Proverbs · chapter 27 · verse 23
Proverbs 27:23 in Kannada
ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ.
Ninna hindugala sthitiyannu tilidukolluvante shraddhevahisu; ninna mandegalannu chennaagi nodiko.
Proverbs 27:23 in English
- King James Version (KJV)
- Be thou diligent to know the state of thy flocks, [and] look well to thy herds.
- World English Bible (WEB)
- Know well the state of your flocks, and pay attention to your herds,
- American Standard Version (ASV)
- Be thou diligent to know the state of thy flocks, [And] look well to thy herds:
- Bible in Basic English (BBE)
- Take care to have knowledge about the condition of your flocks, looking well after your herds;
- Darby Translation (DBY)
- Be well acquainted with the appearance of thy flocks; look well to thy herds:
- Webster's Bible (WBS)
- Be thou diligent to know the state of thy flocks, [and] look well to thy herds.
- Young's Literal Translation (YLT)
- Know well the face of thy flock, Set thy heart to the droves,
Read in context
- 21ಬೆಳ್ಳಿ ಬಂಗಾರ ಗಳ ಪುಟಕ್ಕೆ ಕುಲುಮೆ ಹೇಗೆಯೋ ಹಾಗೆಯೇ ತನ್ನ ಹೊಗಳಿಕೆಗೆ ಮನುಷ್ಯನಿದ್ದಾನೆ.
- 22ಬುದ್ಧಿಹೀನನನ್ನು ಒರಳಿನಲ್ಲಿ ಗೋಧಿಯೊಂದಿಗೆ ಒನಕೆಯಿಂದ ಕುಟ್ಟಿ ದರೂ ಅವನಿಂದ ಮೂರ್ಖತನವು ತೊಲಗುವದಿಲ್ಲ.
- 23ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ.
- 24ಐಶ್ವರ್ಯವು ಶಾಶ್ವತವಲ್ಲ; ಕಿರೀಟವು ಪ್ರತಿಯೊಂದು ವಂಶಾವಳಿಗೆ ಇರುತ್ತದೋ?
- 25ಹುಲ್ಲು ಕಾಣುತ್ತದೆ; ಹಸಿ ಹುಲ್ಲು ತನ್ನನ್ನೇ ತೋರುತ್ತದೆ, ಬೆಟ್ಟಗಳ ಸೊಪ್ಪು ಕೂಡಿಸಲ್ಪಡುತ್ತದೆ.
Cross references
- 1 Peter 5:2 1 ಪೇತ್ರನು 5:2ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ; ಬಲಾತ್ಕಾರದಿಂದಲ್ಲ, ಆದರೆ ಇಷ್ಟಪೂರ್ವಕವಾಗಿಯೂ; ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿ ಚಾರಣೆ ಮಾಡಿರಿ.
- John 21:15–17 ಯೋಹಾನನು 21:15–17ಅವರು ಊಟಮಾಡಿದ ಮೇಲೆ ಯೇಸು ಸೀಮೋನ ಪೇತ್ರನಿಗೆ--ಯೋನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತ ನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇ ನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ ಆತನು ತಿರಿಗಿ ಎರಡನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ--ನನ್ನ ಕುರಿಗಳನ್ನು ಮೇಯಿಸು ಎಂದು ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ
- Genesis 33:13 ಆದಿಕಾಂಡ 33:13ಅದಕ್ಕೆ ಯಾಕೋಬನು ಅವನಿಗೆ--ಮಕ್ಕಳು ಎಳೇ ಪ್ರಾಯದವರಾಗಿದ್ದಾರೆ. ಇದಲ್ಲದೆ ಎಳೇ ದನಕುರಿಗಳು ನನ್ನ ಬಳಿಯಲ್ಲಿರುವದು ನನ್ನ ಒಡೆಯನಿಗೆ ತಿಳಿದದೆ; ಒಂದು ದಿನ ಹೆಚ್ಚಾಗಿ ಅವುಗಳನ್ನು ನಡಿಸಿದರೆ ಎಲ್ಲಾ ಮಂದೆಯು ಸತ್ತುಹೋದಾವು.
- 2 Chronicles 26:10 2 ಪೂರ್ವಕಾಲವೃತ್ತಾಂತ 26:10ಅವನು ಅರಣ್ಯದಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿ ದನು; ತಗ್ಗಿನ ದೇಶದಲ್ಲಿಯೂ ಬೈಲು ದೇಶದಲ್ಲಿಯೂ ಅವನಿಗೆ ಬಹು ಕುರಿದನಗಳಿದ್ದವು. ಹಾಗೆಯೇ ಪರ್ವತ ಗಳಲ್ಲಿಯೂ ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿ ಗರೂ ದ್ರಾಕ್ಷೇ ವ್ಯವಸಾಯದವರೂ ಇದ್ದರು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.
- Ezekiel 34:31 ಯೆಹೆಜ್ಕೇಲನು 34:31ನನ್ನ ಕುರಿಗಳೂ ನನ್ನ ಮೇವಿನ ಮಂದೆಯೂ ಆಗಿರುವ ನೀವು ನರಪ್ರಾಣಿಗಳು. ನಾನು ನಿಮ್ಮ ದೇವರು ಎಂದು ದೇವರಾದ ಕರ್ತನು ಹೇಳುತ್ತಾನೆ.
- Proverbs 24:32 ಜ್ಞಾನೋಕ್ತಿಗಳು 24:32ಆಗ ನಾನು ನೋಡಿ ಮನಸ್ಸಿಟ್ಟೆನು; ದೃಷ್ಟಿಸಿ ಶಿಕ್ಷಿತನಾದೆನು.
- Ezekiel 34:22–24 ಯೆಹೆಜ್ಕೇಲನು 34:22–24ಆದದರಿಂದ ನಾನು ನನ್ನ ಮಂದೆಯನ್ನು ಕಾಪಾಡುತ್ತೇನೆ; ಅವು ಎಂದೆಂದೂ ಕೊಳ್ಳೆಯಾಗು ವದಿಲ್ಲ; ನಾನು ದನಗಳ ಮತ್ತು ಪಶುಗಳ ಮಧ್ಯೆ ನ್ಯಾಯತೀರಿಸುವೆನು. ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ. ಕರ್ತನಾದ ನಾನೇ ಅವುಗಳಿಗೆ ದೇವರಾಗಿರುವೆನು; ಮತ್ತು ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವನೆಂದು ಕರ್ತನಾದ ನಾನೇ ಅದನ್ನು ಮಾತಾಡಿದ್ದೇನೆ;
- John 10:3 ಯೋಹಾನನು 10:3ಬಾಗಲು ಕಾಯುವವನು ಅವನಿಗೆ ತೆರೆಯು ತ್ತಾನೆ; ಕುರಿಗಳು ಅವನ ಸ್ವರವನ್ನು ಕೇಳುತ್ತವೆ, ಅವನು ತನ್ನ ಸ್ವಂತ ಕುರಿಗಳನ್ನು ಹೆಸರು ಹೇಳಿ ಕರೆದು ಅವು ಗಳನ್ನು ಹೊರಗೆ ನಡಿಸುತ್ತಾನೆ.
- 1 Chronicles 27:29–31 1 ಪೂರ್ವಕಾಲವೃತ್ತಾಂತ 27:29–31ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಇದ್ದನು; ತಗ್ಗುಗಳಲ್ಲಿರುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು ಇದ್ದನು. ಒಂಟೆಗಳ ಮೇಲೆ ಇರುವವನು ಇಷ್ಮಾ ಯೇಲ್ಯನಾದ ಓಬೀಲನು; ಕತ್ತೆಗಳ ಮೇಲೆ ಇರುವ ವನು ಮೇರೊನೋತಿನವನಾದ ಯೆಹ್ದೆಯನು. ಕುರಿ ಮಂದೆಗಳ ಮೇಲೆ ಇರುವವನು ಹಗ್ರೀಯನಾದ ಯಾಜೀಜನು. ಇವೆರಲ್ಲರೂ ಅರಸನಾದ ದಾವೀದನ ಸ್ವಾಸ್ಥ್ಯದ ಮೇಲೆ ಪ್ರಧಾನರಾಗಿದ್ದರು.
- Deuteronomy 32:46 ಧರ್ಮೋಪದೇಶಕಾಂಡ 32:46ನಾನು ಈ ಹೊತ್ತು ನಿಮಗೆ ಸಾಕ್ಷಿಯಾಗಿ ಹೇಳುವ ಮಾತುಗಳನ್ನೆಲ್ಲಾ ನಿಮ್ಮ ಹೃದಯಗಳಲ್ಲಿ ಇಡಿರಿ; ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಕೈಕೊಳ್ಳುವದಕ್ಕೆ ನಿಮ್ಮ ಮಕ್ಕಳಿಗೆ ಆಜ್ಞಾಪಿಸಬೇಕು.
- Genesis 31:38–40 ಆದಿಕಾಂಡ 31:38–40ಈ ಇಪ್ಪತ್ತು ವರುಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ ಮೇಕೆಗಳೂ ಕಂದು ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ. ಮೃಗಗಳಿಂದ ಕೊಲ್ಲಲ್ಪಟ್ಟವುಗಳನ್ನು ನಿನ್ನ ಬಳಿಗೆ ತಾರದೆ ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡಿ. ಹಗಲಲ್ಲಿ ಬಿಸಿಲಿ ನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು. ನಿದ್ರೆ ನನ್ನ ಕಣ್ಣುಗಳಿಗೆ ತಪ್ಪಿಹೋಯಿತು, ಈ ಸ್ಥಿತಿಯಲ್ಲಿ ನಾನಿದ್ದೆನು.
- 1 Samuel 17:28 1 ಸಮುವೇಲನು 17:28ಆದರೆ ಅವನು ಆ ಮನುಷ್ಯರ ಸಂಗಡ ಮಾತನಾಡುತ್ತಿರು ವದನ್ನು ಅವನ ಹಿರಿಯ ಸಹೋದರನಾದ ಎಲೀಯಾ ಬನು ಕೇಳಿ ಅವನ ಮೇಲೆ ಕೋಪಗೊಂಡು--ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು; ನೀನು ಯುದ್ಧವನ್ನು ನೋಡಲು ಇಳಿದು ಬಂದಿದ್ದೀ ಅಂದನು.