಭಟಿಸಿದರು. ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.
- Isaiah 37:28–29 ಯೆಶಾಯ 37:28–29ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು. ನೀನು ನನಗೆ ವಿರೋಧವಾಗಿ ರೌದ್ರನಾಗಿರುವದೂ ಗೊಂದಲ ದಿಂದಿರುವದೂ ನನ್ನ ಕಿವಿಗೆ ಕೇಳಿಬಂತು. ಆದದರಿಂದ ನಾನು ನಿನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ತುಟಿಗಳಲ್ಲಿಯೂ ಹಾಕಿ, ನೀನು ಬಂದು ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿ ದ್ದಾನೆ.
- Ezekiel 32:27–32 ಯೆಹೆಜ್ಕೇಲನು 32:27–32ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಕತ್ತಿಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ; ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರ ರಾಗಿದ್ದಾಗ್ಯೂ ಅವರ ಅಕ್ರಮಗಳು ಅವರ ಎಲುಬು ಗಳ ಮೇಲೆ ಇರುವವು. ಹೌದು, ನೀನು ಸುನ್ನತಿಯಿಲ್ಲದವರ ಮಧ್ಯದಲ್ಲಿ ಮುರಿಯಲ್ಪಡುವಿ; ಕತ್ತಿಯಿಂದ ಹತರಾದವರ ಸಂಗಡ ಮಲಗುವಿ. ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಪ್ರಧಾನರೂ ಶೂರರಾಗಿದ್ದಾಗ್ಯೂ ಕತ್ತಿಯಿಂದ ಹತವಾ ದವರ ಸಂಗಡ ಹೂಣಲ್ಪಟ್ಟಿದ್ದಾರೆ; ಅವರು ಸುನ್ನತಿಯಿಲ್ಲದವರ ಸಂಗಡವೂ ಕುಣಿಗೆ ಇಳಿಯುವವರ ಸಂಗಡವೂ ಹತರಾದವರು. ಅಲ್ಲಿ ಉತ್ತರದ ಪ್ರಧಾ ನರೂ ಚೀದೋನಿನವರೆಲ್ಲರೂ ಹತರಾದವರ ಸಂಗಡ ಇಳಿದಿದ್ದಾರೆ; ಅವರು ಭಯಂಕರತ್ವದಿಂದ ತಮ್ಮ ಪರಾ ಕ್ರಮಕ್ಕೆ ನಾಚಿಕೆಪಟ್ಟಿದ್ದಾರೆ; ಹತರಾದವರ ಸಂಗಡ ಇಳಿದಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಕತ್ತಿಯಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ. ಫರೋಹನು ತನ್ನ ಯಾವ ಸಮೂಹವನ್ನು ನೋಡಿ ಆದರಣೆ ಹೊಂದುವನೋ ಹೌದು, ಅವನೂ ಅವನ ಎಲ್ಲಾ ಸೈನ್ಯವು ಹತರಾದವರು ಎಂದು ದೇವರಾದ ಕರ್ತನು ಹೇಳುತ್ತಾನೆ.ನಾನು ನನ್ನ ಭಯವನ್ನು ಜೀವಿತರ ದೇಶದಲ್ಲಿ ಉಂಟು ಮಾಡಿದ್ದೇನೆ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಕತ್ತಿಯಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ಮಧ್ಯದಲ್ಲಿ ಮಲಗಿಸಲ್ಪಡುವನೆಂದು ದೇವರಾದ ಕರ್ತನು ಹೇಳುತ್ತಾನೆ. ನಾನು ನನ್ನ ಭಯವನ್ನು ಜೀವಿತರ ದೇಶದಲ್ಲಿ ಉಂಟು ಮಾಡಿದ್ದೇನೆ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಕತ್ತಿಯಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ಮಧ್ಯದಲ್ಲಿ ಮಲಗಿಸಲ್ಪಡುವನೆಂದು ದೇವರಾದ ಕರ್ತನು ಹೇಳುತ್ತಾನೆ.
- Isaiah 36:8–10 ಯೆಶಾಯ 36:8–10ಹಾಗಾದರೆ ಈಗ ನನ್ನ ಯಜಮಾನನಾದ ಅಶ್ಶೂ ರಿನ ಅರಸನಿಗೆ ಹೊಣೆಗಾರರನ್ನು ಕೊಡು ಎಂದು ಬೇಡಿಕೊಳ್ಳುತ್ತೇನೆ. ಆಗ ನೀನು ಅವುಗಳ ಮೇಲೆ ಸವಾರಿಮಾಡುವದಕ್ಕೆ ಜನರನ್ನು ಕೊಡುವದಕ್ಕಾದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ನಾನು ಕೊಡು ವೆನು. ಇದಾಗದಿದ್ದರೆ ನನ್ನ ಯಜಮಾನನ ಸೇವಕ ರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯ ಮುಖವನ್ನು ಹೇಗೆ ತಿರುಗಿಸಿ ಬಿಡುವಿ? ಹೀಗಿರಲಾಗಿ ಕುದುರೆಗಳಿ ಗೋಸ್ಕರವೂ ರಾಹುತರಿಗೋಸ್ಕರವೂ ಐಗುಪ್ತದಲ್ಲಿ ನಂಬಿಕೊಳ್ಳುತ್ತೀ. ಈ ದೇಶವನ್ನು ಹಾಳುಮಾಡು ವದಕ್ಕೆ ಕರ್ತನಿಲ್ಲದೆ ನಾನು ಬಂದಿದ್ದೇನೋ? ಈ ದೇಶಕ್ಕೆ ವಿರೋಧವಾಗಿ ಬಂದು ಅದನ್ನು ಹಾಳುಮಾಡಿ ಬಿಡು ಎಂದು ಕರ್ತನೇ ನನಗೆ ಆಜ್ಞಾಪಿಸಿದನು ಎನ್ನುವದು.
- Ezekiel 32:19 ಯೆಹೆಜ್ಕೇಲನು 32:19ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವಿ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು.
- 1 Samuel 17:26 1 ಸಮುವೇಲನು 17:26ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ--ಈ ಫಿಲಿಷ್ಟಿಯನನ್ನು ಕೊಂದು ಇಸ್ರಾಯೇಲಿನ ಮೇಲಿನಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಮಾಡಲ್ಪಡುವದು? ಯಾಕಂದರೆ ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ಹೀಯಾ ಳಿಸುವದಕ್ಕೆ ಎಷ್ಟರವನು ಅಂದನು.
- Acts 5:38–39 ಅಪೊಸ್ತಲರ ಕೃತ್ಯಗಳು 5:38–39ಈಗ ನಾನು ನಿಮಗೆ ಹೇಳುವದೇನಂದರೆ--ಈ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಈ ಯೋಚನೆಯು ಅಥವಾ ಈ ಕಾರ್ಯವು ಮನುಷ್ಯರಿಂದಾಗಿದ್ದರೆ ಅದು ನಿಷ್ಫಲವಾಗುವದು. ಅದು ದೇವರಿಂದಾಗಿದ್ದರೆ ನೀವು ಅದನ್ನು ಗೆಲ್ಲಲಾರಿರಿ; ಒಂದು ವೇಳೆ ನೀವು ದೇವರಿಗೆ ವಿರುದ್ಧ ವಾಗಿ ಹೋರಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು.