1 Timothy · chapter 6 · verse 8
1 Timothy 6:8 in Kannada
ಆದದರಿಂದ ಅನ್ನವಸ್ತ್ರಗಳುಳ್ಳವರಾಗಿ ಅವುಗಳಿಂದ ತೃಪ್ತರಾಗಿರೋಣ.
Aadadarinda annavastragalullavaraagi avugalinda truptaraagirona.
1 Timothy 6:8 in English
- King James Version (KJV)
- And having food and raiment let us be therewith content.
- World English Bible (WEB)
- But having food and clothing, we will be content with that.
- American Standard Version (ASV)
- but having food and covering we shall be therewith content.
- Bible in Basic English (BBE)
- But if we have food and a roof over us, let that be enough.
- Darby Translation (DBY)
- But having sustenance and covering, we will be content with these.
- Webster's Bible (WBS)
- And having food and raiment, with these let us be content.
- Young's Literal Translation (YLT)
- but having food and raiment — with these we shall suffice ourselves;
Read in context
- 6ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ.
- 7ನಾವು ಲೋಕದೊಳಗೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ನಿಶ್ಚಯವಾಗಿ ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು.
- 8ಆದದರಿಂದ ಅನ್ನವಸ್ತ್ರಗಳುಳ್ಳವರಾಗಿ ಅವುಗಳಿಂದ ತೃಪ್ತರಾಗಿರೋಣ.
- 9ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ.
- 10ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ನಂಬಿಕೆಯಿಂದ ತಪ್ಪಿಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಾವೇ ತಿವಿಸಿ ಕೊಳ್ಳುತ್ತಾರೆ.
Cross references
- Hebrews 13:5–6 ಇಬ್ರಿಯರಿಗೆ 13:5–6ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ. ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Matthew 6:11 ಮತ್ತಾಯನು 6:11ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು.
- Matthew 6:25–33 ಮತ್ತಾಯನು 6:25–33ಆದಕಾರಣ ನಾನು ನಿಮಗೆ ಹೇಳುವದೇ ನಂದರೆ--ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ಏನು ಕುಡಿಯಬೇಕು ಎಂಬದರ ವಿಷಯಕ್ಕಾಗಲೀ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಹೊದ್ದುಕೊಳ್ಳಬೇಕೆಂತಾಗಲೀ ಚಿಂತೆ ಮಾಡ ಬೇಡಿರಿ; ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ಶರೀರವೂ ಹೆ ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದೂ ಇಲ್ಲ, ಇಲ್ಲವೆ ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ? ನಿಮ್ಮಲ್ಲಿ ಯಾವ ನಾದರೂ ಚಿಂತೆಮಾಡಿ ತನ್ನ ನೀಳವನ್ನು ಒಂದು ಮೊಳ ಉದ್ದ ಬೆಳೆಸಿಕೊಳ್ಳಲು ಸಾಧ್ಯವಾದೀತೇ? ಮತ್ತು ಉಡುಪಿಗಾಗಿ ನೀವು ಯಾಕೆ ಚಿಂತೆ ಮಾಡುತ್ತೀರಿ? ಹೊಲದಲ್ಲಿ ತಾವರೆಗಳು ಹೇಗೆ ಬೆಳೆಯುತ್ತವೆ ಎಂಬದನ್ನು ಗಮನಿಸಿರಿ; ಅವು ಕಷ್ಟಪಡು ವದಿಲ್ಲ ಮತ್ತು ನೂಲುವದೂ ಇಲ್ಲ. ಆದರೂ ನಾನು ನಿಮಗೆ ಹೇಳುವದೇನಂದರೆ-- ಸೊಲೊಮೋನನು ಸಹ ತನ್ನ ಎಲ್ಲಾ ವೈಭವದಲ್ಲಿಯೂ ಇವುಗಳಲ್ಲಿ ಒಂದರಂತೆಯಾದರೂ ಧರಿಸಿರಲಿಲ್ಲ. ಆದದರಿಂದ ಈ ಹೊತ್ತು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಓ ಅಲ್ಪ ವಿಶ್ವಾಸಿಗಳೇ, ಆತನು ಇನ್ನೂ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸುವನಲ್ಲವೇ? ಆದಕಾರಣ--ನಾವು ಏನು ಊಟಮಾಡಬೇಕು? ಇಲ್ಲವೆ ಏನು ಕುಡಿಯಬೇಕು? ಇಲ್ಲವೆ ಯಾವದನ್ನು ಧರಿಸಿಕೊಳ್ಳಬೇಕು ಎಂದು ಹೇಳುತ್ತಾ ಚಿಂತೆಮಾಡ ಬೇಡಿರಿ. (ಯಾಕಂದರೆ ಇವೆಲ್ಲವುಗಳಿಗಾಗಿ ಅನ್ಯಜನರು ತವಕ ಪಡುತ್ತಾರೆ;) ಆದರೆ ಇವೆಲ್ಲವುಗಳು ನಿಮಗೆ ಅಗತ್ಯವಾಗಿವೆ ಎಂದು ಪರಲೋಕದ ನಿಮ್ಮ ತಂದೆಗೆ ತಿಳಿದದೆ. ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.
- Proverbs 30:8–9 ಜ್ಞಾನೋಕ್ತಿಗಳು 30:8–9ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು; ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.
- Genesis 28:20 ಆದಿಕಾಂಡ 28:20ಆಗ ಯಾಕೋಬನು ಪ್ರಮಾಣಮಾಡಿ ಹೇಳಿದ್ದೇ ನಂದರೆ--ದೇವರು ನನ್ನ ಸಂಗಡ ಇದ್ದು ನಾನು ಹೋಗುವ ಈ ಮಾರ್ಗದಲ್ಲಿ ನನ್ನನ್ನು ಕಾಪಾಡಿ ತಿನ್ನುವದಕ್ಕೆ ರೊಟ್ಟಿಯನ್ನೂ ಹೊದಿಯುವದಕ್ಕೆ ವಸ್ತ್ರ ವನ್ನೂ ನನಗೆ ಕೊಟ್ಟು
- Deuteronomy 2:7 ಧರ್ಮೋಪದೇಶಕಾಂಡ 2:7ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಕೈಕೆಲಸದಲ್ಲಿ ನಿನ್ನನ್ನು ಆಶೀರ್ವದಿಸಿದ್ದಾನೆ; ನೀನು ಈ ದೊಡ್ಡ ಅರಣ್ಯದಲ್ಲಿ ಸಂಚಾರ ಮಾಡಿದ್ದನ್ನು ಆತನು ಬಲ್ಲನು; ಈ ನಾಲ್ವತ್ತು ವರುಷ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ; ನಿನಗೆ ಏನೂ ಕಡಿಮೆ ಆಗಲಿಲ್ಲ ಎಂದು ಹೇಳಿದನು.
- Ecclesiastes 3:12–13 ಪ್ರಸಂಗಿ 3:12–13ಒಬ್ಬನು ಸಂತೋಷಿಸಿ ತನ್ನ ಜೀವಮಾನದಲ್ಲಿ ಒಳ್ಳೇ ದನ್ನು ಮಾಡುವದೇ ಹೊರತು ಅವುಗಳಲ್ಲಿ ಯಾವ ಮೇಲೂ ಇಲ್ಲವೆಂದು ನಾನು ಬಲ್ಲೆನು. ಪ್ರತಿ ಯೊಬ್ಬನು ತಿಂದು, ಕುಡಿದು, ತನ್ನ ಎಲ್ಲಾ ಪ್ರಯಾಸದ ಮೇಲನ್ನು ಅನುಭವಿಸುವದು ದೇವರ ದಾನದಿಂದಲೇ.
- Deuteronomy 8:3–4 ಧರ್ಮೋಪದೇಶಕಾಂಡ 8:3–4ನಿನ್ನನ್ನು ಕುಂದಿಸಿ ಹಸಿ ಯುವಂತೆ ಆತನು ಮಾಡಿದನು. ರೊಟ್ಟಿ ಮಾತ್ರದಿಂದ ಮನುಷ್ಯನು ಬದುಕುವದಿಲ್ಲವೆಂದೂ ಕರ್ತನ ಬಾಯಿ ಯೊಳಗಿಂದ ಹೊರಡುವ ಪ್ರತಿಯೊಂದು ಮಾತಿ ನಿಂದಲೂ ಮನುಷ್ಯನು ಬದುಕುತ್ತಾನೆಂದು ನಿನಗೆ ತಿಳಿಸುವ ಹಾಗೆ ನೀನು ತಿಳಿಯದಂಥ ಮತ್ತು ನಿನ್ನ ಪಿತೃಗಳು ತಿಳಿಯದಂಥ ಮನ್ನವನ್ನು ನಿನಗೆ ಉಣ್ಣಲು ಕೊಟ್ಟನು. ಈ ನಾಲ್ವತ್ತು ವರುಷ ನಿನ್ನ ಮೇಲಿರುವ ವಸ್ತ್ರಗಳು ಹಳೆಯದಾಗಲಿಲ್ಲ; ಇಲ್ಲವೆ ನಿನ್ನ ಕಾಲುಗಳು ಬಾತುಹೋಗಲಿಲ್ಲ.
- Ecclesiastes 2:24–26 ಪ್ರಸಂಗಿ 2:24–26ತನ್ನ ಪ್ರಯಾಸದಲ್ಲಿ ತನ್ನ ಪ್ರಾಣವು ಸುಖವನ್ನು ಅನುಭವಿಸುವಂತೆ ಮಾಡುತ್ತಾ ತಿಂದು ಕುಡಿಯುವ ದಕ್ಕಿಂತ ಶ್ರೇಷ್ಠವಾದದ್ದು ಮನುಷ್ಯನಿಗೆ ಯಾವದೂ ಇಲ್ಲ. ಇದೂ ಕೂಡ ದೇವರ ಕೈಯಿಂದಲೇ ಆಗುತ್ತದೆ ಎಂದು ನಾನು ಕಂಡೆನು. ನನಗಿಂತ ಹೆಚ್ಚಾಗಿ ಯಾವನು ತಿನ್ನಲು ಶಕ್ತನು? ಯಾವನು ಅದಕ್ಕೆ ಆತುರ ಪಡಶಕ್ತನು?ದೇವರು ತನ್ನ ದೃಷ್ಟಿಯಲ್ಲಿ ಒಳ್ಳೆಯ ವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾನೆ; ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವದಕ್ಕಾಗಿ ಕೂಡಿಸಿ ಒದಗಿಸು ವಂತೆ ಪಾಪಿಗೆ ಪ್ರಯಾಸವನ್ನು ಕೊಡುತ್ತಾನೆ. ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ. ದೇವರು ತನ್ನ ದೃಷ್ಟಿಯಲ್ಲಿ ಒಳ್ಳೆಯ ವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾನೆ; ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವದಕ್ಕಾಗಿ ಕೂಡಿಸಿ ಒದಗಿಸು ವಂತೆ ಪಾಪಿಗೆ ಪ್ರಯಾಸವನ್ನು ಕೊಡುತ್ತಾನೆ. ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.
- Proverbs 27:23–27 ಜ್ಞಾನೋಕ್ತಿಗಳು 27:23–27ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ. ಐಶ್ವರ್ಯವು ಶಾಶ್ವತವಲ್ಲ; ಕಿರೀಟವು ಪ್ರತಿಯೊಂದು ವಂಶಾವಳಿಗೆ ಇರುತ್ತದೋ? ಹುಲ್ಲು ಕಾಣುತ್ತದೆ; ಹಸಿ ಹುಲ್ಲು ತನ್ನನ್ನೇ ತೋರುತ್ತದೆ, ಬೆಟ್ಟಗಳ ಸೊಪ್ಪು ಕೂಡಿಸಲ್ಪಡುತ್ತದೆ. ನಿನ್ನ ವಸ್ತ್ರಕ್ಕಾಗಿ ಕುರಿಮರಿಗಳು ಮತ್ತು ಹೊಲದ ಕ್ರಯಕ್ಕಾಗಿ ನಿನ್ನ ಆಡುಗಳು ಇವೆ.ನಿನ್ನ ಊಟಕ್ಕಾಗಿಯೂ ನಿನ್ನ ಮನೆಯವರ ಆಹಾರ ಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಆಡುಗಳ ಹಾಲು ಸಾಕಾಗುತ್ತದೆ. ನಿನ್ನ ಊಟಕ್ಕಾಗಿಯೂ ನಿನ್ನ ಮನೆಯವರ ಆಹಾರ ಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಆಡುಗಳ ಹಾಲು ಸಾಕಾಗುತ್ತದೆ.
- Genesis 48:15 ಆದಿಕಾಂಡ 48:15ಆಗ ಅವನು ಯೋಸೇಫನನ್ನು ಆಶೀರ್ವದಿಸಿ--ನನ್ನ ತಂದೆಗಳಾದ ಅಬ್ರಹಾಮನೂ ಇಸಾಕನೂ ಯಾವಾತನ ಮುಂದೆ ನಡಕೊಂಡರೋ ಆ ದೇವರೇ, ನಾನು ಹುಟ್ಟಿದಂದಿನಿಂದ ಇಂದಿನ ವರೆಗೆ ನನ್ನನ್ನು ಪೋಷಣೆ ಮಾಡಿದ ದೇವರು,