Skip to content
ThuthiThuthiThuthi
2 Chronicles · chapter 11 of 36 · 23 verses

2 Chronicles 11 in Kannada

2 ಪೂರ್ವಕಾಲವೃತ್ತಾಂತ 11

  1. ರೆಹಬ್ಬಾಮನು ಯೆರೂಸಲೇಮಿಗೆ ಬಂದ ತರುವಾಯ ಅವನು ತನಗೆ ರಾಜ್ಯವನ್ನು ತಿರಿಗಿ ಬರಮಾಡುವ ಹಾಗೆ ಇಸ್ರಾಯೇಲಿಗೆ ವಿರೋಧವಾಗಿ ಯುದ್ಧಮಾಡಲು ಯೆಹೂದ ಬೆನ್ಯಾ ವಿಾನಿನವರೊಳಗಿಂದ ಯುದ್ಧಮಾಡತಕ್ಕವರಾಗಿರುವ ಆಯಲ್ಪಟ್ಟ ಲಕ್ಷದ ಎಂಭತ್ತು ಸಾವಿರ ಜನ ರನ್ನು ಕೂಡಿಸಿದಾಗ

    And when Rehoboam was come to Jerusalem, he gathered of the house of Judah and Benjamin an hundred and fourscore thousand chosen [men], which were warriors, to fight against Israel, that he might bring the kingdom again to Rehoboam.

  2. ಕರ್ತನ ವಾಕ್ಯವು ದೇವರ ಮನುಷ್ಯನಾಗಿರುವ ಶೆಮಾಯನಿಗೆ ಉಂಟಾಯಿತು;

    But the word of the LORD came to Shemaiah the man of God, saying,

  3. ಏನಂದರೆ -- ನೀನು ಯೆಹೂದದ ಅರಸನಾದ ಸೊಲೊಮೋನನ ಮಗನಾಗಿರುವ ರೆಹಬ್ಬಾಮನಿಗೂ ಯೆಹೂದ ಬೆನ್ಯಾವಿಾನ್ಯರಲ್ಲಿರುವ

    Speak unto Rehoboam the son of Solomon, king of Judah, and to all Israel in Judah and Benjamin, saying,

  4. ಸಮಸ್ತ ಇಸ್ರಾ ಯೇಲ್ಯರಿಗೂ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ನೀವು ನಿಮ್ಮ ಸಹೋದರರಿಗೆ ವಿರೋಧವಾಗಿ ಯುದ್ಧಮಾಡುವದಕ್ಕೆ ಹೋಗ ಬೇಡಿರಿ; ಪ್ರತಿ ಮನುಷ್ಯನು ತನ್ನ ಮನೆಗೆ ಹಿಂತಿ ರುಗಲಿ. ಈ ಕಾರ್ಯವು ನನ್ನಿಂದ ಉಂಟಾಯಿತು ಅಂದನು. ಆದಕಾರಣ ಅವರು ಕರ್ತನ ವಾಕ್ಯವನ್ನು ಕೇಳಿ ಯಾರೊಬ್ಬಾಮನ ಮೇಲೆ ಹೋಗದೆ ಹಿಂತಿರುಗಿದರು.

    Thus saith the LORD, Ye shall not go up, nor fight against your brethren: return every man to his house: for this thing is done of me. And they obeyed the words of the LORD, and returned from going against Jeroboam.

  5. ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ ಯೆಹೂದದಲ್ಲಿ ಕಾವಲು ಪಟ್ಟಣಗಳನ್ನು ಕಟ್ಟಿಸಿದನು.

    And Rehoboam dwelt in Jerusalem, and built cities for defence in Judah.

  6. ಯಾವವಂದರೆ ಬೇತ್ಲೆಹೇಮ್‌ ಏತಾಮ್‌ ತೆಕೋವ

    He built even Beth-lehem, and Etam, and Tekoa,

  7. ಬೇತ್ಚೂರ ಸೋಕೋ

    And Beth-zur, and Shoco, and Adullam,

  8. ಅದುಲ್ಲಾಮ್‌ ಗತ್‌ಊರು ಮಾರೇಷ್‌

    And Gath, and Mareshah, and Ziph,

  9. ಜೀಫ್‌ ಅದೋರೈಮ್‌ ಲಾಕೀಷ್‌ ಅಜೇಕ

    And Adoraim, and Lachish, and Azekah,

  10. ಚೋರ್ಗ ಅಯ್ಯಾಲೋನ್‌ ಹೆಬ್ರೋನ್‌ ಕಟ್ಟಿಸಿದನು. ಇವು ಯೆಹೂದ ಬೆನ್ಯಾ ವಿಾನ್‌ ಪ್ರಾಂತ್ಯಗಳಲ್ಲಿ ಕೋಟೆಯುಳ್ಳ ಪಟ್ಟಣ ಗಳಾಗಿವೆ.

    And Zorah, and Aijalon, and Hebron, which [are] in Judah and in Benjamin fenced cities.

  11. ಇದಲ್ಲದೆ ಅವನು ಕೋಟೆಗಳನ್ನು ಬಲ ಪಡಿಸಿ ಅವುಗಳಲ್ಲಿ ನಾಯಕರನ್ನೂ ಆಹಾರ ಎಣ್ಣೆ ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು.

    And he fortified the strong holds, and put captains in them, and store of victual, and of oil and wine.

  12. ಪ್ರತಿ ಪಟ್ಣಣದಲ್ಲಿ ಖೇಡ್ಯಗಳನ್ನೂ ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾವಿಾನಿನವರು ಅವನ ಕಡೆ ಇದ್ದದ್ದರಿಂದ ಅವುಗಳನ್ನು ಬಹಳ ಭದ್ರಪಡಿಸಿದನು.

    And in every several city [he put] shields and spears, and made them exceeding strong, having Judah and Benjamin on his side.

  13. ಇದಲ್ಲದೆ ಸಮಸ್ತ ಇಸ್ರಾಯೇಲಿನಲ್ಲಿದ್ದ ಯಾಜ ಕರೂ ಲೇವಿಯರೂ ತಮ್ಮ ಸಮಸ್ತ ಪ್ರಾಂತ್ಯಗಳಿಂದ ಅವನ ಬಳಿಗೆ ಪುನಃ ಬಂದರು.

    And the priests and the Levites that [were] in all Israel resorted to him out of all their coasts.

  14. ಲೇವಿಯರು ಕರ್ತ ನಿಗೆ ಯಾಜಕ ಸೇವೆಮಾಡದ ಹಾಗೆ ಯಾರೊಬ್ಬಾ ಮನೂ ಅವನ ಮಕ್ಕಳೂ ಅವರನ್ನು ತೆಗೆದುಹಾಕಿ ಉನ್ನತ ಸ್ಥಳಗಳಿಗೋಸ್ಕರವೂ

    For the Levites left their suburbs and their possession, and came to Judah and Jerusalem: for Jeroboam and his sons had cast them off from executing the priest’s office unto the LORD:

  15. ದೆವ್ವಗಳಿಗೋಸ್ಕರವೂ ಯಾರೊಬ್ಬಾಮನು ಮಾಡಿದ ಹೋರಿಗಳಿ ಗೋಸ್ಕರವೂ ತನಗೆ ಯಾಜಕರನ್ನು ನೇಮಿಸಿದ್ದರಿಂದ ಲೇವಿಯರು ತಮ್ಮ ಉಪನಗರಗಳನ್ನೂ ಸ್ವಾಸ್ತ್ಯಗಳನ್ನೂ ಬಿಟ್ಟು ಬಿಟ್ಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದರು.

    And he ordained him priests for the high places, and for the devils, and for the calves which he had made.

  16. ಇವರ ತರುವಾಯ ಇಸ್ರಾಯೇಲಿನ ಕರ್ತನಾದ ದೇವರನ್ನು ಹುಡುಕಲು ತಮ್ಮ ಹೃದಯ ಗಳನ್ನು ಕೊಟ್ಟು ತಮ್ಮ ಪಿತೃಗಳ ದೇವರಾದ ಕರ್ತನಿಗೆ ಬಲಿ ಅರ್ಪಿಸಲು ಇಸ್ರಾಯೇಲಿನ ಸಮಸ್ತ ಗೋತ್ರ ಗಳಿಂದ ಯೆರೂಸಲೇಮಿಗೆ ಬಂದರು.

    And after them out of all the tribes of Israel such as set their hearts to seek the LORD God of Israel came to Jerusalem, to sacrifice unto the LORD God of their fathers.

  17. ಹೀಗೆಯೇ ಅವರು ಯೆಹೂದ ರಾಜ್ಯವನ್ನು ದೃಢಪಡಿಸಿ ಸೊಲೊ ಮೋನನ ಮಗನಾದ ರೆಹಬ್ಬಾಮನನ್ನು ಮೂರು ವರುಷಗಳ ವರೆಗೂ ಬಲಪಡಿಸಿದರು. ಯಾಕಂದರೆ ಅವರು ಮೂರು ವರುಷಗಳ ವರೆಗೂ ದಾವೀದ ಸೊಲೊಮೋನ ಇವರ ಮಾರ್ಗದಲ್ಲಿ ನಡೆದರು.

    So they strengthened the kingdom of Judah, and made Rehoboam the son of Solomon strong, three years: for three years they walked in the way of David and Solomon.

  18. ರೆಹಬ್ಬಾಮನು ದಾವೀದನ ಮಗನಾದ ಯೆರೀ ಮೋತನಿಗೆ ಇಷಯನ ಮೊಮ್ಮಗಳೂ ಎಲೀಯಾಬನ ಮಗಳು ಆದ ಅಬೀಹೈಲಳಲ್ಲಿ ಹುಟ್ಟಿದ ಮಹ್ಲತ್‌ ಎಂಬಾಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡನು.

    And Rehoboam took him Mahalath the daughter of Jerimoth the son of David to wife, [and] Abihail the daughter of Eliab the son of Jesse;

  19. ಅಬೀಹೈಲಳು ಯೆಗೂಷ್‌, ಶೆಮರ್ಯ, ಜಾಹಮ್‌ ಎಂಬ ಮಕ್ಕಳನ್ನು ಅವನಿಗೆ ಹೆತ್ತಳು.

    Which bare him children; Jeush, and Shamariah, and Zaham.

  20. ಇವಳ ತರು ವಾಯ ಅವನು ಅಬ್ಷಾಲೋಮನ ಮಗಳಾದ ಮಾಕ ಳನ್ನು ಹೆಂಡತಿಯಾಗಿ ತಕ್ಕೊಂಡನು. ಇವಳು ಅವನಿಗೆ ಅಬೀಯನ್ನೂ ಅತ್ತೈಯನ್ನೂ ಜೀಜನನ್ನೂ ಶೆಲೋ ವಿಾತನ್ನೂ ಹೆತ್ತಳು.

    And after her he took Maachah the daughter of Absalom; which bare him Abijah, and Attai, and Ziza, and Shelomith.

  21. ರೆಹಬ್ಬಾಮನಿಗೆ ಹದಿನೆಂಟು ಮಂದಿ ಹೆಂಡತಿಯರೂ ಅರವತ್ತು ಮಂದಿ ಉಪ ಪತ್ನಿಯರೂ ಇದ್ದರು; ಅವನು ಇಪ್ಪತ್ತೆಂಟು ಮಂದಿ ಕುಮಾರರನ್ನೂ ಅರವತ್ತು ಮಂದಿ ಕುಮಾರ್ತೆಯರನ್ನೂ ಪಡೆದನು. ಆದರೆ ಅವನು ತನ್ನ ಎಲ್ಲಾ ಹೆಂಡತಿ ಯರಿಗಿಂತಲೂ ಉಪಪತ್ನಿಯರಿಗಿಂತಲೂ ಅಬ್ಷಾಲೋ ಮನ ಮಗಳಾದ ಮಾಕಳನ್ನು ಪ್ರೀತಿಮಾಡಿದನು.

    And Rehoboam loved Maachah the daughter of Absalom above all his wives and his concubines: (for he took eighteen wives, and threescore concubines; and begat twenty and eight sons, and threescore daughters.)

  22. ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅವನ ಸಹೋದರರಲ್ಲಿ ನಾಯಕನಾಗಿರುವಂತೆ ಮುಖ್ಯ ಸ್ಥನಾಗಿ ಮಾಡಿದನು. ಅವನನ್ನು ಅರಸನಾಗಿ ಮಾಡಲು ಮನಸ್ಸುಳ್ಳವನಾಗಿದ್ದನು.ಅವನು ವಿವೇಕದಿಂದ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾವಿಾ ನಿನ ದೇಶಗಳಲ್ಲಿರುವ ಎಲ್ಲಾ ಬಲವಾದ ಪಟ್ಟಣಗ ಳಲ್ಲಿ ಚದುರಿಸಿ ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಆದರೆ ಹೆಂಡತಿಯರ ಸಮೂಹವನ್ನು ಆಶಿಸಿದನು.

    And Rehoboam made Abijah the son of Maachah the chief, [to be] ruler among his brethren: for [he thought] to make him king.

  23. ಅವನು ವಿವೇಕದಿಂದ ನಡೆದು ತನ್ನ ಎಲ್ಲಾ ಮಕ್ಕಳನ್ನು ಯೆಹೂದ ಬೆನ್ಯಾವಿಾ ನಿನ ದೇಶಗಳಲ್ಲಿರುವ ಎಲ್ಲಾ ಬಲವಾದ ಪಟ್ಟಣಗ ಳಲ್ಲಿ ಚದುರಿಸಿ ಅವರಿಗೆ ಬಹಳ ದವಸಧಾನ್ಯಗಳನ್ನು ಕೊಟ್ಟನು. ಆದರೆ ಹೆಂಡತಿಯರ ಸಮೂಹವನ್ನು ಆಶಿಸಿದನು.

    And he dealt wisely, and dispersed of all his children throughout all the countries of Judah and Benjamin, unto every fenced city: and he gave them victual in abundance. And he desired many wives.

All chapters of 2 Chronicles · Kannada Bible · 2 Chronicles 11 in Tamil

Kannada Bible: Kannada Old Version, public domain.

King James Version: public domain.