1 Samuel · chapter 2 · verse 12
1 Samuel 2:12 in Kannada
ಆದರೆ ಏಲಿಯ ಕುಮಾರರು ಕರ್ತನನ್ನು ಅರಿಯದೆ ಬೆಲಿಯಾಳನ ಮಕ್ಕಳಾಗಿದ್ದರು.
Aadare eliya kumaararu kartanannu ariyade beliyaalana makkalaagiddaru.
1 Samuel 2:12 in English
- King James Version (KJV)
- Now the sons of Eli [were] sons of Belial; they knew not the LORD.
- World English Bible (WEB)
- Now the sons of Eli were wicked men. They didn’t know the LORD.
- American Standard Version (ASV)
- Now the sons of Eli were base men; they knew not Jehovah.
- Bible in Basic English (BBE)
- Now the sons of Eli were evil and good-for-nothing men, having no knowledge of the Lord.
- Darby Translation (DBY)
- Now the sons of Eli were sons of Belial; they knew not Jehovah.
- Webster's Bible (WBS)
- Now the sons of Eli [were] sons of Belial; they knew not the LORD.
- Young's Literal Translation (YLT)
- and the sons of Eli [are] sons of worthlessness, they have not known Jehovah.
Read in context
- 10ಕರ್ತನ ಸಂಗಡ ವಿವಾದಿಸುವವರು ಮುರಿದು ಚೂರಾಗುವರು. ಆತನು ಆಕಾಶದಲ್ಲಿಂದ ಅವರ ಮೇಲೆ ಗುಡುಗುವನು. ಕರ್ತನು ಲೋಕಾಂತ್ಯದ ವರೆಗೂ ನ್ಯಾಯತೀರಿಸಿ ತನ್ನ ಅರಸನಿಗೆ ಬಲಕೊಡುವನು, ತನ್ನ ಅಭಿಷಿಕ್ತನ ಕೊಂಬನ್ನು ಉನ್ನತಮಾಡುವನು ಎಂಬದು.
- 11ಎಲ್ಕಾನನು ರಾಮದಲ್ಲಿರುವ ತನ್ನ ಮನೆಗೆ ಹೋದನು; ಆದರೆ ಆ ಹುಡುಗನು ಯಾಜಕನಾದ ಏಲಿಯ ಸಮ್ಮುಖದಲ್ಲಿ ಕರ್ತನನ್ನು ಸೇವಿಸಿದನು.
- 12ಆದರೆ ಏಲಿಯ ಕುಮಾರರು ಕರ್ತನನ್ನು ಅರಿಯದೆ ಬೆಲಿಯಾಳನ ಮಕ್ಕಳಾಗಿದ್ದರು.
- 13ಆ ಯಾಜಕರು ಜನರನ್ನು ನಡಿಸಿದ ವಿಧ ಏನಂದರೆ, ಯಾವನಾದರೂ ಬಲಿ ಅರ್ಪಿಸಿದರೆ ಅರ್ಪಿಸಿದ ಆ ಬಲಿಯ ಮಾಂಸವನ್ನು ಬೇಯಿಸುವಾಗ ಯಾಜಕನ ಸೇವಕನು ಮೂರು ಮುಳ್ಳು ಗಳುಳ್ಳ ಕೊಂಡಿಯನ್ನು ತಕ್ಕೊಂಡು
- 14ಅದನ್ನು ತಪ್ಪಲೆ ಯಲ್ಲಾಗಲಿ ಪಾತ್ರೆಯಲ್ಲಾಗಲಿ ತಟ್ಟೆಯಲ್ಲಾಗಲಿ ಗಡಿಗೆ ಯಲ್ಲಾಗಲಿ ಚುಚ್ಚುವನು. ಆ ಆಯುಧದಲ್ಲಿ ಬರುವ ದನ್ನೆಲ್ಲಾ ಯಾಜಕನು ತನಗೆ ತಕ್ಕೊಳ್ಳುವನು. ಹೀಗೆಯೇ ಅವರು ಶೀಲೋವಿನಲ್ಲಿ ಅಲ್ಲಿಗೆ ಬರುವ ಸಮಸ್ತ ಇಸ್ರಾಯೇಲ್ಯರಿಗೆ ಮಾಡಿದರು.
Cross references
- Romans 1:28–30 ರೋಮಾಪುರದವರಿಗೆ 1:28–30ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು. ಹೀಗೆ ಅವರು ಸಕಲ ಅನೀತಿಯಿಂದಲೂ ಜಾರತ್ವ ದುರ್ಮಾರ್ಗತನ ದುರಾಶೆ ದುಷ್ಟತ್ವ ಇವುಗಳಿಂದಲೂ ತುಂಬಿದವರಾಗಿ ಹೊಟ್ಟೇಕಿಚ್ಚು ಕೊಲೆ ವಿವಾದ ಮೋಸ ತುಂಬಿದವರೂ ಅತಿಉಗ್ರತೆಯಿಂದ ತುಂಬಿದವರೂ ಪಿಸುಗುಟ್ಟುವ ವರೂ ಚಾಡಿಹೇಳುವವರೂ ದೇವರನ್ನು ಹಗೆ ಮಾಡುವವರೂ ಧಿಕ್ಕರಿಸುವವರೂ ಅಹಂಕಾರಿಗಳೂ ಉಬ್ಬಿಕೊಳ್ಳುವವರೂ ಕೆಟ್ಟವುಗಳನ್ನು ಕಲ್ಪಿಸುವವರೂ ತಂದೆತಾಯಿಗಳಿಗೆ ಅವಿಧೇಯರೂ
- Jeremiah 2:8 ಯೆರೆಮೀಯ 2:8ಯಾಜಕರು--ಕರ್ತನು ಎಲ್ಲಿದ್ದಾನೆ ಎಂದು ಹೇಳಲಿಲ್ಲ; ನ್ಯಾಯ ಪ್ರಮಾಣವನ್ನು ಉಪಯೋಗಿಸುವವರು ನನ್ನನ್ನು ತಿಳಿಯಲಿಲ್ಲ; ಪಾಲಕರು ನನಗೆ ವಿರೋಧವಾಗಿ ದ್ರೋಹಮಾಡಿದರು; ಪ್ರವಾದಿಗಳು ಬಾಳನಿಂದ ಪ್ರವಾದಿಸಿದರು; ಪ್ರಯೋಜನವಿಲ್ಲದವುಗಳನ್ನು ಹಿಂದ ಟ್ಟಿದರು.
- Judges 2:10 ನ್ಯಾಯಸ್ಥಾಪಕರು 2:10ಆ ಸಂತತಿಯವರೆಲ್ಲರೂ ತಮ್ಮ ತಂದೆಗಳ ಬಳಿಯಲ್ಲಿ ಕೂಡಿಸಿಕೊಳ್ಳಲ್ಪಟ್ಟರು. ಅವರ ತರುವಾಯ ಕರ್ತನನ್ನೂ ಇಸ್ರಾಯೇಲ್ಯರಿಗೋಸ್ಕರ ಮಾಡಿದ ಆತನ ಕಾರ್ಯ ಗಳನ್ನೂ ಅರಿಯದೆ ಇರುವ ಮತ್ತೊಂದು ಸಂತತಿ ಎದ್ದಿತು.
- Romans 1:21 ರೋಮಾಪುರದವರಿಗೆ 1:21ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು.
- 2 Corinthians 6:15 2 ಕೊರಿಂಥದವರಿಗೆ 6:15ಬೆಲಿಯಾಳನ ಕೂಡ ಕ್ರಿಸ್ತನಿಗೆ ಒಪ್ಪಂದವೇನು? ನಂಬದಿರುವವನ ಕೂಡ ನಂಬುವ ವನಿಗೆ ಪಾಲುಗಾರಿಕೆ ಏನು?
- John 17:3 ಯೋಹಾನನು 17:3ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅವರು ಅರಿತು ಕೊಳ್ಳುವದೇ ನಿತ್ಯಜೀವ.
- Hosea 4:6–9 ಹೋಶೇಯ 4:6–9ನನ್ನ ಜನರು ತಿಳುವಳಿ ಕೆಯ ಕೊರತೆಯಿಂದ ನಾಶವಾಗಿದ್ದಾರೆ; ಆದಕಾರಣ ನೀನು ತಿಳುವಳಿಕೆಯನ್ನು ತಳ್ಳಿಬಿಟ್ಟದ್ದರಿಂದ ನಾನು ಸಹ ನನಗೆ ಯಾಜಕನಾಗದಂತೆ ನಿನ್ನನ್ನು ತಳ್ಳಿಬಿಡುತ್ತೇನೆ; ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು. ಅವರು ಹೆಚ್ಚಿದ ಹಾಗೆಲ್ಲಾ ನನಗೆ ವಿರೋಧವಾಗಿ ಪಾಪಮಾಡಿದರು; ಆದದರಿಂದ ನಾನು ಅವರ ಮಾನವನ್ನು ನಾಚಿಕೆಗೆ ಮಾರ್ಪಡಿಸುವೆನು. ಅವರು ನನ್ನ ಜನರ ಪಾಪವನ್ನು ತಿನ್ನುತ್ತಾರೆ ಮತ್ತು ಅವರು ದುಷ್ಟತನದ ಮೇಲೆ ಮನಸ್ಸಿಡುತ್ತಾರೆ. ಯಾಜಕನು ಹೇಗೋ, ಹಾಗೆಯೇ ಜನರು ಇರು ವರು; ನಾನು ಅವರ ಮಾರ್ಗಗಳಿಗೋಸ್ಕರ ಅವರನ್ನು ಶಿಕ್ಷಿಸಿ, ಅವರ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡು ವೆನು.
- John 16:3 ಯೋಹಾನನು 16:3ಅವರು ತಂದೆಯನ್ನಾಗಲಿ ಇಲ್ಲವೆ ನನ್ನನ್ನಾ ಗಲಿ ತಿಳಿಯದಿರುವ ಕಾರಣ ಇವೆಲ್ಲವುಗಳನ್ನು ನಿಮಗೆ ಮಾಡುವರು.
- Malachi 2:1–9 ಮಲಾಕಿಯ 2:1–9ಈಗ ಓ ಯಾಜಕರೇ, ಈ ಆಜ್ಞೆ ನಿಮಗಾಗಿ ಅದೆ. ಸೈನ್ಯಗಳ ಕರ್ತನು ಹೇಳುವದೇ ನಂದರೆ ನೀವು ಕೇಳದೆ, ಹೃದಯದಲ್ಲಿ ಇಟ್ಟುಕೊಳ್ಳದೆ, ನನ್ನ ಹೆಸರಿಗೆ ಮಹಿಮೆಯನ್ನು ಕೊಡದೆ ಹೋದರೆ ನಿಮ್ಮ ಮೇಲೆ ಶಾಪವನ್ನು ಕಳುಹಿಸುವೆನು, ನಿಮ್ಮ ಆಶೀರ್ವಾದಗಳನ್ನು ಶಪಿಸುವೆನು; ಹೌದು, ಅವು ಗಳನ್ನು ಆಗಲೇ ಶಪಿಸಿದ್ದಾಯಿತು; ನೀವು ಅವುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳುವದಿಲ್ಲ. ಇಗೋ, ನಾನು ನಿಮ್ಮ ಸಂತತಿಯನ್ನು ಕೆಡಿಸಿ, ನಿಮ್ಮ ಮುಖಗಳ ಮೇಲೆ ಕಸವನ್ನು ಚೆಲ್ಲುತ್ತೇನೆ; ನಿಮ್ಮ ಪವಿತ್ರ ಹಬ್ಬಗಳನ್ನು ಸಹ ಕಸವೆಂದು ಚೆಲ್ಲುತ್ತೇನೆ. ಆಗ ಒಬ್ಬನು ನಿಮ್ಮನ್ನು ಅದರೊಂದಿಗೆ ತೆಗೆದುಬಿಡುವನು. ಸೈನ್ಯಗಳ ಕರ್ತನು ಹೇಳುವದೇನಂದರೆ--ನನ್ನ ಒಡಂಬಡಿಕೆ ಲೇವಿಯ ಸಂಗಡ ಇರುವ ಹಾಗೆ ಈ ಆಜ್ಞೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳುಕೊಳ್ಳುವಿರಿ. ನನ್ನ ಜೀವದ ಮತ್ತು ಸಮಾಧಾನದ ನನ್ನ ಒಡಂಬಡಿಕೆಯು ಅವನ ಸಂಗಡ ಇತ್ತು; ಅವುಗಳನ್ನು ಅವನಿಗೆ ಕೊಟ್ಟೆನು; ಅವನು ನನಗೆ ಭಯಪಟ್ಟು ನನ್ನ ಹೆಸರಿಗೆ ಅಂಜಿ ಕೊಂಡನು. ಸತ್ಯದ ನ್ಯಾಯಪ್ರಮಾಣವು ಅವನ ಬಾಯಲ್ಲಿ ಇತ್ತು; ಅಕ್ರಮವು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ ನ್ಯಾಯ ದಿಂದಲೂ ನನ್ನ ಸಂಗಡ ನಡೆದುಕೊಂಡು ಅನೇಕರನ್ನು ಅಕ್ರಮದಿಂದ ತಿರುಗಿಸಿದನು. ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡತಕ್ಕದ್ದು, ನ್ಯಾಯಪ್ರಮಾಣ ವನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು; ಯಾಕಂದರೆ ಅವನು ಸೈನ್ಯಗಳ ಕರ್ತನ ಸೇವಕನೇ. ಆದರೆ ನೀವು ಮಾರ್ಗವನ್ನು ಬಿಟ್ಟುಹೋಗಿದ್ದೀರಿ; ಅನೇಕರನ್ನು ನ್ಯಾಯಪ್ರಮಾಣಕ್ಕೆ ಎಡವುವಂತೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಕೆಡಿಸಿದ್ದೀರೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ. ಆದದರಿಂದ ನೀವು ನನ್ನ ಮಾರ್ಗಗಳನ್ನು ಕೈಕೊಳ್ಳದೆ, ನನ್ನ ನ್ಯಾಯ ಪ್ರಮಾಣದ ವಿಷಯವಾಗಿ ಮುಖದಾಕ್ಷಿಣ್ಯ ತೋರಿಸಿದ ಪ್ರಕಾರವೇ ನಾನು ನಿಮ್ಮನ್ನು ಜನರೆಲ್ಲರ ಮುಂದೆ ಅಸಡ್ಡೆ ಮಾಡಲ್ಪಟ್ಟ ವರನ್ನಾಗಿಯೂ ನೀಚರನ್ನಾಗಿಯೂ ಮಾಡಿದ್ದೇನೆ.
- John 8:55 ಯೋಹಾನನು 8:55ಆದಾಗ್ಯೂ ನೀವು ಆತನನ್ನು ಅರಿತುಕೊಂಡಿಲ್ಲ; ಆದರೆ ನಾನು ಆತನನ್ನು ಅರಿತಿದ್ದೇನೆ. ನಾನು ಆತನನ್ನು ಅರಿಯಲಿಲ್ಲವೆಂದು ಹೇಳಿದರೆ ನಿಮ್ಮ ಹಾಗೆ ನಾನೂ ಸುಳ್ಳುಗಾರನಾಗಿ ರುವೆನು; ಆದರೆ ನಾನು ಆತನನ್ನು ಅರಿತಿದ್ದೇನೆ; ಆತನ ಮಾತನ್ನು ಕೈಕೊಂಡಿದ್ದೇನೆ.
- 1 Samuel 3:7 1 ಸಮುವೇಲನು 3:7ಆದರೆ ಸಮುವೇಲನು ಆ ವರೆಗೂ ಕರ್ತನನ್ನು ಅರಿತವನೂ ಅಲ್ಲ; ಕರ್ತನ ವಾಕ್ಯವು ಅವನಿಗೆ ಪ್ರಕಟಿಸಲ್ಪಟ್ಟಿರಲೂ ಇಲ್ಲ.
- 1 Samuel 25:17 1 ಸಮುವೇಲನು 25:17ಈಗ ನೀನು ಅದಕ್ಕೆ ಮಾಡಬೇಕಾ ದದ್ದೇನೆಂದು ತಿಳುಕೊಂಡು ನೋಡು. ಯಾಕಂದರೆ ಕೇಡು ನಮ್ಮ ಯಜಮಾನನ ಮೇಲೆಯೂ ಅವನ ಮನೆಯೆಲ್ಲಾದರ ಮೇಲೆಯೂ ನಿಶ್ಚಯಿಸಲ್ಪಟ್ಟಿದೆ; ಏನಂದರೆ, ಅವನು ಬೆಲಿಯಾಳನ ಮಗನಾಗಿರುವದ ರಿಂದ ಅವನ ಸಂಗಡ ಯಾವನೂ ಮಾತನಾಡ ಕೂಡದು ಅಂದನು.