Matthew · chapter 6 · verse 11
Matthew 6:11 in Kannada
ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು.
Namma anudinada rottiyannu ee dinavu namage dayapaalisu.
Matthew 6:11 in English
- King James Version (KJV)
- Give us this day our daily bread.
- World English Bible (WEB)
- Give us today our daily bread.
- American Standard Version (ASV)
- Give us this day our daily bread.
- Bible in Basic English (BBE)
- Give us this day bread for our needs.
- Darby Translation (DBY)
- give us to-day our needed bread,
- Webster's Bible (WBS)
- Give us this day our daily bread.
- Young's Literal Translation (YLT)
- 'Our appointed bread give us to-day.
Read in context
- 9ಆದದರಿಂದ ನೀವು ಈ ರೀತಿಯಲ್ಲಿ ಪ್ರಾರ್ಥನೆ ಮಾಡಿರಿ--ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಿರಲಿ. ನಿನ್ನ ರಾಜ್ಯವು ಬರಲಿ.
- 10ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರು ವಂತೆ ಭೂಲೋಕದಲ್ಲಿಯೂ ನೆರೆವೇರಲಿ.
- 11ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು.
- 12ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು.
- 13ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್.
Cross references
- Proverbs 30:8 ಜ್ಞಾನೋಕ್ತಿಗಳು 30:8ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು;
- Luke 11:3 ಲೂಕನು 11:3ನಮ್ಮ ರೊಟ್ಟಿಯನ್ನು ಪ್ರತಿದಿನವೂ ನಮಗೆ ಕೊಡು.
- Matthew 4:4 ಮತ್ತಾಯನು 4:4ಆದರೆ ಆತನು ಪ್ರತ್ಯುತ್ತರವಾಗಿ--ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ, ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು.
- Psalm 34:10 ಕೀರ್ತನೆಗಳು 34:10ಪ್ರಾಯದ ಸಿಂಹಗಳು ಕೊರತೆಯಾಗಿ ಹಸಿಯುತ್ತವೆ; ಆದರೆ ಕರ್ತನನ್ನು ಹುಡುಕುವವರು ಯಾವ ಒಳ್ಳೆಯ ದಕ್ಕಾದರೂ ಕೊರತೆ ಪಡುವದಿಲ್ಲ.
- John 6:31–59 ಯೋಹಾನನು 6:31–59ತಿನ್ನುವದಕ್ಕಾಗಿ ಆತನು ಅವರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು ಎಂದು ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅಡವಿ ಯಲ್ಲಿ ಮನ್ನಾ ತಿಂದರು ಎಂದು ಹೇಳಿದರು. ಆಗ ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಡಲಿಲ್ಲ; ಆದರೆ ನನ್ನ ತಂದೆಯು ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದ ಕೊಡು ತ್ತಾನೆ. ಪರಲೋಕದಿಂದ ಕೆಳಗೆ ಬಂದು ಲೋಕಕ್ಕೆ ಜೀವವನ್ನು ಕೊಡುವಾತನೇ ದೇವರ ರೊಟ್ಟಿಯಾಗಿದ್ದಾನೆ ಅಂದನು. ಅದಕ್ಕವರು ಆತನಿಗೆ--ಕರ್ತನೇ, ಈ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆ ಜೀವದ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ ಮತ್ತು ನನ್ನ ಮೇಲೆ ನಂಬಿಕೆ ಇಡುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ. ಆದರೆ--ನೀವು ನನ್ನನ್ನು ನೋಡಿಯೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳಿದೆನು. ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರು ವರು; ನನ್ನ ಬಳಿಗೆ ಬರುವವನನ್ನು ನಾನು ಹೊರಗೆ ತಳ್ಳಿಬಿಡುವದೇ ಇಲ್ಲ. ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು. ನನ್ನನ್ನು ಕಳುಹಿಸಿದ ತಂದೆಯ ಚಿತ್ತವೇನಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಒಬ್ಬನನ್ನೂ ಕಳಕೊಳ್ಳದೆ ಕಡೇ ದಿನದಲ್ಲಿ ಅವನನ್ನು ತಿರಿಗಿ ಎಬ್ಬಿಸುವದೇ. ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು. ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಆತನು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ-- ಇವನು ಯೋಸೇಫನ ಮಗನಾದ ಯೇಸು ಅಲ್ಲವೇ? ಇವನ ತಂದೆ ತಾಯಿ ಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ--ನಾನು ಪರಲೋಕದಿಂದ ಇಳಿದು ಬಂದೆನು ಎಂದು ಇವನು ಹೇಳುವದು ಹೇಗೆ ಅಂದರು. ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಿಮ್ಮ ನಿಮ್ಮೊಳಗೆ ಗುಣುಗುಟ್ಟ ಬೇಡಿರಿ. ನನ್ನನ್ನು ಕಳುಹಿಸಿದ ತಂದೆಯು ಎಳೆಯದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಅವರೆಲ್ಲರು ದೇವರಿಂದ ಬೋಧಿಸಲ್ಪಡುವರೆಂದು ಪ್ರವಾದನೆಗಳಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬ ಮನುಷ್ಯನು ನನ್ನ ಬಳಿಗೆ ಬರುತ್ತಾನೆ. ದೇವರಿಗೆ ಸಂಬಂಧಪಟ್ಟ ವನೇ ತಂದೆಯನ್ನು ನೋಡಿದ್ದಾನೆ ಹೊರತು ಬೇರೆ ಯಾವನೂ ತಂದೆಯನ್ನು ನೋಡಲಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನ ಮೇಲೆ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ನಾನೇ ಆ ಜೀವದ ರೊಟ್ಟಿಯಾಗಿದ್ದೇನೆ. ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು. ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ. ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು. ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು. ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು. ಕಪೆರ್ನೌಮಿನಲ್ಲಿ ಬೋಧಿಸುತ್ತಿರುವಾಗ ಸಭಾ ಮಂದಿರದಲ್ಲಿ ಆತನು ಇವುಗಳನ್ನು ಹೇಳಿದನು.
- Psalm 33:18–19 ಕೀರ್ತನೆಗಳು 33:18–19ಇಗೋ, ಕರ್ತನ ಕಣ್ಣು ಆತನಿಗೆ ಭಯಪಡುವ ವರ ಮೇಲೆಯೂ ಆತನ ಕರುಣೆಯನ್ನು ಎದುರು ನೋಡುವವರ ಮೇಲೆಯೂ ಅದೆ. ಇದರಿಂದ ಅವರ ಪ್ರಾಣವನ್ನು ಮರಣದಿಂದ ಬಿಡಿಸಿ ಬರಗಾಲ ದಲ್ಲಿ ಅವರ ಜೀವವನ್ನು ಕಾಪಾಡುತ್ತಾನೆ.
- Job 23:12 ಯೋಬನು 23:12ಆತನ ತುಟಿಗಳ ಆಜ್ಞೆಗೆ ನಾನು ಹಿಂಜರಿಯಲಿಲ್ಲ. ನನ್ನ ಅಗತ್ಯದ ಆಹಾರಕ್ಕಿಂತ ಆತನ ಬಾಯಿಯ ಮಾತುಗಳನ್ನು ಹೆಚ್ಚಾಗಿ ಲಕ್ಷಿಸಿದೆನು.
- Isaiah 33:16 ಯೆಶಾಯ 33:16ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿ ರುವವು. ರೊಟ್ಟಿಯು ಅವನಿಗೆ ಕೊಡಲ್ಪಡುವದು, ನೀರು ತಪ್ಪುವದಿಲ್ಲ.
- 1 Timothy 6:8 1 ತಿಮೊಥೆಯನಿಗೆ 6:8ಆದದರಿಂದ ಅನ್ನವಸ್ತ್ರಗಳುಳ್ಳವರಾಗಿ ಅವುಗಳಿಂದ ತೃಪ್ತರಾಗಿರೋಣ.
- Exodus 16:16–35 ವಿಮೋಚನಕಾಂಡ 16:16–35ಕರ್ತನು ಆಜ್ಞಾಪಿಸಿದ್ದೇನಂದರೆ--ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಕಾರ ಅದನ್ನು ಕೂಡಿಸಲಿ, ಪ್ರತಿಯೊಬ್ಬನಿಗೆ ಒಂದು ಓಮೆರದಂತೆ ನಿಮ್ಮ ಡೇರೆಗಳಲ್ಲಿರುವ ವ್ಯಕ್ತಿಗಳ ಲೆಕ್ಕದ ಪ್ರಕಾರ ನೀವು ತಕ್ಕೊಳ್ಳಿರಿ ಎಂದು ಹೇಳಿದನು. ಇಸ್ರಾಯೇಲ್ ಮಕ್ಕಳು ಅದರಂತೆ ಮಾಡಿ ಕೆಲವರು ಹೆಚ್ಚು, ಕೆಲವರು ಕಡಿಮೆ ಕೂಡಿಸಿದರು. ಓಮೆರ ದಿಂದ ಅಳತೆ ಮಾಡಿದಾಗ ಹೆಚ್ಚು ಕೂಡಿಸಿದವನಿಗೆ ಮಿಕ್ಕಲಿಲ್ಲ, ಕಡಿಮೆ ಕೂಡಿಸಿದವನಿಗೆ ಕೊರತೆಯಾ ಗಲಿಲ್ಲ, ಒಬ್ಬೊಬ್ಬನು ಊಟಮಾಡುವಷ್ಟು ಅವರು ಕೂಡಿಸಿದರು. ಮೋಶೆ ಅವರಿಗೆ--ಇದರಲ್ಲಿ ಯಾರೂ ಮರುದಿನದ ವರೆಗೆ ಇಟ್ಟುಕೊಳ್ಳಬಾರದು ಎಂದು ಹೇಳಿದನು. ಆದಾಗ್ಯೂ ಅವರು ಮೋಶೆಯ ಮಾತನ್ನು ಕೇಳಲಿಲ್ಲ. ಕೆಲವರು ಅದನ್ನು ಬೆಳಗಿನ ವರೆಗೆ ಇಟ್ಟುಕೊಂಡಾಗ ಅದು ಹುಳಬಿದ್ದು ನಾತ ಹುಟ್ಟಿತು. ಆಗ ಮೋಶೆಯು ಅವರ ಮೇಲೆ ಕೋಪಿಸಿ ಕೊಂಡನು. ಹೀಗೆ ಅವರಲ್ಲಿ ಪ್ರತಿಯೊಬ್ಬನು ತಿನ್ನು ವಷ್ಟು ಪ್ರತಿ ದಿನದ ಬೆಳಿಗ್ಗೆ ಅದನ್ನು ಕೂಡಿಸುತ್ತಿದ್ದರು. ಬಿಸಿಲು ಬಹಳವಾದಾಗ ಅದು ಕರಗಿ ಹೋಗುತ್ತಿತ್ತು. ಆರನೆಯ ದಿನದಲ್ಲಿ ಅವರು ಎರಡರಷ್ಟು ರೊಟ್ಟಿ ಯನ್ನು ಅಂದರೆ ಒಬ್ಬನಿಗೆ ಎರಡು ಓಮೆರದಂತೆ ಕೂಡಿಸಿದ್ದರಿಂದ ಸಭೆಯ ಎಲ್ಲಾ ಅಧಿಕಾರಿಗಳು ಬಂದು ಮೋಶೆಗೆ ತಿಳಿಸಿದರು. ಅವನು ಅವರಿಗೆ--ಕರ್ತನು ಹೇಳಿದ ಮಾತು ಇದೇ--ನಾಳೆ ಕರ್ತನಿಗೆ ವಿಶ್ರಾಂತಿಯ ಪರಿಶುದ್ಧ ಸಬ್ಬತ್ ದಿನವಾಗಿದೆ, ಇಂದೇ ಸುಡಬೇಕಾ ದದ್ದನ್ನು ಸುಡಿರಿ, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ಬೆಳಗಿನ ವರೆಗೆ ಇಟ್ಟು ಕೊಳ್ಳಿರಿ ಅಂದನು. ಮೋಶೆಯು ಆಜ್ಞಾಪಿಸಿದ ಪ್ರಕಾರ ಅದನ್ನು ಮರು ದಿನದ ವರೆಗೆ ಇಟ್ಟುಕೊಂಡಾಗ ಅದು ನಾತಹಿಡಿಯಲಿಲ್ಲ. ಅದರಲ್ಲಿ ಹುಳಗಳೂ ಇರ ಲಿಲ್ಲ. ಆಗ ಮೋಶೆಯು--ಈ ಹೊತ್ತು ಅದನ್ನು ಊಟಮಾಡಿರಿ, ಯಾಕಂದರೆ ಈ ದಿನವು ಕರ್ತನ ಸಬ್ಬತ್ ದಿನವಾಗಿದೆ. ಈ ಹೊತ್ತು ನಿಮಗೆ ಹೊಲದಲ್ಲಿ (ಆಹಾರ) ಸಿಕ್ಕುವದಿಲ್ಲ. ಆರು ದಿವಸ ಅದನ್ನು ಕೂಡಿಸಬೇಕು. ಏಳನೆಯ ದಿನ ಸಬ್ಬತ್ ದಿನವಾಗಿರುವ ದರಿಂದ ಅಂದು (ರೊಟ್ಟಿಯು) ಇರುವದಿಲ್ಲ ಅಂದನು. ಏಳನೆಯ ದಿನ ಜನರಲ್ಲಿ ಕೆಲವರು ಕೂಡಿಸುವದಕ್ಕೆ ಹೊರಗೆ ಹೋದಾಗ ಅವರಿಗೆ ಸಿಕ್ಕಲಿಲ್ಲ. ಆಗ ಕರ್ತನು ಮೋಶೆಗೆ--ಎಷ್ಟು ಕಾಲ ನನ್ನ ಕಟ್ಟಳೆಗಳನ್ನೂ ನ್ಯಾಯಪ್ರಮಾಣಗಳನ್ನೂ ಕೈಕೊಳ್ಳದೆ ನಿರಾಕರಿಸುವಿರಿ ಅಂದನು. ಅವನು--ನೋಡಿರಿ, ಕರ್ತನು ನಿಮಗೆ ಸಬ್ಬತ್ ದಿನವನ್ನು ಕೊಟ್ಟಿದ್ದರಿಂದಲೇ ಆರನೆಯ ದಿನ ದಲ್ಲಿ ನಿಮಗೆ ಎರಡು ದಿನಗಳ ರೊಟ್ಟಿಯನ್ನು ಕೊಟ್ಟಿ ದ್ದಾನೆ. ಪ್ರತಿಯೊಬ್ಬನು ತನ್ನ ತನ್ನ ಸ್ಥಳದಲ್ಲಿ ಇರಲಿ, ಏಳನೆಯ ದಿನದಲ್ಲಿ ಯಾರೂ ತನ್ನ ಸ್ಥಳವನ್ನು ಬಿಟ್ಟು ಹೋಗಬಾರದು ಎಂದು ಹೇಳಿದನು. ಹೀಗೆ ಜನರು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಆಗ ಇಸ್ರಾಯೇಲ್ ಮನೆತನವು ಅದಕ್ಕೆ ಮನ್ನ ಎಂದು ಹೆಸರಿಟ್ಟಿತು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನಿನಲ್ಲಿ ಕಲಸಿದ ದೋಸೆಯಂತೆ ಇತ್ತು. ಮೋಶೆಯು ಅವರಿಗೆ--ಕರ್ತನು ಆಜ್ಞಾಪಿಸಿದ್ದು ಇದೇ--ನಾನು ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಡಿಸಿದಾಗ ಅರಣ್ಯದಲ್ಲಿ ನಿಮಗೆ ತಿನ್ನಿಸಿದ ರೊಟ್ಟಿಯನ್ನು ನಿಮ್ಮ ಸಂತಾನಗಳು ನೋಡುವಂತೆ ಒಂದು ಓಮೆರ (ಮನ್ನವನ್ನು) ತುಂಬಿಸಿ ಇಟ್ಟಿರಬೇಕು ಎಂಬದು ಅಂದನು. ಮೋಶೆಯು ಆರೋನನಿಗೆ--ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಒಂದು ಓಮೆರ್ ಮನ್ನವನ್ನು ಅದರಲ್ಲಿ ಹಾಕಿ ನಿಮ್ಮ ಸಂತತಿಗಳಿಗೋಸ್ಕರ ಇಟ್ಟು ಕೊಳ್ಳುವದಕ್ಕಾಗಿ ಕರ್ತನ ಮುಂದೆ ಇಡು ಅಂದನು. ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಅದನ್ನು (ಮನ್ನ ವನ್ನು) ಕಾಪಾಡುವದಕ್ಕೆ ಸಾಕ್ಷಿಯಾಗಿ ಇಟ್ಟನು. ಇಸ್ರಾಯೇಲ್ ಮಕ್ಕಳು ವಾಸವಾಗಿರತಕ್ಕ ದೇಶಕ್ಕೆ ಬರುವ ವರೆಗೆ ನಾಲ್ವತ್ತು ವರುಷ ಮನ್ನವನ್ನು ತಿಂದರು. ಕಾನಾನ್ ದೇಶದ ಮೇರೆಗಳಿಗೆ ಬರುವ ವರೆಗೂ ಅವರು ಮನ್ನವನ್ನು ತಿಂದರು.ಓಮೆರ್ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.
- 2 Thessalonians 3:12 2 ಥೆಸಲೊನೀಕದವರಿಗೆ 3:12ಅಂಥವರು ಮೌನವಾಗಿ ತಮ್ಮ ಕೆಲಸವನ್ನು ಮಾಡುತ್ತಾ ತಮ್ಮ ಸ್ವಂತ ಆಹಾರವನ್ನೇ ಊಟಮಾಡ ಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.